RCB ಸೌರವ್ ಚೌಹಾಣ್ ಅವರನ್ನೇ ಟಾರ್ಗೇಟ್ ಮಾಡಿದ್ದು ಯಾಕೇ ಗೊತ್ತಾ ? ಇಲ್ಲಿದೇ ಚೌಹಾಣ್‌ T20ಯ ಅಬ್ಬರದ ದಾಖಲೆ!

IPl 2024 Auction: 2024ರ ಮಿನಿಹರಾಜು ಮುಗಿದಿದ್ದು, ಹರಾಜಿನಲ್ಲಿ  RCB ತಂಡಕ್ಕೆ ಇಬ್ಬರು ಯುವ ಆಟಗಾರರು ಪಾದಾರ್ಪಣೆ ಮಾಡಿದ್ಧಾರೆ. ಸೌರವ್ ಚೌಹಾಣ್ ಮತ್ತು‌ ಸ್ವಪ್ನಿಲ್ ಸಿಂಗ್‌ ಸಿಂಗ್‌ರವರಿಗೆ ತಲಾ 20 ಲಕ್ಷಗಳನ್ನು ನೀಡಿ ತಂಡದಲ್ಲಿ ಜಾಗ ಜಾಗ ನೀಡಿದೆ. ಸಹ್ಯದ್‌ ಮುಸ್ತಫ್‌ ಅಲಿ ಟ್ರೋಫಿ ಆಡಿದ ಅನುಭವ ಹೊಂದಿರುವ ಸೌರವ್ ಟಿ20ಯಲ್ಲಿ ಅಬ್ಬರದ ಬಾಟ್ಸ್‌ಮನ್‌ ಎಂದು ಈ ದಾಖಲೆಗಳೆ ಹೇಳುತ್ತವೆ.

Written by - Zee Kannada News Desk | Last Updated : Dec 21, 2023, 06:26 PM IST
  • ಐಪಿಎಲ್‌ ಹರಾಜಿನಲ್ಲಿ 5 ಆಟಗಾರರನ್ನು ಖರಿಧಿಸಿದ ಆರ್‌ಸಿಬಿ
  • 20 ಲಕ್ಷಕ್ಕೆ ಆರ್‌ಸಿಬಿ ಸೇರಿದ ಸೌರವ ಮತ್ತು ಸ್ವಪ್ನಿಲ್‌ ಸಿಂಗ್
  • ಐಪಿಎಲ್‌ ಇತಿಹಾಸದಲ್ಲಿ ಅತ್ಯಧಿಕ ಬೆಲೆಗೆ ಸೇಲಾದ ಮಿಚೆಲ್‌ ಸ್ಟಾರ್ಕ್
 RCB ಸೌರವ್ ಚೌಹಾಣ್ ಅವರನ್ನೇ ಟಾರ್ಗೇಟ್ ಮಾಡಿದ್ದು ಯಾಕೇ ಗೊತ್ತಾ ?              ಇಲ್ಲಿದೇ ಚೌಹಾಣ್‌ T20ಯ ಅಬ್ಬರದ ದಾಖಲೆ! title=

RCB team 11: ಡಿಸೆಂಬರ್‌ 19ರ ಶನಿವಾರದಂದು ದುಬೈನಲ್ಲಿ ಐಪಿಎಲ್‌ ಮಿನಿಹಾರಜು ಪ್ರಕ್ರಿಯೇ ಅಂತ್ಯಗೊಂದಿದೆ. ಇದೇ ಬೆನ್ನಲ್ಲೇ ಆರ್‌ಸಿಬಿ 5 ಆಟಗಾರರನ್ನು ಹರಾಜಿನಲ್ಲಿ ಖರಿದಿಸಿದೆ. ಅದರಲ್ಲಿ ಇಬ್ಬರು ಯುವ ಆಟಗಾರರು ಸೇರಿದ್ದಾರೆ. ಅಲ್ಝಾರ್‌ ಜೋಸೆಫ್‌ ಅವರನ್ನು 11.5 ಕೋಟಿ ಮತ್ತು ಯಶ್‌ ದಯಾಳ್ 5 ಕೋಟಿ, ಲೋಕಿ ಫರ್ಗ್ಯೂಸನ್‌ 2 ಕೋಟಿಗೆ ಹಾಗೂ ಇನ್ನುಳಿದ ಇಬ್ಬರು ಆಟಗಾರರಾದ ಸೌರವ್‌ ಚೌಹಾಣ್‌  ಮತ್ತು ಸ್ವಪ್ನಿಲ್ ಸಿಂಗ್‌ ಅವರನ್ನು ತಲಾ 20 ಲಕ್ಷಗಳಿಗೆ ತಮ್ಮ ತಂಡಕ್ಕೆ ಸೇರಿಸಿ ಕೊಂಡಿದೆ. 

ಗುಜರಾತ್‌ ಮೂಲದ ಚೌಹಾಣ್‌ ಅವರನ್ನು ಆರ್‌ಸಿಬಿ ತಂಡ ಕೇವಲ 20 ಲಕ್ಷ ಬೆಲೆಗೆ ಖರಿದಿಸಿರುವುದು ಕೆಲವು ಅಭಿಮಾನಿಗಳಿಗೆ ಖುಷಿಯಾದದರೆ ಇನ್ನೂ ಕೆಲವರು ಆರ್‌ಸಿಬಿ ಮ್ಯಾನೇಗ್‌ಮೆಂಟ್‌ ಅನ್ನು ದೂರಿದರು. ಸೌರವ್‌ ಚೌಹಾಣ್‌ ಅವರ ಬ್ಯಾಟಿಂಗ್‌ ಕೌಶಲ್ಯ ತಿಳಿದಿದ್ದವರು ಆರ್‌ಸಿಬಿ ನಿರ್ಧಾರೆಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ಧಾರೆ.ಯುವ ಆಟಗಾರನ ಆಗಮನದಿಂದ ಅಭಿಮಾನಿಗಳು ಸಂತೋಷ ಪಡಲು ಪ್ರಮುಖ ಕಾರಣವೇ ಅವರ ಅಬ್ಬರದ ಬ್ಯಾಟಿಂಗ್‌ ಪ್ರದರ್ಶನವಾಗಿದೆ.

ಇದನ್ನು ಓದಿ-IPL 2024: ಸ್ಟಾರ್ ಪ್ಲೇಯರ್ಸ್ ಆದ್ರೂ ಐಪಿಎಲ್ ಹರಾಜಿನಲ್ಲಿ ಬಿಕರಿಯಾಗದ ಆಟಗಾರರು ಇವರು

  ಸೌರವ್ ಚೌಹಾಣ್ ಗುಜರಾತ್‌ ರಾಜ್ಯ ತಂಡದ ವಿಕೇಟ್‌ ಕೀಪರ್‌ ಹಾಗೂ ಬಲಗೈ ಬಾಟ್ಸ್‌ಮನ್ ಆಗಿದ್ದಾರೆ.  ಇವರು ಗುಜರಾತ್‌ ಪರ "ವಿಜಯ್‌ ಹಜಾರೆ ಟ್ರೋಫಿ" ಹಾಗೂ "ಸಹ್ಯದ್‌ ಮುಸ್ತಫ್‌ಅಲಿ ಟ್ರೋಫಿ"ಗಳನ್ನು ಆಡಿದಾರೆ. ಲೀಸ್ಟ್‌ ಎ ಕ್ರಿಕೇಟ್‌ನಲ್ಲಿ 13 ಪಂದ್ಯಗಳನ್ನು ಆಡಿದ್ದು 476 ರನ್‌ ಕಲೆಹಾಖುವುದರ ಜೊತೆಗೆ 2 ಶತಕಗಳನ್ನು ಹೊಂದಿದ್ಧಾರೆ. 

ಇವರು ಟಿ20 ಕ್ರಿಕೇಟಿಗೆ ಹೆಚ್ಚು ಹೆಸರುವಾಸಿಗಿದ್ದಾರೆ. ಬಿರುಸಿನ ಆಟಕ್ಕೆ ಮುಂದಾಗುವ ಚೌಹಾಣ್‌ ಟಿ20 ಕೆರಿಯರ್‌ನಲ್ಲಿ  152ರ ಸ್ಟ್ರೈಕ್‌ ರೇಟ್‌ಲಿ ಬಾಟಿಂಗ್‌ ಮಾಡಿದ್ಧಾರೆ. ಗುಜರಾಜ್‌ ಪರ 19 ಟಿ20 ಪಂದ್ಯಗಳನ್ನು ಆಡಿದ್ದು 464 ರನ್‌ಗಳನ್ನು ಪಡೆದಿದ್ದಾರೆ. ಅಷ್ಟೇ ಅಲ್ಲದೇ 4 ಅರ್ಧಶತಕಗಳನ್ನು ಭಾರಿಸಿದ್ಧಾರೆ. ಅಜೇಯ 84 ರನ್‌ಗಳು ಇವರ  ಟಿ20ಯ ಅತ್ಯಧಿಕ ಸ್ಕೋರಾಗಿದ್ದು, ಆಡಿದ ಎಲ್ಲಾ ಪಂದ್ಯಗಳಲ್ಲಿಯು ಉತ್ತಮ ಸ್ಟ್ರೈಕ್‌ರೇಟ್‌ ಹೊಂದಿದ್ಧಾರೆ. ಇವರು 150ಕ್ಕಿಂತ ಹೆಚ್ಚಿನ ಸ್ಟ್ರೈಕ್‌ರೇಟ್‌ ನಲ್ಲಿ ಬ್ಯಾಟಿಂಗ್‌ ಮಾಡುವ ಸಾಮರ್ಥ್ಯವನ್ನು ಹೊಂದಿದ್ಧಾರೆ.

ಇದನ್ನು ಓದಿ-ಸ್ಟಾರ್ಕ್‌ ಬದಲಿಗೆ ಆರ್‌ಸಿಬಿ ಬತ್ತಳಿಕೆಗೆ ಸೇರದ ವಿಂಡೀಸ್‌ ವೇಗಿ ... ಅಲ್ಝಾರಿ ಜೋಸೆಫ್‌ ! 

ಮುಸ್ತಫ್‌ ಅಲಿ ಟೂರ್ನಿಮೆಂಟ್‌ ಅಲ್ಲಿ ಇವರ ಅಬ್ಬರದ ಬಾಟಿಂಗ್‌ ಮೂಲಕ ತಂಡಕ್ಕೆ ಅನೇಕ ಪಂದ್ಯಗಳನ್ನು ಗೆಲ್ಲಿಸಿ ಕೊಟ್ಟಿದ್ಧಾರೆ. ಮಣಿಪುರ ಮೇಲೆ ಆಡಿದ ಪಂದ್ಯದಲ್ಲಿ  ಕೇವಲ 28 ಬಾಲ್‌ಗಳಿಗೆ 50 ರನ್‌ಗಳಿಸಿದ್ದು, ಅದರಲ್ಲಿ 3 ಸಿಕ್ಸ್‌ ಸೇರಿದ್ದಂತೆ 4 ಬೌಂಡರಿಗಳನ್ನು ಭಾರಿಸದ್ದರು. ಅಷ್ಟೇ ಅಲ್ಲದೇ ಅದೇ ಮುಸ್ತಾಫ್‌ ಅಲೀ ಟೂರ್ನಿಮೆಂಟ್‌ ನಲ್ಲಿ ರೈಲ್ವೇಸ್‌ ತಂಡದ ವಿರುದ್ದ 22 ಬಾಲ್‌ಗಳಿಗೆ ಅಜೇಯ 48 ರನ್‌ಗಳಿಸಿ ತಂಡದ ಗೆಲುವಿಗೆ ಕಾರಣರಾದರು.

ಸ್ಪೋಟಕ ಬ್ಯಾಟ್ಸಮನ್‌ ಆರ್‌ಸಿಬಿ ತಂಡವನ್ನು ಸೇರಿದರು, ಆರ್‌ಸಿಬಿ ಮ್ಯಾನೇಗ್‌ಮೆಂಟ್‌ ಕಳಪೆ ಪ್ರದರ್ಶನ ನೀಡುತ್ತಿರುವ ಇಬ್ಬರು ಆಟಗಾರರಿಗೆ ಕೋಟಿಗಟ್ಟಳೇ ಖರ್ಚು ಮಾಡಿರುವುದು ಅಭಿಮಾನಿಗಳ ಆಕ್ರೋಷಕ್ಕೆ ಕಾರಣವಾಗಿದೆ. ಈ ಬಗ್ಗೆ ಸೋಷಿಯಲ್ ಮೀಡಿಯಾಗಳಲ್ಲಿ ಭಾರಿ ಚಚೆಗಳು ನಡೆಯುತ್ತಿವೆ. ಈ ಆಟಗಾರರರು ಐಪಿಎಲ್‌ನಲ್ಲಿ ಯಾವ ರೀತಿಮ ಪ್ರದರ್ಶನ ನೀಡುತ್ತಾರೆ ಎಂದು ಕಾದು ನೋಡಬೇಕಿದೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News