SL vs PAK: ಪಂದ್ಯ ಆಡದೆಯೇ ಟೂರ್ನಿಯಿಂದ ಹೊರಬೀಳುವ ಭೀತಿಯಲ್ಲಿ ಪಾಕ್ ! ಯಾವ ಲೆಕ್ಕಾಚಾರದಲ್ಲಿ ಇಲ್ಲಿದೆ ನೋಡಿ

Sri Lanka vs Pakistan:ಈ ಪಂದ್ಯಕ್ಕೂ ಮೊದಲೇ ಇದೀಗ ದೊಡ್ಡ ಅಪ್ಡೇಟ್ ಹೊರಬಂದಿದೆ. ಇದರ ಪ್ರಕಾರ ಪಾಕಿಸ್ತಾನ ಪಂದ್ಯ ಆಡದೆಯೇ ಟೂರ್ನಿಯಿಂದ ಹೊರಗುಳಿಯುವ ಭೀತಿಯಲ್ಲಿದೆ.

Written by - Ranjitha R K | Last Updated : Sep 14, 2023, 02:04 PM IST
  • ಪಾಕಿಸ್ತಾನ - ಶ್ರೀಲಂಕಾ ನಡುವಿನ ಪಂದ್ಯ ಕೆಲವೇ ಕ್ಷಣಗಳಲ್ಲಿ ಆರಂಭ
  • ಕೊಲಂಬೊದ ಆರ್ ಪ್ರೇಮದಾಸ ಕ್ರೀಡಾಂಗಣದಲ್ಲಿ ಪಂದ್ಯ
  • ಏಷ್ಯಾಕಪ್‌ನಿಂದ ಪಾಕಿಸ್ತಾನ ಪಂದ್ಯ ಆಡದೆ ಹೊರಗುಳಿಯುವುದೇ?
SL vs PAK: ಪಂದ್ಯ ಆಡದೆಯೇ ಟೂರ್ನಿಯಿಂದ ಹೊರಬೀಳುವ ಭೀತಿಯಲ್ಲಿ ಪಾಕ್ ! ಯಾವ ಲೆಕ್ಕಾಚಾರದಲ್ಲಿ ಇಲ್ಲಿದೆ ನೋಡಿ   title=

Sri Lanka vs Pakistan : ಏಷ್ಯಾ ಕಪ್ 2023 ರ ಸೂಪರ್-4 ರಲ್ಲಿ ಪಾಕಿಸ್ತಾನ ಮತ್ತು ಶ್ರೀಲಂಕಾ ನಡುವಿನ ಪಂದ್ಯವು ಇನ್ನು ಕೆಲವೇ ಕ್ಷಣಗಳಲ್ಲಿ ಆರಂಭವಾಗಲಿದೆ. ಈ ಪಂದ್ಯ ಕೊಲಂಬೊದ ಆರ್ ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆಯಲಿದೆ. ಎರಡೂ ತಂಡಗಳಿಗೂ ಈ ಪಂದ್ಯ ಮಾಡು ಇಲ್ಲವೇ ಮಡಿ ಎನ್ನುವಂತಾಗಿದೆ. ಈ ಪಂದ್ಯಕ್ಕೂ ಮೊದಲೇ ಇದೀಗ ದೊಡ್ಡ ಅಪ್ಡೇಟ್ ಹೊರಬಂದಿದೆ. ಇದರ ಪ್ರಕಾರ ಪಾಕಿಸ್ತಾನ ಪಂದ್ಯ ಆಡದೆಯೇ ಟೂರ್ನಿಯಿಂದ ಹೊರಗುಳಿಯುವ ಭೀತಿಯಲ್ಲಿದೆ.

ಏಷ್ಯಾಕಪ್‌ನಿಂದ ಪಾಕಿಸ್ತಾನ ಪಂದ್ಯ ಆಡದೆ ಹೊರಗುಳಿಯುವುದೇ? :
ಏಷ್ಯಾ ಕಪ್ 2023 ರಲ್ಲಿ ಟೀಂ ಇಂಡಿಯಾ ಫೈನಲ್ ತಲುಪಿದ ನಂತರ, ಇದೀಗ ಎರಡನೇ ಫೈನಲಿಸ್ಟ್ ಆಗಲು ಪಾಕಿಸ್ತಾನ ಮತ್ತು ಶ್ರೀಲಂಕಾ ನಡುವೆ ಹಣಾ ಹಣಿ ನಡೆಯಲಿದೆ. ಆದರೆ ಈ ಪಂದ್ಯದಲ್ಲಿ ಪಾಕ್ ಪಾಲಿಗೆ ಮಳೆ  ವಿಲನ್ ಆಗಿ ಕಾಣಿಸಿಕೊಳ್ಳಬಹುದು. ಹವಾಮಾನ ವರದಿ ಪ್ರಕಾರ, ಕೊಲಂಬೊದಲ್ಲಿ ಇಂದು ಮಳೆಯ ಸಂಭವನೀಯತೆ 96% ವರೆಗೆ ಇದೆ. ಪಂದ್ಯದ ಸಮಯದಲ್ಲಿ (ಮಧ್ಯಾಹ್ನ 3 ರಿಂದ ರಾತ್ರಿ 11 ರವರೆಗೆ) ಮಳೆಯ ಸಂಭವನೀಯತೆ 45% ರಿಂದ 50% ರಷ್ಟಿದೆ. ಇಂತಹ ಪರಿಸ್ಥಿತಿಯಲ್ಲಿ ಪಂದ್ಯ ರದ್ದಾದರೆ ಪಾಕಿಸ್ತಾನ ತಂಡ ಟೂರ್ನಿಯಿಂದ ಹೊರಬೀಳುವ ಸಾಧ್ಯತೆ ಇದೆ.

ಇದನ್ನೂ ಓದಿ : “ಟೀಂ ಇಂಡಿಯಾ ಮ್ಯಾಚ್ ಫಿಕ್ಸಿಂಗ್ ಮಾಡಿದೆ” ಎಂದವರಿಗೆ ಮುಟ್ಟಿನೋಡಿಕೊಳ್ಳುವಂತೆ ಉತ್ತರ ಕೊಟ್ಟ ಶೋಯೆಬ್ ಅಕ್ತರ್

ಒಂದು ವೇಳೆ ಪಂದ್ಯ ರದ್ದಾದರೆ ಫೈನಲ್ ನಲ್ಲಿ ಸೆಣೆಸುವವರು ಯಾರು ? :   
ಸದ್ಯ ಸೂಪರ್-4 ಪಟ್ಟಿಯಲ್ಲಿ ಪಾಕಿಸ್ತಾನ ಮತ್ತು ಶ್ರೀಲಂಕಾ ತಂಡಗಳು 2-2 ಅಂಕಗಳನ್ನು ಹೊಂದಿವೆ. ಈ ಮೂಲಕ ಇಂದು ನಡೆಯಲಿರುವ ಪಂದ್ಯ ಸೆಮಿಫೈನಲ್ ನಂತಾಗಿದೆ. ಒಂದು ವೇಳೆ ಈ ಪಂದ್ಯ ಮಳೆಯಿಂದಾಗಿ ರದ್ದಾದರೆ ಉಭಯ ತಂಡಗಳ ನಡುವೆ 1-1 ಅಂಕ ಹಂಚಿಕೆಯಾಗಲಿದೆ. ಶ್ರೀಲಂಕಾ ಮತ್ತು ಪಾಕಿಸ್ತಾನ ಎರಡೂ ತಂಡಗಳು ತಲಾ 3 ಅಂಕಗಳನ್ನು ಹೊಂದಿರುತ್ತವೆ. ಅಂತಹ ಪರಿಸ್ಥಿತಿಯಲ್ಲಿ, ರನ್ ರೇಟ್ ಆಧಾರದ ಮೇಲೆ ಯಾವ ತಂಡ ಫೈನಲ್ ತಲುಪಲಿದೆ ಎನ್ನುವುದು ನಿರ್ಧಾರವಾಗುತ್ತದೆ. ಶ್ರೀಲಂಕಾದ ನೆಟ್ ರನ್ ರೇಟ್ -0.200 ಆದರೆ ಪಾಕಿಸ್ತಾನದ ನೆಟ್ ರನ್ ರೇಟ್ -1.892.  ಈಗ ಮಳೆಯಿಂದಾಗಿ ಪಂದ್ಯ ರದ್ದಾದರೆ ಪಾಕಿಸ್ತಾನ ಟೂರ್ನಿಯಿಂದ  ಹೊರಬೀಳಬೇಕಾಗುತ್ತದೆ.

ಪಾಕಿಸ್ತಾನದ  ಪ್ಲೇಯಿಂಗ್ 11: 
ಮೊಹಮ್ಮದ್ ಹ್ಯಾರಿಸ್, ಇಮಾಮ್ ಉಲ್ ಹಕ್, ಬಾಬರ್ ಅಜಮ್ (ನಾಯಕ), ಮೊಹಮ್ಮದ್ ರಿಜ್ವಾನ್ (ವಿಕೆಟ್ ಕೀಪರ್), ಸೌದ್ ಶಕೀಲ್, ಇಫ್ತಿಕರ್ ಅಹ್ಮದ್, ಶಾದಾಬ್ ಖಾನ್, ಮೊಹಮ್ಮದ್ ನವಾಜ್, ಶಾಹೀನ್ ಅಫ್ರಿದಿ, ಮೊಹಮ್ಮದ್ ವಾಸಿಂ ಜೂನಿಯರ್, ಜಮಾನ್ ಖಾನ್.

ಇದನ್ನೂ ಓದಿ : 15 ಬೌಂಡರಿ, 9 ಸಿಕ್ಸರ್, 182 ರನ್! ನಿವೃತ್ತಿ ಹಿಂಪಡೆದ ಸ್ಟಾರ್ ಕ್ರಿಕೆಟರ್ ಸಿಡಿಸಿಯೇಬಿಟ್ಟ ಭರ್ಜರಿ ಶತಕ! ಈತ ಕೊಹ್ಲಿಯ ನೆಚ್ಚಿನ ಕ್ರಿಕೆಟಿಗನೂ ಹೌದು

ಶ್ರೀಲಂಕಾದ ಸಂಭಾವ್ಯ ಪ್ಲೇಯಿಂಗ್ 11 : 
ಪಾತುಮ್ ನಿಸ್ಸಾಂಕ, ದಿಮುತ್ ಕರುಣಾರತ್ನೆ, ಕುಶಾಲ್ ಮೆಂಡಿಸ್ (ವಿಕೆಟ್ ಕೀಪರ್), ಸದೀರ ಸಮರವಿಕ್ರಮ್, ಚರಿತ್ ಅಸಲಂಕಾ, ಧನಂಜಯ್ ಡಿ ಸಿಲ್ವಾ, ದಸುನ್ ಶಂಕ (ನಾಯಕ), ದುನಿತ್ ವೆಲ್ಲೆಸ್, ಮಹೇಶ್ ದೀಕ್ಷಣ, ಕಸುನ್ ರಜಿತಾ, ಮತಿಶ ಪತಿರಣ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News