IPL 2023: ಗೆಲ್ಲುವ ಪಂದ್ಯದಲ್ಲಿ ಸೋಲುಂಡ ರಾಜಸ್ಥಾನ! ಕೋಪದಲ್ಲಿ… ಸೋಲಿಗೆ ಈತನೇ ಕಾರಣ ಎಂದ ಕ್ಯಾಪ್ಟನ್

IPL 2023 News Update: ಭಾನುವಾರ ರಾಜಸ್ಥಾನ್ ರಾಯಲ್ಸ್ ವಿರುದ್ಧ ಟಿಮ್ ಡೇವಿಡ್ 14 ಎಸೆತಗಳಲ್ಲಿ 45 ರನ್ ಗಳಿಸಿ ಅಸಾಧ್ಯವಾದ ಜಯವನ್ನು ತಂಡಕ್ಕೆ ತಂದುಕೊಟ್ಟರು. ಮುಂಬೈ ಇಂಡಿಯನ್ಸ್ ತಂಡ 19.3 ಓವರ್‌ ಗಳಲ್ಲಿ 214 ರನ್ ಗಳಿಸಿ ರಾಜಸ್ಥಾನ್ ರಾಯಲ್ಸ್ ವಿರುದ್ಧ 6 ವಿಕೆಟ್‌’ಗಳ ಜಯ ದಾಖಲಿಸಿತು.

Written by - Bhavishya Shetty | Last Updated : May 1, 2023, 10:07 AM IST
    • ಟಿಮ್ ಡೇವಿಡ್ 14 ಎಸೆತಗಳಲ್ಲಿ 45 ರನ್ ಗಳಿಸಿ ಅಸಾಧ್ಯವಾದ ಜಯವನ್ನು ತಂಡಕ್ಕೆ ತಂದುಕೊಟ್ಟರು
    • ಸೂರ್ಯ ರಾಜಸ್ಥಾನ ರಾಯಲ್ಸ್‌ನಿಂದ ಪಂದ್ಯವನ್ನು ಕಸಿದುಕೊಂಡಿದ್ದಾನೆ ಎಂದು ಸಂಜು ಸ್ಯಾಮ್ಸನ್ ಹೇಳಿದ್ದಾರೆ.
    • ಮುಂಬೈ ಇಂಡಿಯನ್ಸ್ ಐಪಿಎಲ್ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧ ಆರು ವಿಕೆಟ್‌ಗಳ ರೋಚಕ ಗೆಲುವು
IPL 2023: ಗೆಲ್ಲುವ ಪಂದ್ಯದಲ್ಲಿ ಸೋಲುಂಡ ರಾಜಸ್ಥಾನ! ಕೋಪದಲ್ಲಿ… ಸೋಲಿಗೆ ಈತನೇ ಕಾರಣ ಎಂದ ಕ್ಯಾಪ್ಟನ್ title=
Sanju Samson

IPL 2023 News Update: ಭಾನುವಾರ ನಡೆದ ಐಪಿಎಲ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ 212 ರನ್ ಗಳಿಸಿದ ಹೊರತಾಗಿಯೂ ರಾಜಸ್ಥಾನ್ ರಾಯಲ್ಸ್ ತಂಡ ಸೋಲು ಕಂಡಿದೆ. ಗೆಲ್ಲುವ ಪಂದ್ಯದಲ್ಲಿ ಸೋಲು ಕಂಡಿದ್ದಕ್ಕೆ ರಾಜಸ್ಥಾನ್ ರಾಯಲ್ಸ್ ತಂಡದ ನಾಯಕ ಸಂಜು ಸ್ಯಾಮ್ಸನ್ ಕೋಪಗೊಂಡಿದ್ದಾರೆ. ಪಂದ್ಯದ ನಂತರ ಮಾತನಾಡಿದ ನಾಯಕ ಸಂಜು ಸ್ಯಾಮ್ಸನ್ ತಮ್ಮ ಹೇಳಿಕೆಯಿಂದ ಸಂಚಲನ ಮೂಡಿಸಿದ್ದಾರೆ.

ಭಾನುವಾರ ರಾಜಸ್ಥಾನ್ ರಾಯಲ್ಸ್ ವಿರುದ್ಧ ಟಿಮ್ ಡೇವಿಡ್ 14 ಎಸೆತಗಳಲ್ಲಿ 45 ರನ್ ಗಳಿಸಿ ಅಸಾಧ್ಯವಾದ ಜಯವನ್ನು ತಂಡಕ್ಕೆ ತಂದುಕೊಟ್ಟರು. ಮುಂಬೈ ಇಂಡಿಯನ್ಸ್ ತಂಡ 19.3 ಓವರ್‌ ಗಳಲ್ಲಿ 214 ರನ್ ಗಳಿಸಿ ರಾಜಸ್ಥಾನ್ ರಾಯಲ್ಸ್ ವಿರುದ್ಧ 6 ವಿಕೆಟ್‌’ಗಳ ಜಯ ದಾಖಲಿಸಿತು.

ಇದನ್ನೂ ಓದಿ: Viral Painting: 150 ವರ್ಷ ಹಳೆಯ ಪೇಂಟಿಂಗ್’ನಲ್ಲಿದ್ದ ಹುಡುಗಿ ಕೈಯಲ್ಲಿದೆ ಸ್ಮಾರ್ಟ್ ಫೋನ್! ಅದ್ಹೇಗೆ ಸಾಧ್ಯ?

ಪಂದ್ಯದ ನಂತರ ರಾಜಸ್ಥಾನ್ ರಾಯಲ್ಸ್ ನಾಯಕ ಸಂಜು ಸ್ಯಾಮ್ಸನ್ ಮಾತನಾಡಿ, “ಇಬ್ಬನಿಯಿಂದಾಗಿ ಪಿಚ್ ಒದ್ದೆಯಾಗುತ್ತಿದೆ. ನಾವು ಚೆಂಡನ್ನು ಒರೆಸುವುದರಲ್ಲಿಯೇ ಸಮಯ ಕಳೆಯುತ್ತಿದ್ದೆವು. ಆದರೆ ಇಂತಹ ಪರಿಸ್ಥಿತಿಗಳಲ್ಲಿ ಬೌಲಿಂಗ್ ಮಾಡಿದ ಅನುಭವವನ್ನು ನಾವು ಹೊಂದಿದ್ದೇವೆ. ಆಡುವ ರೀತಿಯಲ್ಲಿ ಆಡಿದರೆ ನಾವು ಗೆಲ್ಲುತ್ತೇವೆ. ಸದ್ಯ ನಾವು ಪ್ರಕ್ರಿಯೆಯ ಮೇಲೆ ಕೇಂದ್ರೀಕರಿಸುವುದನ್ನು ಮುಂದುವರಿಸುತ್ತೇವೆ. ಕಠಿಣ ಹೋರಾಟವನ್ನು ಮುಂದುವರಿಸುತ್ತೇವೆ. ರಾಜಸ್ಥಾನ ರಾಯಲ್ಸ್ ಸೋಲಿಗೆ ಮುಂಬೈ ಇಂಡಿಯನ್ಸ್ ಬ್ಯಾಟ್ಸ್‌ಮನ್ ಸೂರ್ಯಕುಮಾರ್ ಯಾದವ್ ದೊಡ್ಡ ಕಾರಣ” ಎಂದು ಸಂಜು ಸ್ಯಾಮ್ಸನ್ ಹೇಳಿದ್ದಾರೆ.

ಸೂರ್ಯ ರಾಜಸ್ಥಾನ ರಾಯಲ್ಸ್‌ನಿಂದ ಪಂದ್ಯವನ್ನು ಕಸಿದುಕೊಂಡಿದ್ದಾನೆ ಎಂದು ಸಂಜು ಸ್ಯಾಮ್ಸನ್ ಹೇಳಿದ್ದಾರೆ. ಸಂಜು ಸ್ಯಾಮ್ಸನ್ ಮಾತು ಮುಂದುವರೆಸಿ, 'ಟೈಮ್ ಔಟ್‌ನಲ್ಲಿ ಸೂರ್ಯ ಬ್ಯಾಟ್ ಮಾಡಿದ ರೀತಿ ಶ್ಲಾಘನೀಯ. ಟಿಮ್ ಡೇವಿಡ್ ಕೂಡ ಉತ್ತಮವಾಗಿ ಬ್ಯಾಟಿಂಗ್ ಮಾಡಿದರು. ಜೈಸ್ವಾಲ್ ಕೂಡ ಇಂದು ನಿರೀಕ್ಷೆ ಮೀರಿ ಆಟವಾಡಿದ್ದಾರೆ” ಎಂದು ಹೇಳಿದರು.

ಟಿಮ್ ಡೇವಿಡ್ ಅವರ 14 ಎಸೆತಗಳಲ್ಲಿ 45 ರನ್‌ ಗಳ ನೆರವಿನಿಂದ ಮುಂಬೈ ಇಂಡಿಯನ್ಸ್ ಭಾನುವಾರ ನಡೆದ ಐಪಿಎಲ್ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧ ಆರು ವಿಕೆಟ್‌ಗಳ ರೋಚಕ ಗೆಲುವು ದಾಖಲಿಸಿತು. ಯಶಸ್ವಿ ಜೈಸ್ವಾಲ್ ಅವರ ಮೊದಲ ಶತಕದ ನೆರವಿನಿಂದ ಮೊದಲು ಬ್ಯಾಟ್ ಮಾಡಿದ ರಾಜಸ್ಥಾನ ಏಳು ವಿಕೆಟ್‌ಗೆ 212 ರನ್ ಗಳಿಸಿತು. ಜೈಸ್ವಾಲ್ 62 ಎಸೆತಗಳಲ್ಲಿ 16 ಬೌಂಡರಿ ಹಾಗೂ 8 ಸಿಕ್ಸರ್‌ಗಳ ನೆರವಿನಿಂದ 124 ರನ್ ಗಳಿಸಿದರು. ಇದಕ್ಕೆ ಉತ್ತರವಾಗಿ ಮುಂಬೈ ಮೂರು ಎಸೆತಗಳು ಬಾಕಿ ಇರುವಂತೆಯೇ ನಾಲ್ಕು ವಿಕೆಟ್ ಕಳೆದುಕೊಂಡು 214 ರನ್ ಗಳಿಸಿತು.

ಇದನ್ನೂ ಓದಿ: Arjun Tendulkar: ಮೊದಲು ಮೂಗಿನೊಳಗೆ ಬೆರಳಿಟ್ಟ… ಆಮೇಲೆ ಬಾಯಿಗೆ ಹಾಕಿದ! ಅರ್ಜುನ್ ತೆಂಡೂಲ್ಕರ್ ಅಸಹ್ಯ ವಿಡಿಯೋ ವೈರಲ್

ಮುಂಬೈ ತಂಡದ ಗೆಲುವಿನ ರೂವಾರಿಯಾಗಿದ್ದ ಡೇವಿಡ್ ಕೇವಲ 14 ಎಸೆತಗಳಲ್ಲಿ ಎರಡು ಬೌಂಡರಿ ಹಾಗೂ 5 ಸಿಕ್ಸರ್‌ಗಳ ನೆರವಿನಿಂದ ಅಜೇಯ 45 ರನ್ ಗಳಿಸಿದರು. ಮುಂಬೈ ಗೆಲುವಿಗೆ ಕೊನೆಯ ಎರಡು ಓವರ್‌ಗಳಲ್ಲಿ 32 ರನ್‌ ಗಳ ಅಗತ್ಯವಿತ್ತು. ಡೇವಿಡ್ 19 ನೇ ಓವರ್‌ ನಲ್ಲಿ ಸಂದೀಪ್ ಶರ್ಮಾ ಎಸೆತದಲ್ಲಿ ಒಂದು ಬೌಂಡರಿ ಮತ್ತು ಸಿಕ್ಸರ್ ಸೇರಿದಂತೆ 15 ರನ್ ಗಳಿಸಿದರು. ಮುಂಬೈಗೆ ಕೊನೆಯ ಓವರ್‌ ನಲ್ಲಿ 17 ರನ್‌ ಗಳ ಅಗತ್ಯವಿತ್ತು ಮತ್ತು ಡೇವಿಡ್ ಮೊದಲ ಮೂರು ಎಸೆತಗಳಲ್ಲಿ ಜೇಸನ್ ಹೋಲ್ಡರ್‌ ಗೆ ಮೂರು ಸಿಕ್ಸರ್‌ ಗಳನ್ನು ಬಾರಿಸಿ ತಂಡಕ್ಕೆ ಅದ್ಭುತ ಜಯವನ್ನು ತಂದುಕೊಟ್ಟರು. ಐಪಿಎಲ್‌ ನ ಈ 1000 ನೇ ಪಂದ್ಯವನ್ನು ಸ್ಮರಣೀಯವಾಗಿಸಿದರು.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News