IPL 2024: ತಪ್ಪಾಗಿ ಖರೀದಿಸಲ್ಪಟ್ಟ ಈ ಆಟಗಾರನ ಮೇಲೆ ಇದೀಗ Preity Zinta ಫುಲ್ ಫಿದಾ!

IPL 2024: ಇಂಡಿಯನ್ ಪ್ರೀಮಿಯರ್ ಲೀಗ್ ನ 17ನೇ ಆವೃತ್ತಿಯಲ್ಲಿ ನಿನ್ನೆ ನಡೆದ ಪಂಜಾಬ್ ವರ್ಸೆಸ್ ಗುಜರಾತ್ ತಂಡಗಳ ನಡುವಿನ ಹೈ ವೋಲ್ಟೇಜ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್, ಗುಜರಾತ್ ಟೈಟನ್ಸ್ ತಂಡವನ್ನು 3 ವಿಕೆಟ್ ಗಳಿಂದ ಸೋಲಿಸಿದೇ. ಪಂಜಾಬ್ ತಂಡದ ಈ ಗೆಲುವಿನ ಬಳಿಕ ನಟಿ ಪ್ರೀತಿ ಜಿಂಟಾ ಅವಳ ಒಂದು ಸೇಲ್ಫಿ ಸಕ್ಕತ್ ವೈರಲ್ ಆಗುತ್ತಿದೆ. (IPL 2024 News In Kannada)  

Written by - Nitin Tabib | Last Updated : Apr 5, 2024, 05:02 PM IST
  • ಪಂದ್ಯದ ನಂತರ ಪಂಜಾಬ್ ತಂಡ ಡ್ರೆಸ್ಸಿಂಗ್ ರೂಂನಲ್ಲಿ ಅದ್ಭುತ ಗೆಲುವನ್ನು ಆಚರಿಸಿತು,
  • ಈ ಸಂದರ್ಭದಲ್ಲಿ ತಂಡದ ಆಟಗಾರರು ಮೊದಲು ಹಾಡನ್ನು ಹಾಡಿ ನಂತರ ಭಾರಿ ಸದ್ದು ಮಾಡಿದ್ದಾರೆ.
  • ಬಳಿಕ ತಂಡ ಹೋಟೆಲ್ ತಲುಪಿದಾಗ ಬ್ಯಾಟ್ಸ್ ಮನ್ ಶಶಾಂಕ್ ಸಿಂಗ್ ಕೇಕ್ ಕತ್ತರಿಸಿ ಎಲ್ಲ ಬ್ಯಾಟ್ಸ್ ಮನ್ ಮುಖಕ್ಕೆ ಹಚ್ಚಿದರು.
IPL 2024: ತಪ್ಪಾಗಿ ಖರೀದಿಸಲ್ಪಟ್ಟ ಈ ಆಟಗಾರನ ಮೇಲೆ ಇದೀಗ Preity Zinta ಫುಲ್ ಫಿದಾ! title=

Indian Premier League 2024: Shashank Singh ಅವರನ್ನು ಖರೀದಿಸಿದ ಪಂಜಾಬ್ ಕಿಂಗ್ಸ್ ತಂಡ ಒಂದು ಸಮಯದಲ್ಲಿ ಸ್ಫಷ್ಟನೆ ನೀಡಬೇಕಾದ ಸಂದರ್ಭವೊಂದು ಎದುರಾಗಿತ್ತು, ಆದರೆ ಇದೀಗ  ಕಾಲ ಬದಲಾಗಿದೆ. ಗುಜರಾತ್ ವಿರುದ್ಧದ ಈ ಬ್ಯಾಟ್ಸ್ ಮನ್ ನ ಸ್ಫೋಟಕ ಇನ್ನಿಂಗ್ಸ್ ನೋಡಿ ಪಂಜಾಬ್ ತಂಡ ಶಶಾಂಕ್ ಶಶಾಂಕ್ ಸಿಂಗ್ ಹೆಸರನ್ನು ಜಪಿಸುತ್ತಿದೆ. ಅಷ್ಟೇ ಅಲ್ಲ, ಶಶಾಂಕ್ ಒಂದು ಇನ್ನಿಂಗ್ಸ್‌ನ ನಂತರ ತಂಡದ ಮಾಲೀಕರಾದ ಪ್ರೀತಿ ಜಿಂಟಾ (Preity Zinta)ಫೇವರಿಟ್ ಆಟಗಾರರಾಗಿ ಹೊರಹೊಮ್ಮಿದ್ದಾರೆ.

ಶಶಾಂಕ್ ಸಿಂಗ್ ಇನ್ನಿಂಗ್ಸ್ ಹೇಗಿತ್ತು
ಪಂದ್ಯದ ಆರಂಭಕ್ಕೆ (IPL 2024) ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ (Gujarat Titans), ಪಂಜಾಬ್ ವಿರುದ್ಧ 20 ಓವರ್‌ಗಳಲ್ಲಿ 4 ವಿಕೆಟ್‌ಗಳನ್ನು ಕಳೆದುಕೊಂಡು 199 ರನ್ ಗಳಿಸಿತ್ತು, ಈ ಗುರಿಯನ್ನು ಬೆನ್ನಟ್ಟಿದ ಪಂಜಾಬ್ ತಂಡ (Punjab Kings) ಕಳಪೆ ಆರಂಭವನ್ನು ಕಂಡಿತು. ಆದರೆ ನಂತರ ಶಶಾಂಕ್ ಸಿಂಗ್ ಮತ್ತು ಅಶುತೋಷ್ ಅವರ ಅದ್ಭುತ ಇನ್ನಿಂಗ್ಸ್ ಕಾರಣ ತಂಡ 4 ವಿಕೆಟ್ ಗಳಿಂದ ಜಯಭೇರಿ ಬಾರಿಸಿತು, ಈ ಸಮಯದಲ್ಲಿ ಶಶಾಂಕ್ 29 ಎಸೆತಗಳಲ್ಲಿ 61 ರನ್ ಮತ್ತು ಅಶುತೋಷ್ 17 ಎಸೆತಗಳಲ್ಲಿ 31 ರನ್ ಗಳಿಸಿದ್ದಾರೆ. ಗೆಲುವಿನ ನಂತರ ಮೈದಾನದ ವಾತಾವರಣ ಸಂಪೂರ್ಣ ಬದಲಾಗಿತ್ತು.

ಇದನ್ನೂ ಓದಿ-IPL 2024: ಗುಜರಾತ್ ಟೈಟನ್ಸ್ ವಿರುದ್ಧದ ಹೈವೋಲ್ಟೇಜ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ 3 ವಿಕೆಟ್ ಗಳ ಗೆಲುವು

ಶಶಾಂಕ್ ಸಿಂಗ್ ಗೆ ಸೇಲ್ಫಿ ಕೇಳಿದ ಪ್ರೀತಿ (preity zinta selfie with shashank singh goes viiral on social media)
ಪಂಜಾಬ್ (PBKS)  ಗೆಲುವಿನ ನಂತರ ಪ್ರೀತಿ ಜಿಂಟಾ ಅವರ ಸೆಲ್ಫಿ ವೈರಲ್ (IPL 2024 Viral News) ಆಗುತ್ತಿದೆ, ವಿನ್ನಿಂಗ್ ಹೀರೋಗಳಾಗಿ ಹೊರಹೊಮ್ಮಿದ ಶಶಾಂಕ್ ಸಿಂಗ್ ಮತ್ತು ಅಶುತೋಷ್ (Ashutosh) ಅವರೊಂದಿಗೆ ಪ್ರೀತಿ ಸೆಲ್ಫಿ ತೆಗೆದುಕೊಂಡಿದ್ದಾರೆ. ನಂತರ ಪ್ರೀತಿ ಚಿತ್ರವನ್ನು ತನ್ನ ಸಾಮಾಜಿಕ ಮಾಧ್ಯಮದಲ್ಲಿ (Social Media) ಪೋಸ್ಟ್ ಮಾಡುವ ಮೂಲಕ ವಿಶೇಷ ಸಂದೇಶವನ್ನು ಬರೆದಿದ್ದಾರೆ.ಈ ಪೋಸ್ಟ್ ಮತ್ತು ಶೀರ್ಷಿಕೆ ಅಭಿಮಾನಿಗಳಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ. ಶಶಾಂಕ್ ಸಿಂಗ್ ಮತ್ತು ಪ್ರೀತಿ ಜಿಂಟಾ ಈ ಚಿತ್ರ ನಿಮಗೂ ಇಷ್ಟವಾಗಲಿದೆ.

ಇದನ್ನೂ ಓದಿ-PBKS vs GT: ಹೋಮ್ ಗ್ರೌಂಡ್ ನಲ್ಲಿ Shubhman Gill ಗರ್ಜನೆ, ತಂಡದ ನಾಯಕನಾಗಿ ಮೊದಲ ಫಿಫ್ಟಿ!

ತಂಡ ವಿಜಯೋತ್ಸವ ಆಚರಿಸಿತು
ಪಂದ್ಯದ ನಂತರ ಪಂಜಾಬ್ ತಂಡ ಡ್ರೆಸ್ಸಿಂಗ್ ರೂಂನಲ್ಲಿ ಅದ್ಭುತ ಗೆಲುವನ್ನು ಆಚರಿಸಿತು, ಈ ಸಂದರ್ಭದಲ್ಲಿ ತಂಡದ ಆಟಗಾರರು ಮೊದಲು ಹಾಡನ್ನು ಹಾಡಿ ನಂತರ ಭಾರಿ ಸದ್ದು ಮಾಡಿದ್ದಾರೆ. ಬಳಿಕ ತಂಡ ಹೋಟೆಲ್ ತಲುಪಿದಾಗ ಬ್ಯಾಟ್ಸ್ ಮನ್ ಶಶಾಂಕ್ ಸಿಂಗ್ ಕೇಕ್ ಕತ್ತರಿಸಿ ಎಲ್ಲ ಬ್ಯಾಟ್ಸ್ ಮನ್ ಮುಖಕ್ಕೆ ಹಚ್ಚಿದರು. ಮತ್ತೊಂದೆಡೆ, ಐಪಿಎಲ್ 2024 ರಲ್ಲಿ, ಪಂಜಾಬ್ ತಂಡ ಇದುವರೆಗೆ ಒಟ್ಟು 4 ಪಂದ್ಯಗಳನ್ನು ಆಡಿದ್ದು, ಇದರಲ್ಲಿ ತಂಡ 2 ಗೆದ್ದಿದೆ ಮತ್ತು ತಂಡ 2 ರಲ್ಲಿ ಸೋತಿದೆ ಎಂಬುದು ಇಲ್ಲಿ ಉಲ್ಲೇಖನೀಯ. 

ಪ್ರೀತಿ ಜಿಂಟಾ ಹಂಚಿಕೊಂಡಿರುವ ಪೋಸ್ಟ್ ಗಳು ಇಲ್ಲಿವೆ

 
 
 
 

 
 
 
 
 
 
 
 
 
 
 

A post shared by Preity G Zinta (@realpz)

 
 
 
 

 
 
 
 
 
 
 
 
 
 
 

A post shared by Preity G Zinta (@realpz)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News