FIFA World Cup 2022: ಮೊರೊಕ್ಕೊ ವಿರುದ್ಧ ಗೆದ್ದ ಕ್ರೊಯೇಶಿಯಾಗೆ 3ನೇ ಸ್ಥಾನ, ಸಿಕ್ಕ ಬಹುಮಾನವೆಷ್ಟು?

ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಶನಿವಾರ ನಡೆದ ಪ್ಲೇ ಆಫ್ ಕದನದಲ್ಲಿ ಮೊರೊಕ್ಕೊ ವಿರುದ್ಧ ಕ್ರೊಯೇಶಿಯಾ 2-1 ಅಂತರದಿಂದ ರೋಚಕ ಗೆಲುವು ಸಾಧಿಸಿತು. ಇದರೊಂದಿಗೆ 3ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು. ಫುಟ್ಬಾಲ್ ವಿಶ್ವಕಪ್‌ನಲ್ಲಿ ಕ್ರೊಯೇಶಿಯಾ 2ನೇ ಬಾರಿ 3ನೇ ಸ್ಥಾನ ಪಡೆದುಕೊಂಡಂತಾಯಿತು.

Written by - Puttaraj K Alur | Last Updated : Dec 18, 2022, 07:53 AM IST
  • ಮೊರೊಕ್ಕೊ ವಿರುದ್ಧ 2-1 ಅಂತರದಿಂದ ರೋಚಕ ಗೆಲುವು ಸಾಧಿಸಿದ ಕ್ರೊಯೇಶಿಯಾ
  • ಫಿಫಾ ವಿಶ್ವಕಪ್ ಟೂರ್ನಿಯಲ್ಲಿ 2ನೇ ಬಾರಿ 3ನೇ ಸ್ಥಾನ ಗಳಿಸಿದ ಕ್ರೊಯೇಶಿಯಾ
  • ಕ್ರೊಯೇಶಿಯಾಗೆ 220 ಕೊಟಿ ರೂ. ಮತ್ತು ಮೊರೊಕ್ಕೊಗೆ 204 ಕೋಟಿ ರೂ. ಬಹುಮಾನ
FIFA World Cup 2022: ಮೊರೊಕ್ಕೊ ವಿರುದ್ಧ ಗೆದ್ದ ಕ್ರೊಯೇಶಿಯಾಗೆ 3ನೇ ಸ್ಥಾನ, ಸಿಕ್ಕ ಬಹುಮಾನವೆಷ್ಟು? title=
ಕ್ರೊಯೇಶಿಯಾಗೆ 220 ಕೊಟಿ ರೂ. ಬಹುಮಾನ

ನವದೆಹಲಿ: ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಶನಿವಾರ ನಡೆದ ಪ್ಲೇ ಆಫ್ ಕದನದಲ್ಲಿ ಮೊರೊಕ್ಕೊ ವಿರುದ್ಧ ಕ್ರೊಯೇಶಿಯಾ 2-1 ಅಂತರದಿಂದ ರೋಚಕ ಗೆಲುವು ಸಾಧಿಸಿತು. ಇದರೊಂದಿಗೆ 3ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು. ಫುಟ್ಬಾಲ್ ವಿಶ್ವಕಪ್‌ನಲ್ಲಿ ಕ್ರೊಯೇಶಿಯಾ 2ನೇ ಬಾರಿ 3ನೇ ಸ್ಥಾನ ಪಡೆದುಕೊಂಡಂತಾಯಿತು.

1998ರ ವಿಶ್ವಕಪ್‌ನಲ್ಲಿ ಕ್ರೊಯೇಶಿಯಾ 3ನೇ ಸ್ಥಾನ ಪಡೆದುಕೊಂಡಿತ್ತು. 2018ರಲ್ಲಿ ರನ್ನರ್ ಆಫ್ ಆಗಿದ್ದು ಫಿಫಾ ವಿಶ್ವಕಪ್‌ನಲ್ಲಿ ಕ್ರೊಯೇಶಿಯಾ ತಂಡದ ಅತ್ಯುತ್ತಮ ಸಾಧನೆಯಾಗಿದೆ. ಶನಿವಾರ ಖಲೀಫಾ ಇಂಟರ್‌ನ್ಯಾಶನಲ್ ಸ್ಟೇಡಿಯಂನಲ್ಲಿ ನಡೆದ ಮಹತ್ವದ ಪಂದ್ಯದಲ್ಲಿ ಉಭಯ ತಂಡಗಳ ನಡುವೆ ಗೆಲುವಿಗಾಗಿ ಭರ್ಜರಿ ಪೈಪೋಟಿ ನಡೆದಿತ್ತು. ಪಂದ್ಯದ 7ನೇ ನಿಮಿಷದಲ್ಲಿಯೇ ಕ್ರೊಯೇಶಿಯಾ ಮುನ್ನಡೆ ಸಾಧಿಸಿತು. ಜೊಸ್ಕೊ ಗ್ವಾರ್ಡಿಯೊಲ್ ಮೊದಲು ಗೋಲು ಗಳಿಸುವ ಮೂಲಕ ಕ್ರೊಯೇಶಿಯಾಗೆ ಆರಂಭಿಕ ಮುನ್ನಡೆ ಒದಗಿಸಿಕೊಟ್ಟರು.

ಇದನ್ನೂ ಓದಿ: Pro Kabaddi League Season 9 : ಜೈಪುರ ಪಿಂಕ್ ಪ್ಯಾಂಥರ್ಸ್ ಚಾಂಪಿಯನ್!

ಇದಾದ 2ನೇ ನಿಮಿಷದಲ್ಲಿ ಮೊರೊಕ್ಕೊ ಗೋಲು ಗಳಿಸುವ ಮೂಲಕ ಸಮಬಲದ ಹೋರಾಟ ನಡೆಸಿತು. 9ನೇ ನಿಮಿಷದಲ್ಲಿ ಗೋಲು ಗಳಿಸಿಸುವ ಮೂಲಕ ಅಶ್ರಫ್ ದಾರಿ ಮೊರೊಕ್ಕೊ ತಂಡಕ್ಕೆ ನೆರವಾದರು. ಇದರಿಂದ 1-1ರಿಂದ ಸಮಬಲದ ಪೈಪೋಟಿ ನಡೆಯಿತು. 42ನೇ ನಿಮಿಷದಲ್ಲಿ ಗೋಲು ದಾಖಲಿಸಿದ ಮಿಸ್ಲ್ಲಾವ್ ಒರಿಸಿಕ್ ಮೊದಲಾರ್ಧದ ಅಂತ್ಯದಲ್ಲಿ ಕ್ರೊಯೇಶಿಯಾಗೆ 2-1ರ ಮುನ್ನಡೆ ಸಾಧಿಸಲು ನೆರವಾದರು. ಕ್ರೊಯೇಶಿಯಾ ಇದೇ ಮುನ್ನಡೆಯನ್ನು ಪಂದ್ಯದ ಕೊನೆಯವರೆಗೂ ಉಳಿಸಿಕೊಳ್ಳುವಲ್ಲಿ ಮೂಲಕ ಗೆಲುವು ಸಾಧಿಸಿತು. ಪಂದ್ಯ ಗೆದ್ದ ಖುಷಿಯಲ್ಲಿ ಕ್ರೊಯೇಶಿಯಾ ಆಟಗಾರರು ಮೈದಾನದಲ್ಲಿಯೇ ಸಂಭ್ರಮಿಸಿದರು.

ಸಿಕ್ಕ ಬಹುಮಾನದ ಮೊತ್ತವೆಷ್ಟು..?  

ಮೊರೊಕ್ಕೊ ತಂಡವನ್ನು 2-1 ಅಂತರದಿಂದ ಸೋಲಿಸಿ 3ನೇ ಸ್ಥಾನ ಪಡೆದ ಕ್ರೊಯೇಶಿಯಾಗೆ 220 ಕೋಟಿ ರೂ. ಬಹುಮಾನ ದೊರೆಯಿತು. ಅದರಂತೆ 4ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡ ಮೊರೊಕ್ಕೊ ತಂಡಕ್ಕೆ 204 ಕೋಟಿ ರೂ. ಬಹುಮಾನ ಸಿಕ್ಕಿತು.

ಇದನ್ನೂ ಓದಿ: Team India: ಈ ಆಟಗಾರನೇ ಟೀಂ ಇಂಡಿಯಾದ ಮುಂದಿನ ವಿರಾಟ್ ಕೊಹ್ಲಿ..!

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News