Asia Cup 2023: ಟೀಂ ಇಂಡಿಯಾಗೆ ದೊಡ್ಡ ಹೊಡೆತ, ಏಷ್ಯಾಕಪ್‍ನ ಮೊದಲ 2 ಪಂದ್ಯಗಳಿಂದ ಈ ಆಟಗಾರ ಔಟ್!

ಏಷ್ಯಾಕಪ್ 2023: ಏಷ್ಯಾಕಪ್ 2023ಕ್ಕೂ ಮುನ್ನ ಟೀಂ ಇಂಡಿಯಾದ ಟೆನ್ಷನ್ ಹೆಚ್ಚಾಗಿದೆ. ಈ ಟೂರ್ನಿಯ ಮೊದಲೆರಡು ಪಂದ್ಯಗಳಿಂದ ತಂಡದ ಸ್ಟಾರ್ ಆಟಗಾರರೊಬ್ಬರು ಹೊರಗುಳಿದಿದ್ದಾರೆ.

Written by - Puttaraj K Alur | Last Updated : Aug 29, 2023, 03:35 PM IST
  • ಏಷ್ಯಾಕಪ್ ಆರಂಭಕ್ಕೂ 1 ದಿನ ಮೊದಲು ಟೀಂ ಇಂಡಿಯಾ ಭಾರೀ ಹಿನ್ನಡೆ ಅನುಭವಿಸಿದೆ
  • ಮೊದಲೆರಡು ಪಂದ್ಯಗಳಿಂದ ತಂಡದ ಸ್ಟಾರ್ ಆಟಗಾರನೊಬ್ಬ ಹೊರಬಿದ್ದಿದ್ದಾನೆ
  • ಗಾಯದ ಕಾರಣ ಕನ್ನಡಿಗ ಕೆ.ಎಲ್.ರಾಹುಲ್ ಮೊದಲ 2 ಪಂದ್ಯಗಳಿಂದ ಅಲಭ್ಯ
Asia Cup 2023: ಟೀಂ ಇಂಡಿಯಾಗೆ ದೊಡ್ಡ ಹೊಡೆತ, ಏಷ್ಯಾಕಪ್‍ನ ಮೊದಲ 2 ಪಂದ್ಯಗಳಿಂದ ಈ ಆಟಗಾರ ಔಟ್! title=
ಮೊದಲ 2 ಪಂದ್ಯಗಳಿಂದ ಈ ಆಟಗಾರ ಔಟ್!

ನವದೆಹಲಿ: ಏಷ್ಯಾಕಪ್ ಟೂರ್ನಿ ಆರಂಭಕ್ಕೂ 1 ದಿನ ಮೊದಲು ಟೀಂ ಇಂಡಿಯಾ ಭಾರೀ ಹಿನ್ನಡೆ ಅನುಭವಿಸಿದೆ. ಮೊದಲೆರಡು ಪಂದ್ಯಗಳಿಂದ ತಂಡದ ಸ್ಟಾರ್ ಆಟಗಾರನೊಬ್ಬ ಹೊರಬಿದ್ದಿದ್ದಾನೆ. ಸ್ವತಃ ಟೀಂ ಇಂಡಿಯಾದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರೇ ಈ ದೊಡ್ಡ ಅಪ್‌ಡೇಟ್ ನೀಡಿದ್ದಾರೆ. ಈ ಆಟಗಾರ ಬಹಳ ದಿನಗಳಿಂದ ಗಾಯದಿಂದ ಬಳಲುತ್ತಿದ್ದು, ಏಷ್ಯಾಕಪ್‍ನಿಂದ ತಂಡಕ್ಕೆ ಮರಳಲು ಸಜ್ಜಾಗಿದ್ದರು. ಆದರೆ ಈ ಆಟಗಾರನ ಗಾಯ ಮತ್ತೊಮ್ಮೆ ತಂಡದ ಆತಂಕವನ್ನು ಹೆಚ್ಚಿಸಿದೆ.

ಟೀಂ ಇಂಡಿಯಾಗೆ ದೊಡ್ಡ ಹೊಡೆತ!

ಟೀಂ ಇಂಡಿಯಾದ ಸ್ಟಾರ್ ಬ್ಯಾಟ್ಸ್ ಮನ್, ಕನ್ನಡಿಗ ಕೆ.ಎಲ್.ರಾಹುಲ್ ಮೊದಲೆರಡು ಪಂದ್ಯಗಳಿಂದ ಹೊರಗುಳಿದಿದ್ದಾರೆ. ದೆಹಲಿಯಲ್ಲಿ ನಡೆದ ಆಯ್ಕೆ ಸಭೆಯ ನಂತರ ಮುಖ್ಯ ಆಯ್ಕೆಗಾರ ಅಜಿತ್ ಅಗರ್ಕರ್ ಅವರು ಕೆ.ಎಲ್.ರಾಹುಲ್ ಗಾಯದಿಂದ ಬಳಲುತ್ತಿದ್ದು, ಏಷ್ಯಾಕಪ್ ಅಭಿಯಾನದ ಮೊದಲ ಕೆಲವು ಪಂದ್ಯಗಳಿಗೆ ಅಲಭ್ಯವಾಗಲಿದ್ದಾರೆ ಎಂದು ಹೇಳಿದ್ದಾರೆ. ಇದೀಗ ಟೀಂ ಇಂಡಿಯಾ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಸಹ ಇದನ್ನು ಖಚಿತಪಡಿಸಿದ್ದಾರೆ. ಒಂದು ವೇಳೆ ರಾಹುಲ್ ಇಡೀ ಟೂರ್ನಿಯಿಂದ ಹೊರಬಿದ್ದರೆ ಸಂಜು ಸ್ಯಾಮ್ಸನ್ ಆಯ್ಕೆಯಾಗುವ ಸಾಧ್ಯತೆಯಿದೆ. ಸಂಜು ಸ್ಯಾಮ್ಸನ್ ಅವರನ್ನು ಬ್ಯಾಕಪ್ ವಿಕೆಟ್ ಕೀಪರ್ ಆಗಿ ತಂಡದ ಭಾಗವಾಗಿ ಮಾಡಲಾಗಿದೆ.

ಇದನ್ನೂ ಓದಿ: ಚಂದ್ರಯಾನ-3 ಯಶಸ್ಸಿಗೆ ವಿರಾಟ್ ಕೊಹ್ಲಿ ರೆಕಾರ್ಡ್ ಉಡೀಸ್..! ಯಾರಿಂದಲೂ ಆಗದ ಸಾಧನೆ ಇದು…

ಐಪಿಎಲ್ ಸಂದರ್ಭದಲ್ಲಿ ರಾಹುಲ್‍ಗೆ ಗಾಯ!  

2023ನೇ ಐಪಿಎಲ್ ಟೂರ್ನಿ ವೇಳೆ KL ರಾಹುಲ್ ಗಾಯಗೊಂಡಿದ್ದರು. ಅವರು ತೊಡೆಯ ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಾಯಿತು. ರಾಹುಲ್ 2023ರ ಮಾರ್ಚ್‌ನಲ್ಲಿ ಟೀಂ ಇಂಡಿಯಾ ಪರ ಕೊನೆಯ ಪಂದ್ಯ ಆಡಿದ್ದರು. ಟೀಂ ಇಂಡಿಯಾ ಪರ ಇದುವರೆಗೆ 54 ಏಕದಿನ ಪಂದ್ಯಗಳಲ್ಲಿ 1,986 ರನ್ ಗಳಿಸಿದ್ದಾರೆ. ಅದೇ ರೀತಿ ಅವರು 47 ಟೆಸ್ಟ್‌ಗಳಲ್ಲಿ 33.44 ಸರಾಸರಿಯಲ್ಲಿ 2,642 ರನ್ ಗಳಿಸಿದ್ದಾರೆ. ಟಿ-20ಯಲ್ಲಿ ರಾಹುಲ್ ಅಂಕಿ-ಅಂಶಗಳು ಸಹ ಅತ್ಯುತ್ತಮವಾಗಿವೆ. 72 ಟಿ-20 ಪಂದ್ಯಗಳನ್ನು ಆಡಿರುವ ಅವರು 2,265 ರನ್ ಗಳಿಸಿದ್ದಾರೆ.

2023ರ ಏಷ್ಯಾಕಪ್‌ಗೆ ಭಾರತ ತಂಡ

ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಕೆ.ಎಲ್.ರಾಹುಲ್ (ಮೊದಲ 2 ಪಂದ್ಯಗಳಿಂದ ಔಟ್), ಇಶಾನ್ ಕಿಶನ್, ಹಾರ್ದಿಕ್ ಪಾಂಡ್ಯ (ಉಪನಾಯಕ), ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಪ್ರಸಿದ್ಧ ಕೃಷ್ಣ. ಸ್ಟ್ಯಾಂಡ್‌ಬೈ ಆಟಗಾರ: ಸಂಜು ಸ್ಯಾಮ್ಸನ್

ಇದನ್ನೂ ಓದಿ: ಪಾಕ್ ವಿರುದ್ಧ ODIಗಳಲ್ಲಿ ಭಾರತ ಅತೀ ಹೆಚ್ಚು ಬಾರಿ ಗೆಲುವು ಕಂಡಿದ್ದು ಈ ‘ಯಶಸ್ವಿ' ಆಟಗಾರನ ನಾಯಕತ್ವದಲ್ಲಿ…

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News