Asia Cupಗೂ ಮುನ್ನ ತಂಡಕ್ಕೆ ಹೊಸ ನಾಯಕನ ನೇಮಕ! ಈ ಸ್ಟಾರ್ ಆಟಗಾರನಿಗೆ ಮತ್ತೆ ‘ಪಟ್ಟಾಭಿಷೇಕ’

Asia Cup 2023: ಏಷ್ಯಾಕಪ್ 2023 ಆಗಸ್ಟ್ 30 ರಿಂದ ಪ್ರಾರಂಭವಾಗಲಿದ್ದು, ಬಾಂಗ್ಲಾದೇಶದ ಅನುಭವಿ ಬ್ಯಾಟ್ಸ್‌ಮನ್ ತಮೀಮ್ ಇಕ್ಬಾಲ್ ಏಕದಿನ ನಾಯಕತ್ವ ತೊರೆಯುವುದಾಗಿ ಘೋಷಿಸಿದ್ದಾರೆ.

Written by - Bhavishya Shetty | Last Updated : Aug 6, 2023, 12:47 PM IST
    • ಏಷ್ಯಾಕಪ್ 2023 ಆಗಸ್ಟ್ 30 ರಿಂದ ಪ್ರಾರಂಭವಾಗಲಿದೆ
    • ತಮೀಮ್ ಇಕ್ಬಾಲ್ ಏಕದಿನ ನಾಯಕತ್ವ ತೊರೆಯುವುದಾಗಿ ಘೋಷಿಸಿದ್ದಾರೆ.
    • ಇಂತಹ ಪರಿಸ್ಥಿತಿಯಲ್ಲಿ ತಂಡಕ್ಕೆ ಶೀಘ್ರದಲ್ಲೇ ಹೊಸ ನಾಯಕನ ಆಯ್ಕೆ ಮಾಡಬೇಕಾಗಿದೆ.
Asia Cupಗೂ ಮುನ್ನ ತಂಡಕ್ಕೆ ಹೊಸ ನಾಯಕನ ನೇಮಕ! ಈ ಸ್ಟಾರ್ ಆಟಗಾರನಿಗೆ ಮತ್ತೆ ‘ಪಟ್ಟಾಭಿಷೇಕ’ title=
Shakib Al Hasan

Asia Cup 2023: ಏಷ್ಯಾಕಪ್ 2023 ಆಗಸ್ಟ್ 30 ರಿಂದ ಪ್ರಾರಂಭವಾಗಲಿದ್ದು, ಫೈನಲ್ ಪಂದ್ಯವು ಸೆಪ್ಟೆಂಬರ್ 17 ರಂದು ನಡೆಯಲಿದೆ. ಈ ಟೂರ್ನಿ ಪಾಕಿಸ್ತಾನ ಮತ್ತು ಶ್ರೀಲಂಕಾ ಆತಿಥ್ಯದಲ್ಲಿ ನಡೆಯಲಿದೆ. ಈ ಟೂರ್ನಿ ಆರಂಭಕ್ಕೂ ಮುನ್ನ ತಂಡವೊಂದು ಹೊಸ ನಾಯಕನನ್ನು ಪಡೆಯಲಿದೆ ಎಂಬ ಮಾತು ಕೇಳಿಬರುತ್ತಿದೆ. ಈಗಾಗಲೇ ಈ ಜವಾಬ್ದಾರಿಯನ್ನು ಆತ ನಿರ್ವಹಿಸಿದ್ದು, ವಿಶ್ವದ ಅತ್ಯುತ್ತಮ ಕ್ರಿಕೆಟಿಗರೆಂದು ಪರಿಗಣಿಸಲಾಗಿದೆ.

ಇದನ್ನೂ ಓದಿ: Asia Cup ಆರಂಭಕ್ಕೂ ಮುನ್ನ ಅಂತರಾಷ್ಟ್ರೀಯ ಕ್ರಿಕೆಟ್’ಗೆ ನಿವೃತ್ತಿ ಘೋಷಿಸಿದ 32ರ ಹರೆಯದ ಡ್ಯಾಶಿಂಗ್ ಆಟಗಾರ!

ಏಷ್ಯಾಕಪ್ ಆರಂಭಕ್ಕೂ ಮುನ್ನ ಬಾಂಗ್ಲಾದೇಶದ ಅನುಭವಿ ಬ್ಯಾಟ್ಸ್‌ಮನ್ ತಮೀಮ್ ಇಕ್ಬಾಲ್ ಏಕದಿನ ನಾಯಕತ್ವ ತೊರೆಯುವುದಾಗಿ ಘೋಷಿಸಿದ್ದಾರೆ. ಬೆನ್ನುನೋವಿನಿಂದಾಗಿ ಅವರು ಏಷ್ಯಾಕಪ್‌’ನಿಂದ ಹೊರಗುಳಿದಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ತಂಡಕ್ಕೆ ಶೀಘ್ರದಲ್ಲೇ ಹೊಸ ನಾಯಕನ ಆಯ್ಕೆ ಮಾಡಬೇಕಾಗಿದೆ. ತಮೀಮ್ ಇಕ್ಬಾಲ್ ಅವರು ಕೆಲವು ದಿನಗಳ ಹಿಂದೆ ನಿವೃತ್ತಿ ಘೋಷಿಸಿದ್ದರು. ನಂತರ ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಅವರನ್ನು ಭೇಟಿಯಾದ ಅವರು ಕೆಲವೇ ಗಂಟೆಗಳಲ್ಲಿ ತಮ್ಮ ನಿವೃತ್ತಿ ನಿರ್ಧಾರವನ್ನು ಹಿಂತೆಗೆದುಕೊಂಡರು.

ಸ್ಟಾರ್ ಆಲ್ ರೌಂಡರ್ ಶಕೀಬ್ ಅಲ್ ಹಸನ್ ಬಾಂಗ್ಲಾದೇಶದ ಏಕದಿನ ತಂಡದ ಜವಾಬ್ದಾರಿಯನ್ನು ಪಡೆಯಬಹುದು ಎನ್ನಲಾಗುತ್ತಿದೆ. ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ (BCB) ಅಧ್ಯಕ್ಷ ನಜ್ಮುಲ್ ಹಸನ್ ಕೂಡ ತಮೀಮ್ ಇಕ್ಬಾಲ್ ಅವರು ಬೆನ್ನುನೋವಿನ ಕಾರಣದಿಂದ ಹೊರಗುಳಿದ್ದಾರೆ, ಅವರ ನಂತರ ಮುಂಬರುವ ಏಷ್ಯಾ ಕಪ್ 2023 ರಲ್ಲಿ ODI ನಾಯಕತ್ವಕ್ಕೆ ಶಕೀಬ್ ಅಲ್ ಹಸನ್ ಉತ್ತಮ ಆಟಗಾರ್ತಿ ಎಂದು ಹೇಳಿದ್ದಾರೆ.

ಶಕೀಬ್ ಪ್ರಸ್ತುತ ಟೆಸ್ಟ್ ಮತ್ತು ಟಿ 20 ತಂಡದ ನಾಯಕತ್ವವನ್ನು ವಹಿಸಿಕೊಂಡಿದ್ದಾರೆ ಈ ಹಿಂದೆ 2011 ರ ವಿಶ್ವಕಪ್ ಸೇರಿದಂತೆ 50-ಓವರ್ ಕ್ರಿಕೆಟ್‌’ನಲ್ಲಿ ಬಾಂಗ್ಲಾದೇಶವನ್ನು ಮುನ್ನಡೆಸಿದ್ದರು.

ಶನಿವಾರ ಢಾಕಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ನಜ್ಮುಲ್, “ನಾವು ಇನ್ನೂ ನಾಯಕತ್ವದ ಬಗ್ಗೆ ಚರ್ಚಿಸಿಲ್ಲ. ವಿರಾಮ ತೆಗೆದುಕೊಂಡು ಅದರ ಬಗ್ಗೆ ಯೋಚಿಸಬೇಕು. ನಾನು ಮೊದಲೇ ಹೇಳಿದಂತೆ, ಇದು ಸರಣಿಯಾಗಿದ್ದರೆ, ನಾವು ಉಪನಾಯಕ (ಲಿಟ್ಟನ್) ಜೊತೆ ಹೋಗಬಹುದಿತ್ತು, ಆದರೆ ಈಗ ದೀರ್ಘಕಾಲ ಯೋಚಿಸಬೇಕಾಗಿದೆ” ಎಂದರು.

ಇದನ್ನೂ ಓದಿ:  2ನೇ ಟಿ-20ಯಲ್ಲಿಯೂ ಭಾರತ ಸೋತರೆ ಹೆಗಲೇರಲಿದೆ ಇತಿಹಾಸದಲ್ಲೇ ಕಂಡಿರದ ಈ ಕಳಪೆ ದಾಖಲೆ!

“ಶಕೀಬ್ ಸ್ಪಷ್ಟ ಆಯ್ಕೆ. ಆದರೆ ಅವರ ಯೋಜನೆಯನ್ನು ತಿಳಿದುಕೊಂಡು ಆಡಳಿತ ಮಂಡಳಿಯೊಂದಿಗೆ ಮಾತನಾಡಬೇಕು. ನನ್ನ ಪ್ರಕಾರ ಸುಲಭವಾದ ಆಯ್ಕೆ ಶಕಿಬ್ ಮತ್ತು ಅದರಲ್ಲಿ ಯಾವುದೇ ಸಮಸ್ಯೆ ಇಲ್ಲ” ಎಂದಿದ್ದಾರೆ.

 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News