ದಿನಭವಿಷ್ಯ 07-05-2024: ಇಂದು ಆಯುಷ್ಮಾನ್ ಯೋಗ, ಈ ರಾಶಿಯವರಿಗೆ ಶುಭ

Today Horoscope 07th May 2024: ಮಂಗಳವಾರದ ಈ ದಿನ ಚತುರ್ದಶಿ ತಿಥಿ ಆಯುಷ್ಮಾನ್ ಯೋಗವು ಯಾವ ರಾಶಿಯವರಿಗೆ ಶುಭ? ಯಾವ ರಾಶಿಯವರಿಗೆ ಅಶುಭಕರವಾಗಿದೆ ತಿಳಿಯಿರಿ. 

Written by - Yashaswini V | Last Updated : May 7, 2024, 07:34 AM IST
  • ಮಿಥುನ ರಾಶಿಯವರೇ ಅನಗತ್ಯವಾಗಿ ದುಬಾರಿ ವಸ್ತುಗಳನ್ನು ಖರೀದಿಸುವುದನ್ನು ತಪ್ಪಿಸಿ.
  • ಸಿಂಹ ರಾಶಿಯ ಉದ್ಯೋಗಸ್ಥರಿಗೆ ಲಾಭದಾಯಕ ದಿನ.
  • ವೃಶ್ಚಿಕ ರಾಶಿಯವರು ನಿಮ್ಮ ಕುಟುಂಬದೊಂದಿಗೆ ಧಾರ್ಮಿಕ ಪ್ರವಾಸಕ್ಕೆ ಹೋಗುವ ಅವಕಾಶವನ್ನು ಪಡೆಯಬಹುದು
ದಿನಭವಿಷ್ಯ 07-05-2024:  ಇಂದು ಆಯುಷ್ಮಾನ್ ಯೋಗ, ಈ ರಾಶಿಯವರಿಗೆ ಶುಭ  title=

Mangalavara Dina Bhavishya In Kannada: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, 07ನೇ ಮೇ 2024ರ ಮಂಗಳವಾರದಂದು ಚತುರ್ದಶಿ ತಿಥಿ ಬೆಳಗ್ಗೆ 11:41 ರಿಂದ ಅಮಾವಾಸ್ಯೆ ತಿಥಿ ಇರಲಿದೆ. ಮಂಗಳವಾರದ ದಿನ ಆಯುಷ್ಮಾನ್ ಯೋಗವು ಯಾರಿಗೆ ಪ್ರಯೋಜನಕಾರಿ ಎಂದು ತಿಳಿಯೋಣ... 

ಮೇಷ ರಾಶಿ:  
ಇಂದು ಆಯುಷ್ಮಾನ್ ಯೋಗಾದ ಪರಿಣಾಮವಾಗಿ ಮೇಷ ರಾಶಿಯ ಮಾರ್ಕೆಟಿಂಗ್‌ಗೆ ಸಂಬಂಧಿಸಿದ ಜನರಿಗೆ ಹೆಚ್ಚು ಪ್ರಯೋಜನಕಾರಿ ಆಗಲಿದೆ. ಉದ್ಯೋಗಸ್ಥರು ಬಾಕಿ ಉಳಿದಿರುವ ಕೆಲಸ ಪೂರ್ಣಗೊಳಿಸಲು ಹೆಚ್ಚು ಗಮನಹಾರಿಸಬೇಕಾಗುತ್ತದೆ. ವ್ಯವಹಾರದಲ್ಲಿ ಜಾಗರೂಕರಾಗಿರುವುದು ಒಳ್ಳೆಯದು. 

ವೃಷಭ ರಾಶಿ:  
ವೃಷಭ ರಾಶಿಯವರು ಇಂದು ನಿಮ್ಮ ಉದ್ಯೋಗ ಸ್ಥಳದಲ್ಲಿ ಸುಧಾರಣೆ ತರಲು ಸಂವಹನ ಕೌಶಲ್ಯಗಳ ಮೇಲೆ ಗಮನ ಕೇಂದ್ರೀಕರಿಸುವುದನ್ನು ಪರಿಗಣಿಸಿ. ವಿದೇಶಿ ಉತ್ಪನ್ನಗಳ ವ್ಯಾಪಾರ ಮಾಡುವವರು ಗುಣಮಟ್ಟದ ಬಗ್ಗೆ ಎಚ್ಚರಿಕೆಯಿಂದ ಇರಬೇಕು. 
ವಿದ್ಯಾರ್ಥಿಗಳಿಗೆ ಅಧ್ಯಯನ ಸಂಬಂಧಿತ ಸಮಸ್ಯೆಗಳು ಕಾಡಬಹುದು. 

ಮಿಥುನ ರಾಶಿ:   
ಮಿಥುನ ರಾಶಿಯವರೇ ನೀವು ಕೆಲಸ ಮಾಡುವಾಗ ಮೇಲಧಿಕಾರಿಗಳು ಮತ್ತು ಹಿರಿಯರಿಂದ ಮಾರ್ಗದರ್ಶನ ಪಡೆಯುತ್ತಿರಿ. ವ್ಯಾಪಾರಸ್ಥರು ವ್ಯವಹಾರದಲ್ಲಿ ಜಾಗರೂಕರಾಗಿರಬೇಕು. ಇಲ್ಲದಿದ್ದರೆ, ನಿಮ್ಮ ಹಣ ಬೇರೆಡೆ ಸಿಲುಕಿಕೊಳ್ಳುವ ಸಾಧ್ಯತೆ ಇದೆ. ಅನಗತ್ಯವಾಗಿ ದುಬಾರಿ ವಸ್ತುಗಳನ್ನು ಖರೀದಿಸುವುದನ್ನು ತಪ್ಪಿಸಿ. 

ಕರ್ಕಾಟಕ ರಾಶಿ: 
ಕರ್ಕಾಟಕ ರಾಶಿಯ ಉದ್ಯಮಿಗಳು ತಮ್ಮ ತಾಳ್ಮೆ ಮತ್ತು ಆತ್ಮವಿಶ್ವಾಸವನ್ನು ಕಳೆದುಕೊಳ್ಳಬಾರದು. ಬದಲಿಗೆ ಆತ್ಮವಿಶ್ವಾಸದಿಂದ ಮುಂದುವರೆದರೆ ಯಶಸ್ಸು ಖಂಡಿತವಾಗಿಯೂ ನಿಮ್ಮದಾಗಲಿದೆ. ಇಂದು ಆಯುಷ್ಮಾನ್ ಯೋಗದ ಫಲದಿಂದಾಗಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳಿಗೆ ಶುಭ ಸಮಯ. 

ಇದನ್ನೂ ಓದಿ- Shukraditya Yog: ದಶಕದ ಬಳಿಕ ಶುಕ್ರಾದಿತ್ಯ ರಾಜಯೋಗ, ಈ ರಾಶಿಯವರಿಗೆ ಗೋಲ್ಡನ್ ಟೈಮ್ ಆರಂಭ

ಸಿಂಹ ರಾಶಿ:   
ಸಿಂಹ ರಾಶಿಯ ಉದ್ಯೋಗಸ್ಥರಿಗೆ ಲಾಭದಾಯಕ ದಿನ. ನಿಮ್ಮ ಜ್ಞಾನ ಮತ್ತು ನಡವಳಿಕೆಯಿಂದಾಗಿ ಅನೇಕ ಹೊಸ ಜನರು ನಿಮ್ಮೊಂದಿಗೆ ಸಂಪರ್ಕ ಸಾಧಿಸಲು ಪ್ರಯತ್ನಿಸುತ್ತಾರೆ. ವ್ಯಾಪಾರಸ್ಥರು ದೀರ್ಘಸಮಯದಿಂದ ಬಾಕಿ ಉಳಿದಿರುವ ಕೆಲಸಗಳನ್ನು ಪೂರ್ಣಗೊಳಿಸುವಿರಿ. 

ಕನ್ಯಾ ರಾಶಿ: 
ಕನ್ಯಾ ರಾಶಿಯ ಉದ್ಯೋಗಸ್ಥರು ತ್ವರಿತ ಯಶಸ್ಸನ್ನು ಸಾಧಿಸಲು ತಪ್ಪು ದಾರಿ ಹಿಡಿಯುವುದನ್ನು ತಪ್ಪಿಸಿ. ಇಲ್ಲದಿದ್ದರೆ ಅದು ನಿಮ್ಮ ಇಮೇಜ್ ಮತ್ತು ವೃತ್ತಿಜೀವನ ಎರಡಕ್ಕೂ ಧಕ್ಕೆ ಉಂಟು ಮಾಡಲಿದೆ. ವ್ಯವಹಾರದ ದೃಷ್ಟಿಯಿಂದ ಸಮಯವು ಅನುಕೂಲಕರವಾಗಿಲ್ಲ. 

ತುಲಾ ರಾಶಿ:  
ತುಲಾ ರಾಶಿಯವರಿಗೆ ನಿಮ್ಮ ಸಹೋದ್ಯೋಗಿಗಳು ಮತ್ತು ಮೇಲಧಿಕಾರಿಗಳು ಕೆಲಸದ ಸ್ಥಳದಲ್ಲಿ ನಿಮ್ಮ ಪ್ರೀತಿಯ ನಡವಳಿಕೆಯಿಂದ ಸಂತೋಷಪಡುತ್ತಾರೆ. ಆಯುಷ್ಮಾನ್ ಯೋಗಾದ ಫಲವಾಗಿ ಕನ್ಸಲ್ಟೆನ್ಸಿ ವ್ಯವಹಾರ ಮಾಡುವವರಿಗೆ ಹೊಸ ಗ್ರಾಹಕರ ಸಂಖ್ಯೆ ಹೆಚ್ಚಾಗಲಿದೆ. 

ವೃಶ್ಚಿಕ ರಾಶಿ:   
ವೃಶ್ಚಿಕ ರಾಶಿಯವರಿಗೆ ಉದ್ಯೋಗ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಇಂದು ಶುಭ ದಿನ. ನಿಮ್ಮ ಆತ್ಮಸಾಕ್ಷಿಯಾಗಿ ಕೆಲಸ ಮಾಡುವುದರಿಂದ ವೇತನ ಹೆಚ್ಚಾಗುವ ಸಾಧ್ಯತೆ ಇದೆ. ನಿಮ್ಮ ಕುಟುಂಬದೊಂದಿಗೆ ಧಾರ್ಮಿಕ ಪ್ರವಾಸಕ್ಕೆ ಹೋಗುವ ಅವಕಾಶವನ್ನು  ಪಡೆಯಬಹುದು. 

ಇದನ್ನೂ ಓದಿ- ಒಳ್ಳೆಯ ಗಂಡ ಎಂದೆನಿಸಿಕೊಳ್ಳುತ್ತಾರೆ ಈ ರಾಶಿಯ ಹುಡುಗರು!ಪತ್ನಿಯ ಪ್ರತಿ ಆಸೆಯನ್ನು ಈಡೇರಿಸುತ್ತಾರೆಯಂತೆ ಇವರು  

ಧನು ರಾಶಿ:  
ಧನು ರಾಶಿಯವರೇ ಕೆಲಸದ ಸ್ಥಳದಲ್ಲಿ ಕೆಲವು ಅಪೂರ್ಣ ಕೆಲಸದ ಬಗ್ಗೆ ಬಾಸ್‌ನ ತೀಕ್ಷ್ಣವಾದ ಧ್ವನಿಯು ನಿಮ್ಮನ್ನು ವಿಚಲಿತಗೊಳಿಸಬಹುದು. ಉದ್ಯೋಗಸ್ಥರು ನಿಮ್ಮ ಜೀವನದ ಪ್ರತಿಯೊಂದು ಅಂಶದಲ್ಲಿ ಸಮತೋಲನವನ್ನು ಕಾಯ್ದುಕೊಳ್ಳಬೇಕು, ಇದು ನಿಮ್ಮ ಯಶಸ್ಸಿನ ಸೂತ್ರವಾಗಿದೆ.

ಮಕರ ರಾಶಿ:  
ಮಕರ ರಾಶಿಯವರು ಕಚೇರಿಯಲ್ಲಿ ಯಾವುದೇ ಕೆಲಸವನ್ನು ಮಾಡುವಾಗ ಬಹಳ ಎಚ್ಚರಿಕೆಯಿಂದ ಇರಿ. ನಿಮ್ಮ ಕೆಲಸವನ್ನು ಮರುಪರಿಶೀಲಿಸಬಹುದು. ಉದ್ಯಮಿಯು ವ್ಯವಹಾರದ ವಿಷಯಗಳಲ್ಲಿ ಚಿಂತನಶೀಲವಾಗಿ ಮುಂದುವರಿಯಬೇಕು. ಆಹಾರ ಮತ್ತು ಹಣ್ಣಿನ ವ್ಯಾಪಾರಸ್ಥರು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. 

ಕುಂಭ ರಾಶಿ:  
ಕುಂಭ ರಾಶಿಯವರೇ ಕೆಲಸದ ಸ್ಥಳದಲ್ಲಿ ಹಿರಿಯರು, ಕಿರಿಯರು ಮತ್ತು ಮೇಲಧಿಕಾರಿಗಳಿಂದ ಕೆಲವು ಹೊಸ ಕಾರ್ಯಗಳನ್ನು ಕಲಿಯುವ ಅವಕಾಶವನ್ನು ನೀವು ಪಡೆಯುತ್ತೀರಿ. ವ್ಯಾಪಾರ ವೆಚ್ಚಗಳಿಗಾಗಿ ನೀವು ಕೆಲವು ದಿನಗಳವರೆಗೆ ಕಾಯಬೇಕಾಗುತ್ತದೆ. 

ಮೀನ ರಾಶಿ:  
ಮೀನ ರಾಶಿಯವರೇ ನೀವು ಕೆಲಸದಲ್ಲಿ ಇತರರಿಗೆ ಸಹಾಯ ಮಾಡಬಹುದು, ಆದರೆ ಅವರ ಕೆಲಸದಲ್ಲಿ ಹಸ್ತಕ್ಷೇಪ ಮಾಡದಂತೆ ಎಚ್ಚರಿಕೆ ವಹಿಸಿ. ಆಯುಷ್ಮಾನ್ ಯೋಗ ರಚನೆಯಿಂದ ಲಾಜಿಸ್ಟಿಕ್ಸ್, ಪ್ರವಾಸ ಮತ್ತು ಸಾರಿಗೆ ಉದ್ಯಮಿಗಳಿಗೆ ಉತ್ತಮ ಲಾಭ ದೊರೆಯುವ ಸಾಧ್ಯತೆ ಇದೆ.

ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News