18ನೇ ವಯಸ್ಸಿಗೆ ಮದುವೆ, 20ಕ್ಕೆ ಮಕ್ಕಳು, 2 ಮದುವೆ, 43ರಲ್ಲೂ ಈಕೆ ಸಖತ್‌ ಹಾಟ್‌..!

Shweta tiwari : ಟಿವಿ ಪ್ರೇಕ್ಷಕರಿಗೆ ಶ್ವೇತಾ ತಿವಾರಿ ಬಗ್ಗೆ ವಿಶೇಷ ಪರಿಚಯ ಅಗತ್ಯವಿಲ್ಲ. 43ರ ಹರೆಯದಲ್ಲೂ ಅದೇ ಬಾಡಿ ಫಿಟ್ನೆಸ್‌ನಿಂದ ಪಡ್ಡೆ ಹೈಕ್ಳ ಮನಗೆಲ್ಲುತ್ತಿದ್ದಾರೆ ಈ ನಟಿ. ಇತ್ತೀಚೆಗೆ ಈ ಸುಂದರಿ ಥಾಯ್ಲೆಂಡ್‌ಗೆ ಹೋಗಿದ್ದು, ತಮ್ಮ ಮೂವರು ಮಕ್ಕಳೊಂದಿಗೆ ಬೇಸಿಗೆ ರಜೆಯನ್ನು ಕಳೆಯುತ್ತಿದ್ದಾರೆ. ಈ ಕುರಿತ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ.
 

1 /8

ಶ್ವೇತಾ ಹಂಚಿಕೊಂಡಿರುವ ಫೋಟೋಗಳನ್ನು ನೋಡಿದ ನೆಟ್ಟಿಗರು ಈಕೆ ಮೂರು ಮಕ್ಕಳ ತಾಯಿ ಎಂದರೆ ನಂಬುವುದು ಕಷ್ಟ ಅಂತ ಕಮೆಂಟ್ ಮಾಡುತ್ತಿದ್ದಾರೆ. ಸದ್ಯ ಈ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.  

2 /8

ಸಾಕಷ್ಟು ಅವಮಾನ, ಸಂಕಷ್ಟಗಳನ್ನು ಎದುರಿಸಿರುವ ಈ ನಟಿ 43ರ ಹರೆಯದಲ್ಲೂ ಉದಯೋನ್ಮುಖ ನಟಿಯರಿಗೆ ಕಠಿಣ ಪೈಪೋಟಿ ನೀಡುತ್ತಿದ್ದಾರೆ. ಭೋಜ್‌ಪುರಿ ಚಲನಚಿತ್ರೋದ್ಯಮಕ್ಕಿಂತ ಟಿವಿಯಲ್ಲಿ ತನ್ನ ಛಾಪು ಮೂಡಿಸಿದ ನಂತರ, ನಟಿ ಒಟಿಟಿಯತ್ತ ಮುಖ ಮಾಡಿದರು.   

3 /8

ಶ್ವೇತಾ ತಿವಾರಿ ಟಿವಿಯ ಅತ್ಯಂತ ಜನಪ್ರಿಯ ಧಾರಾವಾಹಿ 'ಕಸೌತಿ ಜಿಂದಗಿ ಕಿ' ನಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸಿದ ನಂತರ ಜನಪ್ರಿಯತೆ ಗಳಿಸಿದರು.   

4 /8

ಕೇವಲ 12 ವರ್ಷದವಳಿದ್ದಾಗ ಸಿನಿ ರಂಗ ಪ್ರವೇಶಿಸಿದ ನಟಿ, ಭೋಜ್‌ಪುರಿ ಸಿನಿ ಇಂಡ್ರಸ್ಟ್ರೀಯಲ್ಲಿ ತನ್ನ ವೃತ್ತಿಜೀವನವನ್ನು ಪ್ರಾರಂಭಿಸಿದರು. ಬಾಲಿವುಡ್ ಚಲನಚಿತ್ರಗಳಲ್ಲಿಯೂ ಸಹ ನಟಿಸಿದ್ದಾರೆ.  

5 /8

ಶ್ವೇತಾ ತಿವಾರಿ ಅವರು ರಾಜಾ ಚೌಧರಿ ಅವರನ್ನು ವಿವಾಹವಾಗಿದ್ದಾರೆ. ವೈವಾಹಿಕ ಜೀವನಕ್ಕೆ ಕಾಲಿಟ್ಟಾಗ ನಟಿಗೆ ಕೇವಲ 18 ವರ್ಷ ವಯಸ್ಸಾಗಿತ್ತು.  

6 /8

ತಮ್ಮ 20 ನೇ ವಯಸ್ಸಿನಲ್ಲಿ, ಭುಜ ಎಂಬ ಮಗುವಿಗೆ ಶ್ವೇತಾ ಜನ್ಮ ನೀಡಿದರು. ಮಗು ಹುಟ್ಟಿದ ಕೂಡಲೇ ನಟಿ ತನ್ನ ಪತಿಗೆ ವಿಚ್ಛೇದನ ನೀಡಿದರು.   

7 /8

2013 ರಲ್ಲಿ ಅಭಿನವ್ ಕೊಹ್ಲಿಯನ್ನು ವಿವಾಹವಾದರು. ಈ ಮದುವೆಯ ನಂತರ ಶ್ವೇತಾ ತಿವಾರಿಗೆ ಒಬ್ಬ ಮಗ ಜನಿಸಿದನು. ಆದರೆ ಮದುವೆಯಾಗಿ 6 ​​ವರ್ಷಗಳ ನಂತರ ಈ ಜೋಡಿ ಬೇರೆಯಾಯಿತು.  

8 /8

ಎರಡು ಬಾರಿ ಪ್ರೀತಿಯಲ್ಲಿ ಮೋಸ ಹೋದ ಶ್ವೇತಾ ಈಗ ಮಗಳು ಪಾಲಕ್ ತಿವಾರಿ ಹಾಗೂ ಮಗ ರೆಯಾನ್ಶ್ ಕೊಹ್ಲಿ ಜತೆ ಒಂಟಿಯಾಗಿ ವಾಸಿಸುತ್ತಿದ್ದಾರೆ.