Neha Shetty : ಅವಕಾಶ ಬೇಕು ಅಂದ್ರೆ ನಿರ್ದೇಶಕರ ಜತೆ ಸಂಪರ್ಕದಲ್ಲಿರಬೇಕು... ತಪ್ಪೇನಲ್ಲ..! ನೇಹಾ ಶೆಟ್ಟಿ ಶಾಕಿಂಗ್‌ ಹೇಳಿಕೆ

Neha Shetty : 2016 ರಲ್ಲಿ ತೆರೆಕಂಡ ಯೋಗರಾಜ್‌ ಭಟ್‌ ನಿರ್ದೇಶನದ ಮುಂಗಾರು ಮಳೆ 2 ಸಿನಿಮಾದ ಮೂಲಕ ಸಿನಿ ಲೋಕಕ್ಕೆ ಕಾಲಿಟ್ಟ ನೇಹಾ ಶೆಟ್ಟಿ ಕೇವಲ ಒಂದೇ ಒಂದು ಚಿತ್ರದ ಮೂಲಕ ಪಡ್ಡೆ ಹೈಕ್ಳ ಕ್ರಶ್ ಆದರು. ತನ್ನ ಸೌಂದರ್ಯ ಮತ್ತು ನಟನೆಯಿಂದ ಈ ಚೆಲುವೆ ಸಾಕಷ್ಟು ಪ್ಯಾನ್ಸ್‌ ಫಾಲೋಯಿಂಗ್‌ ಹೊಂದಿದ್ದಾರೆ. ಅಲ್ಲದೆ, ಟಾಲಿವುಡ್‌ನಲ್ಲಿಯೂ ಸಹ ಬಹುಬೇಡಿಕೆ ನಟಿಯಾಗಿ ಗುರುತಿಸಿಕೊಂಡಿದ್ದಾರೆ.
 

1 /6

ನೇಹಾ ಶೆಟ್ಟಿ ಕೇವಲ ಒಂದೇ ಒಂದು ಚಿತ್ರದ ಮೂಲಕ ಯುವಜನತೆಯ ಕ್ರಶ್ ಆದರು. ನೇಹಾ ಶೆಟ್ಟಿಗೆ ಡಿಜೆ ಟಿಲ್ಲು ಚಿತ್ರದ ಮೂಲಕ ಸೌತ್‌ ಸಿನಿರಂಗದಲ್ಲಿ ಒಳ್ಳೆಯ ಕ್ರೇಜ್‌ ಸಿಕ್ಕಿತು. ಈ ಸಿನಿಮಾದಲ್ಲಿ ಗ್ಲಾಮರ್ ಅಷ್ಟೇ ಅಲ್ಲ, ರೊಮ್ಯಾನ್ಸ್ ಕೂಡ ಯುವಜನತೆಯನ್ನು ಆಕರ್ಷಿಸಿತ್ತು. ಆ ನಂತರ ನೇಹಾಗೆ ಸಾಲು ಸಾಲು ಅವಕಾಶಗಳು ಬಂದವು.   

2 /6

ಸದ್ಯ ನೇಹಾ ಶೆಟ್ಟಿ ಅವರ ಡೇಟ್ಸ್‌ಗಾಗಿ ನಿರ್ಮಾಪಕರು ಸಾಲುಗಟ್ಟಿ ನಿಂತಿದ್ದಾರೆ.. ಇತ್ತೀಚೆಗೆ ನೇಹಾ ಟಿಲ್ಲು ಸ್ಕ್ವೇರ್‌ನಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಇತ್ತೀಚಿನ ಸಂದರ್ಶನವೊಂದರಲ್ಲಿ ನೇಹಾ ಶೆಟ್ಟಿ ಟಾಲಿವುಡ್‌ನಲ್ಲಿ ಅವಕಾಶಗಳ ಬಗ್ಗೆ ಆಘಾತಕಾರಿ ಕಾಮೆಂಟ್‌ಗಳನ್ನು ಮಾಡಿದ್ದಾರೆ.   

3 /6

ಕಾಸ್ಟಿಂಗ್ ಕೌಚ್ ಬಗ್ಗೆ ಚರ್ಚೆ ನಡೆಯುತ್ತಿರುವಾಗಲೇ ನೇಹಾ ಶೆಟ್ಟಿ ಕಾಮೆಂಟ್ಸ್ ವೈರಲ್ ಆಗುತ್ತಿದೆ. ಆದರೆ ನೇಹಾ ಶೆಟ್ಟಿ ಮಾಡಿದ್ದು ಕಾಸ್ಟಿಂಗ್ ಕೌಚ್ ಬಗ್ಗೆ ಅಲ್ಲ. ಕೆಲವೊಮ್ಮೆ ಅವಕಾಶಗಳು ನಾಯಕಿಯರನ್ನು ಹುಡುಕಿಕೊಂಡು ಬರುತ್ತವೆ. ಆದರೆ ಪ್ರತಿ ಬಾರಿ ಹೀಗಾಗುವುದಿಲ್ಲ, ಆಫರ್‌ಗಳಿಗಾಗಿ ಏನು ಮಾಡುತ್ತೀರಿ ಎಂದು ನೇಹಾ ಶೆಟ್ಟಿ ಸಂದರ್ಶನದಲ್ಲಿ ಆ್ಯಂಕರ್ ಪ್ರಶ್ನೆ ಮಾಡಿದ್ದರು.   

4 /6

ಅದಕ್ಕೆ ಉತ್ತರಿಸಿದ ನೇಹಾ ಶೆಟ್ಟಿ.. ನಿರ್ದೇಶಕರ ಜತೆ ಸಂಪರ್ಕದಲ್ಲಿರಬೇಕು. ಅವರಿಗೆ ಕರೆ ಮಾಡಿ ಅವಕಾಶ ಕೇಳುತ್ತೇನೆ. ಅದರಲ್ಲಿ ತಪ್ಪೇನಿಲ್ಲ. ಯಾಕೆಂದರೆ ಚಿತ್ರದಲ್ಲಿ ನಟಿಸಲು ನಮಗೆ ಎಷ್ಟು ಆಸಕ್ತಿ ಇದೆ ಎಂದು ಅವರಿಗೆ ತಿಳಿಯಬೇಕಾದರೆ ನಾವೇ ಕೇಳಬೇಕು ಎಂದು ಉತ್ತರಿಸಿದ್ದಾರೆ.   

5 /6

ಅಲ್ಲದೆ, ನೂರಾರು ಹುಡುಗಿಯರು ಇಲ್ಲಿ ಅವಕಾಶಗಳಿಗಾಗಿ ಕಾಯುತ್ತಿದ್ದಾರೆ. ನಾನು ನಿರ್ದೇಶಕರಿಗೆ ಫೋನ್ ಮಾಡಿದೆ.. ಸಾರ್ ನೀವು ಈ ಸಿನಿಮಾ ಮಾಡುತ್ತಿದ್ದೀರಿ ಅಂತ ತಿಳಿದು ಬಂತು. ನಿಮ್ಮ ಕಥೆಗೆ ನಾನು ನ್ಯಾಯ ಸಲ್ಲಿಸಬಹುದೆಂದು ನೀವು ಭಾವಿಸಿದರೆ, ದಯವಿಟ್ಟು ನನಗೆ ಒಂದು ಅವಕಾಶ ನೀಡಿ ಅಂತ ಕೇಳುವುದರಲ್ಲಿ ತಪ್ಪೇನಿಲ್ಲ ಎಂದು ನೇಹಾ ಶೆಟ್ಟಿ ಹೇಳಿದ್ದಾರೆ.   

6 /6

ನಾವು ಇಂಡಸ್ಟ್ರಿಯಲ್ಲಿ ಇದ್ದೇವೆ ಎಂದು ಅವರಿಗೆ ಗೊತ್ತಾಗಲು ಇಂತಹ ವಿಷಯಗಳು ಅಗತ್ಯ. ಅದೇ ರೀತಿ ಸ್ಟಾರ್ ಹೀರೋಗಳ ಜೊತೆ ನಟಿಸಬೇಕು ಅಂತ ಆಸೆ ಇರುತ್ತದೆ. ಫ್ಲಾಪ್ ಕೊಟ್ಟ ನಾಯಕರ ಜೊತೆ ನಾನು ಕೆಲಸ ಮಾಡುವುದಿಲ್ಲ. ಒಳ್ಳೆಯ ಆಫರ್ ಬಂದರೆ ಖಂಡಿತಾ ಮಾಡುತ್ತೇನೆ ಎಂದಿದ್ದಾರೆ ನೇಹಾ ಶೆಟ್ಟಿ.