QR Code ಮೂಲಕ ಪೇಮೆಂಟ್ ಮಾಡುವಾಗ ಈ ವಿಚಾರಗಳ ಬಗ್ಗೆ ಇರಲಿ ಎಚ್ಚರ..!

 Paytm ಮತ್ತು Google Pay ನಂತಹ ಎಲ್ಲಾ ಅಪ್ಲಿಕೇಶನ್‌ಗಳೊಂದಿಗೆ, ನಿಮ್ಮ ಸ್ಮಾರ್ಟ್‌ಫೋನ್‌ನಿಂದ QR ಕೋಡ್ ಅನ್ನು ಸ್ಕ್ಯಾನ್ ಮಾಡುವ ಮೂಲಕ ಎಲ್ಲಿ ಬೇಕಾದರೂ ಪೇಮೆಂಟ್ ಮಾಡಬಹುದು.

ನವದೆಹಲಿ : ಇಂದಿನ ಡಿಜಿಟಲ್ ಜಗತ್ತಿನಲ್ಲಿ, ನಮ್ಮ ಹೆಚ್ಚಿನ ಕೆಲಸಗಳು ಆನ್‌ಲೈನ್‌ ಮೂಲಕವೇ ನಡೆದು ಹೋಗುತ್ತದೆ. ಇಂದಿನ ಕಾಲದಲ್ಲಿ, ಆನ್‌ಲೈನ್ ಪೇಮೆಂಟ್ ಗಳು ಹೆಚ್ಚು ಜನಪ್ರಿಯವಾಗಿರುವುದರಿಂದ,  ಕೈಯಲ್ಲಿ ಕ್ಯಾಶ್ ತೆಗೆದುಕೊಳ್ಳುವ ಅಗತ್ಯವಿಲ್ಲ. Paytm ಮತ್ತು Google Pay ನಂತಹ ಎಲ್ಲಾ ಅಪ್ಲಿಕೇಶನ್‌ಗಳೊಂದಿಗೆ, ನಿಮ್ಮ ಸ್ಮಾರ್ಟ್‌ಫೋನ್‌ನಿಂದ QR ಕೋಡ್ ಅನ್ನು ಸ್ಕ್ಯಾನ್ ಮಾಡುವ ಮೂಲಕ ಎಲ್ಲಿ ಬೇಕಾದರೂ ಪೇಮೆಂಟ್ ಮಾಡಬಹುದು. ಆದರೆ, ಈ ರೀತಿ ಕೋಡ್ ಸ್ಕ್ಯಾನ್ ಮಾಡಿ, ಪೇಮೆಂಟ್  ಮಾಡುವಾಗ ಹಣವನ್ನು ಕಳೆದುಕೊಳ್ಳುವ ಅಪಾಯವು ಎದುರಾಗಬಹುದು. QR ಕೋಡ್ ಸ್ಕ್ಯಾನ್ ಮಾಡುವಾಗ ನೀವು ನೆನಪಿನಲ್ಲಿಟ್ಟುಕೊಳ್ಳಬೇಕಾದ ಕೆಲವು ಪ್ರಮುಖ ವಿಷಯಗಳು ಇಲ್ಲಿವೆ. 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

QR ಕೋಡ್ ಅನ್ನು ಸ್ಕ್ಯಾನ್ ಮಾಡಿ, ಪೇಮೆಂಟ್ ಮಾಡುವಾಗ ಕೆಲವೊಮ್ಮೆ ಕೋಡ್‌ಗಳು  ಇತರ ವೆಬ್‌ಸೈಟ್‌ಗಳಿಗೆ ಕರೆದೊಯ್ಯುತ್ತವೆ. ಇಲ್ಲಿ  URL ಅನ್ನು ಓದಿಕೊಳ್ಳಿ. ಏಕೆಂದರೆ ಸ್ಕ್ಯಾಮ್‌ಗಳನ್ನು ಇದೇ ರೀತಿಯ ವಿಧಾನಗಳ ಮೂಲಕ ನಡೆಸಲಾಗುತ್ತದೆ.

2 /5

QR ಕೋಡ್ ಅನ್ನು ಸ್ಕ್ಯಾನ್ ಮಾಡುವಾಗ, ಯಾವುದಾದರೂ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡುವ ಲಿಂಕ್ ಬಂದರೆ ಹುಷಾರಾಗಿರಿ. ಯಾವುದೇ ಅಪ್ಲಿಕೇಶನ್ ಅನ್ನು  ಆಪ್ ಸ್ಟೋರ್ ಅಥವಾ Google Play Storeನಿಂದ ಮಾತ್ರವೇ ಡೌನ್‌ಲೋಡ್ ಮಾಡಿಕೊಳ್ಳಿ. 

3 /5

ಅನೇಕ ಬಾರಿ ಹ್ಯಾಕರ್‌ಗಳು  ಮೇಲ್‌ ಮೂಲಕ ಕ್ಯೂಆರ್ ಕೋಡ್‌ಗಳನ್ನು ಕಳುಹಿಸುತ್ತಾರೆ, ಪೇಮೆಂಟ್ ವಿಫಲವಾದರೆ ಅದನ್ನು ಬಳಸುವಂತೆ ಕೋರಲಾಗುತ್ತದೆ. ಮೇಲ್ ನಲ್ಲಿ ಬರುವ  QR ಕೋಡ್ ಅನ್ನು ಬಳಸಬೇಡಿ. 

4 /5

QR ಕೋಡ್‌ ಮೂಲಕ ಪೇಮೆಂಟ್ ಮಾಡುತ್ತಿದ್ದರೆ, ಅದರಲ್ಲಿಯೂ ಕೆಫೆ ಅಥವಾ ರೆಸ್ಟೋರೆಂಟ್‌ನಲ್ಲಿ, QR ಕೋಡ್ ಸ್ಕ್ಯಾನ್ ಮಾಡುವ ವೇಳೆ, ಅದು ನಿಮ್ಮನ್ನು ಪೇಮೆಂಟ್  ಅಪ್ಲಿಕೇಶನ್‌ಗೆ ಕರೆದೊಯ್ಯುತ್ತದೆಯೇ  ಎನ್ನುವುದನ್ನು ಗಮನಿಸಿಕೊಳ್ಳಿ . 

5 /5

QR ಕೋಡ್ ಅನ್ನು ಎಲ್ಲಿಯಾದರೂ ಸ್ಕ್ಯಾನ್ ಮಾಡುವ ಮೊದಲು, ಅದನ್ನು ಒಮ್ಮೆ ಪರಿಶೀಲಿಸಿ.  ಏಕೆಂದರೆ ಅನೇಕ ಬಾರಿ ಹ್ಯಾಕರ್‌ಗಳು QR ಕೋಡ್‌ನಲ್ಲಿ ಪಾರದರ್ಶಕ ಫಾಯಿಲ್ ಅನ್ನು ಹಾಕುತ್ತಾರೆ.