Interesting: ಬಾಹ್ಯಾಕಾಶದಿಂದ ಭೂಮಿಯ ಯಾವ ಸ್ಥಳಗಳು ಗೋಚರಿಸುತ್ತವೆ..?

ಬಾಹ್ಯಾಕಾಶದಿಂದ ಭೂಮಿಯ ಯಾವ ಸ್ಥಳಗಳು ಗೋಚರಿಸುತ್ತವೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ.

ನವದೆಹಲಿ: ಬಾಹ್ಯಾಕಾಶವು ಭೂಮಿಯಿಂದ ನೂರಾರು ಕಿಲೋಮೀಟರ್ ದೂರದಲ್ಲಿದೆ. ಆದರೆ ಇನ್ನೂ ಭೂಮಿಯ ಹಲವು ಸ್ಥಳಗಳು ಅಲ್ಲಿಂದ ಸ್ಪಷ್ಟವಾಗಿ ಗೋಚರಿಸುತ್ತವೆ. ಈ ಸ್ಥಳಗಳು ದುಬೈ, ಚೀನಾ ಮತ್ತು ಪಶ್ಚಿಮ ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾದಲ್ಲಿವೆ ಎಂದು ತಿಳಿದರೆ ನಿಮಗೆ ಆಶ್ಚರ್ಯವಾಗುತ್ತದೆ. ಈ ಸ್ಥಳಗಳಲ್ಲದೆ ಕೆಲವು ಹೆದ್ದಾರಿಗಳು ಸಹ ಅಷ್ಟು ಎತ್ತರದಿಂದ ಗೋಚರಿಸುತ್ತವಂತೆ. ಬಾಹ್ಯಾಕಾಶದಿಂದ ಭೂಮಿಯ ಯಾವ ಸ್ಥಳಗಳು ಗೋಚರಿಸುತ್ತವೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

ಭೂಮಿ ಮತ್ತು ಬಾಹ್ಯಾಕಾಶದ ಗಡಿಯನ್ನು ಕಾರ್ಮನ್ ಲೈನ್ ಎಂದು ಕರೆಯಲಾಗುತ್ತದೆ. ಈ ರೇಖೆಯು ಭೂಮಿಯ ಮೇಲ್ಮೈಯಿಂದ 100 ಕಿಮೀ ಎತ್ತರದಲ್ಲಿದೆ. ಈ ಎತ್ತರದಿಂದ ಭೂಮಿಯ ಅನೇಕ ಸ್ಥಳಗಳು ಗೋಚರಿಸುತ್ತವೆ. ಇಲ್ಲಿಂದ ಯಾವುದೇ ಸುಂದರ ನೋಟವನ್ನು ನೋಡುವುದು Dream come True ಅಂತಾನೇ ಹೇಳಬಹುದು.  

2 /5

ಬಿಂಗ್ಹ್ಯಾಮ್ ತಾಮ್ರದ ಗಣಿ ಅಥವಾ ಬಿಂಗ್ಹ್ಯಾಮ್ ಕಣಿವೆ ಗಣಿ ಸಾಲ್ಟ್ ಲೇಕ್ ಸಿಟಿಯಿಂದ ಸುಮಾರು 32 ಕಿಲೋಮೀಟರ್ ದೂರದಲ್ಲಿದೆ. ಗಗನಯಾತ್ರಿಗಳು ಇದನ್ನು ನೋಡಿದ್ದಾರೆಂದು ಹೇಳಿಕೊಂಡಿದ್ದಾರೆ. ಈ ಗಣಿ ವಿಶ್ವದ ಅತಿದೊಡ್ಡ ಮಾನವ ನಿರ್ಮಿತ ಗಣಿ ಎಂದು ಪರಿಗಣಿಸಲಾಗಿದೆ. ತಾಮ್ರವನ್ನು ಇಲ್ಲಿ ಉತ್ಪಾದಿಸಲಾಗುತ್ತದೆ.

3 /5

ನೀವು ಬಾಹ್ಯಾಕಾಶದಿಂದ ಚೀನಾದ 3 ಗಾರ್ಜಸ್ ಅಣೆಕಟ್ಟನ್ನು(Three Gorges Dam) ಸಹ ಸ್ಪಷ್ಟವಾಗಿ ನೋಡಬಹುದು. ಇದು ವಿಶ್ವದ ಅತಿದೊಡ್ಡ ಅಣೆಕಟ್ಟು ಮತ್ತು ಇದನ್ನು ನಿರ್ಮಿಸಲು 2.5 ಲಕ್ಷ ಕೋಟಿ ರೂ.ಗಿಂತ ಹೆಚ್ಚು ಖರ್ಚು ಮಾಡಲಾಗಿದೆಯಂತೆ. ಈ ಅಣೆಕಟ್ಟನ್ನು ಚೀನಾದ ಯಾಂಗ್ಟ್ಜಿ ನದಿಯ ಮೇಲೆ ನಿರ್ಮಿಸಲಾಗಿದೆ, ಇದು ವಿಶ್ವದ 3ನೇ ಅತಿ ಉದ್ದದ ನದಿ ಎಂದು ಪರಿಗಣಿಸಲಾಗಿದೆ.

4 /5

ದುಬೈನ ಪ್ರಸಿದ್ಧ ಪಾಮ್ ಜುಮೇರಾವನ್ನು ಬಾಹ್ಯಾಕಾಶದಿಂದ ನೋಡಬಹುದು. ದುಬೈ ಮೂಲಸೌಕರ್ಯಕ್ಕೆ ಹೆಸರುವಾಸಿಯಾಗಿದೆ. ಮರದ ಆಕಾರದ ಪಾಮ್ ಜುಮೇರಾ ದ್ವೀಪವು ಹೊಳೆಯುವ ಹೋಟೆಲ್‌ಗಳು, ಐಷಾರಾಮಿ ಅಪಾರ್ಟ್ಮೆಂಟ್ ಟವರ್‌ಗಳು ಮತ್ತು ಉನ್ನತ ಮಾರುಕಟ್ಟೆಯ ಜಾಗತಿಕ ರೆಸ್ಟೋರೆಂಟ್‌ಗಳಿಗೆ ಪ್ರಸಿದ್ಧವಾಗಿದೆ.

5 /5

ಇದಲ್ಲದೆ ಪರಿಸ್ಥಿತಿ ಮತ್ತು ಬೆಳಕಿನ ಬೆಂಬಲ ಇದ್ದರೆ ಭೂಮಿಯ ಅನೇಕ ಹೆದ್ದಾರಿಗಳು ಬಾಹ್ಯಾಕಾಶದಿಂದ ಗೋಚರಿಸುತ್ತವೆ ಎಂದು ಹೇಳಲಾಗುತ್ತದೆ. ಚೀನಾದ ಪ್ರಸಿದ್ಧ ಗೋಡೆಯು ಬಾಹ್ಯಾಕಾಶದಿಂದ ಗೋಚರಿಸುವುದಿಲ್ಲವೆಂದು ತಿಳಿದರೆ ನಿಮಗೆ ಆಶ್ಚರ್ಯವಾಗುತ್ತದೆ. ಆದರೆ ಇನ್ನೂ ಸಹ ಈ ಗೋಡೆಯು ಬಾಹ್ಯಾಕಾಶದಿಂದ ಗೋಚರಿಸುತ್ತದೆ ಎಂದು ಕೆಲವರು ಹೇಳುತ್ತಿದ್ದಾರೆ.