ಲಿವರ್ ಆರೋಗ್ಯ ಕೆಡುತ್ತಿದೆ ಎನ್ನುವುದನ್ನು ಖಚಿತವಾಗಿ ತೋರಿಸುತ್ತದೆ ಈ ಲಕ್ಷಣಗಳು! ನಿರ್ಲಕ್ಷ್ಯ ಬೇಡವೇ ಬೇಡ

Liver Health :ಲಿವರ್ ಆರೋಗ್ಯ ಹದಗೆಡುವಾಗ ದೇಹ ನಮಗೆ ಕೆಲವೊಂದು ಸೂಚನೆಗಳನ್ನು ನೀಡುತ್ತದೆ. ಇದನ್ನು ಗುರುತಿಸಿಕೊಂಡರೆ ಮುಂದಿನ ಅನಾಹುತವನ್ನು ತಪ್ಪಿಸಬಹುದು. 
 

Liver Health : ನಮ್ಮ ಬಿಡುವಿಲ್ಲದ ಜೀವನಶೈಲಿಯಿಂದಾಗಿ ನಾವು ನಮ್ಮ ಬಗ್ಗೆ ಕಾಳಜಿ ವಹಿಸುವುದನ್ನೇ ಮರೆತುಬಿಡುತ್ತೇವೆ. ಸಮಯವನ್ನು ಉಳಿಸುವ ಸಲುವಾಗಿ ಅಥ್ವಾ ಸಮಯದ ಅಭಾವದಿಂದಾಗಿ ಸಾಕಷ್ಟು ಹಾನಿಕಾರಕ ಆಹಾರವನ್ನು ಸೇವಿಸುತ್ತೇವೆ.ಇದರಿಂದ ನಮ್ಮ ಯಕೃತ್ತು ಕೂಡ ಹಾಳಾಗುತ್ತದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

1 /7

ಸಾಮಾನ್ಯವಾಗಿ ಅಲ್ಕೋಹಾಲ್ ಸೇವನೆಯಿಂದ ಮಾತ್ರ ಲಿವರ್ ಆರೋಗ್ಯ ಕೆಡುತ್ತದೆ ಎನ್ನುವ ಕಲ್ಪನೆ ಬಹುತೇಕರಲ್ಲಿದೆ. ಆದರೆ ಈ ಕಲ್ಪನೆಯೇ ತಪ್ಪು. ಲಿವರ್ ಸಮಸ್ಯೆ ಯಾರಿಗೆ ಬೇಕಾದರೂ ಬರಬಹುದು. ಲಿವರ್ ಆರೋಗ್ಯ ಹದಗೆಡುವಾಗ ದೇಹ ನಮಗೆ ಕೆಲವೊಂದು ಸೂಚನೆಗಳನ್ನು ನೀಡುತ್ತದೆ.  

2 /7

ಯಕೃತ್ತಿನ ಜೀವಕೋಶಗಳಲ್ಲಿ ಕೊಬ್ಬು, ಟ್ರೈಗ್ಲಿಸರೈಡ್ ಗಳ ಅಸಹಜ ಶೇಖರಣೆಯಿಂದಾಗಿ ಫ್ಯಾಟಿ ಲಿವರ್ ಉಂಟಾಗುತ್ತದೆ.ಇದರಿಂದ  ದಿನವಿಡೀ ದಣಿವು ನಿಮ್ಮನ್ನು ಆವರಿಸುತ್ತದೆ.ಇದು ಅದರ ಆರಂಭಿಕ ಲಕ್ಷಣಗಳಲ್ಲಿ ಒಂದಾಗಿದೆ.

3 /7

ಫ್ಯಾಟಿ ಲಿವರ್ ನಲ್ಲಿ ಹೊಟ್ಟೆ ನೋವಿನ ಸಮಸ್ಯೆ ಕಾಡುತ್ತದೆ.ವಿನಾ ಕಾರಣ   ಹೊಟ್ಟೆಯಲ್ಲಿ ನೋವು ಕಾಣಿಸಿಕೊಂಡರೆ ಅಥವಾ ಆ ನೋವು ಮುಂದುವರಿಯುತ್ತಾ ಹೋದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಿ.

4 /7

ಯಾವುದೇ ರೋಗದ ಮುಖ್ಯ ಲಕ್ಷಣವೆಂದರೆ ದೌರ್ಬಲ್ಯ.  ಲಿವರ್ ಸಮಸ್ಯೆ ಉಂಟಾದಾಗಲೂ ಅಷ್ಟೇ ದೈನಂದಿನ ಕಾರ್ಯಗಳನ್ನು ಮಾಡಲು ಕೂಡಾ ಸಾಧ್ಯವಾಗುವುದಿಲ್ಲ.ನಿರಂತರವಾಗಿ ವೀಕ್ ನೆಸ್ ನಿಮ್ಮನ್ನು ಕಾಡುತ್ತಲೇ ಇರುತ್ತದೆ.

5 /7

ಹಸಿವಿನ ಕೊರತೆಯೂ ಇದರ ಮುಖ್ಯ ಲಕ್ಷಣಗಳಲ್ಲಿ ಒಂದಾಗಿದೆ.ದಿನವಿಡೀ ಹೊಟ್ಟೆ ತುಂಬಿರುವಂತೆ ಭಾಸವಾಗುತ್ತದೆ. ಏನನ್ನೂ ತಿನ್ನಲು ಆಗುವುದಿಲ್ಲ. , ಇದರಿಂದ  ಸುಸ್ತು ಆವರಿಸುತ್ತದೆ.ಯಾವ ಕೆಲಸ ಮಾಡಲು ಕೂಡಾ ಸಾಧ್ಯವಾಗುವುದಿಲ್ಲ. 

6 /7

ಕಡಿಮೆ ತಿನ್ನುವಾಗ ದೇಹ ತೂಕ ಇಳಿಕೆಯಾಗಿಯೇ ಆಗುತ್ತದೆ. ಲಿವರ್ ಸಮಸ್ಯೆ ಇದ್ದಾಗ ಇದ್ದಕ್ಕಿದ್ದ ಹಾಗೆ ತೂಕ ಕಡಿಮೆಯಾಗಲು ಆರಂಭವಾಗುತ್ತದೆ. ಇಸು ಸಾಮಾನ್ಯ ಎನ್ನುವಂತೆ ತೋರಬಹುದು.ಆದರೆ ಇದು ಫ್ಯಾಟಿ ಲಿವರ್ ನ  ಲಕ್ಷಣವಾಗಿದೆ.   

7 /7

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು, ದಯವಿಟ್ಟು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ZEE NEWS ಇದನ್ನು ಖಚಿತಪಡಿಸುವುದಿಲ್ಲ.