Adah Sharma : ನಟಿಯಾಗಲು ʼದಿ ಕೇರಳ ಸ್ಟೋರಿʼ ಚೆಲುವೆ ಮಾಡಿದ ತ್ಯಾಗ ಎಂತದ್ದು ಗೊತ್ತೆ..!

Happy birthday Adah Sharma : ಅದಾ ಶರ್ಮಾ ಬಗ್ಗೆ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ, ತನ್ನ ಮುಗ್ದ ಸೌಂದರ್ಯ, ಕ್ಯೂಟ್‌ ಸ್ಮೈಲ್‌, ಅದ್ಭುತ ನಟನೆಯ ಮೂಲಕ ಭಾರತೀಯ ಸಿನಿರಂಗದಲ್ಲಿ ಪಸಿದ್ಧರಾಗಿದ್ದಾರೆ. 2015 ರಲ್ಲಿ ಬಿಡುಗಡೆಯಾದ ಪವರ್‌ ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌ ನಟನೆಯ ರಣ ವಿಕ್ರಮ ಸಿನಿಮಾದ ಮೂಲಕ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟ ಬೆಡಗಿಗೆ ಇಂದು ಹುಟ್ಟು ಸಂಭ್ರಮ. ಬನ್ನಿ ಅದಾ ಕುರಿತು ಕೆಲ ಇಂಟ್ರಸ್ಟಿಂಗ್‌ ವಿಚಾರಗಳನ್ನು ತಿಳಿಯೋಣ..

1 /7

11 ಮೇ 1992 ರಂದು ಹುಟ್ಟಿದ ಚೆಲುವೆ ಅದಾ ಶರ್ಮಾ ಇಂದು ತಮ್ಮ 32ನೇ ವರ್ಷದ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ.  

2 /7

ಅದಾ ಶರ್ಮಾ, 1920 ಎಂಬ ಹಿಂದಿ ಹಾರರ್‌ ಸಿನಿಮಾದ ಮೂಲಕ ಅದಾ ಸಿನಿ ಜರ್ನಿ ಪ್ರಾರಂಭಿಸಿದರು. ಈ ಸಿನಿಮಾ ಬಾಕ್ಸ್‌ ಆಫೀಸ್‌ನಲ್ಲಿ ಉತ್ತಮ ಗಳಿಕೆ ಕಂಡಿತು.  

3 /7

ಹಿಂದಿ ಮತ್ತು  ತೆಲುಗು ಸಿನಿರಂಗದಲ್ಲಿ ಸಕ್ರಿಯವಾಗಿರುವ ಅದಾ, 2015 ರಣವಿಕ್ರಮ ಸಿನಿಮಾದ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟರು.  

4 /7

ಅದಾ ಶರ್ಮಾ ‘ದಿ ಕೇರಳ ಸ್ಟೋರಿ’ ಸಿನಿಮಾ ಮೂಲಕ ದೊಡ್ಡ ಮಟ್ಟದ ಜನಪ್ರಿಯತೆ ಪಡೆದರು.  

5 /7

ಅದಾ ಡ್ಯಾನ್ಸರ್ ಕೂಡ ಹೌದು.. ತಮ್ಮ ಮೂರನೇ ವಯಸ್ಸಿಗೆ ಡ್ಯಾನ್ಸ್ ಕಲಿತಿದ್ದಾರೆ, ಅಮೆರಿಕದಲ್ಲಿ ಸಾಲಾ ಟ್ರೇನಿಂಗ್ ಸಹ ಪಡೆದಿದ್ದಾರೆ. ನಟಿಗೆ ಜಿಮನಾಸ್ಟಿಕ್ ಗೊತ್ತು..  

6 /7

ಪ್ರಾಣಿ ಪ್ರಿಯೆ ಅದಾ ಯಾವುತ್ತೂ ಮಾಂಸಹಾರ ಸೇವಿಸುವುದಿಲ್ಲ. ಅಲ್ಲದೆ, ದುಬಾರಿ ಪ್ರಾಣಿಗಳನ್ನು ಸಾಕುವ ಬದಲು ಬೀದಿನಾಯಿಗಳನ್ನ ದತ್ತು ಪಡೆಯಿರಿ ಅಂತ ಹೇಳ್ತಾರೆ..  

7 /7

ಚಿಕ್ಕವಯಸ್ಸಿನಿಂದ ನಟನೆಯಲ್ಲಿ ಆಸಕ್ತಿ ಹೊಂದಿದ್ದ ಅದಾ ನಟನೆಗಾಗಿ ದ್ವಿತೀಯ ಪಿಯುಸಿ ಪೂರ್ಣಗೊಳಿಸಿದ ನಂತರ ಮತ್ತೇ ಕಾಲೇಜ್‌ ಮೆಟ್ಟಿಲು ಹತ್ತಲೇ ಇಲ್ಲ.