ಹಣಕಾಸಿನ ಸಮಸ್ಯೆ ಎದುರಾಗಿದ್ದರೆ ಈ ಪರಿಹಾರ ಸೂತ್ರ ಅನುಸರಿಸಿ, ಸಿಗಲಿದೆ ಲಕ್ಷ್ಮೀ ಕಟಾಕ್ಷ

ನಿಮ್ಮ ಮನೆಯಲ್ಲಿ ಗೋಧಿ ಹಿಟ್ಟು ಇಡುವ ಡಬ್ಬದಲ್ಲಿ 5 ತುಳಸಿ ಎಲೆಗಳು ಮತ್ತು 2 ಕೇಸರಿ ಬೀಜಗಳನ್ನು ಹಾಕಿಡಿ. ಹೀಗೆ ಮಾಡುವುದರಿಂದ,  ಶೀಘ್ರದಲ್ಲೇ  ಹಣಕಾಸಿನ ವಿಷಯಕ್ಕೆ ಸಂಬಂಧಿಸಿದಂತೆ ಉತ್ತಮ ಫಲಿತಾಂಶಗಳು ಸಿಗುತ್ತವೆ.

Written by - Ranjitha R K | Last Updated : Sep 23, 2021, 02:31 PM IST
  • ಸುಲಭ ಕ್ರಮಗಳನ್ನು ತೆಗೆದುಕೊಳ್ಳುವ ಮೂಲಕ, ಅದೃಷ್ಟ ಬದಲಾಯಿಸಬಹುದು
  • ಶನಿವಾರ ಗೋಧಿಯೊಂದಿಗೆ ಕಡಲೆ ಬೆರೆಸಿ ರುಬ್ಬುವುದರಿಂದ ಹಣದ ಕೊರತೆ ಎದುರಾಗುವುದಿಲ್ಲ
  • 5 ತುಳಸಿ ಎಲೆಗಳನ್ನು ಹಿಟ್ಟಿನ ದಬ್ಬದಲ್ಲಿಟ್ಟರೆ ಒಳ್ಳೆಯದು
ಹಣಕಾಸಿನ ಸಮಸ್ಯೆ ಎದುರಾಗಿದ್ದರೆ ಈ ಪರಿಹಾರ ಸೂತ್ರ ಅನುಸರಿಸಿ, ಸಿಗಲಿದೆ ಲಕ್ಷ್ಮೀ ಕಟಾಕ್ಷ  title=
ಸುಲಭ ಕ್ರಮಗಳನ್ನು ತೆಗೆದುಕೊಳ್ಳುವ ಮೂಲಕ, ಅದೃಷ್ಟ ಬದಲಾಯಿಸಬಹುದು (file photo)

ನವದೆಹಲಿ : ಹಣ, ಪ್ರಗತಿ ಎನ್ನುವುದು ಯಾರಿಗೆ ತಾನೇ ಇಷ್ಟವಾಗುವುದಿಲ್ಲ. ಆದರೆ, ಕೆಲವರ ಕೈಯಲ್ಲಿ ಮಾತ್ರ ಹಣ ಉಳಿಯುವುದೇ ಇಲ್ಲ.  ಎಷ್ಟೇ ದುಡಿದರೂ, ಎಲ್ಲಾ ಹಣ ಖರ್ಚಾಗಿಯೇ ಹೋಗುತ್ತದೆ. ಹೀಗಾದಾಗ ಇಂತಹ ಪರಿಸ್ಥಿತಿಯಲ್ಲಿ, ಹಣದ ಕೊರತೆಯಿಂದಾಗಿ, ಮನೆಯಲ್ಲಿ ಜಗಳಗಳು ಆರಂಭವಾಗುತ್ತವೆ ಮತ್ತು ವ್ಯಕ್ತಿಯ ಸಂತೋಷ ಮತ್ತು ಶಾಂತಿ ಮಾಯವಾಗುತ್ತದೆ. ಹೀಗಾಗದಂತೆ ತಡೆಯಲು, ಕೆಲವು ಪರಿಹಾರಗಳನ್ನು ಜ್ಯೋತಿಷ್ಯದಲ್ಲಿ  ಸೂಚಿಸಲಾಗಿದೆ. ಈ ಪರಿಹಾರ ಕಾರ್ಯಗಳನ್ನು ಕೈಗೊಂಡರೆ ಸಮಸ್ಯೆಗಳು ನಿವಾರಣೆಯಾಗುತ್ತದೆ. 

 ಈ ವಿಷಯಗಳನ್ನು ಮೊದಲು ಖಚಿತಪಡಿಸಿಕೊಳ್ಳಿ :
ನಿಮ್ಮ ಮನೆಯಲ್ಲಿ ಗೋಧಿ ಹಿಟ್ಟು ಇಡುವ ಡಬ್ಬದಲ್ಲಿ 5 ತುಳಸಿ ಎಲೆಗಳು (Tulsi leaves) ಮತ್ತು 2 ಕೇಸರಿ ಬೀಜಗಳನ್ನು ಹಾಕಿಡಿ. ಹೀಗೆ ಮಾಡುವುದರಿಂದ,  ಶೀಘ್ರದಲ್ಲೇ  ಹಣಕಾಸಿನ ವಿಷಯಕ್ಕೆ ಸಂಬಂಧಿಸಿದಂತೆ ಉತ್ತಮ ಫಲಿತಾಂಶಗಳು ಸಿಗುತ್ತವೆ.  

ಇದನ್ನೂ ಓದಿ : ಪಿತೃ ಪಕ್ಷದಲ್ಲಿ ಸಿಗುವ ಈ ಸಂಕೇತಗಳಿಂದ ಪೂರ್ವಜರು ಸಂತೋಷವಾಗಿದ್ದಾರೋ ಇಲ್ಲವೋ ಎನ್ನುವುದನ್ನು ಹೀಗೆ ತಿಳಿದುಕೊಳ್ಳಿ

ಗುರುವಾರ ಹಿಟ್ಟಿಗೆ ಸ್ವಲ್ಪ ಅರಿಶಿನ (Turmeric) ಸೇರಿಸಿ ಹಸುವಿಗೆ ಆಹಾರವಾಗಿ ನೀಡುವುದರಿಂದ ಆದಾಯ ಹೆಚ್ಚಾಗುತ್ತದೆ ಎಂದು ಶಾಸ್ತ್ರದಲ್ಲಿ ಹೇಳಲಾಗಿದೆ. ಅಲ್ಲದೆ, ಈ ಪರಿಹಾರವು ಮನೆಯ ಋಣಾತ್ಮಕ ಶಕ್ತಿಯನ್ನು (Negetive energy) ತೆಗೆದುಹಾಕುತ್ತದೆ. ಮನೆಯಲ್ಲಿ ಹಣದ ಹರಿವು ಹೆಚ್ಚಾಗುತ್ತದೆ. 

ಶನಿವಾರ ಗೋಧಿಯನ್ನು ರುಬ್ಬಿಸುವ ಮೂಲಕ ಮನೆಯಲ್ಲಿ ಆದಾಯದ ಮೂಲಗಳು ಹೆಚ್ಚಾಗುತ್ತವೆ. ಆದಾಯದ ಮೂಲ ಹೆಚ್ಚಾದಾಗ   ಆರ್ಥಿಕ ಬಿಕ್ಕಟ್ಟು ದೂರವಾಗುತ್ತದೆ. ಇದರ ಹೊರತಾಗಿ, ಸಂಬಂಧದಲ್ಲಿ ಮಾಧುರ್ಯ ಉಳಿಯುತ್ತದೆ. ಗೋಧಿಯನ್ನು ರುಬ್ಬುವಾಗ, ಅದಕ್ಕೆ ಸ್ವಲ್ಪ ಕಡಲೆಯನ್ನು  ಸೇರಿಸುವುದನ್ನು ಮರೆಯಬೇಡಿ. ಇದನ್ನು ಮಾಡುವುದರಿಂದ, ಮನೆಯಲ್ಲಿ ಹಣ ಉಳಿಯಲು ಆರಂಭವಾಗುತ್ತದೆ.

ಇದನ್ನೂ ಓದಿ :  Tirumala Tirupati Temple: ತಿರುಪತಿಗೆ ಹೋಗಲು ಯೋಜಿಸುತ್ತಿದ್ದರೆ ಈ ಸುದ್ದಿಯನ್ನು ತಪ್ಪದೇ ಓದಿ

ಅದೃಷ್ಟ ಪಡೆಯಲು, ಹಿಟ್ಟಿಗೆ ಸ್ವಲ್ಪ ಪ್ರಮಾಣದ ಸಕ್ಕರೆ (Sugar) ಸೇರಿಸಿ ಇರುವೆಗಳನ್ನು ಹಾಕಿ ಎಂದು ಶಾಸ್ತ್ರದಲ್ಲಿ ಹೇಳಲಾಗಿದೆ. ಇದನ್ನು ಮಾಡುವುದರಿಂದ, ಹಣಕ್ಕೆ ಸಂಬಂಧಿಸಿದ ಎಲ್ಲಾ ಸಮಸ್ಯೆಗಳನ್ನು ಶಾಶ್ವತವಾಗಿ ಪರಿಹಾರವಾಗುತ್ತದೆ. ಇದಲ್ಲದೇ, ಶನಿ (Shanidev), ರಾಹು ಮತ್ತು ಕೇತುಗಳ ಅಶುಭ ಪರಿಣಾಮಗಳಿಂದಲೂ ಮುಕ್ತಿ ಸಿಗುತ್ತದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News