White Hair Treatment: ಬಿಳಿ ಕೂದಲನ್ನು ಕಪ್ಪಾಗಿಸಲು ಹುಣಸೇಹಣ್ಣನ್ನು ಈ ರೀತಿ ಬಳಸಿ

White Hair Treatment: ಬಿಳಿ ಕೂದಲನ್ನು ಕಪ್ಪಾಗಿಸಲು ಹುಣಸೆಹಣ್ಣು ಕೂಡ ತುಂಬಾ ಉಪಯುಕ್ತವಾಗಿದೆ. ಇದರಿಂದ ಅಕಾಲಿಕ ಬೂದು ಕೂದಲು ಕಪ್ಪಾಗಬಹುದು.

Written by - Yashaswini V | Last Updated : Jun 1, 2022, 12:03 PM IST
  • ಹುಣಸೆಹಣ್ಣಿನಲ್ಲಿ ವಿಟಮಿನ್ ಸಿ ಮತ್ತು ವಿಟಮಿನ್ ಎ ಯಂತಹ ಪೋಷಕಾಂಶಗಳು ಕಂಡುಬರುತ್ತವೆ
  • ಇದು ದೇಹದಲ್ಲಿ ಸ್ವತಂತ್ರ ರಾಡಿಕಲ್ಗಳ ರಚನೆಯನ್ನು ತಡೆಯುತ್ತದೆ
  • ಹುಣಸೆಹಣ್ಣಿನ ಸೇವನೆಯು ಕೂದಲಿನ ಜೊತೆಗೆ ಚರ್ಮಕ್ಕೆ ಕೂಡ ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ
White Hair Treatment: ಬಿಳಿ ಕೂದಲನ್ನು ಕಪ್ಪಾಗಿಸಲು ಹುಣಸೇಹಣ್ಣನ್ನು ಈ ರೀತಿ ಬಳಸಿ  title=
White Hair Treatment

ಹುಣಸೆ ಹಣ್ಣಿನಿಂದ ಬಿಳಿ ಕೂದಲಿಗೆ ಚಿಕಿತ್ಸೆ: ಹುಣಸೆಹಣ್ಣಿನ ರುಚಿಯನ್ನು ಆನಂದಿಸದವರು ನಮ್ಮಲ್ಲಿ ಬಹುತೇಕ ವಿರಳ, ಆದರೆ ಈ ಹುಳಿಯು ನಿಮ್ಮ ಬಿಳಿ ಕೂದಲನ್ನು ಕಪ್ಪಾಗಿಸುತ್ತದೆ ಎಂದು ನಿಮಗೆ ತಿಳಿದಿದೆಯೇ? ಬೇಸಿಗೆಯಲ್ಲಿ ಕೂದಲಿನ ಆರೈಕೆ ಮಾಡುವುದು ತುಂಬಾ ಕಷ್ಟ, ಈ ಋತುವಿನಲ್ಲಿ ಕೂದಲಿಗೆ ಸಂಬಂಧಿಸಿದಂತೆ ಹಲವು ಸಮಸ್ಯೆಗಳು ಕಾದಬಹ್ದು. ಸುಡುವ ಬಿಸಿಲು ಮತ್ತು ನೇರ ಸೂರ್ಯನ ಬೆಳಕಿನೊಂದಿಗೆ ಮುಖದ ಚರ್ಮವು ನಿರ್ಜೀವವಾಗಲು ಪ್ರಾರಂಭಿಸುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ನೀವು ದೈನಂದಿನ ಆಹಾರದಲ್ಲಿ ಹುಳಿಯನ್ನು ಸೇರಿಸಿದರೆ, ಈ ಎರಡೂ ಸಮಸ್ಯೆಗಳು ಪರಿಹಾರವಾಗುತ್ತವೆ. ಅಂದರೆ ನಿಮ್ಮ ದೈನಂದಿನ ಡಯಟ್ನಲ್ಲಿ ಹುಣಸೆಹಣ್ಣನ್ನು ಬಳಸುವುದರಿಂದ  ಬಿಳಿ ಕೂದಲಿನ ಸಮಸ್ಯೆಯನ್ನೂ ಪರಿಹರಿಸಬಹುದು. 

ಕೂದಲು ಉದುರುವಿಕೆ ಸಮಸ್ಯೆ:
ಕೆಲವರಿಗೆ ಸಾಕಷ್ಟು ಕೂದಲು ಉದುರುವುದು ನಂತರ ಬೋಳಾಗಿ ಬದಲಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಹುಣಸೆಹಣ್ಣು ನಿಮಗೆ ರಾಮಬಾಣಕ್ಕಿಂತ ಕಡಿಮೆಯಿಲ್ಲ. ಹುಣಸೆಹಣ್ಣಿನ ಸೇವನೆಯಿಂದ ಸದೃಢವಾದ ಕೂದಲನ್ನು ಪಡೆಯಬಹುದು. ಜೊತೆಗೆ ಇದು, ಅಕಾಲಿಕವಾಗಿ ಬಿಳಿಯಾಗುವ ಕೂದಲನ್ನು ಕಪ್ಪಾಗಿಸಲು ಸಹ ಸಹಕಾರಿ ಎಂದು ಹೇಳಲಾಗುತ್ತದೆ.

ಇದನ್ನೂ ಓದಿ- Health Care Tips: ಹೈ ಬಿಪಿ ನಿಯಂತ್ರಿಸಲು ಈ ರೀತಿ ಇರಲಿ ನಿಮ್ಮ ದಿನಚರಿ

ಮುಖದಲ್ಲಿ ಹೊಳಪು ಬರುತ್ತದೆ:
ಹುಣಸೆಹಣ್ಣಿನ ಸೇವನೆಯು ಚರ್ಮಕ್ಕೆ ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ವಿಟಮಿನ್ ಸಿ ಮತ್ತು ವಿಟಮಿನ್ ಎ ಯಂತಹ ಪೋಷಕಾಂಶಗಳು ಇದರಲ್ಲಿ ಕಂಡುಬರುತ್ತವೆ, ಇದು ದೇಹದಲ್ಲಿ ಸ್ವತಂತ್ರ ರಾಡಿಕಲ್ಗಳ ರಚನೆಯನ್ನು ತಡೆಯುತ್ತದೆ, ಇದು ಚರ್ಮಕ್ಕೆ ಸಾಕಷ್ಟು ಪ್ರಯೋಜನವನ್ನು ನೀಡುತ್ತದೆ. ಹುಣಸೆ ಹಣ್ಣಿನ ಫೇಸ್ ಪ್ಯಾಕ್ ಹಚ್ಚುವುದರಿಂದ ಮುಖದ ಮೇಲಿನ ಕಲೆಗಳು ನಿವಾರಣೆಯಾಗಿ ಅದ್ಭುತವಾದ ಹೊಳಪು ಬರುತ್ತದೆ. ನೈಸರ್ಗಿಕ ಕಾಂತಿಯುತ ತ್ವಚೆಗಾಗಿ ಹುಣಸೆಹಣ್ಣಿನ ಫೇಸ್ ಪ್ಯಾಕ್ ಅತ್ಯುತ್ತಮ ಆಯ್ಕೆ ಎನ್ನಲಾಗಿದೆ.

ಹುಣಸೆಹಣ್ಣು ತೂಕವನ್ನೂ ಕಡಿಮೆ ಮಾಡುತ್ತದೆ :
ಹುಣಸೆಹಣ್ಣು ಕೊಬ್ಬನ್ನು ಹೊಂದಿರುವುದಿಲ್ಲ ಮತ್ತು ಕ್ಯಾಲೊರಿಗಳನ್ನು ಹೆಚ್ಚಿಸುವುದಿಲ್ಲ. ಈ ಮಸಾಲೆ ಪದಾರ್ಥವನ್ನು ತಿನ್ನುವುದು ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. 

ಇದನ್ನೂ ಓದಿ- Moringa Leaves: ನುಗ್ಗೆ ಸೊಪ್ಪನ್ನು ಈ ರೀತಿ ಬಳಸಿದರೆ ಸಿಗುತ್ತೆ ಹಲವು ಪ್ರಯೋಜನ

ಯಕೃತ್ತಿಗೆ ಸಹ ಪ್ರಯೋಜನಕಾರಿ:
ಯಕೃತ್ತು ನಮ್ಮ ದೇಹದ ಬಹುಮುಖ್ಯ ಅಂಗ, ಅದಕ್ಕೆ ಏನಾದರೂ ಹಾನಿಯಾದರೆ ಜೀವಕ್ಕೆ ಅಪಾಯ. ಆದ್ದರಿಂದ ಫ್ಯಾಟಿ ಲಿವರ್ ಸಮಸ್ಯೆಯಿದ್ದವರು ಹುಣಸೆಹಣ್ಣು ತಿನ್ನಲು ಪ್ರಾರಂಭಿಸಿದರೆ ಅದರಲ್ಲಿರುವ ಪ್ರೋಸೈನಿಡಿನ್ ಎಂಬ ಆಂಟಿಆಕ್ಸಿಡೆಂಟ್‌ಗಳು. ಯಕೃತ್ತನ್ನು ರಕ್ಷಿಸಲು ಸಹಾಯ ಮಾಡುತ್ತವೆ ಎಂದು ಹೇಳಲಾಗುತ್ತದೆ.

ಸೂಚನೆ:  ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು, ಖಂಡಿತವಾಗಿಯೂ ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News