ನಿಮ್ಮ ಜನ್ಮ ದಿನ-ಸಮಯದಿಂದ ನೀವು ಎಷ್ಟು ಅದೃಷ್ಟವಂತರು ತಿಳಿಯಿರಿ

ಜನ್ಮದಿನಾಂಕದಿಂದ ಭವಿಷ್ಯ:  ಭವಿಷ್ಯವನ್ನು ಊಹಿಸಲು ಜನ್ಮದಿನಾಂಕದಂತೆ, ಹೆಸರಿನ ಮೊದಲ ಅಕ್ಷರ ಮತ್ತು ರಾಶಿಚಕ್ರವನ್ನುಬಳಸಬಹುದು. ಅಂತೆಯೇ, ಒಬ್ಬ ವ್ಯಕ್ತಿಯು ಯಾವ ದಿನ ಅಥವಾ ದಿನದಂದು ಜನಿಸಿದನು, ಅವನ ಸ್ವಭಾವ ಮತ್ತು ಭವಿಷ್ಯದ ಬಗ್ಗೆ ಬಹಳಷ್ಟು ತಿಳಿದುಕೊಳ್ಳಬಹುದು. 

Written by - Yashaswini V | Last Updated : Apr 26, 2022, 07:13 AM IST
  • ಮಂಗಳವಾರ ಜನಿಸಿದವರು ಕುಟುಂಬದ ಕೀರ್ತಿ ಬೆಳಗಿಸುತ್ತಾರೆ
  • ಗುರುವಾರ ಜನಿಸಿದವರು ಗೌರವವನ್ನು ಪಡೆಯುತ್ತಾರೆ
  • ಶನಿವಾರ ಜನಿಸಿದವರು ಗಂಭೀರ ಸ್ವಭಾವದವರು
ನಿಮ್ಮ ಜನ್ಮ ದಿನ-ಸಮಯದಿಂದ ನೀವು ಎಷ್ಟು ಅದೃಷ್ಟವಂತರು ತಿಳಿಯಿರಿ title=
Astro by Birth day

ಜನ್ಮದಿನಾಂಕದಿಂದ ಭವಿಷ್ಯ:  ವಾರದಲ್ಲಿ ಏಳು ದಿನಗಳಿವೆ. ಪ್ರತಿ ದಿನಕ್ಕೂ ಸಹ ಅಧಿಪತಿ ಗ್ರಹಗಳಿರುತ್ತವೆ. ಆಯಾ ಗ್ರಹಗಳು ಆ ದಿನ ಜನಿಸಿದ ಜನರ ವ್ಯಕ್ತಿತ್ವದ ಮೇಲೆ ಪ್ರಭಾವ ಬೀರುತ್ತವೆ ಎನ್ನಲಾಗುತ್ತದೆ. ವ್ಯಕ್ತಿಯ ನಡವಳಿಕೆ ಮತ್ತು ಅವನ ಪಾತ್ರವು ವ್ಯಕ್ತಿಯು ಹುಟ್ಟಿದ ದಿನದ ಪ್ರಭಾವದಿಂದ ಕೂಡ ಪ್ರಭಾವಿತವಾಗಿರುತ್ತದೆ. ಇಂದು ವಾರದ ಯಾವ ದಿನದಂದು ಜನಿಸಿದ ವ್ಯಕ್ತಿಯ ಸ್ವಭಾವ ಹೇಗಿರುತ್ತದೆ ಎಂದು ತಿಳಿಯೋಣ....

ಸೋಮವಾರದಂದು ಜನಿಸಿದವರ ಮಾತು ತುಂಬಾ ಸಿಹಿ: 
ಸೋಮವಾರದಂದು ಜನಿಸಿದ ವ್ಯಕ್ತಿಯು ಚಂದ್ರನ ಪ್ರಭಾವದಿಂದ ಬುದ್ಧಿವಂತರು ಮತ್ತು ಶಾಂತ ಮನಸ್ಥಿತಿಯವರೂ ಆಗಿರುತ್ತಾರೆ. ಈ ಜನರು ತಮ್ಮ ಮಧುರವಾದ ಧ್ವನಿಯಿಂದ ಇತರ ಜನರನ್ನು ಸುಲಭವಾಗಿ ಆಕರ್ಷಿಸುತ್ತಾರೆ. ಅಂತಹ ಜನರು ಸ್ಥಿರ ಸ್ವಭಾವವನ್ನು ಹೊಂದಿರುತ್ತಾರೆ ಮತ್ತು ಸಂತೋಷ-ದುಃಖ ಎರಡರಲ್ಲೂ ಸಮಾನವಾಗಿ ವರ್ತಿಸುತ್ತಾರೆ. 

ಮಂಗಳವಾರ ಜನಿಸಿದವರು ಕುಟುಂಬದ ಕೀರ್ತಿ ಬೆಳಗಿಸುತ್ತಾರೆ: 
ಮಂಗಳವಾರ ಜನಿಸಿದವರು ಮಂಗಳನ ಪ್ರಭಾವದಿಂದ ಸಂಕೀರ್ಣ ಸ್ವಭಾವವನ್ನು ಹೊಂದಿರುತ್ತಾರೆ. ಇತರರ ಕೆಲಸದಲ್ಲಿ ತಪ್ಪುಗಳನ್ನು ಹುಡುಕುವ ಇವರು ಸದಾ ಯುದ್ಧಪ್ರಿಯರು, ಪರಾಕ್ರಮಿಗಳು. ಆದರೆ ಇವರು ಕೊಟ್ಟ ಮಾತನ್ನು ಸಾಧ್ಯವಾದಷ್ಟು ಉಳಿಸಿಕೊಳ್ಳಲು ಯತ್ನಿಸುತ್ತಾರೆ. ಕುಟುಂಬದ ಕೀರ್ತಿ ಬೆಳಗಿಸುವ ಸ್ವಾಭಾವದವರಾಗಿರುತ್ತಾರೆ.

ಇದನ್ನೂ ಓದಿ- ಸೂರ್ಯಗ್ರಹಣ: ಈ ರಾಶಿಯವರ ಮೇಲೆ ಅಶುಭ ಪರಿಣಾಮ: ಅದನ್ನು ಈ ರೀತಿ ತಪ್ಪಿಸಿ

ಬುಧವಾರ ಜನಿಸಿದವರು ಅಧ್ಯಯನದಲ್ಲಿ ಆಸಕ್ತಿ ಹೊಂದಿರುತ್ತಾರೆ :
ಬುಧವಾರದಂದು ಜನಿಸಿದವರು ಬುಧ ಗ್ರಹದ ಪ್ರಭಾವದಿಂದ  ಮಾತಿನಲ್ಲಿ ಸಿಹಿ, ಅಧ್ಯಯನದಲ್ಲಿ ಆಸಕ್ತಿ, ಜ್ಞಾನವುಳ್ಳವರು, ಉತ್ತಮ ಬರಹಗಾರರು ಮತ್ತು ಶ್ರೀಮಂತರು ಆಗಿರುತ್ತಾರೆ. ಬುಧವಾರದಂದು ಜನಿಸಿದವರು ಇತರರನ್ನು ಸುಲಭವಾಗಿ ನಂಬುವುದಿಲ್ಲ. 

ಗುರುವಾರ ಜನಿಸಿದವರು ಗೌರವವನ್ನು ಪಡೆಯುತ್ತಾರೆ:
ಗುರುವಿನ ಪ್ರಭಾವದಿಂದ ಈ ದಿನ ಜನಿಸಿದ ವ್ಯಕ್ತಿಯು ಕಲಿಕೆಯಲ್ಲಿ ನುರಿತ, ಶ್ರೀಮಂತ, ಜ್ಞಾನ, ವಿವೇಕಯುತ ಮತ್ತು ಉತ್ತಮ ಸಲಹೆಗಾರನ ಸ್ವಭಾವವನ್ನು ಹೊಂದಿರುತ್ತಾರೆ. ಈ ಜನರು ಇತರರಿಗೆ ಉಪದೇಶ ಮಾಡುವುದರಲ್ಲಿ ಯಾವಾಗಲೂ ಮುಂದಿರುತ್ತಾರೆ. ಅದೇ ಸಮಯದಲ್ಲಿ, ಅವರು ಜನರಿಂದ ಗೌರವ ಮತ್ತು ಖ್ಯಾತಿಯನ್ನು ಪಡೆಯುವ ಬಲವಾದ ಬಯಕೆಯನ್ನು ಹೊಂದಿದ್ದಾರೆ. 

ಶುಕ್ರವಾರ ಜನಿಸಿದವರು ಸ್ವಭಾವತಃ ಚಂಚಲರು:
ಶುಕ್ರವಾರದಂದು ಜನಿಸಿದವರು ಚಂಚಲ ಸ್ವಭಾವದವರು, ಭೌತಿಕ ಸುಖಭೋಗಗಳಲ್ಲಿ ತೊಡಗುತ್ತಾರೆ. ವಾದದಲ್ಲಿ ಬುದ್ಧಿವಂತರು, ಶ್ರೀಮಂತರು ಮತ್ತು ಶುಕ್ರನ ಪ್ರಭಾವದಿಂದ ತೀಕ್ಷ್ಣವಾದ ಬುದ್ಧಿಶಕ್ತಿಯನ್ನು ಹೊಂದಿರುತ್ತಾರೆ. ಈ ಜನರಿಗೆ ದೇವರಲ್ಲಿ ನಂಬಿಕೆ ಕಡಿಮೆ. 

ಶನಿವಾರ ಜನಿಸಿದವರು ಗಂಭೀರ ಸ್ವಭಾವದವರು:
ಶನಿವಾರದಂದು ಜನಿಸಿದ ಜನರು ಕಠಿಣ ಸ್ವಭಾವದವರು, ಪರಾಕ್ರಮಿಗಳು, ದುಃಖವನ್ನು ಸಹಿಸಿಕೊಳ್ಳುವ ಅದ್ಭುತ ಶಕ್ತಿಯನ್ನು ಹೊಂದಿದ್ದಾರೆ, ಶನಿಯ ಪ್ರಭಾವದಿಂದಾಗಿ ಸ್ವಭಾವತಃ ನ್ಯಾಯಯುತ ಮತ್ತು ಗಂಭೀರ ಸ್ವಭಾವದವರು. ಈ ಜನರು ಸೇವೆಯಿಂದ ಖ್ಯಾತಿಯನ್ನು ಸಹ ಪಡೆಯುತ್ತಾರೆ. 

ಇದನ್ನೂ ಓದಿ- ಬುಧ ರಾಶಿ ಪರಿವರ್ತನೆ: ಇಂದಿನಿಂದ 68 ದಿನಗಳವರೆಗೆ 4 ರಾಶಿಯವರಿಗೆ ಬುಧನ ಅನುಗ್ರಹ, ಅಪಾರ ಧನಪ್ರಾಪ್ತಿ

ಭಾನುವಾರ ಜನಿಸಿದವರು ಅದ್ಭುತ ಮತ್ತು ಸದ್ಗುಣಶೀಲರು:
ಭಾನುವಾರದಂದು ಜನಿಸಿದ ವ್ಯಕ್ತಿಯು ಪ್ರಕಾಶಮಾನವಾದ, ಬುದ್ಧಿವಂತ, ಸದ್ಗುಣಶೀಲ, ಉತ್ಸಾಹಿ, ದಾನಶೀಲ, ಆದರೆ ಸೂರ್ಯನ ಪ್ರಭಾವದಿಂದಾಗಿ ಸ್ವಲ್ಪ ಹೆಮ್ಮೆ ಮತ್ತು ಪಿತ್ತ ಸ್ವಭಾವವನ್ನು ಹೊಂದಿರುತ್ತಾರೆ. ಭಾನುವಾರ ಜನಿಸಿದವರಿಗೆ ಮೂಗಿನ ತುದಿಯಲ್ಲಿಯೇ ಕೋಪ ಇರುತ್ತದೆ.

ಹಗಲಿನಲ್ಲಿ ಜನಿಸಿದವರ ನೋಟದಲ್ಲಿ ಆಕರ್ಷಣೆ ಇರುತ್ತದೆ:
ಹಗಲಿನ ವೇಳೆ ಜನಿಸಿದ ವ್ಯಕ್ತಿಯು ಧಾರ್ಮಿಕ ಸ್ವಭಾವವನ್ನು ಹೊಂದಿರುತ್ತಾನೆ. ಸಮಾಜಸೇವೆಯಲ್ಲಿ ಪಾಲ್ಗೊಳ್ಳುವ ಪುಣ್ಯ ಕಾರ್ಯಗಳನ್ನು ಮಾಡುತ್ತಾರೆ. ಇಂತಹವರು ತಮ್ಮ ಜೀವನದಲ್ಲಿ ಎಲ್ಲಾ ರೀತಿಯ ಭೌತಿಕ ಸೌಕರ್ಯಗಳನ್ನು ಪಡೆಯಲು ಬಯಸುತ್ತಾರೆ. ಇವರು ತುಂಬಾ ಸ್ನೇಹ ಪ್ರಿಯರು. ಹಗಲಿನಲ್ಲಿ ಜನಿಸಿದವರ ಮಾನಸಿಕ ಮತ್ತು ಬೌದ್ಧಿಕ ಸಾಮರ್ಥ್ಯಗಳು ಉನ್ನತ ಕ್ರಮದಲ್ಲಿವೆ ಮತ್ತು ನೋಟದಲ್ಲಿ ಆಕರ್ಷಕವಾಗಿತ್ತಾರೆ.

ರಾತ್ರಿಯಲ್ಲಿ ಜನಿಸಿದವರು ಪ್ರಣಯ ಸ್ವಭಾವದವರು:
ರಾತ್ರಿಯಲ್ಲಿ ಜನಿಸಿದವರು ಕಡಿಮೆ ಮಾತನಾಡುತ್ತಾರೆ. ರಾತ್ರಿಯಲ್ಲಿ ಜನಿಸಿದ ಜನರು ಪ್ರಣಯ ಸ್ವಭಾವದವರು. ಅವರು ವಿರುದ್ಧ ಲಿಂಗದ ಕಡೆಗೆ ಹೆಚ್ಚು ಒಲವನ್ನು ಹೊಂದಿರುತ್ತಾರೆ. ಅವರು ಬುದ್ಧಿವಂತರು ಮತ್ತು ತಮ್ಮನ್ನು ತಾವು ಅರ್ಥ ಮಾಡಿಕೊಳ್ಳುವಲ್ಲಿ ನಿಪುಣರು.  

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News