ಟೊಮಾಟೊ ಹೆಚ್ಚು ಸಮಯ ಫ್ರೇಶ್ ಆಗಿರಬೇಕೇ! ಇಲ್ಲಿವೆ 5 ಸುಲಭ ಮಾರ್ಗಗಳು

How To Keep Tomatoes fresh For Longer: ಈಗಂತೂ ಎಲ್ಲೆಲ್ಲೂ ಅಡುಗೆ ಮನೆಯ ಕೆಂಪು ರಾಣಿ ಟೊಮಾಟೊದೇ ಸದ್ದು. ಟೊಮಾಟೊ ಸೇರಿದಂತೆ ತರಕಾರಿಗಳ ಬೆಲೆ ಗಗನಾಮುಖಿ ಆಗಿದ್ದು, ಅದನ್ನು ಖರೀದಿಸುವುದೇ ಕಷ್ಟ ಎಂಬಂತಾಗಿದೆ. ಒಂದೊಮ್ಮೆ ಖರೀದಿಸಿ ತಂದರೂ ಕೆಲವು ಒಂದೆರಡು ದಿನಗಳಲ್ಲಿ ತರಕಾರಿಗಳು ಕೊಳೆಯಲು ಆರಂಭಿಸುತ್ತವೆ. ಅವುಗಳಲ್ಲಿ ಟೊಮಾಟೊ ಕೂಡ ಒಂದು. 

Written by - Yashaswini V | Last Updated : Jul 25, 2023, 09:34 AM IST
  • ಇತ್ತೀಚಿನ ದಿನಗಳಲ್ಲಿ ಟೊಮಾಟೊ ಬೆಲೆ ಗಗನಕ್ಕೇರಿದೆ
  • ಟೊಮಾಟೊವನ್ನು ಸರಿಯಾಗಿ ಸಂಗ್ರಹಿಸದಿದ್ದರೆ ಅದು ಬಹಳ ಬೇಗ ಕೊಳೆಯುತ್ತದೆ.
  • ಟೊಮಾಟೊಗಳನ್ನು ದೀರ್ಘಸಮಯದವರೆಗೆ ತಾಜಾವಾಗಿರಿಸಲು ಅದನ್ನು ಈ ರೀತಿ ಸಂಗ್ರಹಿಸಬಹುದು.
ಟೊಮಾಟೊ ಹೆಚ್ಚು ಸಮಯ ಫ್ರೇಶ್ ಆಗಿರಬೇಕೇ! ಇಲ್ಲಿವೆ 5 ಸುಲಭ ಮಾರ್ಗಗಳು  title=

How To Keep Tomatoes fresh For Longer: ಯಾವುದೇ ಋತುಮಾನವಿರಲಿ ಟೊಮಾಟೊ ತುಂಬಾ ಬೇಗ ಹಾಳಾಗುತ್ತದೆ. ಅದು ಫ್ರೀಜ್ ನಲ್ಲಿಯೇ ಇರಲಿ ಅಥವಾ ಹೊರಗಡೆ ಇರಲಿ ಬೇಗ ಕೊಳೆಯುತ್ತದೆ. ಆದರೆ, ಈ ಬಗ್ಗೆ ಚಿಂತಿಸುವ ಅಗತ್ಯವಿಲ್ಲ. ಬದಲಿಗೆ, ಕೆಲವು ಸಲಹೆಗಳನ್ನು ಅನುಸರಿಸಿದರೆ ಟೊಮಾಟೊಗಳನ್ನು  ದೀರ್ಘ ಸಮಯದವರೆಗೆ ತಾಜಾವಾಗಿಡಲು ಇದು ಸಹಾಯಕವಾಗುತ್ತದೆ.  ಅಂತಹ ಕೆಲವು ಸಲಹೆಗಳೆಂದರೆ...

ಟೊಮಾಟೊ ಆಯ್ಕೆ: 
ನೀವು ಟೊಮಾಟೊ ಕೊಳ್ಳುವಾಗ ಈ ಟೊಮಾಟೊ ಇಂದಿನ ಬಳಕೆಗೋ ಅಥವಾ ಒಂದು ವಾರದವರೆಗೂ ಇಟ್ಟು ಬಳಸುತ್ತೇವೋ ಎಂಬ ಬಗ್ಗೆ ನಿಮಗೆ ಮೊದಲೇ ತಿಳಿದಿರುತ್ತದೆ. ಒಂದೊಮ್ಮೆ ನೀವು ವಾರದವರೆಗೆ ಬಳಸಲು ಒಟ್ಟಿಗೆ ಟೊಮಾಟೊ ಕೊಳ್ಳುತ್ತಿದ್ದರೆ ತುಂಬಾ ಕೆಂಪಾದ ಹಣ್ಣಾದ ಟೊಮಾಟೊಗಳನ್ನು ಮಾತ್ರ ಕೊಳ್ಳಬೇಡಿ. ಯಾವಾಗಲೂ ಹಗುರವಾದ ಗಟ್ಟಿಯಾದ ಟೊಮೆಟೊಗಳನ್ನು ಖರೀದಿಸಿ. ನಂತರ ಅವುಗಳನ್ನು ನೆಟ್ ಬ್ಯಾಗ್‌ನಲ್ಲಿ ಒಣಗಿಸಿ ಇಡಿ. ಈ ರೀತಿ ಮಾಡುವುದರಿಂದ ನೀವು ಟೊಮಾಟೊಗಳನ್ನು ಫ್ರೀಜ್ ನಲ್ಲಿ ಇಡುವ ಅಗತ್ಯವೇ ಇರುವುದಿಲ್ಲ. ಇದು ಹೊರಗಿದ್ದರೂ ಬೇಗ ಕೊಡುವುದಿಲ್ಲ. 

ಟೊಮಾಟೊಗಳನ್ನು ತೊಳೆಯಿರಿ: 
ಸಾಮಾನ್ಯವಾಗಿ ನಮ್ಮಲ್ಲಿ ಬಹುತೇಕ ಮಂದಿ ಮಾರುಕಟ್ಟೆಯಿಂದ ಟೊಮಾಟೊಗಳನ್ನು ತಂದ ಬಳಿಕ ಅವುಗಳನ್ನು ಹಾಗೆಯೇ ಇಡುತ್ತಾರೆ. ಆದರೆ, ಇದರಿಂದ ಟೊಮಾಟೊ ಬೇಗ ಕೆಡುತ್ತದೆ. ಇದನ್ನು ತಪ್ಪಿಸಲು ಟೊಮಾಟೊಗಳನ್ನು ತಂದೊಡನೆ ಅವುಗಳನ್ನು ಚೆನ್ನಾಗಿ ತೊಳೆದು, ಬಳಿಕ ಸರಿಯಾಗಿ ಒಣಗಿಸಿ. ಅದು ಒಣಗಿದ ಬಳಿಕ ಒಂದು ಕಂಟೇನರ್ ನಲ್ಲಿ  ಹಾಕಿ ಅದನ್ನು ಫ್ರೀಜ್ನಲ್ಲಿಡಿ. 

ಇದನ್ನೂ ಓದಿ- Sabudana Paratha: ಶ್ರಾವಣದಲ್ಲಿ ಉಪವಾಸಕ್ಕೆ ಸಾಬುದಾನ ಪರಾಠ, ರುಚಿ ಜೊತೆ ಆರೋಗ್ಯಕ್ಕೂ ಉತ್ತಮ

ಫ್ರಿಜ್‌ನಲ್ಲಿ ನೇರವಾಗಿ ಇಡಬೇಡಿ: 
ಮಾರುಕಟ್ಟೆಯಿಂದ ತರಕಾರಿಗಳನ್ನು ತಂದ ಬಳಿಕ ಅದನ್ನು ನೇರವಾಗಿ ಫ್ರಿಜ್‌ನಲ್ಲಿಡುವುದು ಕೆಲವರ ಅಭ್ಯಾಸ. ಆದರೆ, ನೀವು ಪೇಪರ್ ಕವರ್, ಇಲ್ಲವೇ ಒದ್ದೆ ತರಕಾರಿಗಳನ್ನು ಹಾಗೆ ಇಡುವುದರಿಂದ ತರಕಾರಿಗಳು ಬೇಗನೆ ಕೊಳೆಯುತ್ತವೆ. ಇದನ್ನು ತಪ್ಪಿಸಲು ಟೊಮಾಟೊ ಇರಲಿ ಅಥವಾ ಇನ್ನಾವುದೇ ಹಸಿ ತರಕಾರಿಗಳನ್ನು ಮಾರುಕಟ್ಟೆಯಿಂದ ತಂದ ಬಳಿಕ ಮೊದಲು ಒಂದು ಕಾಟನ್ ಬಟ್ಟೆ ಇಲ್ಲವೇ ಪೇಪರ್ ಮೇಲೆ ಆದರೂ ಚೆನ್ನಾಗಿ ಹರಡಿ ಬಳಿಕ ಒದ್ದೆ ಒಣಗಿದ ಬಳಿಕ ಅದನ್ನು ಫ್ರಿಜ್‌ನಲ್ಲಿ ಇರಿಸಿ. ಈ ರೀತಿ ಮಾಡುವುದರಿಂದ ಟೊಮಾಟೊ ದೀರ್ಘ ಸಮಯದವರೆಗೆ ತಾಜಾವಾಗಿರುತ್ತದೆ. 

ಆಪಲ್ ಬಾಕ್ಸ್ ಬಳಸಿ: 
ಟೊಮಾಟೊಗಳನ್ನು ದೀರ್ಘ ಸಮಯದವರೆಗೆ ತಾಜಾವಾಗಿಡಲು ಮತ್ತೊಂದು ಸುಲಭ ಟ್ರಿಕ್ ಎಂದರೆ ಆಪಲ್ ಬಾಕ್ಸ್ ಬಳಸುವುದು. ಆಪಲ್ ಬಾಕ್ಸ್ ನಲ್ಲಿ ಟೊಮಾಟೊಗಳನ್ನು ಸಂಗ್ರಹಿಸುವುದರಿಂದ ಅದನ್ನು ದೀರ್ಘ ಸಮಯದವರೆಗೆ ಕೆಡದಂತೆ ತಾಜಾವಾಗಿ ಇರಿಸಬಹುದು. 

ಇದನ್ನೂ ಓದಿ- ಪುರುಷರ ಇಂತಹ ಗುಣಗಳಿಗೆ ಬಲು ಬೇಗ ಆಕರ್ಷಿತರಾಗ್ತಾರೆ ಹುಡುಗಿಯರು!

ಫ್ರಿಜ್‌ನಲ್ಲಿ  ಟೊಮಾಟೊ ಇಡುವಾಗ ಇದನ್ನು ನೆನಪಿನಲ್ಲಿಡಿ: 
ಕೆಲವರು ಫ್ರಿಜ್‌ನಲ್ಲಿ  ಟೊಮಾಟೊವನ್ನು ಮೊದಲು ಇಟ್ಟು ಅದರ ಮೇಲೆ ಇತರ ತರಕಾರಿಗಳನ್ನು ಇಡುತ್ತಾರೆ. ಇದರಿಂದ ಟೊಮಾಟೊ ಬೇಗನೆ ಕೊಳೆಯುತ್ತದೆ. ಇದನ್ನು ತಪ್ಪಿಸಿ ಟೊಮಾಟೊಗಳನ್ನು ಹೆಚ್ಚು ದಿನ ತಾಜಾವಾಗಿಡಲು ನೀವು ಫ್ರಿಜ್‌ನಲ್ಲಿ  ಟೊಮಾಟೊವನ್ನು ಇಡುವಾಗ ಮೊದಲಿಗೆ ಬೇರೆ ತರಕಾರಿಗಳನ್ನು ಕೆಳಗೆ ಹಾಕಿ ಮೇಲ್ಭಾಗದಲ್ಲಿ ಟೊಮಾಟೊವನ್ನು ಸಂಗ್ರಹಿಸಿ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News