Astrology: ನೀವು ಮಲಗುವ ವಿಧಾನ ನಿಮ್ಮ ಭವಿಷ್ಯ ಹೇಳುತ್ತದೆ

Astrology by Sleeping posture: ಯಾವ ರೀತಿ ವ್ಯಕ್ತಿಗಳ ರಾಶಿ, ಜನ್ಮ ತಿಥಿ, ಹಸ್ತ ರೇಖೆಗಳು ಹಾಗೂ ಶರೀರದ ಅಂಗಾಂಗ ರಚನೆಯ ಮೂಲಕ ಅವರ ಸ್ವಭಾವ, ಭವಿಷ್ಯವನ್ನು ತಿಳಿದುಕೊಳ್ಳಬಹುದೋ, ಅದೇ ರೀತಿ ವ್ಯಕ್ತಿ ಮಲಗುವ ವಿಧಾನ ಹಾಗೂ ಆತನ ಏಳುವ-ಕುಳಿತುಕೊಳ್ಳುವ ಶೈಲಿ ಆ ವ್ಯಕ್ತಿಯ ಕುರಿತು ಹಲವು ಸಂಗತಿಗಳನ್ನು ಹೇಳುತ್ತವೆ.  

Written by - Nitin Tabib | Last Updated : May 1, 2022, 03:59 PM IST
  • ಮಲಗುವ ಶೈಲಿಯಿಂದ ಅವನ ಭವಿಷ್ಯ ತಿಳಿದುಕೊಳ್ಳಬಹುದು.
  • ಯಾವ ರೀತಿ ಮಲಗುವ ವ್ಯಕ್ತಿಯ ಸ್ವಭಾವ ಹೇಗಿರುತ್ತದೆ
  • ತಿಳಿದುಕೊಳ್ಳಲು ಈ ಲೇಖನವನ್ನು ಓದಿ
Astrology: ನೀವು ಮಲಗುವ ವಿಧಾನ ನಿಮ್ಮ ಭವಿಷ್ಯ ಹೇಳುತ್ತದೆ title=
Astrology By sleeping posture

Astrology by Sleeping posture In Kannada - ಜ್ಯೋತಿಷ್ಯ, ಸಂಖ್ಯಾಶಾಸ್ತ್ರ, ಹಸ್ತಸಾಮುದ್ರಿಕ ಶಾಸ್ತ್ರಗಳಲ್ಲಿ ಯಾವುದೇ ವ್ಯಕ್ತಿಯ ವ್ಯಕ್ತಿತ್ವ, ಅಭ್ಯಾಸಗಳು, ಭವಿಷ್ಯ ಇತ್ಯಾದಿಗಳನ್ನು ತಿಳಿಯಲು ವಿವಿಧ ವಿಧಾನಗಳನ್ನು ನೀಡಲಾಗಿದೆ. ಅವನ ಮಲಗುವ ಶೈಲಿಯಿಂದ ಅವನ ಭವಿಷ್ಯವನ್ನು ತಿಳಿಯುವ ಮಾರ್ಗವೂ ಕೂಡ ಅವುಗಳಲ್ಲಿ ಒಂದು.  ರಾತ್ರಿಯಲ್ಲಿ, ಒಬ್ಬ ವ್ಯಕ್ತಿಯು ತನ್ನ ದೇಹಕ್ಕೆ ವಿಶ್ರಾಂತಿ ನೀಡಿದಾಗ, ಅವನು ವಿಶೇಷ ಶೈಲಿಯಲ್ಲಿ ನಿದ್ರಿಸುತ್ತಾನೆ. ಆತನ ಈ ವಿಶೇಷ ಮಲಗುವ ಶೈಲಿ ಆತನ ಸ್ವಭಾವ, ನಡವಳಿಕೆ ಮತ್ತು ಭವಿಷ್ಯದ ಬಗ್ಗೆ ಅನೇಕ ಸೂಚನೆಗಳನ್ನು ನೀಡುತ್ತದೆ. ಯಾವ ಶೈಲಿಯಲ್ಲಿ ಮಲಗಿದ ವ್ಯಕ್ತಿಯ ಸ್ವಭಾವ ಮತ್ತು ಭವಿಷ್ಯ ಹೇಗಿರುತ್ತದೆ ತಿಳಿದುಕೊಳ್ಳೋಣ ಬನ್ನಿ, 

ಮಲಗುವ ಶೈಲಿಯಿಂದಲೂ ಭವಿಷ್ಯ ತಿಳಿದುಕೊಳ್ಳಬಹುದು
>> ನಿದ್ದೆ ಮಾಡುವಾಗ ತಮ್ಮ ಕೈಯನ್ನು ಹಿಂದಕ್ಕೆ ಇಟ್ಟುಕೊಳ್ಳುವವರು, ಹೊಸ ವಿಷಯಗಳನ್ನು ತಿಳಿದುಕೊಳ್ಳುವ ಬಯಕೆಯನ್ನು ಹೊಂದಿರುತ್ತಾರೆ. ಅವರು ತಮ್ಮ ಕುಟುಂಬವನ್ನು ತುಂಬಾ ಪ್ರೀತಿಸುತ್ತಾರೆ.

>> ಪಾದ ಮತ್ತು ದೇಹವನ್ನು ಮುಚ್ಚಿಕೊಂಡು ಬಿಗಿಯಾಗಿ ಮಲಗುವ ಜನರು ತಮ್ಮ ಜೀವನದಲ್ಲಿ ಸಾಕಷ್ಟು ಕಷ್ಟಪಡಬೇಕಾಗುತ್ತದೆ. ಆದರೆ ಎಲ್ಲಾ ರೀತಿಯ ಸನ್ನಿವೇಶಗಳನ್ನು ಎದುರಿಸುವ ಕೌಶಲ್ಯ ಅವರಲ್ಲಿರುತ್ತದೆ.

>> ದೇಹವನ್ನು ಕುಗ್ಗಿಸಿ ಮಲಗುವ ಜನರು ತುಂಬಾ ಭಯಪಡುತ್ತಾರೆ. ಈ ಜನರು ಅಪರಿಚಿತರೊಂದಿಗೆ ಮಾತನಾಡಲು ಹೆದರುತ್ತಾರೆ ಮತ್ತು ಅಪರಿಚಿತರ ಭಯದಲ್ಲಿ ಬದುಕುತ್ತಾರೆ.

>> ಬೆನ್ನು ಮೇಲೆ ಮಲಗಿ ಕಾಲು ಚಾಚಿ ಮಲಗುವ ಇವರು ಸ್ವಲ್ಪ ಸ್ವಾರ್ಥಿಗಳು. ಆದರೆ ಅವರು ತುಂಬಾ ಶ್ರಮಜೀವಿಗಳು ಮತ್ತು ಎಲ್ಲದರಲ್ಲೂ ಯಶಸ್ವಿಯಾಗುತ್ತಾರೆ.

>> ಮೃತದೇಹದಂತೆ ನೇರವಾಗಿ ಮಲಗುವವರು ಸಾಮಾನ್ಯವಾಗಿ ತಮ್ಮ ಸಮಸ್ಯೆಗಳಿಗೆ ತಾವಾಗಿಯೇ ಪರಿಹಾರ ಕಂಡುಕೊಳ್ಳುತ್ತಾರೆ. ಅವರಲ್ಲಿ ಅಪಾರ ವಿಶ್ವಾಸವಿರುತ್ತದೆ.

>> ತಮ್ಮ ಬೆನ್ನಿನ ಮೇಲೆ ಮಲಗುವ ಮತ್ತು ಎರಡೂ ಕಾಲುಗಳನ್ನು ಅಗಲವಾಗಿ ಇಡುವ ಜನರು ತಮ್ಮ ಜೀವನವನ್ನು ಸಂಪೂರ್ಣ ಸ್ವಾತಂತ್ರ್ಯದಿಂದ ಬದುಕಲು ಇಷ್ಟಪಡುತ್ತಾರೆ. ಅವರು ಉತ್ತಮ ಪ್ರಗತಿಯನ್ನು ಸಾಧಿಸುತ್ತಾರೆ.

>> ತಮ್ಮ ಹೊಟ್ಟೆಯ ಮೇಲೆ ಮತ್ತು ಓಡುವ ಶೈಲಿಯಲ್ಲಿ ಮಲಗುವ ಜನರು ಬಹಳ ಮಹತ್ವಾಕಾಂಕ್ಷೆಯುಳ್ಳವರಾಗಿರುತ್ತಾರೆ. ಇವರು ತಮ್ಮ ಗುರಿಗಳನ್ನು ಸಾಧಿಸಲು ತಮ್ಮ ಅತ್ಯುತ್ತಮ ಪ್ರಯತ್ನವನ್ನು ಮಾಡುತ್ತಾರೆ ಮತ್ತು ಸಾಧಿಸಿಯೇ ತೀರುತ್ತಾರೆ.

>> ಇಡೀ ದೇಹವನ್ನು ಮುಚ್ಚಿಕೊಂಡು ಮಲಗುವವರು ನಾಚಿಕೆ ಸ್ವಭಾವದವರಾಗಿರುತ್ತಾರೆ. ಈ ಜನರು ತಮ್ಮ ರಹಸ್ಯಗಳನ್ನು ಯಾರಿಗೂ ಹೇಳುವುದಿಲ್ಲ ಮತ್ತು ತಿಳಿಯದೆ ಭಯದಿಂದ ಬದುಕುತ್ತಾರೆ.

ಇದನ್ನೂ ಓದಿ-Name Astrology: ಈ ಅಕ್ಷರದಿಂದ ಆರಂಭವಾಗುವ ಹೆಸರಿನ ಪುತ್ರಿ ತಂದೆಯ ಪಾಲಿಗೆ ಲಕ್ಕಿ ಸಾಬೀತಾಗುತ್ತಾಳೆ

>> ಒಂದೇ ಬದಿಯಲ್ಲಿ ಮಲಗುವವರಲ್ಲಿ ಆತ್ಮವಿಶ್ವಾಸ ಹೆಚ್ಚಾಗಿರುತ್ತದೆ. ಇವರು ಅತ್ಯಂತ ರಹಸ್ಯವಾಗಿ ತಮ್ಮ ಕೆಲಸವನ್ನು ಮಾಡುತ್ತಾರೆ ಮತ್ತು ಅದನ್ನು ಮಾಡಿದ ನಂತರವೇ ಅದನ್ನು ಬಹಿರಂಗಪಡಿಸುತ್ತಾರೆ.

ಇದನ್ನೂ ಓದಿ-Surya Grahan 2022: ಸೂರ್ಯಗ್ರಹಣದ ವೇಳೆ ರಾಹು-ಶನಿ-ಚಂದ್ರರ ಈ ವಿಶೇಷ ಯೋಗ ನಿರ್ಮಾಣಗೊಳ್ಳಲಿದೆ, ಎಚ್ಚರ!

(Disclaimer: ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News