ನಿಮ್ಮ ಈ ಅಭ್ಯಾಸಗಳೇ ಅನಾರೋಗ್ಯಕ್ಕೆ ಕಾರಣವಾಗಬಹುದು..! ಈಗಲೇ ಸರಿಪಡಿಸಿಕೊಳ್ಳಿ

ನಿಮಗೆ ಪೂರ್ವ ದಿಕ್ಕಿಗೆ ಕಾಲು ಹಾಕಿ ಮಲಗುವ ಅಭ್ಯಾಸವಿದ್ದು, ಪಶ್ಚಿಮ ದಿಕ್ಕಿನಲ್ಲಿ ನೀರಿನ ಮೂಲವಿದೆಯಾ ನೋಡಿಕೊಳ್ಳಿ

Written by - Ranjitha R K | Last Updated : Sep 29, 2021, 05:42 PM IST
  • ನಮ್ಮ ಅಭ್ಯಾಸಗಳು ಮತ್ತು ನಮ್ಮ ನಡವಳಿಕೆಗಳು ಕೂಡಾ ರೋಗಗಳಿಗೆ ಕಾರಣವಾಗಬಹುದು
  • ಮಲಗುವಾಗ ಯಾವ ದಿಕ್ಕಿಗೆ ಹಾಕಬೇಕು ಎನ್ನುವುದು ಕೂಡಾ ಮುಖ್ಯ
  • ವಾಸ್ತು ದೋಷ ನಿವಾರಣೆಗೆ ಏನು ಮಾಡಬೇಕು ತಿಳಿಯಿರಿ
ನಿಮ್ಮ ಈ ಅಭ್ಯಾಸಗಳೇ ಅನಾರೋಗ್ಯಕ್ಕೆ ಕಾರಣವಾಗಬಹುದು..! ಈಗಲೇ ಸರಿಪಡಿಸಿಕೊಳ್ಳಿ  title=
ಮಲಗುವಾಗ ಯಾವ ದಿಕ್ಕಿಗೆ ಹಾಕಬೇಕು ಎನ್ನುವುದು ಕೂಡಾ ಮುಖ್ಯ (file photo)

ನವದೆಹಲಿ : ಕೆಲವೊಮ್ಮೆ ನಮ್ಮ ಅಭ್ಯಾಸಗಳು ಮತ್ತು ನಮ್ಮ ನಡವಳಿಕೆಗಳು ಕೂಡಾ ರೋಗಗಳಿಗೆ ಕಾರಣವಾಗಬಹುದು. ವಾಸ್ತು ಶಾಸ್ತ್ರದ (Vastu shaastra) ಪ್ರಕಾರ, ನಿಮ್ಮಲ್ಲಿನ ಕೆಲವು ಅಭ್ಯಾಸಗಳೇ ನಿಮ್ಮ ರೋಗವನ್ನು ಉಲ್ಬಣಗೊಳಿಸಬಹುದು. ಈ ಅಭ್ಯಾಸಗಳನ್ನು ತಕ್ಷಣ ಬದಲಿಸಿಕೊಂಡರೆ, ರೋಗಗಳನ್ನು ದೂರ ಮಾಡಬಹುದು. ಹಾಗಿದ್ದರೆ, ಅದು ಯಾವ ಅಭ್ಯಾಸಗಳು ಮತ್ತು ನಿಮ್ಮ ಯಾವ ರೋಗವನ್ನು ಹೆಚ್ಚಿಸಬಹುದು ಮತ್ತು ಎನ್ನುವುದನ್ನು ನೋಡೋಣ. 

ಈ ದಿಕ್ಕಿಗೆ ತಲೆ ಹಾಕಿ ಮಲಗುತ್ತೀರಾ ?
ನಿಮಗೆ ಪೂರ್ವ ದಿಕ್ಕಿಗೆ ಕಾಲು ಹಾಕಿ ಮಲಗುವ ಅಭ್ಯಾಸವಿದ್ದು, ಪಶ್ಚಿಮ ದಿಕ್ಕಿನಲ್ಲಿ ನೀರಿನ (water) ಮೂಲವಿದೆಯಾ ನೋಡಿಕೊಳ್ಳಿ. ಯಾಕೆಂದರೆ ಪಶ್ಚಿಮದಲ್ಲಿ ನೀರಿನ ಮೂಲವಿದ್ದು, ಅದು ಸೋರಿಕೆಯಾಗುತ್ತಿದ್ದರೆ,  ಅದನ್ನು ತಕ್ಷಣ ಸರಿಪಡಿಸಿಕೊಳ್ಳಿ. ಯಾಕೆಂದರೆ ಇದು ನಿಮ್ಮ ಅನಾರೋಗ್ಯಕ್ಕೆ ಕಾರಣವಾಗಬಹುದು. 

ಇದನ್ನೂ ಓದಿ : ಅತ್ಯಂತ ಸ್ವಾರ್ಥಿಗಳಂತೆ ಈ ಮೂರು ರಾಶಿಯವರು, ನಿಮ್ಮ ಸುತ್ತ ಮುತ್ತ ಇದ್ದರೆ ಹುಷಾರಾಗಿರಿ

ತಲೆನೋವಿನ ಸಮಸ್ಯೆ :
ಮನೆಯ ಈಶಾನ್ಯದಲ್ಲಿ ಕೊಳಕು ಅಥವಾ ಜೇಡರ ಬಲೆಯಿದ್ದರೆ, ಅಥವಾ ಮನೆಯಲ್ಲಿ ಬಳಸದ ವಸ್ತುಗಳನ್ನು ಈ ದಿಕ್ಕಿನಲ್ಲಿ ಇಟ್ಟುಕೊಂಡಿದ್ದರೆ, ತಕ್ಷಣ ಆ ಜಾಗವನ್ನು ತೆರವುಗೊಳಿಸಿ. ತೆರವುಗೊಳಿಸುವುದು ಮಾತ್ರವಲ್ಲ ಆ ಸ್ಥಳವನ್ನು ಶುಚಿಗೊಳಿಸಿ. ಮನೆಯ ಈ ದಿಕ್ಕು ಅಶುದ್ಧವಾಗಿದ್ದರೆ, ಪ್ರತಿದಿನ ತಲೆನೋವಿನಿಂದ (headache)ಬಳಲಬೇಕಾಗುತ್ತದೆ.  

 ಅಧಿಕ ರಕ್ತದೊತ್ತಡ :
ನೀವು ಅಗ್ನಿ ಮೂಲೆಯಲ್ಲಿ ಮಲಗುವ ಅಭ್ಯಾಸವನ್ನು ಹೊಂದಿದ್ದರೆ, ಈ ಕೂಡಲೇ ಆ ಅಭ್ಯಾಸವನ್ನು ಬದಲಾಯಿಸಿಕೊಳ್ಳಿ. ಒಂದು ವೇಳೆ ಆ ಜಾಗದಲ್ಲಿ ನೀವು ಮಲಗುವುದನ್ನು ಮುಂದುವರೆಸಿದರೆ ಅಧಿಕ ರಕ್ತದೊತ್ತಡದ ಕಾಯಿಲೆ (high blood pressure) ಕಾಣಿಸಿಕೊಳ್ಳಬಹುದು.  

ಇದನ್ನೂ ಓದಿ : October 2021 Horoscope: ಅಕ್ಟೋಬರ್‌ನಲ್ಲಿ 4 ಗ್ರಹಗಳ ರಾಶಿ ಪರಿವರ್ತನೆ, ಯಾವ ರಾಶಿಯ ಮೇಲೆ ಹೆಚ್ಚು ಪ್ರಭಾವ ತಿಳಿಯಿರಿ

ಸಂತಾನದ ಸಮಸ್ಯೆ :
ವಾಸ್ತು ಶಾಸ್ತ್ರದ  (Vastu shaastra) ಪ್ರಕಾರ,  ಯಾರಾದರು ಸಂತಾನ ಸಮಸ್ಯೆಯಿಂದ ಬಳಲುತ್ತಿದ್ದರೆ, ಅವರು ಮನೆಯ ಮಧ್ಯ ಭಾಗದಲ್ಲಿ    ಮಲಗಬೇಕು. ಹೀಗೆ ಮಾಡುವುದರಿಂದ ವಾಸ್ತುವಿನಿಂದ ಉಂಟಾಗುವ ದೋಷ (vastu dosha) ನಿವಾರಣೆಯಾಗುತ್ತದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News