ಸುಭದ್ರ, ಸಮೃದ್ಧ ಮತ್ತು ಸುಸ್ಥಿರ ದೇಶಕ್ಕಾಗಿ ಭಾರತದ ಆಯ್ಕೆ INDIA: ಕಾಂಗ್ರೆಸ್

Mahaghat Bandan: INDIA ಒಕ್ಕೂಟವನ್ನು ಟೀಕಿಸಿದ ಪ್ರಧಾನಿ ಮೋದಿಯವರೇ, ದೇಶಕ್ಕೆ ಕೀರ್ತಿ ತಂದ ಮಹಿಳಾ ಕ್ರೀಡಾಪಟಗಳಿಗೆ ಲೈಂಗಿಕ ಕಿರುಕುಳ ನೀಡಿದವನ ಬಗ್ಗೆ ಮಾತಾಡಿ, ಮಾತನಾಡಬೇಕಿರುವ ಸಂಗತಿಗಳನ್ನು ತಾವು ನಿರ್ಲಕ್ಷಿಸುವುದೇಕೆ? ಎಂದು ಪ್ರಶ್ನಿಸಿದೆ.

Written by - Puttaraj K Alur | Last Updated : Jul 19, 2023, 05:32 PM IST
  • ಸುಭದ್ರ ಭಾರತಕ್ಕಾಗಿ, ಸಮೃದ್ಧ ಭಾರತಕ್ಕಾಗಿ ಮತ್ತು ಸುಸ್ಥಿರ ಭಾರತಕ್ಕಾಗಿ ಭಾರತದ ಆಯ್ಕೆ INDIA
  • INDIA ಅಂದರೆ Indian National Developmental Inclusive Alliance
  • NDA ಅಂದರೆ Nation Destroying Alliance ಇದೇ ವ್ಯತ್ಯಾಸ! ಎಂದು ಟೀಕಿಸಿದ ಕಾಂಗ್ರೆಸ್
ಸುಭದ್ರ, ಸಮೃದ್ಧ ಮತ್ತು ಸುಸ್ಥಿರ ದೇಶಕ್ಕಾಗಿ ಭಾರತದ ಆಯ್ಕೆ INDIA: ಕಾಂಗ್ರೆಸ್ title=
ಸುಸ್ಥಿರ ಭಾರತಕ್ಕಾಗಿ ಭಾರತದ ಆಯ್ಕೆ INDIA

ಬೆಂಗಳೂರು: ಸುಭದ್ರ ಭಾರತಕ್ಕಾಗಿ, ಸಮೃದ್ಧ ಭಾರತಕ್ಕಾಗಿ ಮತ್ತು ಸುಸ್ಥಿರ ಭಾರತಕ್ಕಾಗಿ ಭಾರತದ ಆಯ್ಕೆ INDIA ಆಗಲಿದೆ ಎಂದು ಕಾಂಗ್ರೆಸ್ ಹೇಳಿದೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಎನ್‍ಡಿಎ ನೇತೃತ್ವದ ಬಿಜೆಪಿ ಸರ್ಕಾರವನ್ನು ಮಣಿಸಲು ವಿಪಕ್ಷಗಳ ರಚಿಸಿಕೊಂಡಿರುವ ಘಟಬಂಧನ್‌ ವಿಚಾರವಾಗಿ ಕಾಂಗ್ರೆಸ್ ಬುಧವಾರ ಟ್ವೀಟ್ ಮಾಡಿದೆ.  

INDIA ಅಂದರೆ Indian National Developmental Inclusive Alliance, NDA ಅಂದರೆ Nation Destroying Alliance ಇದೇ ವ್ಯತ್ಯಾಸ! ಎಂದು ಟೀಕಿಸಿರುವ ಕಾಂಗ್ರೆಸ್ ಪ್ರಧಾನಿ ಮೋದಿ INDIA ಎಂದಿರುವ ವಿಡಯೋ ಹಂಚಿಕೊಂಡಿದ್ದು, ಮೋದಿಜಿಯೂ #INDIA ಒಕ್ಕೂಟವನ್ನು ಬೆಂಬಲಿಸಲು ಕರೆ ನೀಡಿದ್ದಾರೆ!’ ಅಂತಾ ಟ್ವೀಟ್ ಮಾಡಿದೆ.

ಇದನ್ನೂ ಓದಿ: Viral Video: ವರನ ಮುಖಕ್ಕೆ ಉಗುಳಿ, ಕಾಲಿನಿಂದ ಒದ್ದು ವೇದಿಕೆಯಿಂದ ತಳ್ಳಿದ ವಧು!

‘INDIA ಒಕ್ಕೂಟವನ್ನು ಟೀಕಿಸಿದ ಪ್ರಧಾನಿ ಮೋದಿಯವರೇ, ದೇಶಕ್ಕೆ ಕೀರ್ತಿ ತಂದ ಮಹಿಳಾ ಕ್ರೀಡಾಪಟಗಳಿಗೆ ಲೈಂಗಿಕ ಕಿರುಕುಳ ನೀಡಿದವನ ಬಗ್ಗೆ ಮಾತಾಡಿ, ಹೊತ್ತಿ ಉರಿಯುತ್ತಿರುವ ಮಣಿಪುರದ ಬಗ್ಗೆ ಮಾತಾಡಿ, ಚೀನಾ ಆತಿಕ್ರಮಣದ ಬಗ್ಗೆ ಮಾತಾಡಿ, ಕರ್ನಾಟಕದಲ್ಲಿ ವಿರೋಧ ಪಕ್ಷದ ನಾಯಕನ ಆಯ್ಕೆ ಆಗದಿರುವ ಬಗ್ಗೆ ಮಾತಾಡಿ. ಮಾತನಾಡಬೇಕಿರುವ ಸಂಗತಿಗಳನ್ನು ತಾವು ನಿರ್ಲಕ್ಷಿಸುವುದೇಕೆ?’ ಎಂದು ಪ್ರಶ್ನಿಸಿದೆ.

2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಸಮರ ಸಾರಲು ಕಾಂಗ್ರೆಸ್‌ ಪಕ್ಷ ರಣತಂತ್ರ ರೂಪಿಸಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ಮಹಾ ಘಟಬಂಧನ್ ವೇದಿಕೆ ಸಜ್ಜುಗೊಳಿಸಲಾಗುತ್ತಿದೆ. ವಿಪಕ್ಷಗಳ ನಾಯಕರು ಮಹಾ ಘಟಬಂಧನ್ ಮೈತ್ರಿಕೂಟ ರಚಿಸಲು ಬೆಂಗಳೂರಿನ ಖಾಸಗಿ ಹೋಟೆಲ್‍ನಲ್ಲಿ ಸಭೆ ಸೇರಿದ್ದರು. 24 ಪಕ್ಷಗಳ 50ಕ್ಕೂ ಹೆಚ್ಚು ನಾಯಕರು ಈ ಸಭೆಯಲ್ಲಿ ಪಾಲ್ಗೊಂಡಿದ್ದರು.

ಇದನ್ನೂ ಓದಿ: ಲೋಕಸಭೆ ಚುನಾವಣೆಯಲ್ಲಿ ಯುಪಿಎ ಮಿತ್ರ ಪಕ್ಷಗಳು ಬಹುಮತವನ್ನು ಸಾಧಿಸಲಿದೆ- ಸಿದ್ದರಾಮಯ್ಯ

ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ, ದೆಹಲಿಯ ಅರವಿಂದ ಕೇಜ್ರಿವಾಲ್, ತಮಿಳುನಾಡಿನ ಎಂ.ಕೆ.ಸ್ಟಾಲಿನ್, ಬಿಹಾರದ ನಿತೀಶ್ ಕುಮಾರ್, ಎನ್‍ಸಿಪಿ ಮುಖ್ಯಸ್ಥ ಶರದ್ ಪವಾರ್, ಜಮ್ಮು-ಕಾಶ್ಮೀರದ ಮಾಜಿ ಸಿಎಂಗಳಾದ ಫರೂಕ್ ಅಬ್ದುಲ್ಲಾ, ಒಮರ್ ಅಬ್ದುಲ್ಲ್ಲಾ, ಲಾಲೂ ಪ್ರಸಾದ್ ಯಾದವ್, ಮಹಾರಾಷ್ಟ್ರ ಮಾಜಿ ಸಿಎಂ ಉದ್ಧವ್ ಠಾಕ್ರೆ, ಸೋನಿಯಾ ಮತ್ತು ರಾಹುಲ್ ಗಾಂಧಿ ಸೇರಿ ಹಲವು ನಾಯಕರು ಪಾಲ್ಗೊಂಡಿದ್ದರು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News