"ಇಂಡಿ ಸುಳ್ಳು ಹೇಳುವ ಮತ್ತು ಲೂಟಿ ಮಾಡುವ ಮೈತ್ರಿಕೂಟ"-ಪ್ರಹ್ಲಾದ್ ಜೋಶಿ 

ನಾನಾ "ಕುಟುಂಬಗಳ ಕೂಟ" ಇಂಡಿ ಭ್ರಷ್ಟಾಚಾರದ ಕೋಟೆ ಆಗಿದ್ದು, ಲಾಲೂ ರಾಜಕೀಯದಾಟ ಈಗ ಮುಗಿದಿದೆ ಎಂದು ಕೇಂದ್ರ ಸಂಸದೀಯ ಸಚಿವ ಪ್ರಲ್ಹಾದ ಜೋಶಿ ಲೇವಡಿ ಮಾಡಿದರು.

Written by - Prashobh Devanahalli | Edited by - Manjunath Naragund | Last Updated : May 18, 2024, 10:22 PM IST
  • ಬಿಜೆಪಿ ಯಾವತ್ತೂ ಮೀಸಲಾತಿಯನ್ನು ಬೆಂಬಲಿಸಿದೆ.
  • ಆದರೆ ಕಾಂಗ್ರೆಸ್‌ ಯಾವಾಗಲೂ ಅದನ್ನು ವಿರೋಧಿಸುತ್ತಾ ಬಂದಿದೆ.
  • ಅಂಥ ಪಕ್ಷದೊಂದಿಗೆ ಈಗ ರಾಷ್ಟ್ರೀಯ ಜನತಾದಳ ಶಾಮೀಲಾಗಿದ್ದು, ಅದರ ಸಾಮಾಜಿಕ ನ್ಯಾಯದ ಬದ್ಧತೆ ಏನೆಂಬುದು ಗೊತ್ತಾಗುತ್ತಿದೆ
"ಇಂಡಿ ಸುಳ್ಳು ಹೇಳುವ ಮತ್ತು ಲೂಟಿ ಮಾಡುವ ಮೈತ್ರಿಕೂಟ"-ಪ್ರಹ್ಲಾದ್ ಜೋಶಿ  title=

ಪಾಟ್ನಾ: ನಾನಾ "ಕುಟುಂಬಗಳ ಕೂಟ" ಇಂಡಿ ಭ್ರಷ್ಟಾಚಾರದ ಕೋಟೆ ಆಗಿದ್ದು, ಲಾಲೂ ರಾಜಕೀಯದಾಟ ಈಗ ಮುಗಿದಿದೆ ಎಂದು ಕೇಂದ್ರ ಸಂಸದೀಯ ಸಚಿವ ಪ್ರಲ್ಹಾದ ಜೋಶಿ ಲೇವಡಿ ಮಾಡಿದರು.

ಪಾಟ್ನಾದ ಬಿಜೆಪಿ ಮೀಡಿಯಾ ಸೆಂಟರ್‌ನಲ್ಲಿ ಇಂದು ಸುದ್ಧಿಗೋಷ್ಠಿ ಉದ್ದೇಶಿಸಿ ಮಾತನಾಡಿ, ಇಂಡಿ ಮೈತ್ರಿಕೂಟದ ವಿರುದ್ಧ ಹರಿಹಾಯ್ದರು.

ರಾಷ್ಟ್ರೀಯ ಜನತಾದಳ ಅಧ್ಯಕ್ಷ ಲಾಲೂ ಪ್ರಸಾದ ಅವರ ರಾಜಕೀಯ ಆಟ, ದಾಳ ಇನ್ನು ಮುಗಿದ ಅಧ್ಯಾಯ. ಅವರ ಪುತ್ರನಿಂದಂತೂ ರಾಜಕಾರಣ ಅಸಾಧ್ಯದ ಮಾತು. ತೇಜಸ್ವಿ ಬಾಬೂ ಎಲ್ಲಾ ಕಡೆ ವಿಫಲರಾಗಿದ್ದಾರೆ ಎಂದು ಜೋಶಿ ಟೀಕಿಸಿದರು.

ಲೂಟಿ ಮಾಡೋ ಕೂಟ: ಇಂಡಿ ಸುಳ್ಳು ಹೇಳುವ ಮತ್ತು ಲೂಟಿ ಮಾಡುವ ಮೈತ್ರಿಕೂಟವೆಂದೇ ಪ್ರಸಿದ್ಧವಾಗಿದೆ. ಇದರಲ್ಲಿ ಭಾಗಿಯಾಗಿರುವ ಎಲ್ಲಾ ಕೌಟುಂಬಿಕ ಪಕ್ಷಗಳೂ ವ್ಯಾಪಕ ಭ್ರಷ್ಟಾಚಾರದಲ್ಲಿ ಮುಳುಗಿವೆ ಎಂದು ಜೋಶಿ ಆರೋಪಿಸಿದರು.

ಇಂಡಿಗೆ ಸತತ ವಿಶ್ರಾಂತಿ: ನರೇಂದ್ರ ಮೋದಿಯವರು ಸತತ 23 ವರ್ಷಗಳಿಂದ ಜನರಿಗಾಗಿ ಕೆಲಸ ಮಾಡುತ್ತಿದ್ದಾರೆ. ಇಂಥವರ ವಿಶ್ರಾಂತಿ ಬಯಸುತ್ತಿದ್ದೀರಿ. ಆದರೆ, ಇಂಡಿ ಮೈತ್ರಿಕೂಟಕ್ಕೇ ಜನರು ಸತತ ವಿಶ್ರಾಂತಿ ನೀಡುತ್ತಿದ್ದಾರೆ ಎಂದು ಸಚಿವ ಪ್ರಲ್ಹಾದ ಜೋಶಿ ಲೇವಡಿ ಮಾಡಿದರು.

ಜನತೆ ಕೇಂದ್ರದಲ್ಲಿ 10 ವರ್ಷ ಮತ್ತು ಬಿಹಾರದಲ್ಲಿ 15 ವರ್ಷಗಳಿಂದ ನಿಮ್ಮ ಕುಟುಂಬದ ಪಕ್ಷಕ್ಕೆ ವಿಶ್ರಾಂತಿ ನೀಡಿದೆ. ಈ ಬಾರಿಯೂ ನಿಮಗೆ ವಿಶ್ರಾಂತಿ ನೀಡಲಿದ್ದಾರೆ. ಜೂನ್‌ 4ರ ನಿರೀಕ್ಷೆಯಲ್ಲಿರಿ ಎಂದು ತೇಜಸ್ವಿ ಯಾದವ್‌ ಅವರಿಗೆ ಜೋಶಿ ತಿರುಗೇಟು ನೀಡಿದರು.

ಇದನ್ನೂ ಓದಿ- ರಾಜ್ಯದ ಹಲವು ಜಿಲ್ಲೆಗಳಲ್ಲಿ ಇಂದು ಮಳೆ ಸಾಧ್ಯತೆ: 6 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್

ತೇಜಸ್ವಿ ಯಾದವ್‌ ಅವರಿಗೆ ಈಗಾಗಲೇ ಕ್ರಿಕೆಟ್‌ನಲ್ಲಿ ವಿಶ್ರಾಂತಿ ನೀಡಲಾಗಿದೆ. ರಾಜಕೀಯದಿಂದಲೂ ವಿಶ್ರಾಂತಿ ನೀಡಲಾಗಿದೆ. ಈ ಬಾರಿ ನಿಮಗೆ ಶೂನ್ಯ ಸೀಟ್‌ನೊಂದಿಗೆ ಮತದಾರರು ಶಾಶ್ವತ ವಿಶ್ರಾಂತಿ ನೀಡಲಿದ್ದಾರೆ ಎಂದರು.

ಮೀಸಲಾತಿ ವಿರೋಧಿ ಕಾಂಗ್ರೆಸ್: ಬಿಜೆಪಿ ಯಾವತ್ತೂ ಮೀಸಲಾತಿಯನ್ನು ಬೆಂಬಲಿಸಿದೆ. ಆದರೆ ಕಾಂಗ್ರೆಸ್‌ ಯಾವಾಗಲೂ ಅದನ್ನು ವಿರೋಧಿಸುತ್ತಾ ಬಂದಿದೆ. ಅಂಥ ಪಕ್ಷದೊಂದಿಗೆ ಈಗ ರಾಷ್ಟ್ರೀಯ ಜನತಾದಳ ಶಾಮೀಲಾಗಿದ್ದು, ಅದರ ಸಾಮಾಜಿಕ ನ್ಯಾಯದ  ಬದ್ಧತೆ ಏನೆಂಬುದು ಗೊತ್ತಾಗುತ್ತಿದೆ ಎಂದು ಜೋಶಿ ಟೀಕಿಸಿದರು.

ಅಂಬೇಡ್ಕರ್ ಗೆ ಭಾರತ ರತ್ನ ನೀಡದೆ  ಅವಮಾನ: ಕಾಂಗ್ರೆಸ್‌ ಪಕ್ಷ ಬಾಬಾ ಸಾಹೇಬ್‌ ಅಂಬೇಡ್ಕರ್‌ಗೆ ಭಾರತ ರತ್ನ ನೀಡಲಿಲ್ಲ. ಬದಲಿಗೆ ನೆಹ್ರೂ ಮತ್ತು ರಾಜೀವ್‌ ಗಾಂಧಿಯವರಿಗೆ ಭಾರತ ರತ್ನ ನೀಡಿದೆ ಎಂದು ಹೇಳಿದರು. 

ಒಂದು ಕಾಳು ಅಕ್ಕಿ ಕೊಡದೆ ವಂಚನೆ: ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಬಡವರಿಗೆ ಒಂದು ಕಾಳು ಅಕ್ಕಿಯನ್ನೂ ಕೊಟ್ಟಿಲ್ಲ. ಆದರೆ ಚುನಾವಣೆಯಲ್ಲಿ ಗೆಲ್ಲುವುದಕ್ಕಾಗಿ 10 ಕೆ.ಜಿ ಅಕ್ಕಿ ಕೊಡುವುದಾಗಿ ಸುಳ್ಳು ಆಶ್ವಾಸನೆ ನೀಡುತ್ತಿದೆ ಎಂದರು.

ಯುಪಿಎ 10 ವರ್ಷ ಉಚಿತ ಧಾನ್ಯ ಏಕೆ ಕೊಡಲಿಲ್ಲ ? ಕಾಂಗ್ರೆಸ್ ಈಗ ಉಚಿತ ಧಾನ್ಯಗಳ ಬಗ್ಗೆ ಮಾತನಾಡುತ್ತಿದೆ, ಆದರೆ ಯುಪಿಎ ಸರ್ಕಾರದ ಅವಧಿಯಲ್ಲಿ ಕಾಂಗ್ರೆಸ್ 10 ವರ್ಷಗಳ ಕಾಲ ಜನರಿಗೆ ಉಚಿತ ಧಾನ್ಯಗಳನ್ನು ಏಕೆ ನೀಡಲಿಲ್ಲ? ಎಂದು ಪ್ರಶ್ನಿಸಿದರು.

ಇದನ್ನೂ ಓದಿ- ರಜೆಯಲ್ಲಿ ಮಕ್ಕಳ ಸುರಕ್ಷತೆಗೆ ಗಮನ ನೀಡಿ: ಪಾಲಕರಿಗೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮನವಿ

ಎಲ್ಲಿದೆ ಇವರ ಸಾಮಾಜಿಕ ನ್ಯಾಯ: ಸ್ವಾತಿ ಮಾಲಿವಾಲ್‌ ಪ್ರಕರಣದ ಕುರಿತು ಮಾತನಾಡಿದ ಸಚಿವ ಜೋಶಿ, ರಾಷ್ಟ್ರೀಯ ಜನತಾದಳ  ಸಹಯೋಗಿ ಪಕ್ಷದ ಓರ್ವ ರಾಜ್ಯಸಭಾ ಸಂಸದರೊಂದಿಗೆ ಮುಖ್ಯಮಂತ್ರಿ ನಿವಾಸದಲ್ಲೇ ದುರ್ವ್ಯವಹಾರ ನಡೆದರೆ ಇಂಡಿ ಮೈತ್ರಿ ಪಕ್ಷಗಳು ಮೌನ ಧೋರಣೆ ತೋರಿ ಕುಳಿತಿವೆ. ಇದೇ ಇವರ ‘ಬೇಟಿ ವಂದನ್‌’ ಮತ್ತು ಮಹಿಳೆಯರಿಗೆ ಕೊಡುವ ಸಾಮಾಜಿಕ ನ್ಯಾಯ ಎಂದು ಟೀಕಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾಜಿ ಶಾಸಕಿ ಉಷಾ ವಿದ್ಯಾರ್ಥಿ, ಪ್ರದೇಶ ಮೀಡಿಯಾ ಸಂಯೋಜಕ ದಾನಿಶ್‌ ಇಕ್ಬಾಲ್‌, ಪ್ರವೀಣ ಚಂದ್ರ ಪಟೇಲ್‌, ರಣವೀರ ಇದ್ದರು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News