30 ವರ್ಷಗಳ ಹಿಂದೆ ಮೃತಪಟ್ಟ ಮಗಳ ಪ್ರೇತ ವಿವಾಹಕ್ಕೆ ವರನ ಹುಡುಕಾಟ : ಪತ್ರಿಕೆಯಲ್ಲಿ ಮೂಡಿ ಬಂತು ಜಾಹೀರಾತು

Pretaha Vivaha : ಈ ಪದ್ದತಿಯಂತೆ ಇದೀಗ ಪ್ರೇತ ವಿವಾಹಕ್ಕೆ ವರ ಬೇಕಾಗಿದ್ದಾರೆ ಎಂದು ಪುತ್ತೂರಿನ ಕುಟುಂಬವೋದ್ನು ಪತ್ರಿಕೆಯಲ್ಲಿ ಜಾಹೀರಾತು ನೀಡಿದೆ. ೩೦ ವರ್ಷಗಳ ಹಿಂದೆ ತೀರಿಕೊಂಡ ತಮ್ಮ ಮಗಳಿಗೆ ಪ್ರೇತ ವಿವಾಹ ಮಾಡಿಸಲು ಆ ಕುಟುಂಬ ಇದೀಗ ಮುಂದಾಗಿದೆ.

Written by - Ranjitha R K | Last Updated : May 14, 2024, 12:14 PM IST
  • ಪ್ರೇತ ವಿವಾಹ ಎನ್ನುವುದು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಚಾಲ್ತಿಯಲ್ಲಿರುವ ಪದ್ಧತಿ
  • ಈ ಪದ್ದತಿಯಲ್ಲಿ ಮೃತ ವ್ಯಕ್ತಿಗಳ ವಿವಾಹವನ್ನು ಶಾಸ್ತ್ರೋಕ್ತವಾಗಿ ನೆರವೇರಿಸಲಾಗುತ್ತದೆ
  • ಪ್ರತಿಯೊಂದು ಶಾಸ್ತ್ರವನ್ನು ವಿಧಿವತ್ತಾಗಿ ನೆರವೇರಿಸಲಾಗುತ್ತದೆ.
30 ವರ್ಷಗಳ ಹಿಂದೆ ಮೃತಪಟ್ಟ ಮಗಳ ಪ್ರೇತ ವಿವಾಹಕ್ಕೆ ವರನ ಹುಡುಕಾಟ : ಪತ್ರಿಕೆಯಲ್ಲಿ ಮೂಡಿ ಬಂತು ಜಾಹೀರಾತು  title=

Pretaha Vivaha : ಪ್ರೇತ ವಿವಾಹ ಎನ್ನುವುದು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಚಾಲ್ತಿಯಲ್ಲಿರುವ ಪದ್ಧತಿ. ಈ ಪದ್ದತಿಯಲ್ಲಿ ಮೃತ ವ್ಯಕ್ತಿಗಳ ವಿವಾಹವನ್ನು ಶಾಸ್ತ್ರೋಕ್ತವಾಗಿ ನೆರವೇರಿಸಲಾಗುತ್ತದೆ. ಪ್ರೇತ ವಿವಾಹ ಸಂದರ್ಭದಲ್ಲಿ ವಿವಾಹದ ಸಂದರ್ಭದ ಪ್ರತಿಯೊಂದು ಶಾಸ್ತ್ರವನ್ನು ವಿಧಿವತ್ತಾಗಿ ನೆರವೇರಿಸಲಾಗುತ್ತದೆ. 

ಈ ಪದ್ದತಿಯಂತೆ ಇದೀಗ ಪ್ರೇತ ವಿವಾಹಕ್ಕೆ ವರ ಬೇಕಾಗಿದ್ದಾರೆ ಎಂದು ಪುತ್ತೂರಿನ ಕುಟುಂಬವೊಂದು ಪತ್ರಿಕೆಯಲ್ಲಿ ಜಾಹೀರಾತು ನೀಡಿದೆ. ೩೦ ವರ್ಷಗಳ ಹಿಂದೆ ತೀರಿಕೊಂಡ ತಮ್ಮ ಮಗಳಿಗೆ ಪ್ರೇತ ವಿವಾಹ ಮಾಡಿಸಲು ಆ ಕುಟುಂಬ ಇದೀಗ ಮುಂದಾಗಿದೆ. ಈ ನಿಟ್ಟಿನಲ್ಲಿ ಕುಲಾಲ ಜಾತಿಯ ಬಂಗೇರ ಉಪಜಾತಿಯ ಹೆಣ್ಣಿಗೆ ವರ ಬೇಕಾಗಿದ್ದಾರೆ ಎಂದು ಜಾಹೀರಾತು ನೀಡಲಾಗಿದೆ. ಇಲ್ಲಿ ಗಮನಿಸಬೇಕಾದ ಅಂಶ ಎಂದರೆ ವರ ಎಂದರೆ ಜೀವಂತವಾಗಿರುವವರಲ್ಲ. ಇದು ಪ್ರೇತ ವಿವಾಹ ಆಗಿರುವುದರಿಂದ ಗಂಡು ಹೆಣ್ಣು ಇಬ್ಬರೂ ಮೃತಪಟ್ಟವರಾಗಿರಬೇಕು. 

ಇದನ್ನೂ ಓದಿ : ದೇಶದಲ್ಲಿ ಇಂಡಿಯಾ ಒಕ್ಕೂಟದ ಸರ್ಕಾರ ರಚನೆ ಆಗಲಿದೆ: ಡಿಸಿಎಂ ಡಿ.ಕೆ. ಶಿವಕುಮಾರ್ ವಿಶ್ವಾಸ     

ಏನಿದು ಪ್ರೇತ ವಿವಾಹ ?: 
ಸಣ್ಣ ವಯಸ್ಸಿನಲ್ಲಿಯೇ ಹುಡುಗಿ ಅಥವಾ ಹುಡುಗ ತೀರಿಕೊಂಡರೆ, ಅಥವಾ  ಮದುವೆಯಾಗುವುದಕ್ಕೆ ಮುನ್ನ ಯಾರಾದರೂ ತೀರಿಕೊಂಡರೆ ಅವರು ಮದುವೆಯ ವಯಸ್ಸಿಗೆ ಬರುವ ಹೊತ್ತಿಗೆ ಪ್ರೇತ ವಿವಾಹದ ಮೂಲಕ ಮದುವೆ ಕಾರ್ಯವನ್ನು ನಡೆಸಲಾಗುತ್ತದೆ. 

ಶಾಸ್ತ್ರೋಕ್ತವಾಗಿ ನಡೆಯುತ್ತದೆ ಪ್ರೇತ ವಿವಾಹ : 
ಹೀಗೆ ಪ್ರೇತ ವಿವಾಹ ಮಾಡಿಸುವಾಗ ವಯಸ್ಸು, ಜಾತಿ, ಉಪಜಾತಿ ಎಲ್ಲವನ್ನೂ ನೋಡಲಾಗುತ್ತದೆ. ಈ ಮದುವೆಯಾದ ಬಳಿಕ ಎರಡೂ ಕಡೆಯವರ ಮಧ್ಯೆ ಸಂಬಂಧ ಏರ್ಪಡುತ್ತದೆ.ಈ ಸಂಬಂಧವನ್ನು ಮುಂದುವರೆಸಿಕೊಂಡು ಹೋಗಬೇಕು.ಪ್ರೇತ ವಿವಾಹ ತಾನೇ ಎಂದು ಅಲ್ಲಿಗೆ ಬಿಟ್ಟು ಬಿಡುವಂತಿಲ್ಲ. ಎರಡು ಪರಿವಾರದಲ್ಲಿ ಏನೇ ಶುಭ ಅಶುಭ ಕಾರ್ಯಗಳು ನಡೆದರೂ ಎರಡೂ ಪರಿವಾರದವರು ಅಲ್ಲಿರಬೇಕು. ಅಂದರೆ ಸಾಮಾನ್ಯ ಮದುವೆ ಬಳಿಕ ಹೇಗೆ ಬೀಗರಿಗೆ ಮರ್ಯಾದೆ ನೀಡಲಾಗುತ್ತದೆಯೂ ಅದೇ ರೀತಿ ಮರ್ಯಾದೆಯನ್ನು ಪ್ರೇತ ವಿವಾಹದ ಬಳಿಕವೂ ಉಭಯ ಪರಿವಾರಗಳು ಮುಂದುವರೆಸಿಕೊಂಡು ಹೋಗಬೇಕಾಗುತ್ತದೆ. 

ಇದನ್ನೂ ಓದಿ : ಯಾವುದೇ ಕಾರಣಕ್ಕೂ ಸರ್ಕಾರವನ್ನು ʼಆಪರೇಷನ್ʼ ಮಾಡಲು ಸಾಧ್ಯವಿಲ್ಲ: ಸಿಎಂ ಸಿದ್ದರಾಮಯ್ಯ

ಸಾಮಾನ್ಯವಾಗಿ ಯಾವುದೇ ಮನೆಯಲ್ಲಿ ಮಕ್ಕಳು ಮದುವೆ ವಯಸ್ಸಿಗೆ ಬಂದಾಗ ಆ ಮನೆಯಲ್ಲಿ ಅವರಿಗಿಂತ ಹಿರಿಯರು ಮದುವೆಯಾಗದೆ ತೀರಿಕೊಂಡಿದ್ದರೆ ಈ ಪ್ರೇತ ವಿವಾಹದ ಮೂಲಕ ಗತಿಸಿ ಹೋದವರ ಮದುವೆ ಮಾಡಲಾಗುತ್ತದೆ. ಇಲ್ಲವಾದರೆ ಕಿರಿಯದ ಸಾಂಸಾರಿಕ ಜೀವನದಲ್ಲಿ ಬಾಧೆ ಉಂಟಾಗುತ್ತದೆ ಎನ್ನುವುದು ಈ ಭಾಗದವರ ನಂಬಿಕೆ.  

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News