ರೈತರ ಸಂಪೂರ್ಣ ಸಾಲ ಮನ್ನಾ ಮಾಡದಿದ್ದರೆ ಬೀದಿಗಿಳಿದು ಹೋರಾಟ: ಬಿ.ಎಸ್ ಯಡಿಯೂರಪ್ಪ

BS Yediyurappa : ಯೋಗ್ಯತೆ ಇದ್ದರೆ ರೈತರ ಸಂಪೂರ್ಣ ಸಾಲ ಮನ್ನಾ ಮಾಡಿ, ಇಲ್ಲದಿದ್ದರೆ ಬೀದಿಗಿಳಿದು ಹೋರಾಟ ಮಾಡಲಿದ್ದೇನೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಹೇಳಿದ್ದಾರೆ.

Written by - Chetana Devarmani | Last Updated : May 2, 2024, 11:42 PM IST
  • ಯೋಗ್ಯತೆ ಇದ್ದರೆ ರೈತರ ಸಂಪೂರ್ಣ ಸಾಲ ಮನ್ನಾ ಮಾಡಿ
  • ಇಲ್ಲದಿದ್ದರೆ ಬೀದಿಗಿಳಿದು ಹೋರಾಟ ಮಾಡಲಿದ್ದೇನೆ
  • ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಹೇಳಿಕೆ
ರೈತರ ಸಂಪೂರ್ಣ ಸಾಲ ಮನ್ನಾ ಮಾಡದಿದ್ದರೆ ಬೀದಿಗಿಳಿದು ಹೋರಾಟ: ಬಿ.ಎಸ್ ಯಡಿಯೂರಪ್ಪ  title=
ಬಿ.ಎಸ್ ಯಡಿಯೂರಪ್ಪ

ಗದಗ: ಯೋಗ್ಯತೆ ಇದ್ದರೆ ರೈತರ ಸಂಪೂರ್ಣ ಸಾಲ ಮನ್ನಾ ಮಾಡಿ, ಇಲ್ಲದಿದ್ದರೆ ಬೀದಿಗಿಳಿದು ಹೋರಾಟ ಮಾಡಲಿದ್ದೇನೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಹೇಳಿದ್ದಾರೆ. ಮೋದಿಯವರು ಕಳೆದ ಹತ್ತು ವರ್ಷದಲ್ಲಿ ಒಂದು ದಿನವೂ ರಜೆ ತೆಗೆದುಕೊಳ್ಳದೇ ಕೆಲಸ ಮಾಡಿದ್ದಾರೆ. ತಮ್ಮ ತಾಯಿ ತಿರಿಕೊಂಡಾಗ ಅಂತ್ಯ ಸಂಸ್ಕಾರ ಮಾಡಿ ಮತ್ತೆ ಕರ್ತವ್ಯಕ್ಕೆ ಹಾಜರಿಯಾಗಿದ್ದರು. ದೇಶಕ್ಕೆ ಸ್ವಾತಂತ್ರ್ಯ ಬಂದ ಸಂದದರ್ಭದಲ್ಲಿ ಕಾಂಗ್ರೆಸ್ ನ್ನು ವಿಸರ್ಜಿಸುವಂತೆ ಮಹಾತ್ಮಾ ಗಾಂಧಿಜಿ ಸೂಚಿಸಿದ್ಸರು. ಆಗ ಕಾಂಗ್ರೆಸ್  ವಿಸರ್ಜಿಸಲಿಲ್ಲ. ಈಗ ಜನರು ಮಹಾತ್ಮಾ ಗಾಂಧಿ ಯವರ ಆದೇಶ ಪಾಲನೆ ಮಾಡಿ ಕಾಂಗ್ರೆಸ್ ನ್ನು ನಿರ್ಮೂಲನೆ ಮಾಡುತ್ತಿದ್ದಾರೆ ಎಂದರು.

ರಾಜ್ಯದಲಿ ನರೇಂದ್ರ ಮೋದಿಯವರ ಆಶೀರ್ವಾದಿಂದ 28 ಕ್ಕೆ 28 ಸ್ಥಾನ ಗೆಲ್ಲುತ್ತೇವೆ. ನಾನು ರೈತರಿಗೆ ನಾಲ್ಕು ಸಾವಿರ ಕೊಡುವುದನ್ನು ಯಾಕೆ ನ್ಲಿಲ್ಲಿಸಿದಿರಿ. ಭಾಗ್ಯಲಕ್ಷ್ಮೀ ಯಾಕೆ ನಿಲ್ಲಿಸಿದಿರಿ, ಸರ್ಕಾರ ದಿವಾಳಿಯಾಗಿದೆ. ಈ ಚುನಾವಣೆ ನಂತರ ಕಾಂಗ್ರೆಸ್ ಧೂಳಿಪಟವಾಗುತ್ತದೆ. ಗಜೇಂದ್ರಘಡಕ್ಕೆ ಅನೇಕ ಸಾರಿ ಬಂದಿದ್ದೇನೆ. ಈ ಬಾರಿ ತೋರಿಸುತ್ತಿರುವ ಉತ್ಸಾಹ ಎಂದೂ ನೋಡಿರಲಿಲ್ಲ. ಮನೆ ಮನೆಗೆ ಹೋಗಿ ಎಲ್ಲರನ್ನು ಮತದಾನ ಕೇಂದ್ರಕ್ಕೆ ಕರೆದುಕೊಂಡು ಬಂದು ಮೋದಿಯವರಿಗೆ ಮತ ಹಾಕುವಂತೆ ಮಾಡಿ ಎಂದರು.

ಇದನ್ನೂ ಓದಿ: ಕುರುಬರಿಗೆ ಒಂದೂ ಟಿಕೆಟ್ ಕೊಡದ ಮೋದಿ ಕರಿ ಕಂಬಳಿ ವೇಷ ತೊಟ್ಟು ಡ್ರಾಮಾ ಆಡ್ತಾರೆ : ಸಿದ್ದರಾಮಯ್ಯ ವ್ಯಂಗ್ಯ 

ಬಸವರಾಜ ಬೊಮ್ಮಾಯಿಯವರು ಮುಖ್ಯಮಂತ್ರಿಯಾಗಿ, ಹಣಕಾಸು ಸಚಿವರಾಗಿ ಅನುಭವ ಹೊಂದಿದ್ದಾರೆ.  ಅವರ ಅನುಭವ ಸಂಸತ್ತಿನಲ್ಲಿ ಬಳಕೆ ಮಾಡಿಕೊಳ್ಳಲು ಅವರನ್ನು ಎರಡು ಲಕ್ಷ ಮತಗಳ ಅಂತರದಿಂದ ಗೆಲ್ಲಿಸಿ, ಅವರಿಗೆ ಕೇಂದ್ರದಲ್ಲಿ ಒಳ್ಳೆಯ ಸ್ಥಾನಮಾನ ಸಿಗಬೇಕು. ಇದು ನಮ್ಮೆಲ್ಲರ ಅಪೇಕ್ಷೆಯಾಗಿದೆ ಎಂದು ಹೇಳಿದರು.

ಪಾಕಿಸ್ತಾನವೂ ಕೂಡ ಮೋದಿಯವರು ಮತ್ತೆ ಪ್ರಧಾನಿಯಾಗಬೇಕು ಎಂದು ಬಯಸುತ್ತಿದ್ದಾರೆ. ಜೆಡಿಎಸ್ ಬಿಜೆಪಿ ಕಾರ್ಯಕರ್ತರು ಒಟ್ಟಾಗಿ ಕೆಲಸ ಮಾಡಿ, ನಮ್ಮ ಮೈತ್ರಿ ಚುನಾವಣೆಯ ನಂತರವೂ ಮುಂದುವರೆಯಲಿದೆ. ನಿಮ್ಮ ನಂಬಿಕೆ ವಿಶ್ವಾಸಕ್ಕೆ ದ್ರೊಹ ಮಾಡುವುದಿಲ್ಲ. ನಾನು ನ್ಯಾಯ ಕೊಡಿಸಲು ಹೋರಾಟ ಮಾಡಲು ಸಿದ್ದನಿದ್ದೇನೆ ಎಂದು ಹೇಳಿದರು.

ಇದನ್ನೂ ಓದಿ: ಚಿತ್ರನಟ ಪ್ರಕಾಶ್ ರಾಜ್ ಪೂರ್ವಾಗ್ರಹ ಪೀಡಿತ ವ್ಯಕ್ತಿ: ಬಸವರಾಜ ಬೊಮ್ಮಾಯಿ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News