ಪತ್ರಕರ್ತೆಯರು ಅಷ್ಟು ಮುಗ್ದರೇನಲ್ಲ ಅವರು ಕೂಡ ದುರೋಪಯೋಗ ಪಡಿಸಿಕೊಳ್ಳಬಹುದು- ಬಿಜೆಪಿ ನಾಯಕಿ

ದೇಶದ ಎಲ್ಲ ವಲಯಗಲಿಂದಲೂ ಕೂಡ ಈಗ ಮೀಟೂ ಚಲುವಳಿಗೆ ಬೆಂಬಲ ವ್ಯಕ್ತವಾಗುತ್ತಿದೆ ಆದರೆ ಇದೆ ಸಂದರ್ಭದಲ್ಲಿ ಮಧ್ಯಪ್ರದೇಶದ ಬಿಜೆಪಿ ಮಹಿಳಾ ಅಧ್ಯಕ್ಷೆ ಲತಾ ಕೇಲ್ಕರ್ ಕೂಡ ಸ್ವಾಗತಿಸಿದ್ದಾರೆ.ಆದರೆ ಇದೆ ವೇಳೆ ಕೆಲವು ಮಹಿಳಾ ಪತ್ರಕರ್ತೆಯರು ಈ ಚಳುವಳಿಯನ್ನು ದುರುಪಯೋಗಪಡಿಸಿಕೊಳ್ಳುವ ಕುರಿತಾಗಿ ಸಂಶಯ ವ್ಯಕ್ತಪಡಿಸಿದ್ದಾರೆ.

Last Updated : Oct 12, 2018, 02:22 PM IST
ಪತ್ರಕರ್ತೆಯರು ಅಷ್ಟು ಮುಗ್ದರೇನಲ್ಲ ಅವರು ಕೂಡ ದುರೋಪಯೋಗ ಪಡಿಸಿಕೊಳ್ಳಬಹುದು- ಬಿಜೆಪಿ ನಾಯಕಿ title=
Photo:ANI

ನವದೆಹಲಿ: ದೇಶದ ಎಲ್ಲ ವಲಯಗಲಿಂದಲೂ ಕೂಡ ಈಗ ಮೀಟೂ ಚಲುವಳಿಗೆ ಬೆಂಬಲ ವ್ಯಕ್ತವಾಗುತ್ತಿದೆ ಆದರೆ ಇದೆ ಸಂದರ್ಭದಲ್ಲಿ ಮಧ್ಯಪ್ರದೇಶದ ಬಿಜೆಪಿ ಮಹಿಳಾ ಅಧ್ಯಕ್ಷೆ ಲತಾ ಕೇಲ್ಕರ್ ಕೂಡ ಸ್ವಾಗತಿಸಿದ್ದಾರೆ.ಆದರೆ ಇದೆ ವೇಳೆ ಕೆಲವು ಮಹಿಳಾ ಪತ್ರಕರ್ತೆಯರು ಈ ಚಳುವಳಿಯನ್ನು ದುರುಪಯೋಗಪಡಿಸಿಕೊಳ್ಳುವ ಕುರಿತಾಗಿ ಸಂಶಯ ವ್ಯಕ್ತಪಡಿಸಿದ್ದಾರೆ.

ಕೇಂದ್ರ ಸಚಿವ ಎಂ ಜೆ ಅಕ್ಬರ್ ಮೇಲೆ ಬಂದಿರುವ ಲೈಂಗಿಕ ಕಿರುಕುಳದ ಆರೋಪದ ಕುರಿತಾಗಿ ಪ್ರತಿಕ್ರಿಯಿಸಿರುವ ಲತಾ ಕೇಲ್ಕರ್ " ನಾನು ಕೂಡ ಮೀಟೂ ಚಳುವಳಿಯನ್ನು ಬೆಂಬಲಿಸುತ್ತೇನೆ  ಆದರೆ ನನಗನಿಸುತ್ತೆ ಮಹಿಳಾ ಪತ್ರಕರ್ತೆಯರು ಕೂಡ ಅಷ್ಟು ಮುಗ್ದರಲ್ಲ ಅವರು ಕೂಡ ಇದನ್ನು ದುರುಪಯೋಗಪಡಿಸಿಕೊಳ್ಳಬಹುದು "ಎಂದು ಅವರು ತಿಳಿಸಿದ್ದಾರೆ.

ಇತ್ತೀಚಿಗೆ ಕೇಂದ್ರ ಸಚಿವ ಎಂಜೆ ಅಕ್ಬರ್ ಮೇಲೆ ಲೈಂಗಿಕ ಕಿರುಕುಳದ ಆರೋಪ ಬಂದ ಹಿನ್ನಲೆಯಲ್ಲಿ ಪ್ರತಿಪಕ್ಷಗಳು ಈಗ ಅವರನ್ನು ರಾಜೀನಾಮೆ ನೀಡುವಂತೆ ಆಗ್ರಹಿಸಿವೆ.ಇನ್ನೊಂದೆಡೆಗೆ ಆಡಳಿತ ಪಕ್ಷ ಬಿಜೆಪಿ ಮಾತ್ರ ಇವರೆಗೂ ಈ ವಿಷಯದಲ್ಲಿ ಬಾಯಿ ಬಿಟ್ಟಿಲ್ಲ. ಈ ವಿಚಾರವಾಗಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರಿಗೆ ಪತ್ರಕರ್ತರು ಪರ್ಶ್ನೆ ಕೇಳಿದಾಗ ಇದಕ್ಕೆ ಉತ್ತರಿಸದೆ ಅವರು ಜಾರಿಕೊಂಡಿದ್ದರು.

Trending News