ನಕ್ಸಲ್ ಪೀಡಿತ ಪ್ರದೇಶಗಳಲ್ಲಿಯೂ ಎನ್‌ಎಸ್‌ಜಿ ! ನಕ್ಸಲ್ ಕಾರ್ಯಾಚರಣೆಯ ವಿರುದ್ದ ಕಣಕ್ಕಿಳಿದಿರುವ ಪಡೆ

 ಭವಿಷ್ಯದಲ್ಲಿ ಯಾವುದೇ ಪ್ರಮುಖ ಬೆದರಿಕೆಯನ್ನು ಎದುರಿಸಲು ಸಿದ್ಧರಾಗಿರಲು NSG ಸಹಾಯ ಪಡೆಯಬಹುದಾಗಿದೆ. ಕಳೆದ ವರ್ಷವೂ ಎನ್‌ಎಸ್‌ಜಿ ತಂಡವು ಆಂಧ್ರಪ್ರದೇಶದ ಗ್ರೇ ಹೌಂಡ್ಸ್‌ನೊಂದಿಗೆ ನಕ್ಸಲ್ ವಿರೋಧಿ ಕಾರ್ಯಾಚರಣೆಯಲ್ಲಿ ತರಬೇತಿ ಪಡೆದಿತ್ತು.   

Written by - Ranjitha R K | Last Updated : May 2, 2023, 12:53 PM IST
  • ನಕ್ಸಲ್ ಕಾರ್ಯಾಚರಣೆಯ ಮೇಲೆ ಕಣ್ಣು
  • ವಿಶೇಷ ಪಡೆಗಳೊಂದಿಗೆ ಎನ್‌ಎಸ್‌ಜಿ ತರಬೇತಿ
  • ನಕ್ಸಲ್ ವಿರೋಧಿ ಕಾರ್ಯಾಚರಣೆ ತರಬೇತಿ
 ನಕ್ಸಲ್ ಪೀಡಿತ ಪ್ರದೇಶಗಳಲ್ಲಿಯೂ ಎನ್‌ಎಸ್‌ಜಿ !  ನಕ್ಸಲ್ ಕಾರ್ಯಾಚರಣೆಯ ವಿರುದ್ದ ಕಣಕ್ಕಿಳಿದಿರುವ ಪಡೆ  title=

ನವದೆಹಲಿ : ನ್ಯಾಷನಲ್ ಸೆಕ್ಯುರಿಟಿ ಗಾರ್ಡ್ (ಎನ್‌ಎಸ್‌ಜಿ) ಅಂದರೆ ಬ್ಲ್ಯಾಕ್ ಕ್ಯಾಟ್ ಕಮಾಂಡೋಗಳು ನಕ್ಸಲ್ ಕಾರ್ಯಾಚರಣೆಯ ಮೇಲೆ ಸಂಪೂರ್ಣ ಕಣ್ಣಿಟ್ಟಿದೆ. ಅವರು ನಕ್ಸಲೀಯರ ವಿರುದ್ಧ ಕಾರ್ಯಾಚರಣೆಯಲ್ಲಿ ತೊಡಗಿರುವ ವಿಶೇಷ ಪಡೆಗಳೊಂದಿಗೆ ತರಬೇತಿ ಪಡೆಯುತ್ತಿದೆ. ಅಗತ್ಯ ಸಂದರ್ಭಗಳಲ್ಲಿ ನಕ್ಸಲರ ಪಿತುರಿಯನ್ನು ವಿಫಲಗೊಳಿಸುವ ಕಾರ್ಯಾಚರಣೆಯಲ್ಲಿ ಕಣಕ್ಕಿಳಿಯಲಿದೆ. 

ನಕ್ಸಲ್ ವಿರೋಧಿ ಕಾರ್ಯಾಚರಣೆ ತರಬೇತಿ  :
ಮೂಲಗಳ ಪ್ರಕಾರ, ಹೈದರಾಬಾದ್‌ನಲ್ಲಿ ನಿಯೋಜಿಸಲಾದ ಎನ್‌ಎಸ್‌ಜಿ ತಂಡಗಳು ಕಳೆದ ಹಲವು ತಿಂಗಳುಗಳಿಂದ ನಕ್ಸಲ್ ವಿರೋಧಿ ಕಾರ್ಯಾಚರಣೆಯ ತರಬೇತಿ ಪಡೆಯುತ್ತಿವೆ. ಕಳೆದ ವರ್ಷವೂ ಎನ್‌ಎಸ್‌ಜಿ ತಂಡವು ಆಂಧ್ರಪ್ರದೇಶದ ಗ್ರೇ ಹೌಂಡ್ಸ್‌ನೊಂದಿಗೆ ನಕ್ಸಲ್ ವಿರೋಧಿ ಕಾರ್ಯಾಚರಣೆಯಲ್ಲಿ ತರಬೇತಿ ಪಡೆದಿತ್ತು. ಗ್ರೇ ಹೌಂಡ್ ನಕ್ಸಲೀಯರ ವಿರುದ್ಧ ಕಾರ್ಯಾಚರಣೆಯನ್ನು ಕರಗತ ಮಾಡಿಕೊಂಡಿದೆ.

ಇದನ್ನೂ ಓದಿ : Naxal Encounter: 38 ಲಕ್ಷ ಬಹುಮಾನ ಘೋಷಿಸಲ್ಪಟ್ಟ ಮೂವರು ನಕ್ಸಲೀಯರ ಎನ್ಕೌಂಟರ್, ಸಿ60 ತಂಡಕ್ಕೆ ಸಿಕ್ಕ ದೊಡ್ಡ ಯಶಸ್ಸು

ಕೇಂದ್ರ ಭದ್ರತಾ ಏಜೆನ್ಸಿಯಲ್ಲಿ ನಿಯೋಜಿಸಲಾದ ಅಧಿಕಾರಿಯ ಪ್ರಕಾರ, ನಕ್ಸಲೀಯರ ವಿರುದ್ಧ ನಡೆಯುತ್ತಿರುವ ಕಾರ್ಯಾಚರಣೆಯಲ್ಲಿ ಸರ್ಕಾರವು ಯಾವುದೇ ಬದಲಾವಣೆಗಳನ್ನು ಮಾಡಲು ಹೋಗುವುದಿಲ್ಲ. CRPF ಮತ್ತು COBRA ಘಟಕಗಳು ರಾಜ್ಯ ಪೊಲೀಸರೊಂದಿಗೆ ಮೊದಲ ಭಾಗದಲ್ಲಿ ಕಾರ್ಯನಿರ್ವಹಿಸುತ್ತವೆ. ಆದರೆ ಭವಿಷ್ಯದಲ್ಲಿ ಯಾವುದೇ ಪ್ರಮುಖ ಬೆದರಿಕೆಯನ್ನು ಎದುರಿಸಲು ಸಿದ್ಧರಾಗಿರಲು NSG ಸಹಾಯ ಪಡೆಯಬಹುದಾಗಿದೆ. 

ಒಂದು ಎನ್‌ಎಸ್‌ಜಿ ತಂಡವನ್ನು ಕಳೆದ ಹಲವು ವರ್ಷಗಳಿಂದ ಕಾಶ್ಮೀರದಲ್ಲಿ ಭಯೋತ್ಪಾದನಾ ವಿರೋಧಿ ಕಾರ್ಯಾಚರಣೆಗಾಗಿ ನಿಯೋಜಿಸಲಾಗಿದೆ. ಶ್ರೀನಗರದಲ್ಲಿ ಕಟ್ಟೆಚ್ಚರ ವಹಿಸಿರುವ ಎನ್‌ಎಸ್‌ಜಿ ತಂಡವು ಇನ್ನೂ ಯಾವುದೇ ಭಯೋತ್ಪಾದನಾ ವಿರೋಧಿ ಕಾರ್ಯಾಚರಣೆಯಲ್ಲಿ ತೊಡಗಿಲ್ಲ. ಆದರೆ ಭವಿಷ್ಯದಲ್ಲಿ ಎದುರಾಗಬಹುದಾದ ಅಪಾಯವನ್ನು ಎದುರಿಸಲು ಸರ್ಕಾರ ಈಗಾಗಲೇ ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಂಡಿದೆ.

ಇದನ್ನೂ ಓದಿ : Mughal Harem dark secret: ಕಾಮೋತ್ತೇಜಕವಾಗಿ ಮಾವು ತಿನ್ನುತ್ತಾನೆ ಭಾರತವನ್ನಾಳಿದ ಈ ರಾಜ!

ಜಮ್ಮು ಮತ್ತು ಕಾಶ್ಮೀರದಂತೆಯೇ, ನಕ್ಸಲೀಯ ಪೀಡಿತ ಪ್ರದೇಶಗಳಲ್ಲಿಯೂ ಎನ್‌ಎಸ್‌ಜಿಯ ವಿಶೇಷ ಘಟಕಗಳನ್ನು ಇರಿಸಲು ಚಿಂತನೇ ನಡೆಸಲಾಗುತ್ತಿದೆ. ಎನ್‌ಎಸ್‌ಜಿಯ ಚಾರ್ಟರ್ ಪ್ರಕಾರ, ಬ್ಲ್ಯಾಕ್ ಕ್ಯಾಟ್‌ಗಳನ್ನು ಅರ್ಬನ್ ವಾರ್‌ಫೇರ್‌ಗಾಗಿ ಸನ್ನದ್ದಗೊಳಿಸಲಾಗಿದೆ. ಆದರೆ ಈಗ ಅದನ್ನು ಬದಲಾಯಿಸುವ ಚರ್ಚೆ ನಡೆಯುತ್ತಿದೆ. ತಜ್ಞರ ಪ್ರಕಾರ, ಯಾವುದೇ ಸಂಕೀರ್ಣ ಕಾರ್ಯಾಚರಣೆಯಲ್ಲಿ ವಿಶೇಷ ಪಡೆಗಳ ಅಗತ್ಯವಿರುತ್ತದೆ. ಭವಿಷ್ಯದಲ್ಲಿ ನಕ್ಸಲೀಯರ ವಿರುದ್ಧ ಇಂತಹ ವಿಶೇಷ ಕಾರ್ಯಾಚರಣೆ ನಡೆಸಬೇಕಾದರೆ, ಎನ್‌ಎಸ್‌ಜಿಯಂತಹ ವಿಶೇಷ ಪಡೆಯಾ ನೆರವು ಖಂಡಿತವಾಗಿಯೂ ಬೇಕಾಗಬಹುದು. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News