Jaish e Mohammed ಉಗ್ರ ಸಂಘಟನೆಗೆ ಸೇರಿದ ಕುಖ್ಯಾತ ಭಯೋತ್ಪಾದಕನ ಬಂಧನ, ದೊಡ್ಡ ದಾಳಿಯ ಸಂಚು ವಿಫಲ

Terrorist Arrested: ಬಂಧಿತ ಭಯೋತ್ಪಾದಕ ಮೊಹಮ್ಮದ್ ಉಬೈದ್ ಮಲಿಕ್ ಜಮ್ಮು ಮತ್ತು ಕಾಶ್ಮೀರದಲ್ಲಿ ದೊಡ್ಡ ಭಯೋತ್ಪಾದಕ ಸಂಚು ರೂಪಿಸಲು ಯತ್ನಿಸುತ್ತಿದ್ದ.  

Last Updated : May 21, 2023, 06:46 PM IST
  • ಆರೋಪಿ ಭಯೋತ್ಪಾದಕ ಪಾಕಿಸ್ತಾನದಲ್ಲಿ ಕುಳಿತಿರುವ ಜೈಶ್ ಕಮಾಂಡರ್‌ಗೆ ವಿಶೇಷವಾಗಿ
  • ಸೈನಿಕರು ಮತ್ತು ಭದ್ರತಾ ಪಡೆಗಳ ಚಲನವಲನದ ಬಗ್ಗೆ ರಹಸ್ಯ ಮಾಹಿತಿಯನ್ನು ರವಾನಿಸುತ್ತಿದ್ದ ಎಂದು ಎನ್‌ಐಎ ತನಿಖೆಯಿಂದ ತಿಳಿದುಬಂದಿದೆ.
  • ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕ ಚಟುವಟಿಕೆಗಳನ್ನು ಉತ್ತೇಜಿಸುವಲ್ಲಿ ಭಾಗಿಯಾಗಿರುವ ಕುರಿತು ಆರೋಪಿಯಿಂದ ಎನ್‌ಐಎ ಹಲವಾರು ದೋಷಾರೋಪಣೆ ದಾಖಲೆಗಳನ್ನು ವಶಪಡಿಸಿಕೊಂಡಿದೆ.
Jaish e Mohammed ಉಗ್ರ ಸಂಘಟನೆಗೆ ಸೇರಿದ ಕುಖ್ಯಾತ ಭಯೋತ್ಪಾದಕನ ಬಂಧನ, ದೊಡ್ಡ ದಾಳಿಯ ಸಂಚು ವಿಫಲ title=

Notorious Terrorist Arrest: ಭದ್ರತಾ ಏಜೆನ್ಸಿಗಳು ದೊಡ್ಡ ಭಯೋತ್ಪಾದಕ ಸಂಚನ್ನು ವಿಫಲಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಭಾನುವಾರ (ಮೇ 21) ಎನ್‌ಐಎ ಜೈಶ್-ಎ-ಮೊಹಮ್ಮದ್‌ನ ಭಯೋತ್ಪಾದಕನನ್ನು ಬಂಧಿಸಿದೆ. ಬಂಧಿತ ಉಗ್ರನನ್ನು  ಮೊಹಮ್ಮದ್ ಉಬೈದ್ ಮಲಿಕ್, ಕುಪ್ವಾರ ನಿವಾಸಿ ಎಂದು ಗುರುತಿಸಲಾಗಿದೆ. ಉಬೈದ್ ಪಾಕಿಸ್ತಾನದಲ್ಲಿರುವ ಜೈಶ್ ಕಮಾಂಡರ್ ಜೊತೆ ನಿರಂತರ ಸಂಪರ್ಕದಲ್ಲಿದ್ದ ಎನ್ನಲಾಗಿದೆ. .

ಭಯೋತ್ಪಾದಕ ಉಬೈದ್ ಜಮ್ಮು ಮತ್ತು ಕಾಶ್ಮೀರದಲ್ಲಿ ದೊಡ್ಡ ಭಯೋತ್ಪಾದಕ ಸಂಚನ್ನು ನಡೆಸಲು ಸಂಚು ರೂಪಿಸಿದ್ದ ಎನ್ನಲಾಗಿದೆ. ಬಂಧಿತ ಭಯೋತ್ಪಾದಕ ಸೇನಾ ಪಡೆಗಳು ಮತ್ತು ಭದ್ರತಾ ಪಡೆಗಳ ಚಲನವಲನಕ್ಕೆ ಸಂಬಂಧಿಸಿದ ಮಾಹಿತಿಗಳನ್ನು ಪಾಕಿಸ್ತಾನದಲ್ಲಿ ಕುಳಿತ ತನ್ನ ಕಮಾಂಡರ್‌ಗೆ ರವಾನಿಸುಸುತ್ತಿದ್ದ ಎನ್ನಲಾಯಿದೆ.

ಆಕ್ಷೇಪಾರ್ಹ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ
ಆರೋಪಿ ಭಯೋತ್ಪಾದಕ ಪಾಕಿಸ್ತಾನದಲ್ಲಿ ಕುಳಿತಿರುವ ಜೈಶ್ ಕಮಾಂಡರ್‌ಗೆ ವಿಶೇಷವಾಗಿ ಸೈನಿಕರು ಮತ್ತು ಭದ್ರತಾ ಪಡೆಗಳ ಚಲನವಲನದ ಬಗ್ಗೆ ರಹಸ್ಯ ಮಾಹಿತಿಯನ್ನು ರವಾನಿಸುತ್ತಿದ್ದ ಎಂದು ಎನ್‌ಐಎ ತನಿಖೆಯಿಂದ ತಿಳಿದುಬಂದಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕ ಚಟುವಟಿಕೆಗಳನ್ನು ಉತ್ತೇಜಿಸುವಲ್ಲಿ ಭಾಗಿಯಾಗಿರುವ ಕುರಿತು ಆರೋಪಿಯಿಂದ ಎನ್‌ಐಎ ಹಲವಾರು ದೋಷಾರೋಪಣೆ ದಾಖಲೆಗಳನ್ನು ವಶಪಡಿಸಿಕೊಂಡಿದೆ.

ಇದನ್ನೂ ಓದಿ-BJP On Kejriwal: ಇತರರನ್ನು ಭ್ರಷ್ಟರು ಎಂದು ಕರೆಯುವ ಕೇಜ್ರಿವಾಲ್ ಅವರೇ ಇಂದು ತುಂಬಾ ದೊಡ್ಡ ಕರಪ್ಟ್ ಆಗಿದ್ದಾರೆ

ಅಲರ್ಟ್ ಮೋಡ್ ನಲ್ಲಿ ಗುಪ್ತಚರ ಸಂಸ್ಥೆಗಳು 
ಸ್ವಯಂ ಪ್ರೇರಿತವಾಗಿ ಮಾಹಿತಿ ಪಡೆದು ಜೂನ್ 21, 2022 ರಂದು ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ಭಯೋತ್ಪಾದಕ ದಾಳಿಯ ಬಗ್ಗೆ ಸಂಸ್ಥೆ ಪ್ರಕರಣವನ್ನು ದಾಖಲಿಸಿದೆ. ಡ್ರೋನ್‌ಗಳ ಮೂಲಕ ಬಾಂಬ್ ಸ್ಫೋಟ ನಡೆಸಲು ವಸ್ತುಗಳನ್ನು ಕಳುಹಿಸಲಾಗಿದೆ ಎಂದು ಎನ್‌ಐಎಗೆ ಗುಪ್ತಚರ ಮಾಹಿತಿ ಲಭಿಸಿತ್ತು. ಅಂದಿನಿಂದ ಗುಪ್ತಚರ ಸಂಸ್ಥೆಗಳು ಅಲರ್ಟ್ ಮೋಡ್‌ನಲ್ಲಿದ್ದವು. ಈ ವಿಷಯದಲ್ಲಿ ಎನ್‌ಐಎ ಇಂದು ದೊಡ್ಡ ಯಶಸ್ಸನ್ನು ಸಾಧಿಸಿದೆ.

ಇದನ್ನೂ ಓದಿ-Parliament Building: 'ರಾಷ್ಟ್ರಪತಿಗಳೇ ಹೊಸ ಸಂಸತ್ತಿನ ಕಟ್ಟಡ ಉದ್ಘಾಟಿಸಬೇಕು'

ಡ್ರೋನ್ ಮೂಲಕ ಸ್ಫೋಟಕಗಳನ್ನು ಕಳುಹಿಸಲಾಗುತ್ತಿತ್ತು
ಎನ್‌ಐಎ ತನಿಖೆಯ ಪ್ರಕಾರ, ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕ ದಾಳಿ ನಡೆಸಲು ಐಇಡಿ ಮತ್ತು ಸ್ಫೋಟಕಗಳನ್ನು ಹೆಚ್ಚಾಗಿ ಡ್ರೋನ್‌ಗಳ ಮೂಲಕ ಕಳುಹಿಸಲಾಗುತ್ತಿದೆ. ಸ್ಥಳೀಯ ಮಟ್ಟದಲ್ಲೂ ಸ್ಫೋಟಕ ವಸ್ತುಗಳನ್ನು ಸಂಗ್ರಹಿಸಲಾಗುತ್ತಿದೆ. ಮುಖ್ಯವಾಗಿ ಅಲ್ಪಸಂಖ್ಯಾತರು ಮತ್ತು ಭದ್ರತಾ ಪಡೆಗಳ ಸಿಬ್ಬಂದಿಯನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿರುವುದು ಬೆಳಕಿಗೆ ಬಂದಿದೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News