New guidelines: ಅಂತಹದ್ದೇನಾಗಿದೆ.? ವಿದೇಶಿ ವಿಮಾನಗಳ ಹಾರಾಟಕ್ಕೆ ಭಾರತ ಬ್ರೇಕ್ ಹಾಕಿದ್ದು ಯಾಕೆ?

ಶುಕ್ರವಾರ ತಡರಾತ್ರಿ ವಿಮಾನಯಾನ ನಿರ್ದೇಶನಾಲಯದ ಮಹಾನಿರ್ದೇಶಕರು ಹೊಸ ಮಾರ್ಗಸೂಚಿ ಹೊರಡಿಸಿದ್ದಾರೆ. ಇದರ ಪ್ರಕಾರ ಭಾರತಕ್ಕೆ ಬರುವ ಮತ್ತು ಭಾರತದಿಂದ ಹೊರಡುವ ಅಂತಾರಾಷ್ಟ್ರೀಯ ವಿಮಾನ ಸೇವೆಗೆ ಮಾರ್ಚ್ 31ರ ತನಕ ನಿರ್ಬಂಧ ವಿಸ್ತರಿಸಲಾಗಿದೆ.  

Written by - Ranjitha R K | Last Updated : Feb 27, 2021, 12:03 PM IST
  • ವಿದೇಶಿ ವಿಮಾನಗಳ ಹಾರಾಟಕ್ಕೆ ಮಾರ್ಚ್ 31ರ ತನಕ ನಿರ್ಬಂಧ ಮುಂದುವರಿಸಿದ ಡಿಜಿಸಿಎ
  • ಶುಕ್ರವಾರ ತಡರಾತ್ರಿ ಹೊಸ ಮಾರ್ಗಸೂಚಿ ಜಾರಿ
  • ಡಿಜಿಸಿಎ ಈ ನಿರ್ಧಾರಕ್ಕೆ ಕಾರಣಗಳೇನು ಗೊತ್ತಾ..?
New guidelines: ಅಂತಹದ್ದೇನಾಗಿದೆ.? ವಿದೇಶಿ ವಿಮಾನಗಳ ಹಾರಾಟಕ್ಕೆ ಭಾರತ ಬ್ರೇಕ್ ಹಾಕಿದ್ದು ಯಾಕೆ? title=
ವಿದೇಶಿ ವಿಮಾನಗಳ ಹಾರಾಟಕ್ಕೆ ಮಾರ್ಚ್ 31ರ ತನಕ ನಿರ್ಬಂಧ (file photo)

ನವದೆಹಲಿ : ಕರೋನಾ (Coronavirus)ಇನ್ನೂ ಪರಿಪೂರ್ಣವಾಗಿ ಕೊನೆಯಾಗಿಲ್ಲ. ಕೆಲವು ದೇಶಗಳು ಕರೋನಾ ಎರಡನೇ ಅಲೆಗೆ ತತ್ತರಿಸಿ ಹೋಗಿವೆ. ಈ ಹಿನ್ನೆಲೆಯಲ್ಲಿ ಮುಂಜಾಗ್ರತ ಕ್ರಮದ ಅಂಗವಾಗಿ ಭಾರತ, ವಿದೇಶಿ ವಿಮಾನಗಳ ಹಾರಾಟಕ್ಕೆ (International Flight) ಮಾರ್ಚ್ 31ರ ತನಕ ನಿರ್ಬಂಧ ಮುಂದುವರಿಸಿದೆ. ಈ ಮೊದಲು, ಫೆ. 28ರ ತನಕ ಈ ನಿರ್ಬಂಧ ಹೇರಲಾಗಿತ್ತು. 

ಡಿಜಿಸಿಎ (DGCA)ಮಾರ್ಗಸೂಚಿಯಲ್ಲಿ ಏನಿದೆ.?
ಶುಕ್ರವಾರ ತಡರಾತ್ರಿ ವಿಮಾನಯಾನ ನಿರ್ದೇಶನಾಲಯದ ಮಹಾನಿರ್ದೇಶಕರು (Directorate General of Civil Aviation) ಹೊಸ ಮಾರ್ಗಸೂಚಿ (Guidlines)ಹೊರಡಿಸಿದ್ದಾರೆ. ಇದರ ಪ್ರಕಾರ ಭಾರತಕ್ಕೆ ಬರುವ ಮತ್ತು ಭಾರತದಿಂದ ಹೊರಡುವ ಅಂತಾರಾಷ್ಟ್ರೀಯ ವಿಮಾನ ಸೇವೆಗೆ (International Flight) ಮಾರ್ಚ್ 31ರ ತನಕ ನಿರ್ಬಂಧ ವಿಸ್ತರಿಸಲಾಗಿದೆ. ಕೆಲವೊಂದು ವಿಶೇಷ ಸನ್ನಿವೇಶಗಳಲ್ಲಿ ಆಯ್ದ ಅಂತಾರಾಷ್ಟ್ರೀಯ ಮಾರ್ಗಗಳಲ್ಲಿ ವಿಮಾನಯಾನಕ್ಕೆ ಅನುಮತಿ ನೀಡಬಹುದು ಎಂದು ಡಿಜಿಸಿಎ (DGCA) ಸ್ಪಷ್ಟಪಡಿಸಿದೆ. ಡಿಜಿಸಿಎ ಈಗಾಗಲೇ ಸೂಚಿಸಿರುವ ಮಾರ್ಗಗಳಲ್ಲಿ ವಿಮಾನ ಯಾನ ಸಂಚಾರಕ್ಕೆ ಯಾವುದೇ ನಿರ್ಬಂಧ ಇರುವುದಿಲ್ಲ ಎಂದು ಡಿಜಿಸಿಎ ಸ್ಪಷ್ಟ ಪಡಿಸಿದೆ. ಕರೋನಾ (Coronavirus)ಮಹಾಮಾರಿ ಹಿನ್ನೆಲೆಯಲ್ಲಿ ಜೂನ್, 2020ರಂದು ಅಂತಾರಾಷ್ಟ್ರೀಯ ವಿಮಾನ ಸೇವೆಗೆ ನಿರ್ಬಂಧ ಹೇರಲಾಗಿತ್ತು. 

 ಇದನ್ನೂ ಓದಿ : SPICEJET SALE : ಕೇವಲ 899 ರೂಪಾಯಿಯಲ್ಲಿ FLIGHT ಟಿಕೆಟ್, ಏನಿದು ಆಫರ್,!

ನಿರ್ಬಂಧ ವಿಸ್ತರಿಸಲು ಕಾರಣಗಳೇನು.?
ಭಾರತದಲ್ಲಿ ಕರೋನಾ (COVID-19) ಸ್ವಲ್ಪ ಮಟ್ಟಿಗೆ ಹತೋಟಿಗೆ ಬಂದಿದೆಯಾದರೂ, ವಿಶ್ವದ ಅನೇಕ ರಾಷ್ಟ್ರಗಳು ಇನ್ನೂ ಅದರ ಕಪಿಮುಷ್ಟಿಯಿಂದ ತಪ್ಪಿಸಿಕೊಂಡಿಲ್ಲ. ಇದರ ನಡುವೆ, ಬ್ರಿಟನ್ ನಲ್ಲಿ  (Britain) ಸೂಪರ್ ಸ್ಪ್ರೆಡರ್ ರೂಪಾಂತರಿತ ಕರೋನಾ ಕಾಣಿಸಿಕೊಂಡಿದೆ. ಬ್ರೆಜಿಲ್ ನಲ್ಲಿ  (Brazil) ಇನ್ನೊಂದು ರೀತಿಯ ಕರೋನಾ ವೈರಸ್ ತಾಂಡವ ಸೃಷ್ಟಿಸುತ್ತಿದೆ. ಈ ನಡುವೆಯೇ, ದಕ್ಷಿಣ ಆಫ್ರಿಕಾದಲ್ಲಿ ಕಾಣಿಸಿಕೊಂಡಿರುವ ಇನ್ನೊಂದು ವರ್ಗದ ಕರೋನಾ ವೈರಸ್ ಖತರ್ನಾಕ್ ಎಂದು ಹೇಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿಯೇ ಭಾರತ ಮುಂಜಾಗ್ರತ ಕ್ರಮದ ಅಂಗವಾಗಿ ವಿದೇಶಿ ವಿಮಾನಗಳ ಹಾರಾಟವನ್ನು ನಿರ್ಬಂಧಿಸಿದೆ.

 ಇದನ್ನೂ ಓದಿ : Corona Vaccination : ಲಸಿಕೆ ಹಾಕಿಸಿಕೊಳ್ಳಲು ನಿಮ್ಮ ನಂಬರ್ ಬಂದಿದೆ, ಉಪಯುಕ್ತ ಮಾಹಿತಿ ಇಲ್ಲಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News