ಇಂದು ನೀಟ್‌ ಪರೀಕ್ಷೆ: ಕೇಂದ್ರಕ್ಕೆ ತೆರಳುವ ಮುನ್ನ ಈ ನಿಯಮ ಪಾಲಿಸಿ

ವೈದ್ಯಕೀಯ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸ್​ಗಳಿಗಾಗಿ ಇಂದು ನೀಟ್ ಪರೀಕ್ಷೆ ನಡೆಯಲಿದೆ. ಎಂಬಿಬಿಎಸ್​​, ಬಿಡಿಎಸ್​​​, ಬಿಎಎಂ​​​ಎಸ್​​, ಬಿಎಸ್​​ಎಂ​​​ಎಸ್​​, ಬಿಯುಎಂ​​ಎಸ್​​, ಬಿಎಚ್​​​ಎಂಎಸ್ ಕೋರ್ಸ್​​​ಗಳಿಗೆ NTA NEET ಪರೀಕ್ಷೆ​​​​ ನಡೆಯುತ್ತಿದೆ. ಇನ್ನು ಪರೀಕ್ಷೆಗೆ ಹಾಜರಾಗುವ ಮುನ್ನ ಈ ಕೆಲ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕಿದೆ. 

Written by - Bhavishya Shetty | Last Updated : Jul 17, 2022, 12:16 PM IST
  • ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ
  • ದೇಶಾದ್ಯಂತ ಒಟ್ಟು 18.72 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಣಿ
  • ಕರ್ನಾಟಕದಲ್ಲಿ 1,19,626 ವಿದ್ಯಾರ್ಥಿ ಪರೀಕ್ಷೆ ಬರೆಯಲಿದ್ದಾರೆ
ಇಂದು ನೀಟ್‌ ಪರೀಕ್ಷೆ: ಕೇಂದ್ರಕ್ಕೆ ತೆರಳುವ ಮುನ್ನ ಈ ನಿಯಮ ಪಾಲಿಸಿ title=
NEET 2022 Exam

ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ ಪದವಿಪೂರ್ವ (NEET- UG 2022) ಪರೀಕ್ಷೆ ಇಂದು ನಡೆಯಲಿದೆ. NTA NEET 2022 ಶೈಕ್ಷಣಿಕ ಕ್ಯಾಲೆಂಡರ್ ಪ್ರಕಾರ, ಪರೀಕ್ಷೆಯು ನಡೆಯಲಿದ್ದು, ದೇಶಾದ್ಯಂತ ಒಟ್ಟು 18.72 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಣಿ ಮಾಡಿಕೊಂಡಿದ್ದಾರೆ. ಇನ್ನು ಕರ್ನಾಟಕದಲ್ಲಿ 1,19,626 ವಿದ್ಯಾರ್ಥಿ ಪರೀಕ್ಷೆ ಬರೆಯಲಿದ್ದಾರೆ ಎಂದು ತಿಳಿದುಬಂದಿದೆ. 

ಇದನ್ನೂ ಓದಿ: Diabetes: ಮಧುಮೇಹ ಕಾಯಿಲೆಗೆ ನಿಮ್ಮ ಅಡುಗೆಮನೆಯ ಈ ಮಸಾಲೆ ರಾಮಬಾಣ

ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆಯು ಮಧ್ಯಾಹ್ನ 2 ರಿಂದ ಸಂಜೆ 5.20 ರವರೆಗೆ ನಡೆಯಲಿದೆ. ದೇಶದಾದ್ಯಂತ ಸುಮಾರು 497 ನಗರಗಳಲ್ಲಿ ಮತ್ತು ಭಾರತದ ಹೊರಗಿನ 14 ನಗರಗಳ ವಿವಿಧ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ. 18 ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳು ನೀಟ್ ಯುಜಿ ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದು, ಅಭ್ಯರ್ಥಿಗಳು NEET 2022 ಪ್ರವೇಶ ಕಾರ್ಡ್ ಅನ್ನ ಅಧಿಕೃತ ವೆಬ್‌ಸೈಟ್‌ neet.nta.nic.in. ನಿಂದ ಡೌನ್‌ಲೋಡ್ ಮಾಡಬಹುದು. 

ವೈದ್ಯಕೀಯ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸ್​ಗಳಿಗಾಗಿ ಇಂದು ನೀಟ್ ಪರೀಕ್ಷೆ ನಡೆಯಲಿದೆ. ಎಂಬಿಬಿಎಸ್​​, ಬಿಡಿಎಸ್​​​, ಬಿಎಎಂ​​​ಎಸ್​​, ಬಿಎಸ್​​ಎಂ​​​ಎಸ್​​, ಬಿಯುಎಂ​​ಎಸ್​​, ಬಿಎಚ್​​​ಎಂಎಸ್ ಕೋರ್ಸ್​​​ಗಳಿಗೆ NTA NEET ಪರೀಕ್ಷೆ​​​​ ನಡೆಯುತ್ತಿದೆ. ಇನ್ನು ಪರೀಕ್ಷೆಗೆ ಹಾಜರಾಗುವ ಮುನ್ನ ಈ ಕೆಲ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕಿದೆ. 

ಇದನ್ನೂ ಓದಿ: Social Mediaದಲ್ಲಿ ʻಹಿಂದೂ ವಿರೋಧಿʼ ಅಭಿಯಾನ.. ಆಘಾತಕಾರಿ ಸಂಗತಿ ಬಯಲು

ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳು ಯಾವುದೇ ಎಲೆಕ್ಟ್ರಾನಿಕ್ ವಸ್ತು ಕೊಂಡೊಯ್ಯವಂತಿಲ್ಲ. ಅಷ್ಟೇ ಅಲ್ಲದೆ, ಆಭರಣ ಧರಿಸಿ ಪರೀಕ್ಷೆ ಬರೆಯುವಂತಿಲ್ಲ. ನೀರಿನ ಬಾಟಲ್, ಉದ್ದ ತೋಳಿನ ವಸ್ತ್ರ ಮತ್ತು ಶೂಗಳನ್ನು ಧರಿಸಿ ಪರೀಕ್ಷಾ ಕೇಂದ್ರಕ್ಕೆ ಪ್ರವೇಶಿಸುವಂತಿಲ್ಲ. ಇದರ ಜೊತೆಗೆ ವಿದ್ಯಾರ್ಥಿಗಳು ಪೆನ್ ಮತ್ತು ಪೆನ್ಸಿಲ್ ತೆಗೆದುಕೊಂಡು ಹೋಗುವಂತಿಲ್ಲ. 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News