Jammu-Kashmir: ಕುಪವಾಡಾದ ಗಡಿ ನಿಯಂತ್ರಣ ರೇಖೆ ಬಳಿ 2 ಉಗ್ರರನ್ನು ಮಟ್ಟಹಾಕಿದ ಭದ್ರತಾ ಪಡೆ, ಮುಂದುವರೆದ ಕಾರ್ಯಾಚರಣೆ

Jammu - Kashmir: ಜಮ್ಮು ಮತ್ತು ಕಾಶ್ಮೀರದ ಕುಪ್ವಾರದ ಎಲ್‌ಒಸಿ ಬಳಿ ಭದ್ರತಾ ಪಡೆ ಯೋಧರು ಇಬ್ಬರು ಭಯೋತ್ಪಾದಕರನ್ನು ಹತ್ಯೆ ಮಾಡಿದ್ದಾರೆ. ಸ್ಥಳದಲ್ಲಿ ಶೋಧ ಕಾರ್ಯ ಮುಂದುವರೆದಿದೆ.  

Written by - Nitin Tabib | Last Updated : Jun 13, 2023, 04:22 PM IST
  • ಇದಕ್ಕೂ ಮೊದಲು, ಬಂಡಿಪೋರಾ ಪೊಲೀಸರು 13 ರಾಷ್ಟ್ರೀಯ ರೈಫಲ್ಸ್ ಮತ್ತು 45 ಬಿಎಂ ಸಿಆರ್‌ಪಿಎಫ್ ಜಂಟಿ ಕಾರ್ಯಾಚರಣೆಯಲ್ಲಿ
  • ಬಹರಾಬಾದ್ ಹಾಜಿನ್ ಪ್ರದೇಶದಿಂದ ಎಲ್‌ಇಟಿ ತೈಬಾದ ಭಯೋತ್ಪಾದಕ ಸಹಚರನನ್ನು ಬಂಧಿಸಿದ್ದರು.
  • ಆತನಿಂದ ಎರಡು ಚೈನೀಸ್ ಹ್ಯಾಂಡ್ ಗ್ರೆನೇಡ್ ವಶಪಡಿಸಿಕೊಳ್ಳಲಾಗಿದೆ. ಶಸ್ತ್ರಾಸ್ತ್ರ ಕಾಯ್ದೆ ಮತ್ತು
  • ಯುಎಪಿಎ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಜಮ್ಮು ಮತ್ತು ಕಾಶ್ಮೀರ ಪೊಲೀಸರು ಮಂಗಳವಾರ ಈ ಮಾಹಿತಿ ನೀಡಿದ್ದಾರೆ.
Jammu-Kashmir: ಕುಪವಾಡಾದ ಗಡಿ ನಿಯಂತ್ರಣ ರೇಖೆ ಬಳಿ 2 ಉಗ್ರರನ್ನು ಮಟ್ಟಹಾಕಿದ ಭದ್ರತಾ ಪಡೆ, ಮುಂದುವರೆದ ಕಾರ್ಯಾಚರಣೆ title=

Terrorists Neutralised: ಜಮ್ಮು ಮತ್ತು ಕಾಶ್ಮೀರದ ಕುಪ್ವಾರದ ಪಕ್ಕದ ಗಡಿ ನಿಯಂತ್ರಣ ರೇಖೆ (ಎಲ್‌ಒಸಿ) ಬಳಿ ಭಾರತೀಯ ಸೇನೆ ಮತ್ತು ಪೊಲೀಸರು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಇಬ್ಬರು ಭಯೋತ್ಪಾದಕರು ಹತರಾಗಿದ್ದಾರೆ. ಕಾಶ್ಮೀರ ವಲಯ ಪೊಲೀಸರು ಟ್ವೀಟ್ ಮೂಲಕ ಈ ಮಾಹಿತಿ ನೀಡಿದ್ದಾರೆ.

ಪೊಲೀಸರ ಪ್ರಕಾರ, ಕುಪ್ವಾರ ಜಿಲ್ಲೆಯ ದೋಬ್ನಾರ್ ಮಚಲ್ ಪ್ರದೇಶದಲ್ಲಿ ನಿಯಂತ್ರಣ ರೇಖೆಯ ಬಳಿ ನಡೆದ ಕಾರ್ಯಾಚರಣೆಯಲ್ಲಿ ಭಯೋತ್ಪಾದಕರು ಹತರಾಗಿದ್ದಾರೆ. ಶೋಧ ಕಾರ್ಯಾಚರಣೆ ಇನ್ನೂ ಮುಂದುವರೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಹತ್ಯೆಯಾದ ಉಗ್ರರ ಗುರುತು ಇನ್ನೂ ಪತ್ತೆಯಾಗಿಲ್ಲ. ಇತ್ತೀಚೆಗಷ್ಟೇ ಉಗ್ರರು ನುಸುಳಿರಬಹುದು ಎಂಬ ಶಂಕೆಯ ಆದಾರಾಧ ಮೇಲೆ ಈ ಕಾರ್ಯಾಚರಣೆ ನಡೆಸಲಾಗಿತ್ತು.

ಲಷ್ಕರ್‌ಗೆ ಸೇರಿದ ಭಯೋತ್ಪಾದಕ ಸಹಚರ ಬಂಧನ
ಇದಕ್ಕೂ ಮೊದಲು, ಬಂಡಿಪೋರಾ ಪೊಲೀಸರು 13 ರಾಷ್ಟ್ರೀಯ ರೈಫಲ್ಸ್ ಮತ್ತು 45 ಬಿಎಂ ಸಿಆರ್‌ಪಿಎಫ್ ಜಂಟಿ ಕಾರ್ಯಾಚರಣೆಯಲ್ಲಿ ಬಹರಾಬಾದ್ ಹಾಜಿನ್ ಪ್ರದೇಶದಿಂದ ಎಲ್‌ಇಟಿ ತೈಬಾದ ಭಯೋತ್ಪಾದಕ ಸಹಚರನನ್ನು ಬಂಧಿಸಿದ್ದರು. ಆತನಿಂದ ಎರಡು ಚೈನೀಸ್ ಹ್ಯಾಂಡ್ ಗ್ರೆನೇಡ್ ವಶಪಡಿಸಿಕೊಳ್ಳಲಾಗಿದೆ. ಶಸ್ತ್ರಾಸ್ತ್ರ ಕಾಯ್ದೆ ಮತ್ತು ಯುಎಪಿಎ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಜಮ್ಮು ಮತ್ತು ಕಾಶ್ಮೀರ ಪೊಲೀಸರು ಮಂಗಳವಾರ ಈ ಮಾಹಿತಿ ನೀಡಿದ್ದಾರೆ.

ಗಡಿಯಾಚೆಗೆ ಇರುವ ಉಗ್ರರು ಸಂಚು ರೂಪಿಸುವಲ್ಲಿ ನಿರತರಾಗಿದ್ದಾರೆ
ಇದಕ್ಕೂ ಮುನ್ನ ಭಾನುವಾರ ಮಾತನಾಡಿರುವ ಶ್ರೀನಗರ ಮೂಲದ 15 ನೇ ಕಾರ್ಪ್ಸ್ ಅಥವಾ ಚಿನಾರ್ ಕಾರ್ಪ್ಸ್‌ನ ಜನರಲ್ ಆಫೀಸರ್ ಕಮಾಂಡಿಂಗ್ (ಜಿಒಸಿ) ಲೆಫ್ಟಿನೆಂಟ್ ಜನರಲ್ ಅಮರ್‌ದೀಪ್ ಸಿಂಗ್ ಔಜ್ಲಾ, ಗಡಿ ನಿಯಂತ್ರಣ ರೇಖೆಯ ಆಚೆ ಕುಳಿತಿರುವ ಉಗ್ರರು  ಸಂಚು ರೂಪಿಸುವಲ್ಲಿ ನಿರತರಾಗಿದ್ದು, ಶಾಂತಿಯನ್ನು ಕದಡುವ ಸಾಧ್ಯತೆ ಇದೆ ಹೀಗಾಗಿ ಭದ್ರತಾಪಡೆಗಳು ಎಚ್ಚರಿಕೆಯಿಂದ ಇರುವ ಅವಶ್ಯಕತೆ ಇದೆ ಎಂದಿದ್ದರು.

"ಮಹಿಳೆಯರು, ಹುಡುಗಿಯರು ಮತ್ತು ಹದಿಹರೆಯದವರನ್ನು ಸಂದೇಶಗಳು, ಡ್ರಗ್ಸ್ ಅಥವಾ ಕೆಲವೊಮ್ಮೆ ಆಯುಧಗಳನ್ನು ಸಾಗಿಸಲು ಬಳಸುವುದು ಇಂದಿನ ಅಪಾಯಕಾರಿ ಸಂಗತಿಯಾಗಿದೆ ಮತ್ತು ನಾವು ಅದನ್ನು ನೋಡಿದ್ದೇವೆ" ಎಂದು ಲೆಫ್ಟಿನೆಂಟ್ ಜನರಲ್ ಔಜ್ಲಾ ಹೇಳಿದ್ದಾರೆ. ಇಲ್ಲಿಯವರೆಗೆ ಸೇನೆಯು ಕೆಲವು ಪ್ರಕರಣಗಳನ್ನು ಪತ್ತೆಹಚ್ಚಿದೆ ಅದು ಇಂತಹ ಉದಯೋನ್ಮುಖ ಪ್ರವೃತ್ತಿಯನ್ನು ಎತ್ತಿ ತೋರಿಸುತ್ತಿವೆ ಎಂದು ಅವರು ಹೇಳಿದ್ದಾರೆ.

"ಇದು ಸ್ವತಃ ಪಾಕಿಸ್ತಾನದ ಇಂಟರ್-ಸರ್ವೀಸಸ್ ಇಂಟೆಲಿಜೆನ್ಸ್ (ಐಎಸ್ಐ) ಮತ್ತು ತಾಂಝಿಮ್ (ಭಯೋತ್ಪಾದಕ ಗುಂಪುಗಳು) ಮುಖ್ಯಸ್ಥರು ಅಳವಡಿಸಿಕೊಂಡ ಅಪಾಯಕಾರಿ ಪ್ರವೃತ್ತಿಯಾಗಿದೆ" ಎಂದು ಅವರು ಹೇಳಿದ್ದಾರೆ. ನಾವು ಅದನ್ನು ಎದುರಿಸಲು ಇತರ ಏಜೆನ್ಸಿಗಳೊಂದಿಗೆ ಕೆಲಸ ಮಾಡುತ್ತಿದ್ದೇವೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಈ ಕಾರಣದಿಂದ ಇದೀಗ ಮಹಿಳೆಯರು, ಹುಡುಗಿಯರು ಮತ್ತು ಹದಿಹರೆಯದವರನ್ನು ಬಳಸಲಾಗುತ್ತಿದೆ
ಇದರರ್ಥ ಭಯೋತ್ಪಾದಕ ಗುಂಪುಗಳು ಮೊಬೈಲ್ ಸಂವಹನಗಳನ್ನು ಬಳಸುವುದನ್ನು ನಿಲ್ಲಿಸಿವೆಯೇ? ಎಂಬ ಪ್ರಶ್ನೆಗೆ ಉತ್ತರಿಸಿದ ಅವರು,  ತಾಂತ್ರಿಕ ಗುಪ್ತಚರ ಮಟ್ಟದಲ್ಲಿ ಸಾಕ್ಷ್ಯವು ಗಮನಾರ್ಹವಾಗಿ ಕಡಿಮೆಯಾಗಿದೆ ಎಂದು ಸೇನಾ ಅಧಿಕಾರಿ ಹೇಳಿದ್ದಾರೆ. ಇದರೊಂದಿಗೆ ಭಯೋತ್ಪಾದಕರ ಸಂದೇಶವಾಹಕರಾಗಿ ಕೆಲಸ ಮಾಡಿದ ಅನೇಕರನ್ನು ಬಂಧಿಸಲಾಗಿದೆ. "ಆದ್ದರಿಂದ, ಇದೀಗ ಮಹಿಳೆಯರು, ಹುಡುಗಿಯರು ಮತ್ತು ಹದಿಹರೆಯದವರನ್ನು ಮುಖ್ಯವಾಗಿ ಸಂದೇಶಗಳನ್ನು ಸಾಗಿಸಲು ಬದಲಿಯಾಗಿ ಸೇರಿಸಲಾಗಿದೆ" ಎಂದು ಸೇನಾ ಅಧಿಕಾರಿ ಹೇಳಿದ್ದಾರೆ.

ಇದನ್ನೂ ಓದಿ-

'ಶತ್ರುಗಳ ಯಾವುದೇ ದುಷ್ಕೃತ್ಯ ತಡೆಯಲು ಸಿದ್ಧ'
ಮೂಲಭೂತವಾದವನ್ನು ತೊಡೆದುಹಾಕುವ ಕಾರ್ಯತಂತ್ರದ ಭಾಗವಾಗಿ, ಕೇಂದ್ರಾಡಳಿತ ಪ್ರದೇಶದ ಆಡಳಿತದ ಸಹಯೋಗದೊಂದಿಗೆ ಸೇನೆಯು ಹಲವಾರು ಉಪಕ್ರಮಗಳನ್ನು ಕೈಗೊಂಡಿದೆ, ಅವುಗಳಲ್ಲಿ 'ಸಹಿ ರಾಸ್ತಾ' ಕಾರ್ಯಕ್ರಮ ಕೂಡ ಒಂದು ಮತ್ತು  ಇತ್ತೀಚಿನ ದಿನಗಳಲ್ಲಿ ಪ್ರಮುಖ ಹೆಜ್ಜೆ ಎಂದು ಸಾಬೀತಾಗುತ್ತಿದೆ. "ನಾವು ಕಾಶ್ಮೀರದಲ್ಲಿ ಶಾಂತಿ ಮತ್ತು ಸ್ಥಿರತೆಯನ್ನು ಖಾತ್ರಿಪಡಿಸುವಲ್ಲಿ ಬಹಳ ದೂರ ಸಾಗಿದ್ದೇವೆ, ಆದರೆ ಕೇಂದ್ರಾಡಳಿತ ಪ್ರದೇಶದಲ್ಲಿ ಶಾಶ್ವತವಾದ ಶಾಂತಿಯನ್ನು ಸಾಧಿಸುವ ಮೊದಲು ಅಲ್ಲಿ ಪ್ರತಿಯೊಂದು ಪ್ರಯೋಜನ ತಲುಪುತ್ತಿದೆ ಎಂಬುದನ್ನು ನಮಗೆ ಖಾತರಿಯಾಗುವವರೆಗೆ ಸದ್ಯಕ್ಕೆ ನಾವು ಸಂಪೂರ್ಣ ಹೌದು ಎಂದು ಹೇಳಲು ಸಾಧ್ಯವಿಲ್ಲ" ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ-

ಪಾಕಿಸ್ತಾನದ ಹೆಸರನ್ನು ಹೇಳದೇ ಉಲ್ಲೇಖಿಸಿರುವ ಲೆಫ್ಟಿನೆಂಟ್ ಜನರಲ್ ಔಜ್ಲಾ ಅವರು, ನೆರೆಯ ದೇಶವು ತನ್ನ ಉದ್ದೇಶಗಳನ್ನು ಬಿಟ್ಟುಕೊಡದಿರುವ ಸವಾಲು ಮತ್ತು ಪೀರ್ ಪಂಜಾಲ್‌ನ ಎರಡೂ ಬದಿಗಳಲ್ಲಿ ಪದೇ ಪದೇ ತೊಂದರೆಗಳನ್ನು ಸೃಷ್ಟಿಸುತ್ತಿದೆ ಎಂದು ಹೇಳಿದ್ದಾರೆ. ಉತ್ತರ ಕಾಶ್ಮೀರದ ಮಚಿಲ್ ಸೆಕ್ಟರ್‌ನಲ್ಲಿ ಇತ್ತೀಚೆಗೆ ನಡೆದ ಒಳನುಸುಳುವಿಕೆ ಯತ್ನವು ಅವರ ಪಾಲ್ಗೊಳ್ಳುವಿಕೆಗೆ ಸಾಕ್ಷಿಯಾಗಿದೆ. ಕೇಂದ್ರಾಡಳಿತ ಪ್ರದೇಶ ಆಡಳಿತದ ಏಜೆನ್ಸಿಗಳು ಸೇರಿದಂತೆ ಎಲ್ಲಾ ಭದ್ರತಾ ಏಜೆನ್ಸಿಗಳು ಶತ್ರುಗಳ ಯಾವುದೇ ದುಷ್ಕೃತ್ಯವನ್ನು ತಡೆಯಲು ಸಂಪೂರ್ಣವಾಗಿ ಸಿದ್ಧವಾಗಿವೆ ಎಂದು ಅವರು ಒತ್ತಿ ಹೇಳಿದ್ದಾರೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News