ಜನರ ಹಕ್ಕುಗಳನ್ನು ಕಿತ್ತುಕೊಳ್ಳಲು ಅವಕಾಶ ನೀಡುವುದಿಲ್ಲ-ಮಮತಾ ಬ್ಯಾನರ್ಜಿ

ತಾನು ಜನರ ಹಕ್ಕುಗಳ ರಕ್ಷಕಿ ಎಂದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಜನರ ಹಿತಾಸಕ್ತಿಗೆ ಹಾನಿ ಮಾಡಲು ಬಿಡುವುದಿಲ್ಲ ಎಂದು ಮಂಗಳವಾರ ಹೇಳಿದ್ದಾರೆ.

Last Updated : Jan 7, 2020, 06:06 PM IST
ಜನರ ಹಕ್ಕುಗಳನ್ನು ಕಿತ್ತುಕೊಳ್ಳಲು ಅವಕಾಶ ನೀಡುವುದಿಲ್ಲ-ಮಮತಾ ಬ್ಯಾನರ್ಜಿ  title=
Photo courtesy: Facebook

ನವದೆಹಲಿ: ತಾನು ಜನರ ಹಕ್ಕುಗಳ ರಕ್ಷಕಿ ಎಂದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಜನರ ಹಿತಾಸಕ್ತಿಗೆ ಹಾನಿ ಮಾಡಲು ಬಿಡುವುದಿಲ್ಲ ಎಂದು ಮಂಗಳವಾರ ಹೇಳಿದ್ದಾರೆ.

ರಾಷ್ಟ್ರೀಯ ನಾಗರಿಕರ ನೋಂದಣಿ (ಎನ್‌ಆರ್‌ಸಿ) ಮತ್ತು ರಾಷ್ಟ್ರೀಯ ಜನಸಂಖ್ಯಾ ನೋಂದಣಿ (ಎನ್‌ಪಿಆರ್) ವಿರುದ್ಧದ ಆಂದೋಲನವು ಅಗತ್ಯವಿರುವವರೆಗೂ ಮುಂದುವರಿಯುತ್ತದೆ ಎಂದು ಪ್ರತಿಪಾದಿಸಿದ ಬ್ಯಾನರ್ಜಿ, ರಾಜ್ಯದ ಜನರನ್ನು ರಕ್ಷಿಸಲು ತನ್ನ ಅಧಿಕಾರದಲ್ಲಿ ಎಲ್ಲ ಪ್ರಯತ್ನವನ್ನೂ ಮಾಡುತ್ತೇನೆ ಎಂದು ಹೇಳಿದರು.

"ನಾವು ಯಾರ ಕರುಣೆಯಿಂದ ಬದುಕುವುದಿಲ್ಲ...ನಮ್ಮ ಹಕ್ಕುಗಳನ್ನು ಕಸಿದುಕೊಳ್ಳಲು ನಾನು ಯಾರಿಗೂ ಅವಕಾಶ ನೀಡುವುದಿಲ್ಲ" ಎಂದು ಸಿಎಂ ಸಾರ್ವಜನಿಕ ಸಭೆಯಲ್ಲಿ ಹೇಳಿದರು.

"ನಾನು ನಿಮ್ಮ 'ಪೆಹ್ರಾದರ್' (ಪಾಲಕಿ), ಯಾರಾದರೂ ನಿಮ್ಮ ಹಕ್ಕುಗಳನ್ನು ಕಸಿದುಕೊಳ್ಳಲು ಬಂದರೆ, ಅವನು ಅದನ್ನು ನನ್ನ ಮೃತ ದೇಹದ ಮೇಲೆ ಮಾಡಬೇಕಾಗುತ್ತದೆ" ಎಂದು ಸಿಎಆರ್ಎ, ಎನ್‌ಆರ್‌ಸಿಯ ಅತ್ಯಂತ ತೀವ್ರವಾಗಿ ವಿರೋಧಿಸುವರಲ್ಲಿ ಒಬ್ಬರಾಗಿರುವ ಬ್ಯಾನರ್ಜಿ ಹೇಳಿದರು. 
 

Trending News