ಗೋವಾದಲ್ಲಿ ಧಾರವಾಡ ದಂಪತಿಗಳ ಶಿಶು ಮಾರಾಟ ಯತ್ನವನ್ನು ವಿಫಲಗೊಳಿಸಿದ ಆರ್‌ಪಿಎಫ್

ಏಳು ತಿಂಗಳ ಗಂಡು ಮಗುವನ್ನು ಮಾರಾಟ ಮಾಡಲು ಮುಂದಾಗಿದ್ದ ಧಾರವಾಡ ಮೂಲದ ದಂಪತಿಗಳ ಪ್ರಯತ್ನವನ್ನು ರೈಲ್ವೇ ರಕ್ಷಣಾ ಪಡೆ (ಆರ್‌ಪಿಎಫ್) ವಿಫಲಗೊಳಿಸಿದೆ

Written by - Yashaswini V | Last Updated : Jan 25, 2023, 01:46 PM IST
  • ಮಾರ್ಗೋವ್ ರೈಲು ನಿಲ್ದಾಣದಲ್ಲಿ ಮಗು ಮಾರಾಟ ದಂಧೆ
  • ಮಗು ಮಾರಾಟಕ್ಕೆ ಮುಂದಾಗಿದ್ದ ಧಾರವಾಡ ಮೂಲದ ದಂಪತಿ
  • ಮೂವರು ಮಹಿಳಾ ಮಧ್ಯವರ್ತಿಗಳ ಸಹಾಯದಿಂದ ಮಗು ಮಾರಾಟಕ್ಕೆ ಮುಂದಾಗಿದ್ದ ದಂಪತಿ
ಗೋವಾದಲ್ಲಿ ಧಾರವಾಡ ದಂಪತಿಗಳ ಶಿಶು ಮಾರಾಟ ಯತ್ನವನ್ನು ವಿಫಲಗೊಳಿಸಿದ ಆರ್‌ಪಿಎಫ್ title=
Baby Sell

ಪಣಜಿ: ತಮ್ಮ ಏಳು ತಿಂಗಳ ಮಗುವನ್ನು ಗೋವಾದ ಮಾರ್ಗೋ ರೈಲು ನಿಲ್ದಾಣದಲ್ಲಿ ಮಾರಾಟ ಮಾಡಲು ಮುಂದಾಗಿದ್ದ ಧಾರವಾಡದ ದಂಪತಿಗಳ ಪ್ರಯತ್ನವನ್ನು ರೈಲ್ವೇ ರಕ್ಷಣಾ ಪಡೆ (ಆರ್‌ಪಿಎಫ್) ವಿಫಲಗೊಳಿಸಿದ್ದಾರೆ. 

ಧಾರವಾಡದ ದಂಪತಿಗಳು ಮೂವರು ಮಹಿಳಾ ಮಧ್ಯವರ್ತಿಗಳ ಸಹಾಯದಿಂದ ತಾವು ಹೆತ್ತ ಗಂಡು ಮಗುವನ್ನು ಪಣಜಿ ಮೂಲದ ದಂಪತಿಗಳಿಗೆ ಮಾರಾಟ ಮಾಡಲು ಯತ್ನಿಸಿದ್ದರು. ಮಗುವನ್ನು ಮೂರು ಲಕ್ಷ ರೂಪಾಯಿಗೆ ಮಾರಾಟ ಮಾಡಲು ಮಾತುಕತೆ ಕೂಡ ನಡೆದಿತ್ತು. ಆದರೆ, ಕೊನೆ ಕ್ಷಣದಲ್ಲಿ ಪರಸ್ಪರ ವಾಗ್ವಾದ ನಡೆಸುವಾಗ ರೈಲ್ವೇ ರಕ್ಷಣಾ ಪಡೆ (ಆರ್‌ಪಿಎಫ್)ಯ ಕೈಗೆ ಸಿಕ್ಕಿ ಬಿದ್ದು ಈಗ ಪೊಲೀಸರ ಅತಿಥಿಯಾಗಿದ್ದಾರೆ.

ಇದನ್ನೂ ಓದಿ- Funny Video: ಮಂಗಗಳ ಕೈಗೆ ಸ್ಮಾರ್ಟ್‌ಫೋನ್‌ ಸಿಕ್ರೆ ಹೀಗಿರುತ್ತೆ ನೋಡಿ..

ಈ ಕುರಿತಂತೆ ಸುದ್ದಿಸಂಸ್ಥೆ ಐಎಎನ್‌ಎಸ್‌ಗೆ ಮಾಹಿತಿ ನೀಡಿರುವ ಆರ್‌ಪಿಎಫ್ ಇನ್ಸ್‌ಪೆಕ್ಟರ್ ವಿನೋದ್ ಮಿಶ್ರಾ, ಮಾರ್ಗೋವ್ ರೈಲು ನಿಲ್ದಾಣದಲ್ಲಿ ಮಗು ಖರೀದಿಸಲು ಬಂದಿದ್ದ ಪಣಜಿ ಮೂಲದ ದಂಪತಿ ಮತ್ತು ಮಗು ಮಾರಾಟಕ್ಕೆ ಮುಂದಾಗಿದ್ದ ಧಾರವಾಡ ಮೂಲದ ದಂಪತಿಗಳ ನಡುವೆ ವಾಗ್ವಾದ ನಡೆಯುವುದನ್ನು ನಮ್ಮ ಸಿಬ್ಬಂದಿ ಗಮನಿಸಿದರು. ಬಳಿಕ ಅವರನ್ನು ಕಚೇರಿಗೆ ಕರೆದೊಯ್ದು ಈ ಕುರಿತಂತೆ ವಿಚಾರಿಸಿದಾಗ ಮಗು ಮಾರಾಟ ದಂಧೆ ಬೆಳಕಿಗೆ ಬಂದಿದೆ. ಮಾಹಿತಿ ತಿಳಿಯುತ್ತಿದ್ದಂತೆ ಮಗು ಮಾರಾಟಕ್ಕೆ ಪ್ರೇರಣೆ ನೀಡಿದ್ದ ಮೂವರು ಏಜೆಂಟರನ್ನು ಮತ್ತು ಮಗುವಿನ ತಂದೆಯನ್ನು ಬಂಧಿಸಿ ಅವರ ವಿರುದ್ಧ ಅಪರಾಧ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ. 

ಇದನ್ನೂ ಓದಿ- Viral Video : ಮೆಟ್ರೋದಲ್ಲಿ ಪ್ರತ್ಯಕ್ಷವಾದ ಮಂಜುಲಿಕಾ ಭೂತ! ಬೆಚ್ಚಿಬಿದ್ದ ಪ್ರಯಾಣಿಕರು ಮಾಡಿದ್ದೇನು?

ಇನ್ನು ಮಗು ಮಾರಾಟಕ್ಕೆ ಯತ್ನಿಸಿದ್ದ ಧಾರವಾಡದ ದಂಪತಿ ಕೂಲಿ ಕೆಲಸ ಮಾಡುತ್ತಿದ್ದು ಮಗುವನ್ನು ಸಾಕಲಾಗದೆ ಮಾರಾಟಕ್ಕೆ ಮುಂದಾಗಿದ್ದರು. ಇದೇ ವೇಳೆ ತಮಗೆ ಮಕ್ಕಳೆಂದರೆ ಪ್ರೀತಿ, ಹಾಗಾಗಿ ಗಂಡು ಮಗುವನ್ನು ಖರೀದಿಸುವ ಆಸಕ್ತಿ ಹೊಂದಿರುವುದಾಗಿ ಖರೀದಿದಾರರು ತಿಳಿಸಿರುವುದಾಗಿ ಎಂದು ಪ್ರಾಥಮಿಕ ವಿಚಾರಣೆಯಲ್ಲಿ ತಿಳಿದುಬಂದಿದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News