Karti Chidambaram Case : ಕಾರ್ತಿ ಚಿದಂಬರಂ ಪರ ವಾದ ಮಂಡಿಸಿದ ಕಪಿಲ್ ಸಿಬಲ್, ಜಾಮೀನು ವಿರೋಧಿಸಿದ ED 

ಕಾರ್ತಿ ಅವರ ತಂದೆ ಪಿ ಚಿದಂಬರಂ ಅವರು ದೇಶದ ಗೃಹ ಸಚಿವರಾಗಿದ್ದಾಗ 2011 ರಲ್ಲಿ 263 ಚೈನೀಸ್ ಪ್ರಜೆಗಳಿಗೆ ವೀಸಾ ನೀಡಿಕೆಗೆ ಸಂಬಂಧಿಸಿದ ಹಗರಣದಲ್ಲಿ ಕಾರ್ತಿ ಮತ್ತು ಉಳಿದವರ ವಿರುದ್ಧ ಮನಿ ಲಾಂಡರಿಂಗ್ ಆರೋಪವನ್ನು ಇಡಿ ದಾಖಲಿಸಿದೆ.

Written by - Channabasava A Kashinakunti | Last Updated : Jun 8, 2022, 08:47 PM IST
  • ಮನಿ ಲಾಂಡರಿಂಗ್ ಪ್ರಕರಣದಲ್ಲಿ ಕಾರ್ತಿ ಚಿದಂಬರಂ
  • ಕಾರ್ತಿ ಪರ ವಾದ ಮಂಡಿಸಿದ ವಕೀಲ ಕಪಿಲ್ ಸಿಬಲ್!
  • ಜಾಮೀನು ಅರ್ಜಿ ವಿರೋಧಿಸಿದ ಇಡಿ
Karti Chidambaram Case : ಕಾರ್ತಿ ಚಿದಂಬರಂ ಪರ ವಾದ ಮಂಡಿಸಿದ ಕಪಿಲ್ ಸಿಬಲ್, ಜಾಮೀನು ವಿರೋಧಿಸಿದ ED  title=

Karti Chidambaram Case : ವೀಸಾ ಲಂಚ ಪ್ರಕರಣದಲ್ಲಿ ಕಾರ್ತಿ ಚಿದಂಬರಂ ನಿರೀಕ್ಷಣಾ ಜಾಮೀನು ಅರ್ಜಿಯ ಆದೇಶವನ್ನು ನ್ಯಾಯಾಲಯ ಕಾಯ್ದಿರಿಸಿದೆ. ಇದಕ್ಕೂ ಮುನ್ನ ಕಾರ್ತಿ ಚಿದಂಬರಂ ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ರೋಸ್ ಅವೆನ್ಯೂ ಕೋರ್ಟ್ ತಿರಸ್ಕರಿಸಿತ್ತು. ಕಾರ್ತಿ ಚಿದಂಬರಂ ಕೆಳ ನ್ಯಾಯಾಲಯದ ತೀರ್ಪನ್ನು ದೆಹಲಿ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದಾರೆ.

ಮನಿ ಲಾಂಡರಿಂಗ್ ಪ್ರಕರಣದಲ್ಲಿ ಕಾರ್ತಿ ಚಿದಂಬರಂ

ಕಾರ್ತಿ ಅವರ ತಂದೆ ಪಿ ಚಿದಂಬರಂ ಅವರು ದೇಶದ ಗೃಹ ಸಚಿವರಾಗಿದ್ದಾಗ 2011 ರಲ್ಲಿ 263 ಚೈನೀಸ್ ಪ್ರಜೆಗಳಿಗೆ ವೀಸಾ ನೀಡಿಕೆಗೆ ಸಂಬಂಧಿಸಿದ ಹಗರಣದಲ್ಲಿ ಕಾರ್ತಿ ಮತ್ತು ಉಳಿದವರ ವಿರುದ್ಧ ಮನಿ ಲಾಂಡರಿಂಗ್ ಆರೋಪವನ್ನು ಇಡಿ ದಾಖಲಿಸಿದೆ.

ಇದನ್ನೂ ಓದಿ : ಮುಂಬೈನಲ್ಲಿ ಅಲ್ ಖೈದಾ ಉಗ್ರರ ದಾಳಿ ಭೀತಿ : ಮಹಾರಾಷ್ಟ್ರದಲ್ಲಿ ಹೈ ಅಲರ್ಟ್!

ಕಾರ್ತಿ ಪರ ವಾದ ಮಂಡಿಸಿದ ವಕೀಲ ಕಪಿಲ್ ಸಿಬಲ್!

ಕಾರ್ತಿ ಚಿದಂಬರಂ ಪರವಾಗಿ ಕಪಿಲ್ ಸಿಬಲ್ ವಾದ ಮಂಡಿಸಿದ್ದರು. ಈ ಕುರಿತು ಮಾತನಾಡಿದ ಕಪಿಲ್ ಸಿಬಲ್, ಅಂತಹ ಯಾವುದೇ ಪುರಾವೆಗಳಿಲ್ಲ, ಅದರ ಮೂಲಕ ಲಂಚಕ್ಕೆ ಬದಲಾಗಿ ವೀಸಾಗಳನ್ನು ನೀಡಲಾಗಿದೆ ಎಂದು ಸಾಬೀತುಪಡಿಸಬಹುದು. ಕಾರ್ತಿ ಅಥವಾ ಭಾಸ್ಕರನ್‌ಗೆ ಹಣ ತಲುಪಿದೆ ಎಂಬುದನ್ನು ಇಡಿ ಸಾಬೀತುಪಡಿಸಲು ಸಾಧ್ಯವಾಗಿಲ್ಲ. ಈ ಪ್ರಕರಣದಲ್ಲಿ ದಾಖಲಾಗಿರುವ ಎಫ್‌ಐಆರ್‌ನಲ್ಲಿ ಆಗಿನ ಗೃಹ ಸಚಿವರ ಹೆಸರಿದೆಯೇ ಹೊರತು ಗೃಹ ಕಾರ್ಯದರ್ಶಿಯ ಹೆಸರಿಲ್ಲ. ವೀಸಾ ನೀಡಿದವರು, ಪ್ರಸ್ತುತ ಸಂಪುಟದಲ್ಲಿ ಸಚಿವರಾಗಿದ್ದಾರೆ. ಕಾರ್ತಿ ಅವರಿಗೆ ಜಾಮೀನು ನೀಡಿದರೆ ತನಿಖೆಗೆ ಸಹಕರಿಸುವುದಿಲ್ಲ ಎಂಬ ವಿಚಾರಣಾ ನ್ಯಾಯಾಲಯದ ನ್ಯಾಯಾಧೀಶರ ತೀರ್ಮಾನ ತಪ್ಪು. ಕಾರ್ತಿ ತನಿಖೆಯಿಂದ ಓಡಿಹೋಗುವುದಿಲ್ಲ. ತನಿಖೆಗೆ ಸಹಕರಿಸಲು ಸದಾ ಸಿದ್ಧ ಎಂದು ಹೇಳಿದರು.

ಜಾಮೀನು ಅರ್ಜಿ ವಿರೋಧಿಸಿದ ಇಡಿ 

ಇಡಿ ಪರ ಹಾಜರಾದ ಎಎಸ್‌ಜಿ ಎಸ್‌ವಿ ರಾಜು ಅವರು ಕಾರ್ತಿ ಚಿದಂಬರಂ ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ವಿರೋಧಿಸಿದರು. ಕಾರ್ತಿ ಅವರ ಅರ್ಜಿಯನ್ನು ಮುಂಚಿತವಾಗಿ ಸಲ್ಲಿಸಲಾಗಿದೆ ಎಂದು ಅವರು ಹೇಳಿದರು. ಅವರು ವ್ಯಕ್ತಪಡಿಸಿರುವ ಬಂಧನದ ಆತಂಕ ಅಸಮಂಜಸವಾಗಿದೆ. ಅವರ ವಕೀಲರು ತನಿಖೆ ಮುಗಿದಂತೆ ಮಾತನಾಡುತ್ತಿದ್ದಾರೆ, ಆದರೆ ತನಿಖೆ ಇನ್ನೂ ಪ್ರಾರಂಭವಾಗಿಲ್ಲ. ಈ ಪ್ರಕರಣದಲ್ಲಿ ಇಡಿ ಈಗಷ್ಟೇ ಇಸಿಐಆರ್ ದಾಖಲಿಸಿದೆ. ಇಡಿ ಅವರಿಗೆ ಸಮನ್ಸ್ ಕೂಡ ಜಾರಿ ಮಾಡಿಲ್ಲ. ಆದಾಗ್ಯೂ, ಈ ಹಂತವು ತನಿಖೆಯ ದೃಷ್ಟಿಕೋನದಿಂದ ಮುಖ್ಯವಾಗಿದೆ. ಈಗ ಜಾಮೀನು ನೀಡುವುದು ಸರಿಯಲ್ಲ ಎಂದು ಹೇಳಿದರು.

ಇದನ್ನೂ ಓದಿ : 'ಉತ್ತರ ಪ್ರದೇಶದ ಶಾಲೆಗಳಲ್ಲಿ ಮರಾಠಿಯನ್ನು ಐಚ್ಛಿಕ ಭಾಷೆಯಾಗಿ ಪರಿಚಯಿಸಿ'

 ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News