Balasore Train Mishap: ಓಡಿಷಾ ರೈಲು ದುರಂತ ಪ್ರಕರಣದಲ್ಲಿ ಎಫ್ಐಆರ್ ದಾಖಲಿಸಿದ ಸಿಬಿಐ

Balasore Train Accident: ಬಾಲಸೋರ್ ರೈಲು ಅಪಘಾತದ ಕುರಿತು ಸಿಬಿಐ ತನಿಖೆಗೆ ರೈಲ್ವೆ ಮಂಡಳಿ ಭಾನುವಾರ ಶಿಫಾರಸು ಮಾಡಿದೆ. ರೈಲು ಅಪಘಾತ ನಡೆದ ಸ್ಥಳದಲ್ಲಿನ ಹಳಿಗಳು ಮತ್ತು ಸಿಗ್ನಲ್ ರೂಮ್ ಅನ್ನು ಸಿಬಿಐ ಪರಿಶೀಲಿಸಿದೆ.  

Written by - Nitin Tabib | Last Updated : Jun 6, 2023, 07:21 PM IST
  • ಸಿಬಿಐ ತಂಡ ಮಂಗಳವಾರ ಸಿಗ್ನಲ್ ಕೊಠಡಿ ಮತ್ತು ರೈಲ್ವೆ ಹಳಿಗಳನ್ನು ಪರಿಶೀಲಿಸಿದೆ.
  • ಬಹನಾಗಾ ಬಜಾರ್ ರೈಲು ನಿಲ್ದಾಣದಲ್ಲಿ ನಿಯೋಜಿಸಲಾದ ರೈಲ್ವೆ ಅಧಿಕಾರಿಗಳನ್ನು ಸಹ ಪ್ರಶ್ನಿಸಿದೆ.
  • ಸಿಬಿಐ ಅಧಿಕಾರಿಗಳ ಜತೆಗೆ ವಿಧಿವಿಜ್ಞಾನ ತಂಡವೂ ಸ್ಥಳಕ್ಕೆ ಆಗಮಿಸಿದೆ.
  • ಫೋರೆನ್ಸಿಕ್ ತಂಡವು ಸಿಗ್ನಲ್ ರೂಟ್ ನೌಕರರ ವಿಚಾರಣೆ ನಡೆಸಿದೆ ಮತ್ತು ಉಪಕರಣಗಳ ಬಳಕೆ ಮತ್ತು ಅವರ ಕಾರ್ಯ ವಿಧಾನಗಳನ್ನು ಸಹ ತಿಳಿದುಕೊಂಡಿದೆ.
Balasore Train Mishap: ಓಡಿಷಾ ರೈಲು ದುರಂತ ಪ್ರಕರಣದಲ್ಲಿ ಎಫ್ಐಆರ್ ದಾಖಲಿಸಿದ ಸಿಬಿಐ title=

Coromandel Train Accicent: ಒಡಿಶಾದ ಬಾಲಸೋರ್ ಜಿಲ್ಲೆಯಲ್ಲಿ ಸಂಭವಿಸಿದ ರೈಲು ಅಪಘಾತದ ತನಿಖೆಯ ಹೊಣೆಯನ್ನು ಸಿಬಿಐ ವಹಿಸಿಕೊಂಡಿದೆ. ಮಂಗಳವಾರ ಸಿಬಿಐ ಈ ಪ್ರಕರಣವನ್ನು ದಾಖಲಿಸಿದೆ. ತಂಡವು ಬಾಲಸೋರ್ ತಲುಪಿದ್ದು, ತಂಡ ಘಟನಾ ಸ್ಥಳಕ್ಕೆ ಭೇಟಿ ನೀಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ರೈಲು ಅಪಘಾತದಲ್ಲಿ ಇಲ್ಲಿಯವರೆಗೆ 278 ಜನರು ಸಾವನ್ನಪ್ಪಿದ್ದಾರೆ ಮತ್ತು 1000 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.

ರೈಲ್ವೆ ಸಚಿವಾಲಯದ ಮನವಿಯ ಮೇರೆಗೆ, ಒಡಿಶಾ ಸರ್ಕಾರದ ಒಪ್ಪಿಗೆ ಮತ್ತು ಕೇಂದ್ರ ಸರ್ಕಾರದ ಆದೇಶದ ಮೇರೆಗೆ ಕೋರಮಂಡಲ್ ಎಕ್ಸ್‌ಪ್ರೆಸ್, ಯಶವಂತಪುರ-ಹೌರಾ ಎಕ್ಸ್‌ಪ್ರೆಸ್ ಮತ್ತು ಗೂಡ್ಸ್ ರೈಲು ಒಳಗೊಂಡ ರೈಲು ಅಪಘಾತಕ್ಕೆ ಸಂಬಂಧಿಸಿದಂತೆ ಸಿಬಿಐ ಪ್ರಕರಣ ದಾಖಲಿಸಿದೆ ಎಂದು ಅಧಿಕಾರಿ ತಿಳಿಸಿದ್ದಾರೆ. ಈ ಘಟನೆ ಜೂನ್ 2 ರಂದು ಒಡಿಶಾದ ಬಹನಾಗಾ ಬಜಾರ್ ನಿಲ್ದಾಣದ ಬಳಿ ನಡೆದಿದೆ.

ಬಾಲಸೋರ್ ರೈಲು ಅಪಘಾತ ಪ್ರಕರಣದಲ್ಲಿ ಸಿಬಿಐ ತನಿಖೆ ಆರಂಭವಾಗಿದೆ
ಸಿಬಿಐ ತಂಡ ಮಂಗಳವಾರ ಸಿಗ್ನಲ್ ಕೊಠಡಿ ಮತ್ತು ರೈಲ್ವೆ ಹಳಿಗಳನ್ನು ಪರಿಶೀಲಿಸಿದೆ. ಬಹನಾಗಾ ಬಜಾರ್ ರೈಲು ನಿಲ್ದಾಣದಲ್ಲಿ ನಿಯೋಜಿಸಲಾದ ರೈಲ್ವೆ ಅಧಿಕಾರಿಗಳನ್ನು ಸಹ ಪ್ರಶ್ನಿಸಿದೆ. ಸಿಬಿಐ ಅಧಿಕಾರಿಗಳ ಜತೆಗೆ ವಿಧಿವಿಜ್ಞಾನ ತಂಡವೂ ಸ್ಥಳಕ್ಕೆ ಆಗಮಿಸಿದೆ. ಫೋರೆನ್ಸಿಕ್ ತಂಡವು ಸಿಗ್ನಲ್ ರೂಟ್ ನೌಕರರ ವಿಚಾರಣೆ ನಡೆಸಿದೆ ಮತ್ತು ಉಪಕರಣಗಳ ಬಳಕೆ ಮತ್ತು ಅವರ ಕಾರ್ಯ ವಿಧಾನಗಳನ್ನು ಸಹ ತಿಳಿದುಕೊಂಡಿದೆ.

ಇದನ್ನೂ ಓದಿ-Kerala HC: 'ಮಹಿಳೆಯ ಶರೀರದ ಮೇಲ್ಭಾಗ ತೆರೆದುಕೊಂಡಿರುವುದು ಸೆಕ್ಸ್ಷುವಾಲಿಟಿ ಅಲ್ಲ, ನ್ಯೂಡಿಟಿ-ಅಶ್ಲೀಲತೆಯಲ್ಲಿದೆ ಅಂತರ'

ರೈಲ್ವೆ ಸಚಿವೆ ಅಶ್ವಿನಿ ವೈಷ್ಣವ್ ಹೇಳಿದ್ದೇನು?
ಅಪಘಾತದ ಹಿಂದೆ ವಿಧ್ವಂಸಕ ಅಥವಾ ಬಾಹ್ಯ ಹಸ್ತಕ್ಷೇಪದ ಸಾಧ್ಯತೆಯನ್ನು ರೈಲ್ವೇಸ್ ವ್ಯಕ್ತಪಡಿಸಿರುವ ಹಿನ್ನೆಲೆ ಸಿಬಿಐ ಈ ಅಪಘಾತವನ್ನು ಕ್ರಿಮಿನಲ್ ಕೋನದಿಂದ ತನಿಖೆ ನಡೆಸಲಿದೆ. ಈ ಅಪಘಾತದ ನಂತರ, ಜೂನ್ 3 ರಂದು, ಒಡಿಶಾ ಪೊಲೀಸರು ಬಾಲಸೋರ್ ಸರ್ಕಾರಿ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿದ್ದಾರೆ. ಎಲೆಕ್ಟ್ರಾನಿಕ್ ಇಂಟರ್‌ಲಾಕಿಂಗ್ ಬದಲಾವಣೆಯಿಂದ ಈ ಅವಘಡ ಸಂಭವಿಸಿದೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದರು.

ಇದನ್ನೂ ಓದಿ-Manish Sisodia: ಅಬಕಾರಿ ನೀತಿ ಪ್ರಕರಣದಲ್ಲಿ ಮನಿಷ್ ಸಿಸೋಡಿಯಾಗೆ ಜಾಮೀನು ನಿರಾಕರಿಸಿದ ದೆಹಲಿ ಹೈಕೋರ್ಟ್

ಬಹನಗಾ ಬಜಾರ್ ನಿಲ್ದಾಣದ ಬಳಿ ಅಪಘಾತ ಸಂಭವಿಸಿದೆ
ಗಮನಾರ್ಹವೆಂದರೆ, ಜೂನ್ 2 ರಂದು ಸಂಜೆ ಏಳು ಗಂಟೆ ಸುಮಾರಿಗೆ ಒಡಿಶಾದ ಬಾಲಸೋರ್ ಜಿಲ್ಲೆಯ ಬಹನಗಾ ಬಜಾರ್ ರೈಲು ನಿಲ್ದಾಣದಲ್ಲಿ ಈ ಭೀಕರ ಅಪಘಾತ ಸಂಭವಿಸಿದೆ. ಆಗ ಚೆನ್ನೈಗೆ ಹೋಗುತ್ತಿದ್ದ ಕೋರಮಂಡಲ್ ಎಕ್ಸ್ ಪ್ರೆಸ್ ನ ಬೋಗಿಗಳು ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆದು ಹಳಿ ತಪ್ಪಿವೆ. ಆ ವೇಬೆಂಗಳೂರು-ಹೌರಾ ಎಕ್ಸ್‌ಪ್ರೆಸ್ ಕೂಡ ಅಲ್ಲಿಂದ ಹಾದು ಹೋಗುತ್ತಿತ್ತು. ಕೋರಮಂಡಲ್ ಎಕ್ಸ್‌ಪ್ರೆಸ್‌ನ ಕೆಲವು ಬೋಗಿಗಳು ಬೆಂಗಳೂರು-ಹೌರಾಗೆ ಡಿಕ್ಕಿ ಹೊಡೆದಿವೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News