ಅತಿಯಾಗಿ ಬೆಳ್ಳುಳ್ಳಿ ಸೇವನೆ ಕೂಡಾ ಅಪಾಯಕಾರಿ, ಆರೋಗ್ಯಕ್ಕಾಗಿ ಇಷ್ಟು ಮಾತ್ರ ತಿನ್ನಬೇಕು

ಆಯುರ್ವೇದ ತಜ್ಞ ಡಾ.ಅಬ್ರಾರ್ ಮುಲ್ತಾನಿಯವರ ಪ್ರಕಾರ, ಬೆಳ್ಳುಳ್ಳಿಯ ಅತಿಯಾದ ಸೇವನೆಯು ಈ ಕೆಳಗಿನ ಅಪಾಯಕಾರಿ ಅಡ್ಡ ಪರಿಣಾಮಗಳನ್ನು ತೋರಿಸಬಹುದು.

Written by - Ranjitha R K | Last Updated : Aug 27, 2021, 07:59 PM IST
  • ಬೆಳ್ಳುಳ್ಳಿಯಲ್ಲಿ ಹಲವು ಔಷಧೀಯ ಗುಣಗಳಿವೆ.
  • ಅತಿಯಾದ ಬಳಕೆಯಿಂದ ಆರೋಗ್ಯದ ಬದಲು ನಷ್ಟವೇ ಸಂಭವಿಸಬಹುದು
  • ಹೆಚ್ಚು ಬೆಳ್ಳುಳ್ಳಿ ತಿನ್ನುವುದರಿಂದ ಉಂಟಾಗುವ ಅಡ್ಡಪರಿಣಾಮಗಳು ಯಾವುವು ನೋಡೋಣ
ಅತಿಯಾಗಿ ಬೆಳ್ಳುಳ್ಳಿ ಸೇವನೆ ಕೂಡಾ ಅಪಾಯಕಾರಿ, ಆರೋಗ್ಯಕ್ಕಾಗಿ ಇಷ್ಟು ಮಾತ್ರ ತಿನ್ನಬೇಕು  title=
Side effects of garlic (file photo)

ನವದೆಹಲಿ : ಬೆಳ್ಳುಳ್ಳಿಯಲ್ಲಿ ಹಲವು ಔಷಧೀಯ ಗುಣಗಳಿವೆ. ಇದು ದೇಹವನ್ನು ಆರೋಗ್ಯಕರವಾಗಿಸುತ್ತದೆ. ಆದರೆ ಬೆಳ್ಳುಳ್ಳಿಯ ಅತಿಯಾದ ಬಳಕೆಯಿಂದ ಆರೋಗ್ಯದ ಬದಲು ನಷ್ಟವೇ ಸಂಭವಿಸಬಹುದು. ಬೆಳ್ಳುಳ್ಳಿಯ ಪ್ರಯೋಜನಗಳನ್ನು ಪಡೆಯಲು  ಅತಿಯಾಗಿ ಬಳಸಲು ಪ್ರಾರಂಭಿಸುವ ಜನರು, ಅನೇಕ ದೈಹಿಕ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು (Side effects of Garlic). ಅತಿಯಾಗಿ ಬೆಳ್ಳುಳ್ಳಿ ತಿನ್ನುವುದರಿಂದಾಗುವ ದುಷ್ಪರಿಣಾಮಗಳು ಯಾವುವು ನೋಡೋಣ. 

ಬೆಳ್ಳುಳ್ಳಿಯ ಅನಾನುಕೂಲಗಳು :
ಆಯುರ್ವೇದ ತಜ್ಞ ಡಾ.ಅಬ್ರಾರ್ ಮುಲ್ತಾನಿಯವರ ಪ್ರಕಾರ, ಬೆಳ್ಳುಳ್ಳಿಯ ಅತಿಯಾದ ಸೇವನೆಯು ಈ ಕೆಳಗಿನ ಅಪಾಯಕಾರಿ ಅಡ್ಡ ಪರಿಣಾಮಗಳನ್ನು ತೋರಿಸಬಹುದು (Side effects of garlic). ಹೆಚ್ಚು ಬೆಳ್ಳುಳ್ಳಿ ತಿನ್ನುವುದರಿಂದ ಉಂಟಾಗುವ ಅಡ್ಡಪರಿಣಾಮಗಳೆಂದರೆ .. 

ಇದನ್ನೂ ಓದಿ :Turmeric Cleanser For Skin: ಮುಖದ ಮೇಲಿನ ಕಲೆ, ಡೆಡ್ ಸ್ಕಿನ್ ನಿವಾರಣೆಗೆ ಬಳಸಿ ಅರಿಶಿನದ ಕ್ಲೆನ್ಸರ್

1.ಬೆಳ್ಳುಳ್ಳಿ ರಕ್ತ ತೆಳುವಾಗಿಸುವ ಗುಣಗಳನ್ನು ಹೊಂದಿದೆ. ನೀವು ಬೆಳ್ಳುಳ್ಳಿಯನ್ನು (garlic) ಅತಿಯಾಗಿ ಸೇವಿಸಿದರೆ, ನಿಮಗೆ ರಕ್ತಸ್ರಾವದ ಸಮಸ್ಯೆ ಉಂಟಾಗಬಹುದು. ಶಸ್ತ್ರಚಿಕಿತ್ಸೆ, ಗಾಯ ಇದ್ದರೆ ಈ ಸಮಸ್ಯೆ ಹೆಚ್ಚು ಅಪಾಯಕಾರಿಯಾಗಬಹುದು.
2.ಬೆಳ್ಳುಳ್ಳಿಯಲ್ಲಿರುವ allicin  ಲಿವರ್ ನಲ್ಲಿ ಟಾಕ್ಸಿನ್ ಮಟ್ಟವನ್ನು ಹೆಚ್ಚಿಸಬಹುದು. ಇದು ಯಕೃತ್ತಿನ ಹಾನಿಗೆ ಕಾರಣವಾಗಬಹುದು.
3. ಬೆಳ್ಳುಳ್ಳಿಯಲ್ಲಿರುವ ಸಲ್ಫರ್ ನಿಂದಾಗಿ ಬಾಯಿಯ ದುರ್ವಾಸನೆ ಕೂಡ ಉಂಟಾಗುತ್ತದೆ.
4. ಬೆಳ್ಳುಳ್ಳಿಯ ಅತಿಯಾದ ಬಳಕೆಯು ವಾಯು, ಗ್ಯಾಸ್ ಮತ್ತು ಹೊಟ್ಟೆ ನೋವನ್ನು ಉಂಟುಮಾಡಬಹುದು.
5. ಅದೇ ಸಮಯದಲ್ಲಿ, ಬೆಳ್ಳುಳ್ಳಿಯ ಅತಿಯಾದ ಸೇವನೆಯು ವಾಕರಿಕೆ (Vomiting), ಎದೆಯುರಿ, ವಾಕರಿಕೆ ಇತ್ಯಾದಿಗಳಿಗೆ ಕಾರಣವಾಗಬಹುದು.
6. ತಜ್ಞರ ಪ್ರಕಾರ, ಗರ್ಭಿಣಿ ಮತ್ತು ಹಾಲುಣಿಸುವ ಮಹಿಳೆಯರು ಹೆಚ್ಚು ಬೆಳ್ಳುಳ್ಳಿ ತಿನ್ನುವುದನ್ನು ತಪ್ಪಿಸಬೇಕು.

ಒಂದು ದಿನದಲ್ಲಿ ಎಷ್ಟು ಬೆಳ್ಳುಳ್ಳಿ ತಿನ್ನಬೇಕು?
ಇಷ್ಟೇ ಪ್ರಮಾಣದಲ್ಲಿ ಬೆಳ್ಳುಳ್ಳಿಯನ್ನು ಸೇವಿಸಬೇಕು ಎನ್ನುವುದಕ್ಕೆ ಯಾವುದೇ ರೀತಿಯ ಆಧಾರಗಳಿಲ್ಲ.  ಆದರೆ ಆಯುರ್ವೇದ ತಜ್ಞರ ಪ್ರಕಾರ  ಒಂದು ದಿನದಲ್ಲಿ 3 ರಿಂದ 6 ಗ್ರಾಂ ಬೆಳ್ಳುಳ್ಳಿಯನ್ನು ಸೇವಿಸುವುದರಿಂದ ಒಬ್ಬ ವ್ಯಕ್ತಿಗೆ ಪ್ರಯೋಜನಕಾರಿಯಾಗಬಹುದು. ಆದರೆ ಕಡಿಮೆ ಪ್ರಮಾಣದಲ್ಲಿ ಬೆಳ್ಳುಳ್ಳಿ ತಿಂದರೂ ಸಮಸ್ಯೆಗಳಾದರೆ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಒಳಿತು.

ಇದನ್ನೂ ಓದಿ :Sea Salt benefits : ಉಪ್ಪು ಊಟದ ರುಚಿ ಹೆಚ್ಚಿಸುವುದು ಮಾತ್ರವಲ್ಲ ಈ ಸಮಸ್ಯೆಗಳನ್ನೂ ನಿವಾರಿಸುತ್ತದೆ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News