ರಂಜಾನ್ ಸಮಯದಲ್ಲಿ ಮಧುಮೇಹವನ್ನು ನಿರ್ವಹಿಸಲು ತ್ವರಿತ ಮಾರ್ಗದರ್ಶಿ ಇಲ್ಲಿದೆ..

ಉಪವಾಸದ ಸಮಯದಲ್ಲಿ ಮಧುಮೇಹ (Diabetes) ನಿರ್ವಹಣೆಯು ಬಿಗಿಯಾಗಿ ನಡೆಯುವುದು, ಉಪವಾಸದ ಸ್ವರೂಪ ಮತ್ತು ಈ ಅವಧಿಯಲ್ಲಿ ಅನುಮತಿಸಲಾದ ಆಹಾರ ಪದಾರ್ಥಗಳನ್ನು ನೀಡಲಾಗಿದೆ.

Written by - Zee Kannada News Desk | Last Updated : Apr 6, 2022, 12:28 PM IST
  • ಪವಿತ್ರ ರಂಜಾನ್ ತಿಂಗಳು ನಡೆಯುತ್ತಿದೆ
  • ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ಏನನ್ನೂ ತಿನ್ನುವುದಿಲ್ಲ ಅಥವಾ ಕುಡಿಯುವುದಿಲ್ಲ
  • ರಂಜಾನ್ ಸಮಯದಲ್ಲಿ ಮಧುಮೇಹವನ್ನು ನಿರ್ವಹಿಸಲು ತ್ವರಿತ ಮಾರ್ಗದರ್ಶಿ
ರಂಜಾನ್ ಸಮಯದಲ್ಲಿ ಮಧುಮೇಹವನ್ನು ನಿರ್ವಹಿಸಲು ತ್ವರಿತ ಮಾರ್ಗದರ್ಶಿ ಇಲ್ಲಿದೆ.. title=
ಪವಿತ್ರ ರಂಜಾನ್

ಪವಿತ್ರ ರಂಜಾನ್ (Ramdan) ತಿಂಗಳು ನಡೆಯುತ್ತಿರುವುದರಿಂದ, ಭಕ್ತರು ಇಡೀ ದಿನ ಉಪವಾಸ ಮಾಡುತ್ತಾರೆ. ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ಏನನ್ನೂ ತಿನ್ನುವುದಿಲ್ಲ ಅಥವಾ ಕುಡಿಯುವುದಿಲ್ಲ. ಇಫ್ತಾರ್ (Iftar) ಆಚರಣೆಯ ಭಾಗವಾಗಿ ಉಪವಾಸವನ್ನು ಆಚರಿಸುವವರು ಸೂರ್ಯಾಸ್ತದ ನಂತರ ಉಪವಾಸವನ್ನು ಮುರಿಯಬಹುದು. ದೀರ್ಘ ಮತ್ತು ಬಿಸಿಲಿನ ನಿರಂತರ 30 ದಿನಗಳ ಕಾಲ ಆಹಾರ ಅಥವಾ ನೀರನ್ನೂ ಸಹ ಸೇವಿಸದೆ ಉಪವಾಸ ಮಾಡುವುದು ನಿಜಕ್ಕೂ ಸವಾಲಿನ ಸಂಗತಿಯಾಗಿದೆ. ಆದ್ದರಿಂದ ಮಧುಮೇಹ ಹೊಂದಿರುವ ಜನರು ತಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಹೆಚ್ಚಿನ ಕಾಳಜಿಯನ್ನು ತೆಗೆದುಕೊಳ್ಳಬೇಕು ಮತ್ತು ಸರಿಯಾದ ಆಹಾರ ಕ್ರಮವನ್ನು ಅನುಸರಿಸಬೇಕು.

ಇದನ್ನೂ ಓದಿ: Milk Side Effects: ಈ ಆರೋಗ್ಯ ಸಮಸ್ಯೆ ಇರುವವರು ಅಪ್ಪಿತಪ್ಪಿಯೂ ಹಾಲು ಕುಡಿಯಬೇಡಿ

ಉಪವಾಸದ ಸಮಯದಲ್ಲಿ ಮಧುಮೇಹ (Diabetes) ನಿರ್ವಹಣೆಯು ಬಿಗಿಯಾಗಿ ನಡೆಯುವುದು, ಉಪವಾಸದ ಸ್ವರೂಪ ಮತ್ತು ಈ ಅವಧಿಯಲ್ಲಿ ಅನುಮತಿಸಲಾದ ಆಹಾರ ಪದಾರ್ಥಗಳನ್ನು ನೀಡಲಾಗಿದೆ.

ಜೋತಿದೇವ್ಸ್ ಮಧುಮೇಹ ಸಂಶೋಧನಾ ಕೇಂದ್ರದ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಡಾ. ಜೋತಿದೇವ್ ಕೇಶವದೇವ್ ಹೇಳುತ್ತಾರೆ, "ಮಧುಮೇಹವು ನಿಯಮಿತವಾಗಿ ಮೇಲ್ವಿಚಾರಣೆ ಮಾಡಬೇಕಾದ ಮತ್ತು ನಿಮ್ಮ ರಕ್ತದಲ್ಲಿನ ಗ್ಲೂಕೋಸ್ ಮಟ್ಟಗಳು ಸಾಮಾನ್ಯ ಶ್ರೇಣಿಯಲ್ಲಿವೆ ಮತ್ತು ಏರಿಳಿತಗಳನ್ನು ಸಾಧ್ಯವಾದಷ್ಟು ಕಡಿಮೆ ಮಾಡಬೇಕಾದ ಅಗತ್ಯವಿರುವ ಒಂದು ಸ್ಥಿತಿಯಾಗಿದೆ. ರಂಜಾನ್ ಸಮಯದಲ್ಲಿ, ಮಧುಮೇಹ ರೋಗಿಗಳು 10-12 ಗಂಟೆಗಳಿಗಿಂತ ಹೆಚ್ಚು ಕಾಲ ಉಪವಾಸ ಮಾಡುವುದರಿಂದ ಅವರನ್ನು ನಿರಂತರವಾಗಿ ಪರಿಶೀಲನೆ ಮಾಡಬೇಕಾಗುತ್ತದೆ."

ಇಂದು, ಮಧುಮೇಹ ಹೊಂದಿರುವ ಜನರು ತಮ್ಮ 24-ಗಂಟೆಗಳ ಗ್ಲೂಕೋಸ್ ಪ್ರೊಫೈಲ್ ಅನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುವ ನಿರಂತರ ಗ್ಲೂಕೋಸ್ ಮಾನಿಟರಿಂಗ್ ಸಾಧನಗಳಿವೆ. ವ್ಯಕ್ತಿಯು ನಿರಂತರ ಗ್ಲೂಕೋಸ್ ಮಾನಿಟರಿಂಗ್ ಸಿಸ್ಟಮ್‍ಗಳನ್ನು ಬಳಸಬಹುದು ಅದು ನಿಮಗೆ ಹಲವಾರು ಬಾರಿ ಚುಚ್ಚುವ ನೋವನ್ನು ತಪ್ಪಿಸಲು ಸಹಾಯ ಮಾಡುತ್ತದೆ ಮತ್ತು ಅತ್ಯಂತ ತ್ವರಿತ ಮತ್ತು ನಿಖರವಾಗಿರುತ್ತದೆ. ನೈಜ-ಸಮಯದ ಗ್ಲೂಕೋಸ್ ರೀಡಿಂಗ್‍ಗಳನ್ನು ನೀಡುವ ಫ್ರೀಸ್ಟೈಲ್ ಲಿಬ್ರೆಯಂತಹ ಅನುಕೂಲಕರ ಧರಿಸಬಹುದಾದ ಸಾಧನಗಳಿವೆ, ಹೀಗಾಗಿ ಇಫ್ತಾರ್ ಸಮಯದಲ್ಲಿ ಮತ್ತು ಸೆಹ್ರಿ ಸಮಯದಲ್ಲಿ ಸಕ್ಕರೆಮಟ್ಟದ ಪ್ರವೃತ್ತಿಯನ್ನು ತೋರಿಸುತ್ತವೆ.

ಉಪವಾಸದ ಅವಧಿಯಲ್ಲಿ ಸಮತೋಲಿತ ಆಹಾರ ಮತ್ತು ಆರೋಗ್ಯಕರ ಜೀವನಶೈಲಿಯನ್ನು ಅನುಸರಿಸುವುದು ಅಷ್ಟೇ ಮುಖ್ಯ. ಅದಕ್ಕಾಗಿ ಕೆಲವು ಸಲಹೆಗಳು ಇಲ್ಲಿವೆ:

ಇಫ್ತಾರ್ ಮತ್ತು ಸೆಹ್ರಿ ಸಮಯದಲ್ಲಿನ ಆಹಾರದ ಸೇರ್ಪಡೆಗಳು- ಇಫ್ತಾರ್ ಊಟವನ್ನು ದೇಹವು ತ್ವರಿತವಾಗಿ ಹೀರಲಾಗುವ ಸರಳವಾದ ಕಾರ್ಬೋಹೈಡ್ರೇಟ್‍ಗಳನ್ನು ಸಮೃದ್ಧವಾಗಿ ಹೊಂದಿದ 1-2 ಖರ್ಜೂರಗಳು (Dates) ಅಥವಾ ಹಾಲಿನಂತಹ (Milk) ಆಹಾರದೊಂದಿಗೆ ಪ್ರಾರಂಭಿಸಿ, ನಂತರ ಬ್ರೌನ್ ರೈಸ್ ಮತ್ತು ಚಪಾತಿಗಳಂತಹ ಸಂಕೀರ್ಣ ಕಾರ್ಬೋಹೈಡ್ರೇಟ್‍ಗಳನ್ನು ಸೇವಿಸಿ. ಸೆಹ್ರಿ ಸಮಯದಲ್ಲಿ, ಏಕದಳ ಧಾನ್ಯಗಳು, ತರಕಾರಿಗಳನ್ನು ಸೇವಿಸಬಹುದು ಮತ್ತು ಅವುಗಳನ್ನು ಸಾಧ್ಯವಾದಷ್ಟು ತಡವಾಗಿ ತೆಗೆದುಕೊಳ್ಳಿ. ಪರ್ಯಾಯವಾಗಿ, ಮೀನು, ಟೋಫು ಮತ್ತು ಬೀಜಗಳಂತಹ ನೇರ ಪ್ರೋಟೀನ್‍ಗಳನ್ನು ಆರಿಸಿಕೊಳ್ಳಬಹುದು ಏಕೆಂದರೆ ಅವು ಶಕ್ತಿಯನ್ನು ಒದಗಿಸುತ್ತವೆ. ಕಡೆಯದಾಗಿ, ಮಲಗುವ ಮೊದಲು ಸೇವಿಸುವ ಒಂದು ಲೋಟ ಹಾಲು ಅಥವಾ ಹಣ್ಣು, ಬೆಳಿಗ್ಗೆ ತನಕ ಸಕ್ಕರೆ ಮಟ್ಟವನ್ನು ಕಾಪಾಡುತ್ತವೆ.

ವ್ಯಾಯಾಮ ದಿನಚರಿ: ನಿಮ್ಮ ವ್ಯಾಯಾಮದ (Exercise) ದಿನಚರಿಯನ್ನು ಮುಂದುವರಿಸುವ ಗುರಿಯನ್ನು ಇಟ್ಟುಕೊಳ್ಳಿ ಆದರೆ ಉಪವಾಸದ ಸಮಯದಲ್ಲಿ ವ್ಯಾಯಾಮದ ಕಠೋರತೆಯನ್ನು ಕಡಿಮೆ ಮಾಡಿ. ತರಬೇತಿಯು ತುಂಬಾ ಕಷ್ಟಕರವಾಗಿದ್ದರೆ, ನೀವು ನಡಿಗೆ ಅಥವಾ ಯೋಗದಂತಹ ಶಾಂತ ವ್ಯಾಯಾಮಗಳ ಮೇಲೆ ಗಮನವನ್ನು ಹರಿಸಬಹುದು. ರಂಜಾನ್ ಸಮಯದಲ್ಲಿ ಕ್ಯಾಲೋರಿಗಳ ಕೊರತೆಯಿಂದಾಗುವ ಸ್ನಾಯುಗಳ ನಷ್ಟವನ್ನು ತಡೆಯಲು ಪ್ರತಿರೋಧ ತರಬೇತಿ ಸಹಾಯಕರ.

ಇದನ್ನೂ ಓದಿ: ಮೊಟ್ಟೆಗಳನ್ನು ತಿನ್ನುವುದರಿಂದ ಹೆಚ್ಚಾಗಲಿದೆಯೇ ಡಯಾಬಿಟೀಸ್ ? ಬಯಲಾಗಿದೆ ಆಘಾತಕಾರಿ ಸತ್ಯ

ನಿದ್ರೆಯ ಸ್ವರೂಪಗಳು: ಸಾಕಷ್ಟು ನಿದ್ದೆ (Sleep) ಮಾಡುವುದು ಬಹಳ ಮುಖ್ಯ. ನಿದ್ರಾಹೀನತೆಯು ಹಸಿವಿನ ಹಾರ್ಮೋನುಗಳ ಮೇಲೆ ಪರಿಣಾಮ ಬೀರಬಹುದು, ಇದರಿಂದ ಸಮಯ-ನಿರ್ಬಂಧಿತ ಆಹಾರ ಸೇವನೆಯಲ್ಲಿ ಹೆಚ್ಚಿನ ಪ್ರಮಾಣದ ಕ್ಯಾಲೋರಿ ಆಹಾರಗಳನ್ನು ವಿರೋಧಿಸಲು ಕಷ್ಟವಾಗುತ್ತದೆ. ಚಯಾಪಚಯ ಪ್ರಕ್ರಿಯೆಗೆ ಕೂಡ ನಿದ್ರೆ ಮುಖ್ಯವಾಗಿದೆ, ಇದು ಮಧುಮೇಹ ನಿರ್ವಹಣೆಗೆ ಅಗತ್ಯವಾದ ರಕ್ತದಲ್ಲಿನ ಗ್ಲೂಕೋಸ್ ನಿಯಂತ್ರಣವನ್ನು ಸುಗಮಗೊಳಿಸುತ್ತದೆ ಎಂದು ಕಂಡುಬಂದಿದೆ.

ರಂಜಾನ್ ಸಮಯದಲ್ಲಿ ಉಪವಾಸ (Fasting) ಮಾಡುವುದು ಮಧುಮೇಹ ರೋಗಿಗಳಿಗೆ ಅವರ ವೈಯಕ್ತಿಕ ಆಯ್ಕೆಯಾಗಿದ್ದರೂ, ವ್ಯಕ್ತಿಯು ಉಪವಾಸ ಮಾಡುವುದಿದ್ದರೆ, ಸುರಕ್ಷಿತ ಮತ್ತು ಯಶಸ್ವಿ ಹಬ್ಬವನ್ನು ಆನಂದಿಸಲು ಯೋಜನೆಯನ್ನು ರೂಪಿಸಿಕೊಳ್ಳುವುದು ಮತ್ತು ನಿಮ್ಮನ್ನು ನೀವು ಮುಂಚಿತವಾಗಿ ಸಜ್ಜಾಗಿಸಿಕೊಳ್ಳುವುದು ಮುಖ್ಯವಾಗಿದೆ. ಮತ್ತು ನಿಮ್ಮ ರಕ್ತದಲ್ಲಿನ ಸಕ್ಕರೆ ಕಡಿಮೆಯಾದರೆ, ಸೂಕ್ತ ಚಿಕಿತ್ಸೆಗಾಗಿ ನಿಮ್ಮ ವೈದ್ಯರನ್ನು ಸಂಪರ್ಕಿಸುವುದು ಒಳ್ಳೆಯದು.

ಲೇಖಕರು: ಜ್ಯೋತಿದೇವ್ ಕೇಶವದೇವ್, ಜೋತಿದೇವ್ ಡಯಾಬಿಟಿಸ್ ರಿಸರ್ಚ್ ಸೆಂಟರ್, ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News