Garlic Benefits: ಈ ಸಮಸ್ಯೆಗಳಿಗೆ ಸುಲಭ ಪರಿಹಾರ ಬೆಳ್ಳುಳ್ಳಿ

ಹೊಟ್ಟೆಯ ಸಮಸ್ಯೆಯಿಂದ ಬಳಲುತ್ತಿದ್ದರೆ, ಬೆಳಿಗ್ಗೆ ಎದ್ದು ಎರಡರಿಂದ ಮೂರು ಹಸಿ ಬೆಳ್ಳುಳ್ಳಿಯನ್ನು ತಿನ್ನಿರಿ.  ಇದು ಹೊಟ್ಟೆಯನ್ನು ಸ್ವಚ್ಛವಾಗಿಡುತ್ತದೆ ಮತ್ತು ಗ್ಯಾಸ್ ಸಮಸ್ಯೆಯನ್ನು ಕೂಡಾ ದೂರ ಮಾಡುತ್ತದೆ.    

Written by - Ranjitha R K | Last Updated : Jul 11, 2022, 01:07 PM IST
  • ಬೆಳ್ಳುಳ್ಳಿಯನ್ನು ಸಾಮಾನ್ಯವಾಗಿ ಎಲ್ಲಾ ಆಹಾರದಲ್ಲಿಯೂ ಬಳಸಲಾಗುತ್ತದೆ.
  • ಆರೋಗ್ಯ ಕಾರಣಗಳಿಂದಲೂ ಬೆಳ್ಳುಳ್ಳಿ ಸಹಕಾರಿಯಾಗಿರುತ್ತದೆ.
  • ಹಲ್ಲುನೋವಿನಲ್ಲಿ ಪರಿಹಾರ ನೀಡುತ್ತದೆ ಬೆಳ್ಳುಳ್ಳಿ
Garlic Benefits: ಈ ಸಮಸ್ಯೆಗಳಿಗೆ ಸುಲಭ ಪರಿಹಾರ ಬೆಳ್ಳುಳ್ಳಿ title=
Garlic Benefits (file photo)

Garlic Benefits: ಬೆಳ್ಳುಳ್ಳಿಯನ್ನು  ಸಾಮಾನ್ಯವಾಗಿ ಎಲ್ಲಾ ಆಹಾರದಲ್ಲಿಯೂ ಬಳಸಲಾಗುತ್ತದೆ. ಆಹಾರದ ರುಚಿ ಹೆಚಿಸುವ ಸಲುವಾಗಿ ಅಡುಗೆಯಲ್ಲಿ ಬೆಳ್ಳುಳ್ಳಿ ಬಳಕೆ ಇರುತ್ತದೆ. ಬೆಳ್ಳುಳ್ಳಿ ಬಳಸಿದ ಅಡುಗೆಯ ಘಮ ಕೂಡಾ ಬಹಳ ಸೊಗಸಾಗಿರುತ್ತದೆ. ಬೆಳ್ಳುಳ್ಳಿಯ ಅಡುಗೆಯ ರುಚಿ ಮತ್ತು ಘಮ ಮಾತ್ರವಲ್ಲದೆ ಇನ್ನು ಆರೋಗ್ಯ ಕಾರಣಗಳಿಂದಲೂ ಸಹಕಾರಿಯಾಗಿರುತ್ತದೆ. ಅನೇಕ ಪ್ರಮುಖ ಕಾಯಿಲೆಗಳನ್ನು ದೂರ ಮಾಡಲು ಇದು ಪ್ರಯೋಜನಕಾರಿಯಾಗಿದೆ. 

ಹೊಟ್ಟೆ ಶುದ್ಧವಾಗುತ್ತದೆ :
ಹೊಟ್ಟೆಯ ಸಮಸ್ಯೆಯಿಂದ ಬಳಲುತ್ತಿದ್ದರೆ, ಬೆಳಿಗ್ಗೆ ಎದ್ದು ಎರಡರಿಂದ ಮೂರು ಹಸಿ ಬೆಳ್ಳುಳ್ಳಿಯನ್ನು ತಿನ್ನಿರಿ.  ಇದು ಹೊಟ್ಟೆಯನ್ನು ಸ್ವಚ್ಛವಾಗಿಡುತ್ತದೆ ಮತ್ತು ಗ್ಯಾಸ್ ಸಮಸ್ಯೆಯನ್ನು ಕೂಡಾ ದೂರ ಮಾಡುತ್ತದೆ. 

ಇದನ್ನೂ ಓದಿ : ನುಗ್ಗೆ ಸೊಪ್ಪಿನ ಸೇವನೆಯಿಂದ ಬಗೆಹರಿಯುತ್ತದೆ ಈ ಎಲ್ಲಾ ಸಮಸ್ಯೆಗಳು

ಹಲ್ಲುನೋವಿನಲ್ಲಿ ಪರಿಹಾರ ನೀಡುತ್ತದೆ ಬೆಳ್ಳುಳ್ಳಿ  :
ಹಲ್ಲು ನೋಯುತ್ತಿದ್ದರೆ, ಮೂರರಿಂದ ನಾಲ್ಕು ಎಸಳು ಬೆಳ್ಳುಳ್ಳಿ ಮತ್ತು ಸ್ವಲ್ಪ ಅರಿಶಿನವನ್ನು ತೆಗೆದುಕೊಳ್ಳಿ. ಇದಕ್ಕೆ ಒಂದು ಚಮಚ ನಿಂಬೆ ರಸವನ್ನು ಹಾಕಿ. ನಂತರ ಮೂರನ್ನೂ ಸೇರಿಸಿ ಪೇಸ್ಟ್ ಮಾಡಿ ಹಲ್ಲಿನ ಕೆಳಗೆ ಇಡಿ. ಹೀಗೆ ಮಾಡುವುದರಿಂದ ಹಲ್ಲು ನೋವಿಗೆ ಪರಿಹಾರ ಸಿಗುತ್ತದೆ. 

ಕೊಲೆಸ್ಟ್ರಾಲ್ ನಿಯಂತ್ರಣದಲ್ಲಿರುತ್ತದೆ : 
ವ್ಯಕ್ತಿಯು ಹೃದ್ರೋಗದಿಂದ ಬಳಲುತ್ತಿದ್ದರೆ, ಬೆಳಿಗ್ಗೆ ಎದ್ದ ನಂತರ, ಖಾಲಿ ಹೊಟ್ಟೆಯಲ್ಲಿ ಬೆಳ್ಳುಳ್ಳಿಯನ್ನು ತಿನ್ನಬೇಕು. ಇದು ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸುತ್ತದೆ ಮತ್ತು ಹೃದಯಾಘಾತದ ಅಪಾಯವನ್ನು ಕೂಡಾ ಕಡಿಮೆಯಾಗುತ್ತದೆ. ಇದಲ್ಲದೆ ಬೆಳ್ಳುಳ್ಳಿಯು  ದೊಡ್ಡ ಸಮಸ್ಯೆಗಳನ್ನು ಪರಿಹಾರ ಮಾಡುತ್ತದೆ.  

ಇದನ್ನೂ ಓದಿ : IVF ಜೋಡಿಯ ಪ್ರಯಾಣ: ಬದುಕಿನ ಪವಾಡ ಸೃಷ್ಟಿಸಲು ವಿಜ್ಞಾನಕ್ಕೆ ಮಾನವೀಯ ಸ್ಪರ್ಶ

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News