Moringa : ಹಿತ್ತಲಲ್ಲೇ ಸಿಗುವ ನುಗ್ಗೇಕಾಯಿಯಲ್ಲಿದೆ ಇಷ್ಟೊಂದು ಅದ್ಭುತ ಗುಣಗಳು..!

ಸಂಶೋಧನೆಯ ಪ್ರಕಾರ, ನುಗ್ಗೆಕಾಯಿ ಎಣ್ಣೆ  ಅನೇಕ ರೋಗಗಳ ವಿರುದ್ಧ ಹೋರಾಡುತ್ತದೆ ಎನ್ನುವುದು ಸಾಬೀತಾಗಿದೆ.  

Written by - Zee Kannada News Desk | Last Updated : Jan 5, 2021, 09:59 PM IST
  • ಅನೇಕ ರೋಗಗಳಿಗೆ ರಾಮಬಾಣವಾಗಿ ಪರಿಣಮಿಸಿದೆ ನುಗ್ಗೆಕಾಯಿಎಣ್ಣೆ
  • ನುಗ್ಗೆಕಾಯಿ ಎಣ್ಣೆಯಲ್ಲಿ ವಿಟಮಿನ್ ಸಿ ಹೇರಳ ಪ್ರಮಾಣದಲ್ಲಿರುತ್ತದೆ
  • ಉತ್ತಮ ಆರೋಗ್ಯ ಮತ್ತು ಸೌಂದರ್ಯಕ್ಕಾಗಿ ನುಗ್ಗೆಕಾಯಿ ಎಣ್ಣೆಯನ್ನು ಬಳಸಿ
Moringa : ಹಿತ್ತಲಲ್ಲೇ ಸಿಗುವ ನುಗ್ಗೇಕಾಯಿಯಲ್ಲಿದೆ ಇಷ್ಟೊಂದು ಅದ್ಭುತ ಗುಣಗಳು..! title=
ಅನೇಕ ರೋಗಗಳಿಗೆ ರಾಮಬಾಣವಾಗಿ ಪರಿಣಮಿಸಿದೆ ನುಗ್ಗೆಕಾಯಿ ಎಣ್ಣೆ

ನವದೆಹಲಿ: ನುಗ್ಗೆಕಾಯಿಯಲ್ಲಿ (Drumstick) ಹೆಚ್ಚಿನ ಪ್ರಮಾಣದಲ್ಲಿ ಔಷಧೀಯ ಗುಣವಿರುತ್ತದೆ. ನುಗ್ಗೆಕಾಯಿ ಆರೋಗ್ಯ ಮತ್ತು ಸೌಂದರ್ಯ ಕಾಪಾಡಿಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ನುಗ್ಗೆಕಾಯಿ ಭಾರತ (India) ಮಾತ್ರವಲ್ಲ ವಿದೇಶಗಳಲ್ಲೂ ಲಭ್ಯವಿರುತ್ತದೆ. ನುಗ್ಗೆಕಾಯಿಯ ಸೊಪ್ಪು ಮತ್ತು ಹೂವಿನ ಪಲ್ಯವನ್ನು ಕೂಡಾ ಮಾಡಲಾಗುತ್ತದೆ. ಇದು ಕೂಡಾ ಆರೋಗ್ಯಕ್ಕೆ (Health) ಬಹಳಷ್ಟು ಒಳ್ಳೆಯದು. ಇನ್ನು ನುಗ್ಗೆಕಾಯಿ  ಎಣ್ಣೆಯೂ ಕೂಡಾ (Moringa Oil Health Benefits) ಅನೇಕ ಉತ್ತಮಗುಣಗಳನ್ನ ಹೊಂದಿದೆ.  ಇಲ್ಲಿವರೆಗೆ ನಡೆಸಿದ ಸಂಶೋಧನೆಯ ಪ್ರಕಾರ, ನುಗ್ಗೆಕಾಯಿ ಎಣ್ಣೆ  (Moringa Oil) ಅನೇಕ ರೋಗಗಳ ವಿರುದ್ಧ ಹೋರಾಡುತ್ತದೆ ಎನ್ನುವುದು ಸಾಬೀತಾಗಿದೆ.

ಮುಖದ ಸೌಂದರ್ಯವೃದ್ಧಿಸುತ್ತದೆ :
ನುಗ್ಗೆಕಾಯಿ ಸೊಪ್ಪಿನಲ್ಲಿ ಆ್ಯಂಟಿ ಓಕ್ಸಿಡೆಂಟ್, ಆ್ಯಂಟಿ ಫಂಗಲ್ ಮತ್ತುಆ್ಯಂಟಿ ಬ್ಯಾಕ್ಟೀರಿಯಲ್ ಗುಣಗಳಿರುತ್ತವೆ. ಇದು ತ್ವಚೆಯನ್ನು ಹೊರಗಿನ ಧೂಳು,ಪ್ರದೂಷಣೆಗಳಿಂದ ರಕ್ಷಿಸುತ್ತದೆ. ಸನ್ ಬರ್ನ್ (Sun Burn) ನಿಂದಲೂ ಇದು ತ್ವಚೆಯನ್ನು ಕಾಪಾಡುತ್ತದೆ. ನುಗ್ಗೆಕಾಯಿ ಎಣ್ಣೆಯಿಂದ (Moringa Oil) ಮುಖ ಮತ್ತು ಕುತ್ತಿಗೆ ಭಾಗಕ್ಕೆ ಮಸಾಜ್ (Massage) ಮಾಡುತ್ತಾ ಬಂದರೆ ಯಾವ ಕ್ರೀಂ ಲೋಷನ್ ನ ಅಗತ್ಯವಿರುವುದಿಲ್ಲ.  ಇದರಲ್ಲಿ ವಿಟಮಿನ್ ಎ, ಕಬ್ಬಿಣಾಂಶದ ಅಂಶ ಹೇರಳವಾಗಿರುತ್ತದೆ. ಇದು ಮುಖದ ಕಲೆಗಳನ್ನು ಹೋಗಲಾಡಿಸಲು ಸಹಾಯ ಮಾಡುತ್ತದೆ. 

ಇದನ್ನೂ ಓದಿ : AIDS ಕಾಯಿಲೆಯ Patient Zero ಯಾರು ನಿಮಗೆ ಗೊತ್ತಾ? ನೀವೂ ನಂಬಲ್ಲ

ರಕ್ತದೊತ್ತಡ ನಿಯಂತ್ರಣದಲ್ಲಿಡುತ್ತದೆ :
ನುಗ್ಗೆಕಾಯಿ ಬೀಜದ ಎಣ್ಣೆಯ ಸೇವನೆಯಿಂದ ರಕ್ತದೊತ್ತಡ (Blood Pressure)  ನಿಯಂತ್ರಣದಲ್ಲಿರುತ್ತದೆ. ನುಗ್ಗೆಕಾಯಿ ಸೊಪ್ಪು ಸೇವಿಸುವದರಿಂದಲೂ ರಕ್ದೊತ್ತಡ ನಿಯಂತ್ರಣದಲ್ಲಿರುತ್ತದೆ. ಸಂಶೋಧನೆಗಾಗಿ 30 ದಿನಗಳವರೆಗೆ ದಿನಕ್ಕೆರಡು ಬಾರಿ 15 ಎಲೆಗಳಂತೆ ನುಗ್ಗೆಕಾಯಿ ಎಲೆಗಳನ್ನುನೀಡುತ್ತಾ ಬರಲಾಯಿತು.ಇದರಿಂದ  ನುಗ್ಗೆಕಾಯಿ ಸೊಪ್ಪು ರಕ್ತದೊತ್ತಡ ಕಡಿಮೆ ಮಾಡಲು ಸಹಕರಿಸುತ್ತದೆ ಎನ್ನುವುದುಸಾಬೀತಾಗಿದೆ.

ದೇಹದ ರೋಗನಿರೋಧಕ ಶಕ್ತಿ  ಹೆಚ್ಚುತ್ತದೆ :
ಇದರಲ್ಲಿ ವಿಟಮಿನ್ ಸಿ ಹೆಚ್ಚಿನ ಪ್ರಮಾಣದಲ್ಲಿರುತ್ತದೆ. ಹೀಗಾಗಿ ಇದು ದೇಹದ ರೋಗನಿರೋಧಕ (Immunity) ಶಕ್ತಿ ಹೆಚ್ಚಿಸಲು ಸಹಾಯ ಮಾಡುತ್ತದೆ. ಅಡುಗೆಯಲ್ಲಿ ನಿತ್ಯವೂ ನುಗ್ಗೆಕಾಯಿ ಎಣ್ಣೆಯನ್ನು ಬಳಸಬಹುದು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಆಪ್ ಡೌನ್ ಲೋಡ್ ಮಾಡಿ
Android Link - https://bit.ly/3hDyh4G
iOS Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಕ್ಕೆ ಸಬ್ ಸ್ಕ್ರೈಬ್ ಮಾಡಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News