Bernard Hill : ಟೈಟಾನಿಕ ಖ್ಯಾತಿಯ ನಟ ಬರ್ನಾರ್ಡ್‌ ಹಿಲ್‌ ನಿಧನ..!

Titanic Actor Bernard Hill : ನಟ ಬರ್ನಾರ್ಡ್ ಹಿಲ್ ಟೈಟಾನಿಕ್‌ ಸಿನಿಮಾದಲ್ಲಿ ಎಡ್ವರ್ಡ್ ಸ್ಮಿತ್ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಟೈಟಾನಿಕ್‌ ಶಿಪ್‌ನ ಕ್ಯಾಪ್ಟನ್ ಪಾತ್ರದಲ್ಲಿ ಅವರು ನಟಿಸಿದ್ದರು. ಅಲ್ಲದೆ, ಲಾರ್ಡ್ ಆಫ್ ದಿ ರಿಂಗ್ಸ್ ಚಿತ್ರದಲ್ಲಿ ರೋಹನ್ ರಾಜ ಥಿಯೋಡೆನ್ ಎಂಬ ಪಾತ್ರದಲ್ಲಿ ಅಭಿನಯಿಸಿ ವಿಶ್ವ ಮನ್ನಣೆ ಗಳಿಸಿದರು.

Written by - Krishna N K | Last Updated : May 7, 2024, 01:21 PM IST
    • ಖ್ಯಾತಿ ಪಡೆದ ನಟ ಬರ್ನಾರ್ಡ್ ಹಿಲ್ (79) ವಿಧಿವಶರಾಗಿದ್ದಾರೆ.
    • ವಯೋಸಹಜ ಸಮಸ್ಯೆಯಿಂದ ಭಾನುವಾರ ಬೆಳಗ್ಗೆ ಕೊನೆಯುಸಿರೆಳೆದಿದ್ದಾರೆ
    • ಟೈಟಾನಿಕ್‌ ಶಿಪ್‌ನ ಕ್ಯಾಪ್ಟನ್ ಪಾತ್ರದಲ್ಲಿ ಅವರು ನಟಿಸಿದ್ದರು.
Bernard Hill : ಟೈಟಾನಿಕ ಖ್ಯಾತಿಯ ನಟ ಬರ್ನಾರ್ಡ್‌ ಹಿಲ್‌ ನಿಧನ..! title=

Bernard hill death : ಟೈಟಾನಿಕ್ ಮತ್ತು ಲಾರ್ಡ್ ಆಫ್ ದಿ ರಿಂಗ್ಸ್ ಚಿತ್ರಗಳ ಮೂಲಕ ವಿಶ್ವಾದ್ಯಂತ ಖ್ಯಾತಿ ಪಡೆದ ನಟ ಬರ್ನಾರ್ಡ್ ಹಿಲ್ (79) ವಿಧಿವಶರಾಗಿದ್ದಾರೆ. ವಯೋಸಹಜ ಸಮಸ್ಯೆಯಿಂದ ಭಾನುವಾರ ಬೆಳಗ್ಗೆ ಕೊನೆಯುಸಿರೆಳೆದಿದ್ದಾರೆ ಎಂದು ವರದಿಯಾಗಿದೆ. 

ಟೈಟಾನಿಕ್ ಚಲನಚಿತ್ರದಲ್ಲಿ ಬರ್ನಾರ್ಡ್ ಹಿಲ್ ಎಡ್ವರ್ಡ್ ಸ್ಮಿತ್ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಟೈಟಾನಿಕ್‌ ಶಿಪ್‌ನ ಕ್ಯಾಪ್ಟನ್ ಪಾತ್ರದಲ್ಲಿ ಅವರು ನಟಿಸಿದ್ದರು. ಅಲ್ಲದೆ, ಲಾರ್ಡ್ ಆಫ್ ದಿ ರಿಂಗ್ಸ್ ಚಿತ್ರದಲ್ಲಿ ರೋಹನ್ ರಾಜ ಥಿಯೋಡೆನ್ ಎಂಬ ಪಾತ್ರದಲ್ಲಿ ಅಭಿನಯಿಸಿ ವಿಶ್ವ ಮನ್ನಣೆ ಗಳಿಸಿದರು.

ಇದನ್ನೂ ಓದಿ: ಮೆಟ್ ಗಾಲಾ ರೆಡ್‌ ಕಾರ್ಪೆಟ್‌ನಲ್ಲಿ ಸೀರೆಯುಟ್ಟು ಮಿಂಚಿದ ಭಾರತೀಯ ನಾರಿ ಆಲಿಯಾ ಭಟ್!!‌ ಪೋಟೋಸ್‌ ವೈರಲ್!

ಯುಕೆ ಮೂಲದ ಬರ್ನಾರ್ಡ್ ಐದು ದಶಕಗಳಿಂದ ಚಿತ್ರರಂಗದಲ್ಲಿದ್ದಾರೆ. ಸಿನಿಮಾ ಕಲಾವಿದರಲ್ಲದೆ ಕಿರುತೆರೆ ಕಲಾವಿದರಾಗಿ, ರಂಗ ಕಲಾವಿದರಾಗಿಯೂ ಸೇವೆ ಸಲ್ಲಿಸಿ ನಟನೆಗೆ ಜೀವ ತುಂಬಿದರು. ಲಾರ್ಡ್ ಆಫ್ ದಿ ರಿಂಗ್ಸ್, ಟ್ರೈಲಾಜಿ, ದಿ ಟೂ ಟವರ್ಸ್, ರಿಟರ್ನ್ ಆಫ್ ದಿ ಕಿಂಗ್ ಚಲನಚಿತ್ರಗಳಲ್ಲಿನ ಅತ್ಯುತ್ತಮ ಅಭಿನಯಕ್ಕಾಗಿ ಅವರು 11 ಆಸ್ಕರ್‌ಗಳನ್ನು ಪಡೆದರು.

ಬರ್ನಾರ್ಡ್ ಹಿಲ್ ಸಾವಿನ ಸುದ್ದಿ ತಿಳಿದು ಹಾಲಿವುಡ್ ಚಿತ್ರ ಜಗತ್ತು ಶೋಕದಲ್ಲಿ ಮುಳುಗಿದೆ. ಅವರ ಅಭಿಮಾನಿಗಳು ಮತ್ತು ಇತರ ಗಣ್ಯರು ಶೋಕ ವ್ಯಕ್ತಪಡಿಸುತ್ತಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ಪ್ರಾರ್ಥಿಸುತ್ತಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News