Bhagyalakshmi Serial: ಒಲ್ಲದ ಮನಸ್ಸಿನಲ್ಲೇ ಶ್ರೇಷ್ಠಗೆ ಉಂಗುರ ತೊಡೆಸಿದ ತಾಂಡವ್: ಅಣ್ಣ ಬದಲಾಗಿದ್ದಾನೆಂದ ವೈಷ್ಣವ್!

Tandav Gets Engaged Again: ತಾಂಡವ್‌ ಮಗಳು ತನ್ವಿಗೆ ಆಕ್ಸಿಂಡೆಂಟ್‌ ಆಗಿರುವ ವಿಷಯವನ್ನು ಶ್ರೇಷ್ಠ ಉದೇಶ ಪೂರ್ವಕವಾಗಿಯೇ ಮುಚ್ಚಿಡಬೇಕೆಂದು ತನ್ನ ಗೆಳತಿ ಕಾವ್ಯಾಳನ್ನು ರೂಮ್‌ನಲ್ಲಿ ಕೂಡಿ ಹಾಕುತ್ತಾಳೆ. ಬಳಿಕ ರಘು, ಮನೆಗೆ ಬಂದಾಗ ರೂಮ್‌ನಲ್ಲಿ ಯಾರೋ ಇರುವ ಸದ್ದು ಕೇಳಿ ಬೀಗ ತೆಗೆಯುತ್ತಾನೆ. ತದನಂತರ ಕಾವ್ಯ ಆತ ಕೇಳುವ ಯಾವುದೇ ಪ್ರಶ್ನೆಗೂ ಉತ್ತರ ನೀಡುವುದಿಲ್ಲ. ತಕ್ಷಣ ಕಾವ್ಯಾ ಅಲ್ಲಿಂದ ಎಂಗೇಜ್‌ಮೆಂಟ್‌ ನಡೆಯುತ್ತಿರುವ ಸ್ಥಳಕ್ಕೆ ಓಡುತ್ತಾಳೆ. 

Written by - Zee Kannada News Desk | Last Updated : Jan 12, 2024, 03:36 PM IST
  • ಎಂಗೇಜ್‌ಮೆಂಟ್‌ ನಡೆಯುತ್ತಿರುವ ಜಾಗದಲ್ಲಿ ತಾಂಡವ್‌, ಭಯದಿಂದಲೇ ವೇದಿಕೆ ಮೇಲೆ ನಿಲ್ಲುತ್ತಾನೆ.
  • ಕಾವ್ಯಾಳನ್ನು ನೋಡುತ್ತಿದ್ದಂತೆ ಸುಂದರಿ ಹಾಗೂ ಶ್ರೇಷ್ಠಾಗೆ ಗಾಬರಿ ಆಗಿ, ಕಾವ್ಯ ಏನು ಹೇಳಬಾರದೆಂಬ ಕಾರಣಕ್ಕೆ ಓಡಿ ಬಂದು ಗೆಳತಿಯನ್ನು ಅಪ್ಪಿಕೊಳ್ಳುತ್ತಾಳೆ.
  • ಇತ್ತ ತನ್ವಿ ಆಸ್ಪತ್ರೆಯಲ್ಲಿದ್ದು, ಈಕೆಗೆ ವೈಷ್ಣವ್‌ ರಕ್ತ ಕೊಟ್ಟು ಜೀವ ಉಳಿಸುತ್ತಾನೆ. ತಾಂಡವ್‌ ಮನೆ ಬಿಟ್ಟು ಹೋಗಿರುವ ವಿಚಾರ ತಿಳಿದು ವೈಷ್ಣವ್‌ ಬೇಸರಗೊಳ್ಳುತ್ತಾನೆ.
Bhagyalakshmi Serial: ಒಲ್ಲದ ಮನಸ್ಸಿನಲ್ಲೇ ಶ್ರೇಷ್ಠಗೆ ಉಂಗುರ ತೊಡೆಸಿದ ತಾಂಡವ್: ಅಣ್ಣ ಬದಲಾಗಿದ್ದಾನೆಂದ ವೈಷ್ಣವ್!  title=

Thandav-Shrestha Engagement: ತಾಂಡವ್‌ ಮಗಳು ತನ್ವಿಗೆ ಆಕ್ಸಿಂಡೆಂಟ್‌ ಆಗಿರುವ ವಿಷಯವನ್ನು ಶ್ರೇಷ್ಠ ಉದೇಶ ಪೂರ್ವಕವಾಗಿಯೇ ಮುಚ್ಚಿಡಬೇಕೆಂದು ತನ್ನ ಗೆಳತಿ ಕಾವ್ಯಾಳನ್ನು ರೂಮ್‌ನಲ್ಲಿ ಕೂಡಿ ಹಾಕುತ್ತಾಳೆ. ಬಳಿಕ ರಘು, ಮನೆಗೆ ಬಂದಾಗ ರೂಮ್‌ನಲ್ಲಿ ಯಾರೋ ಇರುವ ಸದ್ದು ಕೇಳಿ ಬೀಗ ತೆಗೆಯುತ್ತಾನೆ. ತದನಂತರ ಕಾವ್ಯ ಆತ ಕೇಳುವ ಯಾವುದೇ ಪ್ರಶ್ನೆಗೂ ಉತ್ತರ ನೀಡುವುದಿಲ್ಲ. ತಕ್ಷಣ ಕಾವ್ಯಾ ಅಲ್ಲಿಂದ ಎಂಗೇಜ್‌ಮೆಂಟ್‌ ನಡೆಯುತ್ತಿರುವ ಸ್ಥಳಕ್ಕೆ ಓಡುತ್ತಾಳೆ. 

ಎಂಗೇಜ್‌ಮೆಂಟ್‌ ನಡೆಯುತ್ತಿರುವ ಜಾಗದಲ್ಲಿ ತಾಂಡವ್‌, ಭಯದಿಂದಲೇ  ವೇದಿಕೆ ಮೇಲೆ ನಿಲ್ಲುತ್ತಾನೆ. ಊರಿನವರೆಲ್ಲಾ ಬರುತ್ತಾರೆ ಅಂತ ಗೊತ್ತಿರದ ತಾಂಡವ್‌, ಅಮ್ಮನಿಗೇನಾದ್ರೂ ಗೊತ್ತಾದ್ರೆ ನನ್ನ ಸಾಯಿಸಿಬಿಡ್ತಾರೆ ಅಂತ ಅಂದುಕೊಳ್ಳುತ್ತಾನೆ. ಇನ್ನೇನು ರಿಂಗ್‌ ಎಕ್ಸೇಂಜ್ ಮಾಡಿಕೊಳ್ಳಬೇಕು ಎನ್ನುವಷ್ಟರಲ್ಲಿ ಅಲ್ಲಿಗೆ  ಕಾವ್ಯ ಬಂದು, ಎಂಗೇಜ್‌ಮೆಂಟ್‌ ನಿಲ್ಲಿಸಿ ಎಂದು ಜೋರಾಗಿ ಕಿರುಚುತ್ತಾಳೆ. ಆಗ ಕಾವ್ಯಾಳನ್ನು ನೋಡುತ್ತಿದ್ದಂತೆ ಸುಂದರಿ ಹಾಗೂ ಶ್ರೇಷ್ಠಾಗೆ ಗಾಬರಿ ಆಗಿ, ಕಾವ್ಯ ಏನು ಹೇಳಬಾರದೆಂಬ ಕಾರಣಕ್ಕೆ  ಓಡಿ ಬಂದು ಗೆಳತಿಯನ್ನು ಅಪ್ಪಿಕೊಳ್ಳುತ್ತಾಳೆ. ಎಲ್ಲಿ ಹೋಗಿದ್ದೆ ನಿನಗಾಗಿ ಕಾಯುತ್ತಿದ್ದೆ ಅಂತ ನಾಟಕ ಸಹ ಮಾಡುತ್ತಾಳೆ.

ಇದನ್ನೂ ಓದಿ: ಬಘೀರ ಅಪ್ಡೇಟ್: ಹೈಬಜೆಟ್‌ನಲ್ಲಿ ಕ್ಲೈಮ್ಯಾಕ್ಸ್‌ ಶೂಟಿಂಗ್‌ ಶುರು..!

ಶ್ರೇಷ್ಠ ನನ್ನ ತಂದೆ ಮೊದಲೇ ಹಾರ್ಟ್‌ ಪೇಶೆಂಟ್‌. ನೀನು ಈಗ ಅವರಿಗೆ ಎಲ್ಲಾ ವಿಚಾರ ಹೇಳಿದರೆ ಅವರಿಗೆ ಖಂಡಿತ ಏನಾದರೂ ಸಮಸ್ಯೆ ಆಗುತ್ತದೆ ಎಂದು ಪಿಸು ಮಾತಿನಲ್ಲಿ ಹೇಳುತ್ತಾಳೆ. ಕಾವ್ಯಾಗೂ ಕೂಡಾ ಅವಳ ಮಾತು ಸರಿ ಎನ್ನಿಸಿ, ಎಲ್ಲವನ್ನೂ ಹೇಳಬೇಕು ಎಂದು ಬಂದವಳು, ಸುಮ್ಮನಾಗುತ್ತಾಳೆ. ಕೊನೆಗೂ ಶ್ರೇಷ್ಠಾ ಹಾಗೂ ತಾಂಡವ್‌ ಇಬ್ಬರೂ ಉಂಗುರ ಬದಲಿಸಿಕೊಳ್ಳುತ್ತಾರೆ. ಉಂಗುರ ಬದಲಿಸುವಾಗ ತಾಂಡವ್‌ಗೆ ಮನೆಯವರು, ಮಕ್ಕಳು, ಭಾಗ್ಯಾ ನೆನಪಾಗುತ್ತಾರೆ. ಭಾಗ್ಯಾಳನ್ನು ಮದುವೆ ಮಾಡಿಕೊಂಡು ಬಂದ ದಿನ ನೆನಪಾಗುತ್ತದೆ. ಅಷ್ಟೆಲ್ಲಾ ನೆನಪಾದರೂ ಒಲ್ಲದ ಮನಸ್ಸಿನಿಂದಲೇ ಶ್ರೇಷ್ಠಾಗೆ ಬೆರಳಿಗೆ ಉಂಗುರ ಹಾಕುತ್ತಾನೆ. ಮಗಳ ನಿಶ್ಚಿತಾರ್ಥ ನೆರವೇರಿದ ನಂತರ ಶ್ರೇಷ್ಠಾ ತಂದೆ ತಾಯಿ ಆನಂದಭಾಷ್ಪ ಸುರಿಸುತ್ತಾರೆ. ಶ್ರೇಷ್ಠಾಗಂತೂ ಖುಷಿಯೋ ಖುಷಿ.

ಇತ್ತ ತನ್ವಿ ಆಸ್ಪತ್ರೆಯಲ್ಲಿದ್ದು, ಈಕೆಗೆ ವೈಷ್ಣವ್‌ ರಕ್ತ ಕೊಟ್ಟು ಜೀವ ಉಳಿಸುತ್ತಾನೆ. ತಾಂಡವ್‌ ಮನೆ ಬಿಟ್ಟು ಹೋಗಿರುವ ವಿಚಾರ ತಿಳಿದು ವೈಷ್ಣವ್‌ ಬೇಸರಗೊಳ್ಳುತ್ತಾನೆ. ತಾಂಡವ್‌, ಶ್ರೇಷ್ಠಾ ಮನೆಯಲ್ಲೇ ಫೋನ್‌ ಬಿಟ್ಟು ಹೋದ ಕಾರಣ ಯಾರೂ ಕರೆ ಮಾಡಿದರೂ ಅವನಿಗೆ ತಿಳಿಯುವುದಿಲ್ಲ. ವೈಷ್ಣವ್‌ ಕೂಡಾ ಅಣ್ಣನಿಗೆ ಕರೆ ಮಾಡುತ್ತಾನೆ. ಅಣ್ಣ ಇಷ್ಟು ಬದಲಾಗಿದ್ದಾನೆ ಎಂದು ತಿಳಿದು ಆಶ್ಚರ್ಯ ವ್ಯಕ್ತಪಡಿಸುತ್ತಾನೆ. ಆದರೇ ಭಾಗ್ಯ ಈ ವಿಚಾರವನ್ನು ಲಕ್ಷ್ಮಿಗೆ ಹೇಳದಿರುವಂತೆ ಮನವಿ ಮಾಡುತ್ತಾಳೆ. ಭಾಗ್ಯಲಕ್ಷ್ಮೀ ಧಾರಾವಾಹಿಯ  ಸಂಚಿಕೆಯ ಕೊನೆಯಲ್ಲಿ ವಾಹಿನಿ ಹಂಚಿಕೊಂಡಿರುವ ಪ್ರೋಮೋ ಪ್ರಕಾರ, ಕಾವ್ಯಾ ತಾಂಡವ್‌ಗೆ ಫೋನ್‌ ಕೊಟ್ಟು ಮನೆಯವರು ಪದೇ ಪದೆ ಕಾಲ್‌ ಮಾಡುತ್ತಿದ್ದಾರೆ ಎಂದು ಹೇಳುತ್ತಾಳೆ. ತಾಂಡವ್‌ಗೆ ಮಗಳ ಬಗ್ಗೆ ತಿಳಿಯುವುದಾ? ಆತ ಮನೆಗೆ ಹೋಗಲು ಶ್ರೇಷ್ಠಾ ಬಿಡಲಿದ್ದಾಳಾ ಎಂಬುದನ್ನು ಕಾದು ನೋಡಬೇಕು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News