Shruti Hassan: ಐದು ಬಾಯ್‌ಫ್ರೆಂಡ್‌ಗಳ ಜೊತೆ ಸಲಾರ್‌ ಬೆಡಗಿ ಬ್ರೇಕಪ್:‌ ಶಾಂತನು ಜೊತೆಗೆ ಆರನೇಯದಾ?

Shruti Haasan Breakups: ಸೌತ್‌ ಸುಂದರಿ ನಟಿ ಶೃತಿ ಹಾಸನ್‌ ತಮ್ಮ ಬಾಯ್‌ಫ್ರೆಂಡ್‌ ಶಾಂತನು ಹಜಾರಿಕಾ ಜೊತೆಗೆ  ಲವ್‌ ಬ್ರೇಕಪ್‌ ಆಗಿದೆ ಎನ್ನಲಾಗುತ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ಇವರಿಬ್ಬರ ನಡುವಳಿಕೆ ಈ ವಿಚಾರ ನಿಜವಾಗಿರಬಹುದೆಂದು ಅನುಮಾನ ಮೂಡಿಸಿದೆ. ಇದರ ಕಂಪ್ಲೀಟ್‌ ಸೋರಿ ಇಲ್ಲಿದೆ.  

Written by - Zee Kannada News Desk | Last Updated : Apr 27, 2024, 02:35 PM IST
  • ನಟಿ ಶೃತಿ ಹಾಸನ್‌ಶೃತಿ ಹಾಸನ್‌ ಕೆಲವು ವರ್ಷಗಳಿಂದ ಇವರಿಬ್ಬರು ಲಿವಿಂಗ್ ಟುಗೇದರ್‌ನಲ್ಲಿ ಇದ್ದರೆಂದು ಹೇಳಲಾಗುತ್ತಿದ್ದು, ಇದೀಗ ಈ ಜೋಡಿ ಲವ್‌ ಬ್ರೇಕಪ್‌ ಆಗಿದೆ ಎಂದು ವರದಿಯಾಗಿದೆ.
  • ನಟಿ ಶೃತಿ ಸೋಶಿಯಲ್‌ ಮಿಡಿಯಾದಲ್ಲಿ ಶಾಂತನು ಜೊತೆಗಿನ ಫೋಟೋಗಳನ್ನು ಕೂಡ ಡಿಲೀಟ್‌ ಮಾಡಿದ್ದಾರೆ. ಇದರಿಂದ ಈ ಜೋಡಿಯ ನಡುವೆ ಬ್ರೇಕಪ್ ಆಗಿದೆ ಎಂದು ಹೇಳಲಾಗುತ್ತಿದೆ.
  • ಎಲ್ಲರೂ ಇವರಿಬ್ಬರು ಮದುವೆಯಾಗುತ್ತಾರೆಂದು ಅಂದುಕೊಂಡಿದ್ದರು. ಇಂತಹ ಸಮಯದಲ್ಲೇ ಇವರ ಮಧ್ಯೆ ವೈಮನಸ್ಸು ಬಂದಿವೆ.
Shruti Hassan: ಐದು ಬಾಯ್‌ಫ್ರೆಂಡ್‌ಗಳ ಜೊತೆ ಸಲಾರ್‌ ಬೆಡಗಿ ಬ್ರೇಕಪ್:‌ ಶಾಂತನು ಜೊತೆಗೆ ಆರನೇಯದಾ?  title=

Shruti Haasan and Shantanu Breakup: ಬಹುಭಾಷಾ ನಟಿ ಶೃತಿ ಹಾಸನ್‌  ತಮ್ಮ ಬಾಯ್‌ಫ್ರೆಂಡ್‌ ಶಾಂತನು ಹಜಾರಿಕಾ  ಜೊತೆಗಿನ ಸಂಬಂಧವನ್ನು ಮುರಿದುಕೊಂಡಿದ್ದಾರೆ ಎನ್ನಾಗಿದೆ. ನಟಿ ಶೃತಿ ಹಾಸನ್‌ಶೃತಿ ಹಾಸನ್‌ ಕೆಲವು ವರ್ಷಗಳಿಂದ ಇವರಿಬ್ಬರು ಲಿವಿಂಗ್ ಟುಗೇದರ್‌ನಲ್ಲಿ ಇದ್ದರೆಂದು ಹೇಳಲಾಗುತ್ತಿದ್ದು, ಇದೀಗ ಈ ಜೋಡಿ ಲವ್‌ ಬ್ರೇಕಪ್‌ ಆಗಿದೆ ಎಂದು ವರದಿಯಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಇವರಿಬ್ಬರ ನಡುವಳಿಕೆ ಅನುಮಾನ ಮೂಡುವುದಕ್ಕೆ ಪ್ರಮುಖ ಕಾರಣವಾಗಿದೆ. 

ಸೌತ್‌ ಸುಂದರಿ ಶೃತಿ ಹಾಸನ್‌ ಮತ್ತು ಈಕೆಯ ಪ್ರೇಮಿ ಶಾಂತನು ಮೊದಲು  ಇನ್‌ಸ್ಟಾಗ್ರಾಮ್‌ನಲ್ಲಿ ಇವರಿಬ್ಬರು ಪರಸ್ಪರ ಒಬ್ಬರನೊಬ್ಬರು ಫಾಲೋ ಮಾಡಿಕೊಳ್ಳುತ್ತಿದ್ದರು. ಇದೀಗ ಇವರಿಬ್ಬರು ಅನ್‌ಫಾಲೋ ಮಾಡಿಕೊಂಡಿದ್ದಾರೆ. ಈ ವಿಚಾರ ಇಷ್ಟಕ್ಕೆ ಮಾತ್ರ ನಿಂತಿಲ್ಲ. ಈ ನಟಿ ಸೋಶಿಯಲ್‌ ಮಿಡಿಯಾದಲ್ಲಿ ಶಾಂತನು ಜೊತೆಗಿನ ಫೋಟೋಗಳನ್ನು ಕೂಡ ಡಿಲೀಟ್‌ ಮಾಡಿದ್ದಾರೆ. ಇದರಿಂದ ಈ ಜೋಡಿಯ ನಡುವೆ ಬ್ರೇಕಪ್ ಆಗಿದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: Lok Sabha Election 2024: ಭಾರತೀಯರಾದರೂ ತವರೂರಿಗೆ ಬಂದು ವೋಟ್‌ ಹಾಕಲಿಲ್ಲ ಈ ಸ್ಯಾಂಡಲ್‌ವುಡ್‌ ನಟಿಯರು: ಕಿಡಿಕಾರಿದ ಹಿರಿಯ ನಟ!

ಸಾಮಾಜಿಕ ಜಾಲತಾಣದಲ್ಲಿ ಜನಪ್ರಿಯತೆ ಪಡೆದಿರುವ ಓರಿ ಅಲಿಯಾಸ್ ಅವತ್ರಮಣಿ, ಶಾಂತನು ಅವರನ್ನು ಶೃತಿ ಹಾಸನ್‌ ಎಂದಿದ್ದರು. ಈ ವಿಷಯ ಸಾಕಷ್ಟು ಚರ್ಚೆಗೆ ಕಾರಣವಾಯಿತು. ತದನಂತರ ಇದರ ಬಗ್ಗೆ ಸ್ಪಷ್ಟನೆ ನೀಡಿದ ನಟಿ ಶೃತಿ ಹಾಸನ್‌ ಈ ವಿಚಾರ ಸುಳ್ಳು ಎಂದು ಹೇಳಿದ್ದರು. ಎಲ್ಲರೂ ಇವರಿಬ್ಬರು ಮದುವೆಯಾಗುತ್ತಾರೆಂದು ಅಂದುಕೊಂಡಿದ್ದರು. ಇಂತಹ ಸಮಯದಲ್ಲೇ  ಇವರ ಮಧ್ಯೆ ವೈಮನಸ್ಸು ಬಂದಿವೆ. ಸದ್ಯ ಈ ವಿಷಯ ಬಗ್ಗೆ ಶೃತಿನೇ ಕ್ಲಾರಿಟಿ ನೀಡಲಿಯೆಂದು ಕಾಯುತ್ತಿದ್ದಾರೆ.

ಇದೀಗ ನಟಿ ಶೃತಿ ಹಾಸನ್‌ಗೆ ಇದು ಆರನೇ ಬ್ರೇಕಪ್‌ ಎನ್ನಲಾಗುತ್ತಿದ್ದು, ಇದಕ್ಕೂ ಮೊದಲು ಈ ನಟಿ ತಮಿಳು ನಟ ಸಿದ್ದಾರ್ಥ್ ಡೇಟ್‌ ಮಾಡುತ್ತಿದ್ದರು ಎಂದು ಹೇಳಲಾಗಿತ್ತು. ಇದರ ನಂತರ ಇವರದ್ದು ಬ್ರೇಕಪ್‌ ಆಗಿತು. ಇಷ್ಟು ಮಾತ್ರವಲ್ಲದೇ ಈ ನಟಿಯ ಹೆಸರು ನಟ ಧನುಷ್, ನಾಗ ಚೈತನ್ಯ  ಜೊತೆಗೆ ಕೇಳಿಬಂದಿತ್ತು. ಇದಾದ ಮೇಲೆ ಕ್ರಿಕೇಟಿಗ ಸುರೇಶ್‌ ರೈನಾ ಜೊತೆಗೂ ಈ ನಟಿ ಸುತ್ತಾಟ ನಡೆಸಿದ್ದರು ಎನ್ನಾಲಾಗಿದ್ದು, ನಂತರ ಇದು ಕೂಡ ಸುಳ್ಳು ಎಂಬ ವಿಷಯ ಹೊರಬಂದಿತು. ಇದಾದ ಬಳಿಕ ಶೃತಿ ಮೈಕಲ್ ಕೋರ್ಸಲ್ ಜೊತೆ ಸುತ್ತಾಡಿದ್ದರು. ಶೃತಿ 2021 ರಿಂದ ಶಾಂತನು ಜೊತೆಗೂ ಒಟ್ಟಾಗಿದ್ದು, ಸದ್ಯ ಇವರದ್ದೂ ಸಹ ಬ್ರೇಕಪ್‌ ಆಗಿದೆ ಸುದ್ದಿ ಒಡಾಡುತ್ತಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News