Shriya Saran: ಒಂದು ಹಾಡಿಗೆ ಇಷ್ಟು ಕೋಟಿ ಸಂಭಾವನೆ ಕೇಳಿದ ಶ್ರಿಯಾ ಶರಣ್

Shriya Saran : ಕಬ್ಜಾ ನಾಯಕಿ ನಟಿ ಶ್ರಿಯಾ ಶರಣ್ ಬಗ್ಗೆ ಸುದ್ದಿಯೊಂದು ಹರಿದಾಡುತ್ತಿದೆ. ಒದು ಐಟಂ ಸಾಂಗ್‌ ಮಾಡಲು ಶ್ರಿಯಾ ಕೇಳಿದ ಸಂಭಾವನೆ ನಿರ್ಮಾಪಕರನ್ನು ಬೆಚ್ಚಿ ಬೀಳಿಸಿದೆ. ತಮಿಳು, ತೆಲುಗು, ಹಿಂದಿ, ಕನ್ನಡ, ಮಲಯಾಳಂ ಮತ್ತು ಇಂಗ್ಲಿಷ್ ಸಿನಿಮಾಗಳಲ್ಲಿ ಶ್ರಿಯಾ ಅಭಿನಯಿಸುತ್ತಾರೆ. 

Written by - Chetana Devarmani | Last Updated : Apr 24, 2023, 01:11 PM IST
  • ಕಬ್ಜಾ ನಾಯಕಿ ನಟಿ ಶ್ರಿಯಾ ಶರಣ್
  • ಒಂದು ಹಾಡಿಗೆ ಇಷ್ಟು ಕೋಟಿ ಸಂಭಾವನೆ?
  • ಸಂಭಾವನೆ ಕೇಳಿ ಬೆಚ್ಚಿ ಬಿದ್ದ ನಿರ್ಮಾಪಕ!
Shriya Saran: ಒಂದು ಹಾಡಿಗೆ ಇಷ್ಟು ಕೋಟಿ ಸಂಭಾವನೆ ಕೇಳಿದ ಶ್ರಿಯಾ ಶರಣ್  title=

Shriya Saran: ನಟಿ ಶ್ರಿಯಾ ಶರಣ್ ತಮಿಳು, ತೆಲುಗು, ಹಿಂದಿ, ಕನ್ನಡ, ಮಲಯಾಳಂ ಮತ್ತು ಇಂಗ್ಲಿಷ್ ಭಾಷೆಯ ಚಿತ್ರಗಳಲ್ಲಿ ನಟಿಸಿ ಜನಪ್ರಿಯರಾಗಿದ್ದಾರೆ. ಅವರು 2001 ರಲ್ಲಿ ತೆಲುಗು ಚಿತ್ರರಂಗದ ಮೂಲಕ ತಮ್ಮ ಸಿನಿಮಾ ವೃತ್ತಿಜೀವನವನ್ನು ಪ್ರಾರಂಭಿಸಿದರು. ಅವರು 2002 ರಲ್ಲಿ ತೆಲುಗಿನ ಹಿಟ್ ಚಿತ್ರ ಸಂತೋಷಂನಲ್ಲಿನ ಪಾತ್ರದೊಂದಿಗೆ ತೆಲುಗಿನಲ್ಲಿ ಖ್ಯಾತಿಯನ್ನು ಪಡೆದರು. ಇದಾದ ನಂತರ ಅವರು ತೆಲುಗು ಚಲನಚಿತ್ರಗಳಲ್ಲಿ ಪ್ರಮುಖ ಚಲನಚಿತ್ರ ನಟರೊಂದಿಗೆ ನಟಿಸಿದರು. ನಂತರ ಬಾಲಿವುಡ್ ಮತ್ತು ಕಾಲಿವುಡ್‌ನಲ್ಲಿ ನಟಿಸುವ ಅವಕಾಶ ಸಿಕ್ಕಿತು.

ನಟಿ ಶ್ರಿಯಾ ಶರಣ್ 2003 ರಲ್ಲಿ ತಮಿಳು ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರು. ಅವರು 2007 ರಲ್ಲಿ ರಜನಿಕಾಂತ್ ಅವರೊಂದಿಗೆ ಶಿವಾಜಿ ಚಿತ್ರದಲ್ಲಿ ನಟಿಸಿದರು. ಅವರು ವಿಜಯ್, ಧನುಷ್, ನಾಗಾರ್ಜುನ ಅಕ್ಕಿನೇನಿ, ಚಿರಂಜೀವಿ ಮತ್ತು ಅಜಯ್ ದೇವಗನ್ ಅವರಂತಹ ಅನೇಕ ಪ್ರಮುಖ ನಾಯಕರೊಂದಿಗೆ ಪರದೆಯನ್ನು ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ಕನ್ನಡ ಚಿತ್ರರಂಗಕ್ಕೆ ಮತ್ತೊಂದು ಆಘಾತ.. ಸ್ಯಾಂಡಲ್‌ವುಡ್‌ ನಟ, ಟಪೋರಿ ಸತ್ಯ ನಿಧನ!

ಮಾರ್ಚ್ 12, 2018 ರಂದು, ಅವರು ರಷ್ಯಾದ ಉದ್ಯಮಿ ಮತ್ತು ಟೆನಿಸ್ ಆಟಗಾರ ಆಂಡ್ರೆ ಕೊಸ್ಚೆವ್ ಅವರನ್ನು ರಹಸ್ಯವಾಗಿ ವಿವಾಹವಾದರು. ಅವರಿಗೆ ರಾಧಾ ಎಂಬ ಮಗಳಿದ್ದಾಳೆ. ಇದಾದ ನಂತರ ನಟನೆಯಿಂದ ಸ್ವಲ್ಪ ಬ್ರೇಕ್ ತೆಗೆದುಕೊಂಡ ಶ್ರಿಯಾ ಶರಣ್ ಈಗ ಮತ್ತೆ ಸಿನಿಮಾಗಳಲ್ಲಿ ನಟಿಸಲು ಶುರು ಮಾಡಿದ್ದಾರೆ. ಅದರಂತೆ ಹಿಂದಿಯ ದೃಶ್ಯಂ 2 ಚಿತ್ರದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ಇದಾದ ನಂತರ ಕನ್ನಡದ ಕಬ್ಜಾ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದರು. ಈ ಚಿತ್ರವು ಪ್ಯಾನ್-ಇಂಡಿಯನ್ ಚಿತ್ರವಾಗಿ ಕಳೆದ ತಿಂಗಳು ಬಿಡುಗಡೆಯಾಯಿತು. 

ಇದೀಗ ಶ್ರಿಯಾ ಶರಣ್ ಬಗ್ಗೆ ಹೈಲೈಟ್‌ ಆದ ವಿಚಾರ ಏನಂದ್ರೆ ಚಿರಂಜೀವಿ ಅಭಿನಯದ ಚಿತ್ರವೊಂದರಲ್ಲಿ ಐಟಂ ಸಾಂಗ್ ಹಾಡಿಗೆ  ಹೆಜ್ಜೆ ಹಾಕಲು ಚಿತ್ರತಂಡ ಶ್ರಿಯಾ ಶರಣ್  ಅವರನ್ನು ಸಂಪರ್ಕಿಸಿದ್ದರು. ಇದಕ್ಕಾಗಿ ಅಂದರೆ ಕೇವಲ ಒಂದೇ ಒಂದು ಹಾಡಿಗಾಗಿ 1 ಕೋಟಿ ಸಂಭಾವನೆ ಕೇಳಿದ್ದರು ಎಂದು ವರದಿಯಾಗಿದೆ. ಇದರಿಂದ ನಿರ್ಮಾಪಕ ಶಾಕ್ ಆಗಿದ್ದಾರೆ ಎಂದೂ ವರದಿಯಾಗಿದೆ. 

ಇದನ್ನೂ ಓದಿ: ಬೆತ್ತಲೆಯಾಗಿಯೇ ನಟಿಸಿದ್ದೇನೆ.. ʼಲಿಪ್‌ಕಿಸ್‌ʼ ಯಾವ ಲೆಕ್ಕ..!

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News