"ಕಾವ್ಯ ಮಾರನ್ ನೋಡಿ ಬೇಜಾರುಗುತ್ತೆ" ಎಂದಿದ್ದೇಕೆ ರಜನಿಕಾಂತ್?

Rajinikanth On Kavya Maran: ತಮಿಳು ಸೂಪರ್ ಸ್ಟಾರ್ ರಜನಿಕಾಂತ್ ಅವರು ಕಾವ್ಯಾ ಮಾರನ್ ಅವರ ಸ್ಥಿತಿಯ ಬಗ್ಗೆ ಆಸಕ್ತಿದಾಯಕ ಕಾಮೆಂಟ್‌ ಮಾಡಿದ್ದಾರೆ. ಹೈದರಾಬಾದ್ ತಂಡ ಸತತವಾಗಿ ಸೋತಿದ್ದರಿಂದ ತೀವ್ರ ನಿರಾಸೆಯಾಗಿದೆ ಎಂದು ಅವರು ಹೇಳಿದರು.   

Written by - Chetana Devarmani | Last Updated : Jul 31, 2023, 05:52 PM IST
  • ಹೈದರಾಬಾದ್ ತಂಡ ಸತತವಾಗಿ ಸೋತಿದ್ದರಿಂದ ತೀವ್ರ ನಿರಾಸೆಯಾಗಿದೆ
  • ಕಾವ್ಯಾ ಮಾರನ್ ಅವರನ್ನು ಹಾಗೆ ನೋಡಿದಾಗ ನನಗೂ ತುಂಬಾ ನೋವಾಯಿತು
  • ತಮಿಳು ಸೂಪರ್ ಸ್ಟಾರ್ ರಜನಿಕಾಂತ್ ಹೇಳಿಕೆ
"ಕಾವ್ಯ ಮಾರನ್ ನೋಡಿ ಬೇಜಾರುಗುತ್ತೆ" ಎಂದಿದ್ದೇಕೆ ರಜನಿಕಾಂತ್?   title=

Rajinikanth On Kavya Maran: ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಕಳೆದ ಕೆಲವು ಸೀಸನ್‌ಗಳಲ್ಲಿ ಸನ್‌ರೈಸರ್ಸ್ ಹೈದರಾಬಾದ್ (SRH) ತಂಡದ ಪ್ರದರ್ಶನವು ಉತ್ತಮವಾಗಿಲ್ಲ. ಕೊನೆಯ ಎರಡು ಸ್ಥಾನಗಳಲ್ಲಿ SRH ಪೈಪೋಟಿ ನಡೆಸುತ್ತಿದೆ. ಕಳೆದ ಸೀಸನ್‌ನಲ್ಲಿ 14 ಪಂದ್ಯಗಳಲ್ಲಿ ಕೇವಲ 4 ಗೆಲುವಿಗೆ ಹೈದರಾಬಾದ್‌ ತಂಡ ತೃಪ್ತಿ ಪಡಬೇಕಾಯಿತು. ಇತರ ತಂಡಗಳಿಗೆ ಹೆಚ್ಚಿನ ಪೈಪೋಟಿ ನೀಡಲಿಲ್ಲ. 

ಡೇವಿಡ್ ವಾರ್ನರ್, ಕೇನ್ ವಿಲಿಯಮ್ಸನ್, ಜಾನಿ ಬೇರ್‌ಸ್ಟೋ ಮತ್ತು ರಶೀದ್ ಖಾನ್ ಅವರಂತಹ ಆಟಗಾರರನ್ನು ಕಳೆದುಕೊಂಡ ನಂತರ, ಎಸ್‌ಆರ್‌ಹೆಚ್ ತಂಡದ ಪರಿಸ್ಥಿತಿ ಹದಗೆಟ್ಟಿದೆ. ತಂಡದ ಪ್ರದರ್ಶನದಿಂದ ಹತಾಶರಾದ ಸನ್ ರೈಸರ್ಸ್ ತಂಡದ ಓವನರ್‌ ಕಾವ್ಯಾ ಮಾರನ್ ಕ್ರೀಡಾಂಗಣದಲ್ಲಿ ಹತಾಶರಾದರು. ಈ ಫೋಟೋಗಳನ್ನು ನೋಡಿದ ಅಭಿಮಾನಿಗಳು ಕೂಡ ಕನಿಕರ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಹಾಟ್‌ ವೈಟ್‌ ಕೋಟ್‌ ಧರಿಸಿ ʼಜಿಲ್ಕಾ ಜಿಲ್ಕಾ ರೇʼ ಅಂತಿದ್ದಾರೆ ಕರಾವಳಿ ಸುಂದರಿ ಮೇಘಾ ಶೆಟ್ಟಿ..!

ತಮಿಳು ಸೂಪರ್ ಸ್ಟಾರ್ ರಜನಿಕಾಂತ್ ಅವರು ಕಾವ್ಯಾ ಮಾರನ್ ಅವರ ಸ್ಥಿತಿಯ ಬಗ್ಗೆ ಆಸಕ್ತಿದಾಯಕ ಕಾಮೆಂಟ್‌ ಮಾಡಿದ್ದಾರೆ. ಐಪಿಎಲ್ ಪಂದ್ಯಗಳ ವೇಳೆ ಟಿವಿಯಲ್ಲಿ ಕಾವ್ಯಾ ಮಾರನ್ ಅವರನ್ನು ಹಾಗೆ ನೋಡಿದಾಗ ನನಗೂ ತುಂಬಾ ನೋವಾಯಿತು ಎಂದು ಹೇಳಿದ್ದಾರೆ. ಹೈದರಾಬಾದ್ ತಂಡ ಸತತವಾಗಿ ಸೋತಿದ್ದರಿಂದ ತೀವ್ರ ನಿರಾಸೆಯಾಗಿದೆ ಎಂದು ಅವರು ಹೇಳಿದರು. ಭವಿಷ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ಉತ್ತಮ ಆಟಗಾರರನ್ನು ಆಯ್ಕೆ ಮಾಡಬೇಕು ಎಂದರು.

ಜೈಲರ್ ಆಡಿಯೋ ಬಿಡುಗಡೆ ಸಮಾರಂಭದಲ್ಲಿ ರಜನಿಕಾಂತ್ ಮಾತನಾಡಿದರು. ಮುಂದಿನ ವರ್ಷದಿಂದ ಸನ್‌ರೈಸರ್ಸ್ ಹೈದರಾಬಾದ್ ತಂಡದಲ್ಲಿ ಉತ್ತಮ ಆಟಗಾರರನ್ನು ಉಳಿಸಿಕೊಳ್ಳುವಂತೆ ಕೇಳಿಕೊಂಡರು. ಜೈಲರ್ ಚಿತ್ರ ಆಗಸ್ಟ್ 10 ರಂದು ಬಾಕ್ಸ್ ಆಫೀಸ್ ನಲ್ಲಿ ಸದ್ದು ಮಾಡಲಿದೆ. ಈ ಸಿನಿಮಾದಲ್ಲಿ ಮಿಲ್ಕಿ ಬ್ಯೂಟಿ ತಮನ್ನಾ ನಟಿಸಿದ್ದಾರೆ. ನೇಲನ್ ದಿಲೀಪ್ ಕುಮಾರ್ ನಿರ್ದೇಶಿಸಿದ್ದಾರೆ. ಕಲಾನಿಧಿ ಮಾರನ್ ಪುತ್ರಿ ಕಾವ್ಯಾ ಮಾರನ್ ಸನ್ ರೈಸರ್ಸ್ ಹೈದರಾಬಾದ್ ತಂಡದ ಮಾಲೀಕರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ರಜನಿ ಎಸ್‌ಆರ್‌ಎಚ್ ತಂಡದ ಬಗ್ಗೆ ಕಾಮೆಂಟ್ ಮಾಡಿದ್ದಾರೆ. ಸದ್ಯ ಈ ಕಾಮೆಂಟ್‌ಗಳು ವೈರಲ್ ಆಗುತ್ತಿವೆ.

ಇದನ್ನೂ ಓದಿ: ಮದುವೆಗೂ ಮುನ್ನವೇ ಗರ್ಭಿಣಿ ಆಗಲು ಬಯಸಿದ್ದರೇ ಈ ಖ್ಯಾತ ನಟಿ!?

ತಂಡದ ಕಳಪೆ ಪ್ರದರ್ಶನದ ಹಿನ್ನೆಲೆಯಲ್ಲಿ ಕೋಚಿಂಗ್ ವಿಭಾಗದಲ್ಲಿ ಬದಲಾವಣೆ ಮಾಡಲಾಗುವುದು. ಕೋಚ್ ಬ್ರಿಯಾನ್ ಲಾರಾ ಅವರನ್ನು ವಜಾಗೊಳಿಸಲು ನಿರ್ಧರಿಸಿದಂತಿದೆ. ಲಾರಾ ಕೂಡ ತಂಡವನ್ನು ತೊರೆಯಲು ಬಯಸಿದ್ದಾರೆ. ಎಸ್‌ಆರ್‌ಹೆಚ್‌ ಕೋಚ್ ಆಗಿ ಲಕ್ನೋ ಸೂಪರ್ ಜೈಂಟ್ಸ್ ಮಾಜಿ ಕೋಚ್ ಆಂಡಿ ಫ್ಲವರ್ ಅವರನ್ನು ನೇಮಿಸುವ ಸಾಧ್ಯತೆಗಳಿವೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News