ಆ ಕಾಯಿಲೆಯಿಂದ ಬಳಲುತ್ತಿರುವ ಪ್ರಿಯಾಂಕಾ ಚೋಪ್ರಾ ಪತಿ, ಮಾತನಾಡಲು ಸಹ ಸಾಧ್ಯವಾಗ್ತಿಲ್ಲ... ಇದೆಂಥಾ ಸ್ಥಿತಿ ದೇವರೇ!!

Priyanka Chopra Husband Nick Jonas: ಪ್ರಿಯಾಂಕಾ ಪತಿ ನಿಕ್ ಜೋನಾಸ್ ಅವರಿಗೆ ಅಪರೂಪದ ಕಾಯಿಲೆ ಇದೆ ಎಂಬ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Written by - Chetana Devarmani | Last Updated : May 6, 2024, 01:54 PM IST
  • ಪ್ರಿಯಾಂಕಾ ಪತಿ ನಿಕ್ ಜೋನಾಸ್
  • ಜೋನಾಸ್ ಅವರಿಗೆ ಅಪರೂಪದ ಕಾಯಿಲೆ
  • ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಪೋಸ್ಟ್
ಆ ಕಾಯಿಲೆಯಿಂದ ಬಳಲುತ್ತಿರುವ ಪ್ರಿಯಾಂಕಾ ಚೋಪ್ರಾ ಪತಿ, ಮಾತನಾಡಲು ಸಹ ಸಾಧ್ಯವಾಗ್ತಿಲ್ಲ... ಇದೆಂಥಾ ಸ್ಥಿತಿ ದೇವರೇ!! title=

Nick Jonas Health Issue : ಗ್ಲೋಬಲ್ ಬ್ಯೂಟಿ ಪ್ರಿಯಾಂಕಾ ಚೋಪ್ರಾ ಸದ್ಯ ಸಿನಿಮಾಗಳಿಂದ ದೂರ ಉಳಿದಿದ್ದಾರೆ. ಬಾಲಿವುಡ್ ನಲ್ಲಿ ಸಿನಿಮಾ ಮಾಡಿ ಸ್ಟಾರ್ ಪಟ್ಟ ಗಿಟ್ಟಿಸಿಕೊಂಡ ಪ್ರಿಯಾಂಕಾ ಚೋಪ್ರಾ ಹಾಲಿವುಡ್ ಸಿನಿಮಾಗಳಲ್ಲಯೂ ನಟಿಸಿದ್ದಾರೆ. ಭಾರತದಲ್ಲಿ ಪ್ರಿಯಾಂಕಾ ಅವರಿಗೆ ದೊಡ್ಡ ಅಭಿಮಾನಿ ಬಳಗವೇ ಇದೆ. ಪ್ರಿಯಾಂಕಾ ಚೋಪ್ರಾ ತೆಲುಗು, ತಮಿಳು, ಹಿಂದಿ ಮತ್ತು ಹಾಲಿವುಡ್ ಭಾಷೆಗಳಲ್ಲಿ ನಟಿಸಿದ್ದಾರೆ. 

ಪ್ರಿಯಾಂಕಾ ಚೋಪ್ರಾ ಅಮೆರಿಕದ ಪಾಪ್ ಸಿಂಗರ್ ನಿಕ್ ಜೋನಾಸ್ ಅವರನ್ನು ಮದುವೆಯಾಗಿದ್ದಾರೆ. ಆ ಸಮಯದಲ್ಲಿ ಅವರ ಮದುವೆ ಬಹುದೊಡ್ಡ ಸುದ್ದಿಯಾಗಿತ್ತು. ಪ್ರಿಯಾಂಕಾಗಿಂತ 10 ವರ್ಷ ನಿಕ್ ಚಿಕ್ಕವರು ಇದೇ ಕಾರಣಕ್ಕೆ ಸಿಕ್ಕಾಪಟ್ಟೆ ಸುದ್ದಿಯಾಗಿದ್ದರು. 

ಇದನ್ನೂ ಓದಿ: Highest paid director: ಅತಿ ಹೆಚ್ಚು ಸಂಭಾವನೆ ಪಡೆಯುವ ನಿರ್ದೇಶಕ, ನಟರಿಗಿಂತ 30 ಪಟ್ಟು ಹೆಚ್ಚು ಶುಲ್ಕ.. ಹಿರಾನಿ, ಅಟ್ಲಿ, ಕರಣ್ ಜೋಹರ್ ಅಲ್ಲ ! 

ಸದ್ಯ ಈ ದಂಪತಿ ಅಮೆರಿಕದಲ್ಲಿ ನೆಲೆಸಿದ್ದಾರೆ. ಅವರಿಗೆ ಒಬ್ಬ ಮಗಳೂ ಇದ್ದಾಳೆ. ಈ ನಡುವೆ ಪ್ರಿಯಾಂಕಾ ಪತಿ ನಿಕ್ ಜೋನಾಸ್ ಅವರಿಗೆ ಅಪರೂಪದ ಕಾಯಿಲೆ ಇದೆ ಎಂಬ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ನಿಕ್ ಜೋನಾಸ್ ಅವರ ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

 

 

ಇತ್ತೀಚೆಗೆ, ನಿಕ್ ಜೋನಾಸ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ. ನಿಕ್ ಜೋನಾಸ್ ಪ್ರಸ್ತುತ ಇನ್ಫ್ಲುಯೆಂಜಾ-ಎ ನಿಂದ ಬಳಲುತ್ತಿದ್ದಾರೆ. ಇದರಿಂದಾಗಿ ಸಂಗೀತ ಕಾರ್ಯಕ್ರಮ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ವಿಡಿಯೋದಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ತಮ್ಮ ಅಭಿಮಾನಿಗಳಲ್ಲಿ ಕ್ಷಮೆಯನ್ನೂ ಹೇಳಿದ್ದಾರೆ. 

"ಹಾಯ್... ನನ್ನ ಆರೋಗ್ಯ ತುಂಬಾ ಕೆಟ್ಟಿದೆ. ನಾನು ಗಂಟಲು ನೋವಿನಿಂದ ಬಳಲುತ್ತಿದ್ದೇನೆ. ಮಾತನಾಡಲು ಸಹ ಸಾಧ್ಯವಾಗುತ್ತಿಲ್ಲ. ಗಂಟಲು ನೋವು, ಜ್ವರ, ಕೆಮ್ಮಿನಿಂದ ಬಳಲುತ್ತಿದ್ದೇನೆ. ವೈದ್ಯರು ನನಗೆ ವಿಶ್ರಾಂತಿಗೆ ತೆಗೆದುಕೊಳ್ಳಲು ತಿಳಿಸಿದ್ದಾರೆ. ನನ್ನ ಎಲ್ಲಾ ಶೋ ಗಳನ್ನು ರೀಶೆಡ್ಯೂಲ್ ಮಾಡುತ್ತಿದ್ದೇನೆ. ಆಗಸ್ಟ್ ನಲ್ಲಿ ಕಾರ್ಯಕ್ರಮಗಳನ್ನು ಮಾಡುತ್ತೇನೆ. ಕ್ಷಮಿಸಿ" ಎಂದು ನಿಕ್ ವಿಡಿಯೋದಲ್ಲಿ ಹೇಳಿದ್ದಾರೆ.

ಇದನ್ನೂ ಓದಿ: ಆ ಇಬ್ಬರು ಹುಡುಗಿಯರು ನನಗೆ ಮೋಸ ಮಾಡಿ ಹೋದರು.. ಶಾಹಿದ್ ಕಪೂರ್ ಹೀಗೆ ಹೇಳಿದ್ದು ಈ ನಟಿಯರ ಬಗ್ಗೆನೇ!?

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News