ಓಡಿಶಾ ರೈಲು ದುರಂತ; ಸಂತ್ರಸ್ತರ ಕುಟುಂಬಕ್ಕೆ ಶಾಶ್ವತ ಪರಿಹಾರ ನೀಡಿ ಎಂದ ಸೋನು ಸೂದ್‌..!

Sonu Sood : ಓಡಿಶಾದ ಬಾಲಾಸೋರ್‌ನಲ್ಲಿ ಶುಕ್ರವಾರ ರಾತ್ರಿ ನಡೆದ ರೈಲು ದುರಂತದಲ್ಲಿ ಮೃತಪಟ್ಟವರ ಕುಟುಂಬಗಳು ಮತ್ತು ಗಾಯಗೊಂಡಿರುವವವರಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪರಿಹಾರ ಘೋಷಿಸಿವೆ.   

Written by - Savita M B | Last Updated : Jun 6, 2023, 06:09 PM IST
  • ಸರ್ಕಾರ ನೀಡಿರುವ ಈ ತಾತ್ಕಾಲಿಕ ಪರಿಹಾರದಿಂದ ಬರುವ ಹಣ ಮೂರ್ನಾಲ್ಕು ತಿಂಗಳಿಗೆ ಖಾಲಿಯಾಗುತ್ತದೆ.
  • ಸಂತ್ರಸ್ತ ಕುಟುಂಬಗಳು ಕೆಲವೇ ದಿನಗಳಲ್ಲಿ ಮತ್ತೆ ಅಸಹಾಯಕ ಸ್ಥಿತಿಯನ್ನು ತಲುಪುತ್ತವೆ.
  • ಹೀಗಾಗಿ ಶಾಶ್ವತ ಪರಿಹಾರ ನೀಡುವ ಕುರಿತು ಸರ್ಕಾರಗಳು ಯೋಚಿಸಬೇಕು
ಓಡಿಶಾ ರೈಲು ದುರಂತ; ಸಂತ್ರಸ್ತರ ಕುಟುಂಬಕ್ಕೆ ಶಾಶ್ವತ ಪರಿಹಾರ ನೀಡಿ ಎಂದ ಸೋನು ಸೂದ್‌..!  title=

Odisha Train Accident : ಸರ್ಕಾರ ನೀಡಿರುವ ಈ ತಾತ್ಕಾಲಿಕ ಪರಿಹಾರದಿಂದ ಬರುವ ಹಣ ಮೂರ್ನಾಲ್ಕು ತಿಂಗಳಿಗೆ ಖಾಲಿಯಾಗುತ್ತದೆ. ಸಂತ್ರಸ್ತ ಕುಟುಂಬಗಳು ಕೆಲವೇ ದಿನಗಳಲ್ಲಿ ಮತ್ತೆ ಅಸಹಾಯಕ ಸ್ಥಿತಿಯನ್ನು ತಲುಪುತ್ತವೆ. ಹೀಗಾಗಿ ಶಾಶ್ವತ ಪರಿಹಾರ ನೀಡುವ ಕುರಿತು ಸರ್ಕಾರಗಳು ಯೋಚಿಸಬೇಕು ಎಂದು ನಟ ಸಮಾಜ ಸೇವಕ ಸೋನು ಸೂದ್‌ ಅಭಿಪ್ರಾಯ ತಿಳಿಸಿದ್ದಾರೆ. 

ರೈಲು ದುರಂತದ ಕುರಿತು ಸೋನು ಸೂದ್‌ ಮಾತನಾಡಿರುವ ಮೂರು ನಿಮಿಷಗಳ ವಿಡಿಯೋವನ್ನು ಅವರು ಹಂಚಿಕೊಂಡಿದ್ದಾರೆ. ʼಓಡಿಶಾದಲ್ಲಿ ಸಂಭವಿಸಿರುವ ರೈಲು ಅಪಘಾತದಿಂದ ಇಡೀ ದೇಶ ಮೌನ ತಾಳಿದೆ. ಆದರೆ ಯಾರೂ ಕೂಡ ಅಪಘಾತದಲ್ಲಿ ಮೃತಪಟ್ಟ ಅಥವಾ ಗಾಯಗೊಂಡ ವ್ಯಕ್ತಿಗಳು ಮತ್ತು ಅವರ ಕುಟುಂಬದ ಕುರಿತು ಯೋಚಿಸುತ್ತಿಲ್ಲ.

ಎಲ್ಲ ರಾಜಕೀಯ ಪಕ್ಷಗಳು ಈ ಘಟನೆಯನ್ನು ತಮ್ಮ ಲಾಭಕ್ಕಾಗಿ ಬಳಸಿಕೊಳ್ಳಲು ಯತ್ನಿಸುತ್ತಿವೆ. ನಾವುಗಳು ಟ್ವೀಟ್‌ ಮಾಡಿ ದುಖಃ ವ್ಯಕ್ತಪಡಿಸಿ ನಮ್ಮ ವ್ಯಕ್ತಿಕ ಬದುಕಿನಲ್ಲಿ ಬ್ಯುಸಿಯಾಗಿ ಬಿಡುತ್ತೇವೆ.ʼ ಎಂದು ತಮ್ಮ ಮನದಾಳದ ಮಾತುಗಳನ್ನಾಡಿ ಬೇಸರ ವ್ಯಕ್ತಪಡಿಸಿದ್ದಾರೆ. 

ಇದನ್ನೂ ಓದಿ-Ambareesh- Aviva: ಅವಿವಾ ಕೈ ಹಿಡಿದು ಅರುಂಧತಿ ನಕ್ಷತ್ರ ತೋರಿಸಿದ ಅಭಿಷೇಕ್!

"ಅಪಘಾತದಲ್ಲಿ ದುಡಿಮೆ ಸಲುವಾಗಿ ಚೆನೈಗೆ ಹೊರಟಿದ್ದ ಕೆಲ ಬಿಹಾರದ ಕೂಲಿ ಕಾರ್ಮಿಕರು, ಕೆಲ ಕುಟುಂಬಗಳು ಹೀಗೆ ಹಲವು ಕುಟುಂಬಗಳು ನಷ್ಟವನ್ನು ಅನುಭವಿಸುತ್ತಿವೆ. ಮೃತರ ಕುಟುಂಬಕ್ಕೆ ಮತ್ತು ಗಾಯಗೊಂಡವರಿಗೆ ಪರಿಹಾರ ಸಿಗುತ್ತದೆ. ಆ ಪರಿಹಾರ ಶಾಶ್ವತವಲ್ಲ. ಅದು ಮೂರ್ನಾಲ್ಕು ತಿಂಗಳಿಗೆ ಮುಗಿದುಹೋಗುತ್ತದೆ. ಮನೆಗೆ ಆಧಾರವಾಗಿದ್ದ ವ್ಯಕ್ತಿ ಶಾಶ್ವತವಾಗಿ ನೆಲ ಹಿಡಿದರೆ ಅಂತಹ ಕುಟುಂಬಗಳು ಯಾವತ್ತಿಗೂ ಮುಂದೆ ಸುಧಾರಿಸಲು ಸಾಧ್ಯವಿಲ್ಲ. ಅಂತಹ ಕುಟುಂಬಗಳಿಗೆ ಇಂತಹ ತಾತ್ಕಾಲಿಕ ಪರಿಹಾರ ನೀಡಿದರು ಅದು ವ್ಯರ್ಥ.  

ಹೀಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಶಾಶ್ವತ ಪರಿಹಾರ ನೀತಿಗಳನ್ನು ರೂಪಿಸಬೇಕು. ಈ ರೀತಿಯ ದುರಂತಗಳಿಗೆ ಬಲಿಯಾದ ವ್ಯಕ್ತಿ ಅಥವಾ ಕುಟುಂಬಗಳಿಗೆ ನೆರವಾಗಲು ಪಿಂಚಣಿಯ ಮಾದರಿಯಲ್ಲಿ ಮಾಸಿಕ ಪರಿಹಾರವನ್ನು ನೀಡಿ" ಎಂದು ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ. 

ರಾಜಕೀಯ ಪಕ್ಷಗಳು ಒಬ್ಬರನ್ನು ಒಬ್ಬರೂ ದೂಷಿಸುವುದನ್ನು ಬಿಟ್ಟು ಸಂತ್ರಸ್ಥರಿಗೆ ನೆರವಾಗಬೇಕು ಸೋಷಿಯಲ್‌ ಮಿಡಿಯಾಗಳಲ್ಲಿ ಸಂತಾಪ ಸೂಚಿಸಿ ಸುಮ್ಮನಾಗುವುದಲ್ಲ, ನೊಂದ ಕುಟುಂಬಗಳಿಗೆ ಸಹಾಯ ನೀಡಲು ಎಲ್ಲರು ಒಟ್ಟಾಗಿ ಪರಿಹಾರ ನಿಧಿಯನ್ನು ಸಂಗ್ರಹಿಸೋಣ ಎಂದು ಕರೆ ನೀಡಿದ್ದಾರೆ. 

ಇದನ್ನೂ ಓದಿ-Adipurush : ಆದಿಪುರುಷ ಪ್ರೀ ರಿಲೀಸ್ ಕಾರ್ಯಕ್ರಮಕ್ಕೆ ಅದ್ಧೂರಿ ವ್ಯವಸ್ಥೆ.. ಮುಖ್ಯ ಅತಿಥಿ ಯಾರು ಗೊತ್ತಾ..!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News