ಮದುವೆಗೂ ಮುನ್ನವೇ ಗರ್ಭಿಣಿಯಾಗಿದ್ದ ಈ ನಟಿ, ಟೈಗರ್​ ಶ್ರಾಫ್​ ಜೊತೆ ಲಿಫ್ಟ್​ ನಲ್ಲಿ ಸಿಕ್ಕಿಬಿದ್ದಿದ್ದರು..!

Neha Dhupia :ಬಿಟೌನ್‌ ನಟಿ ನೇಹಾ ಮದುವೆಯ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದಾಗ ಎಲ್ಲರಿಗೂ ಆಶ್ಚರ್ಯವಾಗಿತ್ತು. ಇದಾದ ಕೆಲವೇ ದಿನಗಳಲ್ಲಿ ನೇಹಾ ತಾನು ಗರ್ಭಿಣಿಯಾಗಿದ್ದಾಗಿ ಪೋಸ್ಟ್ ಹಾಕಿ ಎಲ್ಲರಿಗೂ ಶಾಕ್‌ ನೀಡಿದ್ದರು. ಅರೇ.. ಮದುವೆಯಾಗಿ ತಿಂಗಳಾಗಿಲ್ಲ ಅದೇಗೆ ಇವರು ಗರ್ಭಿಣಿಯಾದ್ರು ಅಂತ ಎಲ್ಲರೂ ಕನ್ಫೂಸ್‌ ಆಗಿದ್ರು.

Written by - Krishna N K | Last Updated : Apr 19, 2024, 07:16 PM IST
    • ನಟಿ ನೇಹಾ ಧೂಪಿಯಾ ಬಿಟೌನ್‌ ಜನಪ್ರಿಯ ನಟಿಯರಲ್ಲಿ ಒಬ್ಬರು.
    • ನಟಿ ತಾವು ಮದುವೆಗೂ ಮುನ್ನ ಗರ್ಭಿಣಿಯಾಗಿದ್ದ ವಿಚಾರವನ್ನು ಬಿಚ್ಚಿಟ್ಟಿದ್ದರು.
    • ಇದೀಗ ಟೈಗರ್‌ ಕುರಿತು ಇಂಟ್ರಸ್ಟಿಂಗ್‌ ವಿಚಾರವೊಂದನ್ನು ನಟಿ ಬಹಿರಂಗಪಡಿಸಿದ್ದಾರೆ.
ಮದುವೆಗೂ ಮುನ್ನವೇ ಗರ್ಭಿಣಿಯಾಗಿದ್ದ ಈ ನಟಿ, ಟೈಗರ್​ ಶ್ರಾಫ್​ ಜೊತೆ ಲಿಫ್ಟ್​ ನಲ್ಲಿ ಸಿಕ್ಕಿಬಿದ್ದಿದ್ದರು..! title=

Neha dhupia Tiger shroff : ನಟಿ ನೇಹಾ ಧೂಪಿಯಾ ಬಿಟೌನ್‌ ಜನಪ್ರಿಯ ನಟಿಯರಲ್ಲಿ ಒಬ್ಬರು. ಇತ್ತೀಚಿಗೆ ನಟಿ ತಾವು ಮದುವೆಗೂ ಮುನ್ನ ಗರ್ಭಿಣಿಯಾಗಿದ್ದ ವಿಚಾರವನ್ನು ಬಿಚ್ಚಿಟ್ಟಿದ್ದರು. ಅದಕ್ಕಾಗಿಯೇ ತಾವು ತರಾತುರಿಯಲ್ಲಿ ಮದುವೆಯಾಗಿದ್ದಾಗಿ ತಿಳಿಸಿದ್ದಾರೆ.. ಇದೀಗ ಟೈಗರ್‌ ಕುರಿತು ಇಂಟ್ರಸ್ಟಿಂಗ್‌ ವಿಚಾರವೊಂದನ್ನು ನಟಿ ಬಹಿರಂಗಪಡಿಸಿದ್ದಾರೆ. 

ಹೌದು.. ಬಾಲಿವುಡ್‌ ಸ್ಟಾರ್‌ ನಟಿಯರಲ್ಲಿ ನೇಹಾ ಕೂಡ ಒಬ್ಬರು. ನೇಹಾ ಧೂಪಿಯಾ ಮೇ 10, 2018 ರಂದು ಸಿಖ್ ಸಂಪ್ರದಾಯದ ಪ್ರಕಾರ ಮದುವೆಯಾದರೂ. ಸಡನ್ನಾಗಿ ಮದುವೆಯಾದ ನಟಿ ವಿಚಾರ ಬಾಲಿವುಡ್ ಅಲ್ಲದೆ, ಇಡಿ ಭಾರತೀಯ ಸಿನಿರಂಗವನ್ನೇ ಬೆಚ್ಚಿ ಬೀಳಿಸಿತ್ತು.

ಇದನ್ನೂ ಓದಿ:ʼಈʼ ಕಾರಣಕ್ಕೆ ಸೂಪರ್‌ ಸ್ಟಾರ್‌ ರಜನಿಕಾಂತ್‌ ಕನ್ನಡ ಸಿನಿರಂಗದಿಂದ ದೂರ ಉಳಿದಿದ್ದು!! ಕನ್ನಡದಲ್ಲಿ ಇವರ ಕೊನೆಯ ಸಿನಿಮಾ ಯಾವುದು ಗೊತ್ತಾ?

ನೇಹಾ ಮದುವೆಯ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದಾಗ ಎಲ್ಲರಿಗೂ ಆಶ್ಚರ್ಯವಾಗಿತ್ತು. ಇದಾದ ಕೆಲವೇ ದಿನಗಳಲ್ಲಿ ನೇಹಾ ತಾನು ಗರ್ಭಿಣಿಯಾಗಿದ್ದಾಗಿ ಪೋಸ್ಟ್ ಹಾಕಿ ಎಲ್ಲರಿಗೂ ಶಾಕ್‌ ನೀಡಿದ್ದರು. ಅರೇ.. ಮದುವೆಯಾಗಿ ತಿಂಗಳಾಗಿಲ್ಲ ಅದೇಗೆ ಇವರು ಗರ್ಭಿಣಿಯಾದ್ರು ಅಂತ ಎಲ್ಲರೂ ಕನ್ಫೂಸ್‌ ಆಗಿದ್ರು.

ಇತ್ತೀಚಿಗೆ ನೇಹಾ ತಮ್ಮ ಚಾಟ್ ಶೋ ನೋ ಫಿಲ್ಟರ್ ನೇಹಾ ಸೀಸನ್‌ 6ನಲ್ಲಿ ಬಹಿರಂಗ ಪಡಿಸಿದ ವಿಚಾರವೊಂದು ಸಖತ್‌ ಸದ್ದು ಮಾಡುತ್ತಿದೆ. ಈ ಕಾರ್ಯಕ್ರಮದಲ್ಲಿ ನೇಹಾ ತಮಾಷೆಯ ಘಟನೆಯೊಂದನ್ನು ಹಂಚಿಕೊಂಡಿದ್ದಾರೆ. ಟೈಗರ್ ಶ್ರಾಫ್ ಅವರೊಂದಿಗೆ ಲಿಫ್ಟ್​ನಲ್ಲಿ ಸಿಕ್ಕಿಬಿದ್ದ ವಿಚಾರವನ್ನು ಬಹಿರಂಗ ಪಡಿಸಿದ್ದಾರೆ. 

ಇದನ್ನೂ ಓದಿ:ಈಗ ಲಕ್ಷಗಳಲ್ಲಿ ವೇತನ ಪಡೆಯುವ ಅನುಶ್ರೀಯ ಮೊದಲ ಸಂಭಾವನೆ ಎಷ್ಟು ಗೊತ್ತಾ? ಅದು ಟಿವಿ ನಿರೂಪಣೆಗಾಗಿ ಅಲ್ಲ !

ನೇಹಾ ಮತ್ತು ಟೈಗರ್ ಶ್ರಾಫ್​ ನೋ ಫಿಲ್ಟರ್ ನೇಹಾ ಶೋನಲ್ಲಿ ಭಾಗವಹಿಸಬೇಕಿತ್ತು. ಈ ವೇಳೆ ಶೂಟಿಂಗ್‌ ಸ್ಪಾಟ್‌ಗೆ ಹೋಗುವಾಗ ಲಿಫ್ಟ್​ ಕೆಟ್ಟು ನಿಂತಿತ್ತು. ಇದೀಗ ಈ ವಿಚಾರವನ್ನು ಹೇಳಿಕೊಂಡಿರುವ ನಟಿ, ಲಿಪ್ಟ್‌ ಕೆಟ್ಟು ಮಧ್ಯದಲ್ಲಿ ನಿಂತಾಗ ನಾನು ತಾಳ್ಮೆ ಕಳೆದುಕೊಂಡೆ. ಅಕ್ಷರಶಃ ಸತ್ತೇ ಹೋದಂತೆ ಮಾಡುತ್ತಿದ್ದೆ. ಆದರೆ ಟೈಗರ್​ಗೆ ಲಿಫ್ಟ್​ ಕೆಟ್ಟು ಹೋದ ವಿಷಯವೇ ತಿಳಿದಿರಲಿಲ್ಲ ಅಂತ ಅಂದಿನ ಪರಿಸ್ಥಿತಿಯ ಬಗ್ಗೆ ಹೇಳಿಕೊಂಡಿದ್ದಾರೆ.

ಟೈಗರ್‌ಗೆ​ ಲಿಫ್ಟ್​ ಹಾಳಾಗಿದ್ದು ಗೊತ್ತಿರಲಿಲ್ಲ ಅಂತ ಏನಿಲ್ಲ, ಅವರು ಗೊತ್ತಿದ್ದರೂ ಸಹ ಕೂಲ ಆಗಿದ್ದರು. ನಾನೇ ತುಂಬಾ ಟೆನ್ಷನ್ ಮಾಡಿಕೊಂಡಿದ್ದೆ. ​ನನಗೆ ಮಾತ್ರ ಎಲ್ಲಾ ರೀತಿ ತಲೆ ನೋವು ಇತ್ತು ಅಂತ ಅಂದು ಎಷ್ಟು ಟೆನ್ಷನ್‌ ಅಗಿದ್ದರು ಅಂತ ನೇಹಾ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ:ದೀಪಿಕಾ ಪಡುಕೋಣೆ ಗರ್ಭಿಣಿ ಆಗಿಯೇ ಇಲ್ಲ.. ಪ್ರಗ್ನೆಂಟ್‌ ವಿಚಾರ ಸುಳ್ಳಾ?

ಇನ್ನು ಈ ವಿಚಾರವನ್ನು ಬಹಿರಂಗ ಪಡಿಸಿದಾಗ ಎಲ್ಲರೂ ನಕ್ಕರು. ನಾನು ಜೀವ ಹೋಯ್ತು ಅಂತ ತುಂಬಾ ತೆಲೆನೋವುಮಾಡಿಕೊಂಡಿದ್ದೆ. ಆದ್ರೆ ಟೈಗರ್‌ ಫುಲ್‌ ಕೂಲಾಗಿದ್ದರು ಅಂತ ನೇಹಾ ಅಂದು ನಡೆದ ತಮಾಷೆ ವಿಚಾರವನ್ನು ಬಹಿರಂಗ ಪಡಿಸಿದ್ದರು. ಇದನ್ನು ಕೇಳಿ ನೆಟ್ಟಿಗರು ಫುಲ್‌ ಶಾಕ್‌ ಆಗಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News