ಹಿಂದಿ ಭಾಷೆಗೆ ಕನ್ನಡದ ಭಾಗ್ಯಲಕ್ಷ್ಮೀ ಧಾರವಾಹಿ ಡಬ್ ! ಹಿಂದಿಯಲ್ಲಿಯೂ ಮೇಳೈಸಲಿದೆ ಅಕ್ಕ - ತಂಗಿ ಪ್ರೀತಿ

ಇನ್ನೇನು 100 ಸಂಚಿಕೆ ಪೂರೈಸುವ ಸಂಭ್ರಮದಲ್ಲಿರುವ ಭಾಗ್ಯಲಕ್ಷ್ಮೀ ಧಾರವಾಹಿ ತಂಡಕ್ಕೆ ಮತ್ತೊಂದು ಸಂತಸ. ಹೌದು, ಈ ಧಾರಾವಾಹಿ ಹಿಂದಿ ಭಾಷೆಗೂ ಡಬ್ ಆಗುತ್ತಿದ್ದು, ಸದ್ಯದಲ್ಲೇ ಹಿಂದಿ ಭಾಷೆಯಲ್ಲಿ ಪ್ರಸಾರ ಆರಂಭವಾಗಲಿದೆ.   

Written by - Ranjitha R K | Last Updated : Feb 16, 2023, 12:04 PM IST
  • ಕನ್ನಡದ ಮನೆ ಮಾತಾಗಿರುವ ಧಾರವಾಹಿ ಭಾಗ್ಯಲಕ್ಷ್ಮೀ .
  • 100 ಸಂಚಿಕೆ ಪೂರೈಸುವ ಸಂಭ್ರಮದಲ್ಲಿರುವ ಧಾರವಾಹಿ ತಂಡ
  • ಹಿಂದಿ ಭಾಷೆಗೂ ಡಬ್ ಆಗುತ್ತಿದೆ ಭಾಗ್ಯಲಕ್ಷ್ಮೀ
ಹಿಂದಿ ಭಾಷೆಗೆ  ಕನ್ನಡದ ಭಾಗ್ಯಲಕ್ಷ್ಮೀ  ಧಾರವಾಹಿ ಡಬ್ !  ಹಿಂದಿಯಲ್ಲಿಯೂ ಮೇಳೈಸಲಿದೆ ಅಕ್ಕ - ತಂಗಿ ಪ್ರೀತಿ  title=

ಬೆಂಗಳೂರು : ಕನ್ನಡದ ಮನೆ ಮಾತಾಗಿರುವ ಧಾರವಾಹಿ ಭಾಗ್ಯಲಕ್ಷ್ಮೀ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಸೋಮವಾರದಿಂದ ಶುಕ್ರವಾರದವರೆಗೆ ಸಂಜೆ 7 ಗಂಟೆಗೆ ಈ ಧಾರಾವಾಹಿ ಪ್ರಸಾರವಾಗುತ್ತಿದೆ. ಇನ್ನೇನು 100 ಸಂಚಿಕೆ ಪೂರೈಸುವ ಸಂಭ್ರಮದಲ್ಲಿರುವ ಧಾರವಾಹಿ ತಂಡಕ್ಕೆ ಮತ್ತೊಂದು ಸಂತಸ. ಹೌದು ಈ ಧಾರಾವಾಹಿ ಹಿಂದಿ ಭಾಷೆಗೂ ಡಬ್ ಆಗುತ್ತಿದ್ದು, ಸದ್ಯದಲ್ಲೇ ಹಿಂದಿ ಭಾಷೆಯಲ್ಲಿ ಪ್ರಸಾರ ಆರಂಭವಾಗಲಿದೆ. 

ಪ್ರೇಕ್ಷಕರನ್ನು ಹಿಡಿದಿಟ್ಟುಕೊಂಡು ಟಿಆರ್ ಪಿ ರೇಸ್ ನಲ್ಲೂ ಮುಂದಿರುವ ಭಾಗ್ಯಲಕ್ಷ್ಮೀ  ಧಾರವಾಹಿ ಇನ್ನು ಮುಂದೆ ಹಿಂದಿಯಲ್ಲಿಯೂ ಪ್ರಸಾರವಾಗಲಿದೆ. ಸದ್ಯದಲ್ಲೇ ಹಿಂದಿಯ ವಾಹಿನಿಯೊಂದರಲ್ಲಿ  ಈ ಧಾರಾವಾಹಿಯ ಹಿಂದಿ ವರ್ಸನ್ ಪ್ರಸಾರವಾಗಲಿದೆ.

ಇದನ್ನೂ ಓದಿ : Tejasswi Prakash : ʼಬಿಗ್‌ಬಾಸ್‌ ವಿನ್ನರ್‌ʼ ತೇಜಸ್ವಿ ಹಾಟ್‌ ಲುಕ್‌ಗೆ ಪ್ಯಾನ್ಸ್‌ ಫಿದಾ..! ವಿಡಿಯೋ ನೋಡಿ

ಕೆಲವೇ ತಿಂಗಳುಗಳ ಹಿಂದೆ ಆರಂಭವಾದ ಈ ಧಾರವಾಹಿ ಅಪಾರ ಅಭಿಮಾನಿ ಬಳಗವನ್ನು ಗಳಿಸಿದೆ. ಬಡ ಮನೆಯಲ್ಲಿ ಹುಟ್ಟಿದ ಅಕ್ಕ ತಂಗಿ, ಅವರ ಪ್ರೀತಿ, ತನ್ನ ತಂಗಿಗೆ ಶ್ರೀರಾಮನಥಹ ವರ ಬೇಕು ಎಂದು  ಎನ್ನುವ ಅಕ್ಕನ ಕಾಳಜಿ, ಅಕ್ಕನ ಮಾತು ತಪ್ಪ ತಂಗಿ ಈ ಎಲ್ಲಾ ಅಂಶಗಳು ಧಾರಾವಾಹಿಯಲ್ಲಿ ಮೇಳೈಸುತ್ತಿದೆ.  

ದೊಡ್ಡ ತಾರಾಬಳಗವನ್ನೇ ಹೊಂದಿರುವ ಈ ಧಾರಾವಾಹಿಯಲ್ಲಿ ಭಾಗ್ಯ ಆಗಿ ಸುಷ್ಮಾ ಕೆ ರಾವ್, ಲಕ್ಷ್ಮೀ ಆಗಿ ಭೂಮಿಕಾ ರಮೇಶ್ ಕಾಣಿಸಿಕೊಂಡಿದ್ದಾರೆ. ಇನ್ನುಳಿದಂತೆ ಸುದರ್ಶನ್ ರಂಗಪ್ರಸಾದ್, ಶಮಂತ್ ಬ್ರೋ ಗೌಡ, ಪದ್ಮಜಾ ರಾವ್, ಸುಷ್ಮಾ ನಾಣಯ್ಯ ಅಭಿನಯಿಸುತ್ತಿದ್ದಾರೆ. ಈ ಧಾರಾವಾಹಿಗೆ ಯಶವಂತ್ ಪಾಂಡು ನಿರ್ದೇಶನವಿದೆ.  

ಇದನ್ನೂ ಓದಿ : Anushka Shetty : ಅನುಷ್ಕಾ ಶೆಟ್ಟಿಗೆ ಈ ಸ್ಟಾರ್‌ ಕ್ರಿಕೆಟಿಗನ ಮೇಲೆ ಪ್ಯಾರ್ಗೆ ಆಗ್ಬಿಟ್ಟೈತೆ ಅಂತೆ..! ಗೆಸ್‌ ಮಾಡಿ

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News