Tarak Mehta Ka Ulta Chasma : ಕೆಲವು ದಿನಗಳಿಂದ ಕಾಣೆಯಾಗಿದ್ದ ನಟ ಗುರುಚರಣ್ ಸಿಂಗ್, ಸಿಸಿಟಿವಿಯಲ್ಲಿ ಪತ್ತೆ

TMKOC : 'ತಾರಕ್ ಮೆಹ್ತಾ ಕಾ ಊಲ್ತಾ ಚಶ್ಮಾ' ಟಿವಿ ಧಾರಾವಾಹಿ ಖ್ಯಾತಿಯ ನಟ ಗುರುಚರಣ್ ಸಿಂಗ್ ಏಪ್ರಿಲ್ 22 ರಿಂದ ನಾಪತ್ತೆಯಾಗಿದ್ದು, ಅಪಹರಣ ಪ್ರಕರಣ ದಾಖಲಿಸಲಾಗಿದೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ. 

Written by - Zee Kannada News Desk | Last Updated : Apr 27, 2024, 04:15 PM IST
  • ಅಪಹರಣ ಪ್ರಕರಣ ದಾಖಲಿಸಲಾಗಿದೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.
  • ಇದೀಗ ಸಿಸಿಟಿವಿಯಲ್ಲಿ ಸೆರೆಯಾಗಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
  • ಬೆನ್ನಿನ ಮೇಲೆ ಬ್ಯಾಗ್ ನೇತಾಕಿಕೊಂಡು ಹೋಗುಡತ್ತಿರುವ ದೃಶ್ಯಗಳು ಸಿಸಿಟಿವಿ ಯಲ್ಲಿ ಸೆರೆಯಾಗಿವೆ.
Tarak Mehta Ka Ulta Chasma : ಕೆಲವು ದಿನಗಳಿಂದ ಕಾಣೆಯಾಗಿದ್ದ ನಟ ಗುರುಚರಣ್ ಸಿಂಗ್, ಸಿಸಿಟಿವಿಯಲ್ಲಿ ಪತ್ತೆ title=

Sodi fame Gurucharan Singh missing : ಜನಪ್ರಿಯ ಟಿವಿ ಶೋ 'ತಾರಕ್ ಮೆಹ್ತಾ ಕಾ ಉಲ್ಟಾ ಚಶ್ಮಾ'ದಲ್ಲಿ ರೋಷನ್ ಸಿಂಗ್ ಸೋಧಿ ಪಾತ್ರದಲ್ಲಿ ನಟಿಸುತ್ತಿದ್ದ ಗುರುಚರಣ್ ಸಿಂಗ್ , ಏಪ್ರಿಲ್ 22 ರಿಂದ ನಾಪತ್ತೆಯಾಗಿದ್ದು, ಅಪಹರಣ ಪ್ರಕರಣ ದಾಖಲಿಸಲಾಗಿತ್ತು ಇದೀಗ ಸಿಸಿಟಿವಿಯಲ್ಲಿ ಸೆರೆಯಾಗಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. 

ಇದನ್ನು ಓದಿ : Shruti Hassan: ಐದು ಬಾಯ್‌ಫ್ರೆಂಡ್‌ಗಳ ಜೊತೆ ಸಲಾರ್‌ ಬೆಡಗಿ ಬ್ರೇಕಪ್:‌ ಶಾಂತನು ಜೊತೆಗೆ ಆರನೇಯದಾ

ಗುರುಚರಣ್ ಸಿಂಗ್ ಮುಂಬೈಗೆ ಹೋಗಲು ವಿಮಾನ ನಿಲ್ದಾಣಕ್ಕೆ ಏಪ್ರಿಲ್ 22 ರಂದು ಬೆಳಿಗ್ಗೆ 8:30 ಕ್ಕೆ ಮನೆಯಿಂದ ಹೊರಟಿದ್ದರು. ಆದರೆ ಅವರು ಮುಂಬೈ ತಲುಪಿಲ್ಲ ಮತ್ತು ಅವರ ಫೋನ್ ಕೂಡ ತಲುಪಲು ಸಾಧ್ಯವಾಗಲಿಲ್ಲ ಎಂದು ಅವರ ತಂದೆ  ಪೊಲೀಸರಿಗೆ ನಾಪತ್ತೆ ದೂರು ನೀಡಿದ್ದಾರೆ ಎಂದು ಅವರು ಹೇಳಿದರು.

ವಿವಿಧ ತಂಡಗಳನ್ನು ರಚಿಸಿದ್ದು, ಪ್ರಕರಣದ ತನಿಖೆಯನ್ನು ಪ್ರಾರಂಭಿಸಲಾಗಿದೆ ಮತ್ತು ವಿವಿಧ ತಂಡಗಳನ್ನು ರಚಿಸಿದ್ದು, ಪ್ರಕರಣದ ತನಿಖೆಯನ್ನು ಪ್ರಾರಂಭಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. 

ಏಪ್ರಿಲ್ 22 ರಿಂದ ನಾಪತ್ತೆಯಾಗಿದ್ದ 'ತಾರಕ್ ಮೆಹ್ತಾ ಕಾ ಊಲ್ತಾ ಚಶ್ಮಾ' ಖ್ಯಾತಿಯ ನಟ ಗುರುಚರಣ್ ಸಿಂಗ್, ಪ್ರಕರಣದಲ್ಲಿ ಹೊಸ ವಿವರಗಳು ಹೊರಹೊಮ್ಮುತ್ತಿದ್ದಂತೆ ಸಿಸಿಟಿವಿಯಲ್ಲಿ ಸಿಕ್ಕಿಬಿದ್ದಿದ್ದಾರೆ. ಏಪ್ರಿಲ್ 22 ರಂದು ರಾತ್ರಿ 9.14 ಕ್ಕೆ ದೆಹಲಿಯ ಪಾಲಂ ಪ್ರದೇಶದ ಪರಶುರಾಮ್ ಚೌಕ್‌ನಲ್ಲಿ ಗುರುಚರಣ್ ಸಿಂಗ್ ಅವರು ತಮ್ಮ ಬೆನ್ನಿನ ಮೇಲೆ ಬ್ಯಾಗ್ ನೇತಾಕಿಕೊಂಡು ಹೋಗುಡತ್ತಿರುವ ದೃಶ್ಯಗಳು ಸಿಸಿಟಿವಿ ಯಲ್ಲಿ ಸೆರೆಯಾಗಿವೆ. 

ಇದನ್ನು ಓದಿ :   ಹೆಲಿಕಾಪ್ಟರ್ ಹತ್ತುವಾಗ ಕಾಲು ಜಾರಿ ಬಿದ್ದ ಮಮತಾ ಬ್ಯಾನರ್ಜಿಗೆ ಗಾಯ

ನಟ ಏಪ್ರಿಲ್ 22 ರಂದು ಬೆಳಿಗ್ಗೆ 8.30 ಕ್ಕೆ ದೆಹಲಿಯಿಂದ ಮುಂಬೈಗೆ ವಿಮಾನವನ್ನು ಹತ್ತಬೇಕಿತ್ತು ಆದರೆ ಅವರು ವಿಮಾನವನ್ನು ಹತ್ತಿಲ್ಲ ಮತ್ತು ಅವರ ಮೊಬೈಲ್ ಸಂಖ್ಯೆ ಏಪ್ರಿಲ್ 24 ರವರೆಗೆ ಸಕ್ರಿಯವಾಗಿತ್ತು ಅದಾದ ನಂತರ ನಿಷ್ಕ್ರಿಯವಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News