ಜಿಯೋಏರ್ ಫೈಬರ್, ಜಿಯೋಫೈಬರ್ ಮತ್ತು ಜಿಯೋ ಮೊಬಿಲಿಟಿ ಗ್ರಾಹಕರಿಗೆ ಇದೀಗ ಫ್ಯಾನ್ ಕೋಡ್ ಒಟಿಟಿ ಸಬ್ ಸ್ಕ್ರಿಪ್ಷನ್

ದೇಶದಾದ್ಯಂತ ಇರುವ ಕ್ರೀಡಾ ಉತ್ಸಾಹಿಗಳಿಗೆ ಜಿಯೋದಿಂದ ಹೊಸ ಹಾಗೂ ರೋಮಾಂಚಕ ಡಿಜಿಟಲ್ ಅನುಭವವನ್ನು ಪರಿಚಯಿಸಲಾಗಿದೆ. ಜಿಯೋಏರ್ ಫೈಬರ್, ಜಿಯೋಫೈಬರ್ ಹಾಗೂ ಜಿಯೋ ಮೊಬಿಲಿಟಿ ಪ್ರೀಪ್ರೇಯ್ಡ್ ಗ್ರಾಹಕರು ಇದೀಗ ‘ಫ್ಯಾನ್ ಕೋಡ್’ ಎಂಬ ಪ್ರೀಮಿಯಂ ಕ್ರೀಡಾ ಒಟಿಟಿ ಅಪ್ಲಿಕೇಷನ್ ಗೆ ಕಾಂಪ್ಲಿಮೆಂಟರಿ ಸಬ್ ಸ್ಕ್ರಿಪ್ಷನ್ ಪಡೆಯಬಹುದು. 

Written by - Manjunath Naragund | Last Updated : May 17, 2024, 09:43 PM IST
  • ಪ್ರಮುಖ ಕ್ರೀಡಾ ಪಂದ್ಯಾವಳಿಗಳ ನೇರಪ್ರಸಾರ, ಆಳವಾದ ವಿಶ್ಲೇಷಣೆ ಮತ್ತು ರಿಯಲ್ ಟೈಮ್ ವಿಶ್ಲೇಷಣೆ ಇರುತ್ತದೆ
  • ಪಂದ್ಯಾವಳಿಯ ಪ್ರಮುಖಾಂಶಗಳು, ಸಂಪೂರ್ಣವಾದ ಅಂಕಿ- ಅಂಶ, ಮತ್ತು ಕ್ರೀಡಾ ಒಳನೋಟಕ್ಕೆ ಸಂಪರ್ಕ ದೊರೆಯುತ್ತದೆ
  • ಭಾರತೀಯ ಕ್ರಿಕೆಟ್ ಮತ್ತು ಜಾಗತಿಕ ಕ್ರೀಡೆಗಳ ತಾಜಾ ಸುದ್ದಿ ಬಗ್ಗೆ ಅಪ್ ಡೇಟ್ ದೊರೆಯುತ್ತದೆ
ಜಿಯೋಏರ್ ಫೈಬರ್, ಜಿಯೋಫೈಬರ್ ಮತ್ತು ಜಿಯೋ ಮೊಬಿಲಿಟಿ ಗ್ರಾಹಕರಿಗೆ ಇದೀಗ ಫ್ಯಾನ್ ಕೋಡ್ ಒಟಿಟಿ ಸಬ್ ಸ್ಕ್ರಿಪ್ಷನ್ title=

ಮುಂಬೈ, ಮೇ 17: ದೇಶದಾದ್ಯಂತ ಇರುವ ಕ್ರೀಡಾ ಉತ್ಸಾಹಿಗಳಿಗೆ ಜಿಯೋದಿಂದ ಹೊಸ ಹಾಗೂ ರೋಮಾಂಚಕ ಡಿಜಿಟಲ್ ಅನುಭವವನ್ನು ಪರಿಚಯಿಸಲಾಗಿದೆ. ಜಿಯೋಏರ್ ಫೈಬರ್, ಜಿಯೋಫೈಬರ್ ಹಾಗೂ ಜಿಯೋ ಮೊಬಿಲಿಟಿ ಪ್ರೀಪ್ರೇಯ್ಡ್ ಗ್ರಾಹಕರು ಇದೀಗ ‘ಫ್ಯಾನ್ ಕೋಡ್’ ಎಂಬ ಪ್ರೀಮಿಯಂ ಕ್ರೀಡಾ ಒಟಿಟಿ ಅಪ್ಲಿಕೇಷನ್ ಗೆ ಕಾಂಪ್ಲಿಮೆಂಟರಿ ಸಬ್ ಸ್ಕ್ರಿಪ್ಷನ್ ಪಡೆಯಬಹುದು. ಈಗಿನ ಆಫರ್ ಮೂಲಕವಾಗಿ ಜಿಯೋ ಗ್ರಾಹಕರು ರೋಮಾಂಚಕವಾದ ಮತ್ತು ಕ್ರೀಡೆಯಲ್ಲಿಯೇ ಅತ್ಯುತ್ತಮವಾದ ನೇರಪ್ರಸಾರದ ಅನುಭವವನ್ನು ಪಡೆಯಲಿದ್ದೀರಿ. ಇದರಲ್ಲಿ ಫ್ಯಾನ್ ಕೋಡ್ ನ ಎಕ್ಸ್ ಕ್ಲೂಸಿಬ್ ಫಾರ್ಮುಲಾ ಒನ್  ಪ್ರಸಾರದ ಕಂಟೆಂಟ್ ಸಂಪರ್ಕ ಸಹ ಪಡೆಯಬಹುದು. ಆದರೆ ಇಲ್ಲಿ ನೆನಪಿಟ್ಟುಕೊಳ್ಳಬೇಕಾದ ಸಂಗತಿ ಏನೆಂದರೆ, ಜಿಯೋಏರ್ ಫೈಬರ್, ಜಿಯೋಫೈಬರ್ ಮತ್ತು ಜಿಯೋ ಮೊಬಿಲಿಟಿಯ ಆಯ್ದ ಅರ್ಹ ಗ್ರಾಹಕರಿಗೆ ಮಾತ್ರ ಈ ಕಾಂಪ್ಲಿಮೆಂಟರಿ ಪ್ಲಾನ್ ಅನ್ವಯಿಸುತ್ತವೆ.

ಜಿಯೋಏರ್ ಫೈಬರ್ ಮತ್ತು ಜಿಯೋಫೈಬರ್ ಗ್ರಾಹಕರು 1199 ರೂಪಾಯಿ ಮತ್ತು ಮೇಲ್ಪಟ್ಟ ಪ್ಲಾನ್ ಗೆ ಸಬ್ ಸ್ಕ್ರಿಪ್ಷನ್ ಪಡೆದಾಗ ಕಾಂಪ್ಲಿಮೆಂಟರಿ ಆಗಿ ಫ್ಯಾನ್ ಕೋಡ್ ಪಡೆಯುವುದಕ್ಕೆ ಅರ್ಹರು. ಅದೇ ರೀತಿ ಜಿಯೋ ಮೊಬಿಲಿಟಿ ಪ್ರಿಪೇಯ್ಡ್ ಗ್ರಾಹಕರು ತಮ್ಮ ಈಗಿರುವ ರೂ. 398, ರೂ. 1198, ರೂ. 4498 ಪ್ಲಾನ್‌ಗಳ ಮೂಲಕ ಅಥವಾ ಹೊಚ್ಚಹೊಸದಾದ 3333 ರೂಪಾಯಿಯ ವಾರ್ಷಿಕ ಪ್ಲಾನ್ ಬಳಸುತ್ತಿದ್ದಲ್ಲಿ ಈ ಕಾಂಪ್ಲಿಮೆಂಟರಿ ಫ್ಯಾನ್ ಕೋಡ್ ಪಡೆಯಬಹುದು. ಯಾವುದೇ ಹೆಚ್ಚುವರಿಯಾದ ಶುಲ್ಕ ಇಲ್ಲದೆ ಈ ಕಾಂಪ್ಲಿಮೆಂಟರಿ ಯೋಜನೆ ಸೇರ್ಪಡೆ ಆಗುತ್ತದೆ.  ಹೊಸ ಹಾಗೂ ಈಗಾಗಲೇ ಗ್ರಾಹಕರಾದವರಿಗೆ ಈ ಪ್ಲಾನ್ ದೊರೆಯುತ್ತದೆ.

ಇದನ್ನು ಓದಿ  :Neha Shetty : ಅವಕಾಶ ಬೇಕು ಅಂದ್ರೆ ನಿರ್ದೇಶಕರ ಜತೆ ಸಂಪರ್ಕದಲ್ಲಿರಬೇಕು... ತಪ್ಪೇನಲ್ಲ..! ನೇಹಾ ಶೆಟ್ಟಿ ಶಾಕಿಂಗ್‌ ಹೇಳಿಕೆ

ಫ್ಯಾನ್ ಕೋಡ್ ಎಂಬುದು ಪ್ರಮುಖ ಕ್ರೀಡಾ ಸ್ಟ್ರೀಮಿಂಗ್ ಪ್ಲಾಟ್ ಫಾರ್ಮ್. ಇದು ಇಂಟರ್ ಆಕ್ಟಿವ್ ನೇರ ಪ್ರಸಾರವನ್ನು ತರುತ್ತದೆ. ಪ್ರೀಮಿಯರ್ ಕ್ರಿಕೆಟ್ ಪಂದ್ಯಾವಳಿಗಳು, ಮಹಿಳಾ ಕ್ರಿಕೆಟ್, ಫುಟ್ ಬಾಲ್ ನೇರಪ್ರಸಾರ, ಬ್ಯಾಸ್ಕೆಟ್ ಬಾಲ್, ಬೇಸ್ ಬಾಲ್, ಕುಸ್ತಿ, ಬ್ಯಾಡ್ಮಿಂಟನ್ ಮತ್ತು ಇತರ ಪ್ರಮುಖ ಕ್ರೀಡಾ ಕಾರ್ಯಕ್ರಮಗಳು ಪ್ರಸಾರ ಆಗುತ್ತವೆ. ಫಾರ್ಮುಲಾ 1 ಉತ್ಸಾಹಿಗಳ ಮಧ್ಯೆ ಇದು ಬಹಳ ಖ್ಯಾತಿಯನ್ನು ಪಡೆದಿದೆ. 2024 ಮತ್ತು 2025ನೇ ಇಸವಿಗೆ ಫಾರ್ಮುಲಾ 1 ಭಾರತದ ಪ್ರಸಾರ ಹಕ್ಕುಗಳನ್ನು ತನ್ನದಾಗಿಸಿಕೊಂಡಿದೆ. ಬಳಕೆದಾರರು ನೈಜ ಸಮಯದ ಪಂದ್ಯದ ಮುಖ್ಯಾಂಶಗಳು, ಸಂಪೂರ್ಣ ಮ್ಯಾಚ್ ವಿಡಿಯೋಗಳು, ಭಾರತೀಯ ಕ್ರಿಕೆಟ್ ಪ್ರಮುಖಾಂಶಗಳು, ದತ್ತಾಂಶ, ಅಂಕಿ-ಅಂಶಗಳು, ಗಹನವಾದ ವಿಶ್ಲೇಷಣೆ, ಫ್ಯಾಂಟಸಿ ಸ್ಪೋರ್ಟ್ಸ್ ಒಳನೋಟಗಳು, ಮತ್ತು ವಿಶ್ವ ಮಟ್ಟದ ಕ್ರೀಡೆಗೆ ಸಂಬಂಧಿಸಿದ ಬ್ರೇಕಿಂಗ್ ಸುದ್ದಿ ಇವೆಲ್ಲವೂ ದೊರೆಯುತ್ತವೆ.

ಇದನ್ನು ಓದಿ  :Viral Video: ಮದುವೆ ಮಂಟಪದಲ್ಲಿ ʼವರʼನಿಗಾಗಿ ಯುವತಿಯರ ಮಾರಾಮಾರಿ..!

ಕಾಂಪ್ಲಿಮೆಂಟರಿ ಸಂಪರ್ಕದಿಂದ ಏನೇನು ದೊರೆಯಲಿದೆ?
- ಪ್ರೀಮಿಯಂ ಫ್ಯಾನ್ ಕೋಡ್ ಕಂಟೆಂಟ್: ಫ್ಯಾನ್ ಕೋಡ್ ನ ಎಕ್ಸ್ ಕ್ಲೂಸಿವ್ ಆದ ಕ್ರೀಡಾ ಕಂಟೆಂಟ್ ಗಳನ್ನು ಯಾವುದೇ ಅಡೆತಡೆಗಳಿಲ್ಲದೆ ಜಿಯೋಟಿವಿ+ ಅಥವಾ ಜಿಯೋಟಿವಿ ಅಪ್ಲಿಕೇಷನ್ ಮೂಲಕ ವೀಕ್ಷಣೆ ಮಾಡಬಹುದು.
- ಎಫ್1 ಸಂಪರ್ಕ: 2024 ಮತ್ತು 2025ನೇ ಋತುವಿಗೆ ಫಾರ್ಮುಲಾ 1 ಭಾರತದ ಪ್ರಸಾರ ಹಕ್ಕುಗಳನ್ನು ಫ್ಯಾನ್ ಕೋಡ್ ತನ್ನದಾಗಿಸಿಕೊಂಡಿದೆ. ಭಾರತೀಯ ಅಭಿಮಾನಿಗಳು ರೇಸ್ ಗಳನ್ನು ಫ್ಯಾನ್ ಕೋಡ್ ಮೂಲಕ ಸ್ಮಾರ್ಟ್ ಟೀವಿಗಳು, ಮೊಬೈಲ್ ಫೋನ್ ಮತ್ತು ಟ್ಯಾಬ್ಲೆಟ್ ಗಳಲ್ಲಿ ವೀಕ್ಷಿಸಬಹುದು. ಇನ್ನು ಕವರೇಜ್ ನಲ್ಲಿ ಅಭ್ಯಾಸ, ಅರ್ಹತಾ ಸೆಷನ್ ಗಳು, ಸ್ಪ್ರಿಂಟ್ ರೇಸ್ ಗಳು ಹಾಗೂ ಗ್ರಾಂಡ್ ಪ್ರಿಕ್ಸ್ ಒಳಗೊಂಡಿರುತ್ತದೆ.
- ವಿಸ್ತೃತವಾದ ಕವರೇಜ್: ಪ್ರಮುಖ ಕ್ರೀಡಾ ಪಂದ್ಯಾವಳಿಗಳ ನೇರಪ್ರಸಾರ, ಆಳವಾದ ವಿಶ್ಲೇಷಣೆ ಮತ್ತು ರಿಯಲ್ ಟೈಮ್ ವಿಶ್ಲೇಷಣೆ ಇರುತ್ತದೆ.
- ಸಮಗ್ರವಾದ ಸ್ಪೋರ್ಟ್ಸ್ ಲೈಬ್ರರಿ: ಪಂದ್ಯಾವಳಿಯ ಪ್ರಮುಖಾಂಶಗಳು, ಸಂಪೂರ್ಣವಾದ ಅಂಕಿ- ಅಂಶ,  ಮತ್ತು ಕ್ರೀಡಾ ಒಳನೋಟಕ್ಕೆ ಸಂಪರ್ಕ ದೊರೆಯುತ್ತದೆ.
- ಬ್ರೇಕಿಂಗ್ ಸುದ್ದಿ: ಭಾರತೀಯ ಕ್ರಿಕೆಟ್ ಮತ್ತು ಜಾಗತಿಕ ಕ್ರೀಡೆಗಳ ತಾಜಾ ಸುದ್ದಿ ಬಗ್ಗೆ ಅಪ್ ಡೇಟ್ ದೊರೆಯುತ್ತದೆ.
* ಹೊಸ ವಾರ್ಷಿಕ ಪ್ರಿಪೇಯ್ಡ್ ಪ್ಲಾನ್: ಜಿಯೋದಿಂದ ಹೊಸದಾಗಿ 3333 ರೂ. ಪ್ಲಾನ್ ಇದ್ದು, ಇದರಲ್ಲಿ  2.5 ಜಿಬಿ/ದಿನಕ್ಕೆ ನೀಡುತ್ತಿದೆ, ಈ ಪ್ಲ್ಯಾನ್ ಜತೆಗೆ ಕಾಂಪ್ಲಿಮೆಂಟರಿ ಆಗಿ ಫ್ಯಾನ್‌ಕೋಡ್ ಚಂದಾದಾರಿಕೆ ದೊರೆಯುತ್ತದೆ.

ಜಿಯೋಏರ್ ಫೈಬರ್, ಜಿಯೋಫೈಬರ್ ಮತ್ತು ಮತ್ತು ಪ್ರಿಪೇಯ್ಡ್ ಮೊಬಿಲಿಟಿ ಪ್ಲಾನ್ ಬಳಕೆದಾರರು ಅರ್ಹ ಯೋಜನೆಗಳನ್ನು ಹೊಂದಿದ್ದಲ್ಲಿ ಈಗ ಕ್ರೀಡಾ ಜಗತ್ತಿನಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬಹುದು, ಅದರಲ್ಲೂ ವಿಶೇಷವಾಗಿ ಎಫ್ 1ಗೆ ಸಂಬಂಧಿಸಿದಂತೆ ಈ ಹಿಂದೆಂದಿಗಿಂತಲೂ ಹೆಚ್ಚು ತೊಡಗಿಸಿಕೊಳ್ಳಬಹುದು. ಈ ಕೊಡುಗೆಯು ಜಿಯೋ ಬಳಕೆದಾರರಿಗೆ ಹೆಚ್ಚಿನ ಗುಣಮಟ್ಟದ ಕ್ರೀಡಾ ಕಂಟೆಂಟ್ ಗೆ ಸಂಪರ್ಕ ಹೊಂದಿದ್ದು, ಮನರಂಜನೆ, ಸುದ್ದಿ, ಆಧ್ಯಾತ್ಮಿಕ ಇತ್ಯಾದಿ ಕಂಟೆಂಟ್ ಗಳು ಸಹ ಇದ್ದು, ಇತರ ಪ್ರಕಾರಗಳಲ್ಲಿ ಕಂಂಟೆಂಟ್ ನ ವಿಶಾಲವಾದ ಲೈಬ್ರರಿಯನ್ನು ಹೊಂದಿದೆ ಎಂದು ಖಚಿತಪಡಿಸುತ್ತದೆ. ಇದರಿಂದಾಗಿ ಬಳಕೆದಾರರ ವೀಕ್ಷಣೆಯ ಅನುಭವವನ್ನು ಹೆಚ್ಚಿಸುತ್ತದೆ ಮತ್ತು ಅವರ ನೆಚ್ಚಿನ ಆನ್-ಡಿಮಾಂಡ್ ವಿಡಿಯೋಗಳೊಂದಿಗೆ ಯಾವಾಗಲೂ ಸಂಪರ್ಕದಲ್ಲಿ ಇರಿಸುತ್ತದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
 

Trending News