Sangeeth Sivan: ಖ್ಯಾತ ನಿರ್ದೇಶಕ ಸಂಗೀತ್ ಶಿವನ್ ನಿಧನ

Sangeeth Sivan Death: ಮಾಲಿವುಡ್‌ ಸೇರಿದಂತೆ ಬಾಲಿವುಡ್ ಹಿಟ್ ಚಿತ್ರಗಳ ನಿರ್ದೇಶಕ ಸಂಗೀತ ಶಿವನ್ ಅವರು ಮುಂಬೈನಲ್ಲಿ ನಿಧನರಾಗಿದ್ದಾರೆ..  

Written by - Savita M B | Last Updated : May 9, 2024, 11:13 AM IST
  • ಸಂಗೀತ ಶಿವನ್ ಅವರು 1959 ರಲ್ಲಿ ಖ್ಯಾತ ಫೋಟೋಗ್ರಾಫರ್ ಮತ್ತು ಸಿನಿಮಾಟೋಗ್ರಾಫರ್ ಶಿವನ್ ಅವರ ಮಗನಾಗಿ ಜನಿಸಿದರು
  • ತಂದೆಯೊಂದಿಗೆ ಸಾಕ್ಷ್ಯಚಿತ್ರಗಳ ಮೂಲಕ ಚಿತ್ರರಂಗಕ್ಕೆ ಪ್ರವೇಶಿಸಿದರು.
Sangeeth Sivan: ಖ್ಯಾತ ನಿರ್ದೇಶಕ ಸಂಗೀತ್ ಶಿವನ್ ನಿಧನ  title=

ಸಂಗೀತ ಶಿವನ್ ಅವರು 1959 ರಲ್ಲಿ ಖ್ಯಾತ ಫೋಟೋಗ್ರಾಫರ್ ಮತ್ತು ಸಿನಿಮಾಟೋಗ್ರಾಫರ್ ಶಿವನ್ ಅವರ ಮಗನಾಗಿ ಜನಿಸಿದರು. ಎಂಜಿ ಕಾಲೇಜು ಮತ್ತು ಮಾರ್ ಇವಾನಿಯೋಸ್ ಕಾಲೇಜುಗಳಲ್ಲಿ ಪದವಿ ಪೂರ್ವ ಮತ್ತು ಬಿಕಾಂ ಪದವಿಗಳನ್ನು ಪಡೆದ ನಂತರ ಅವರು ತಮ್ಮ ತಂದೆಯೊಂದಿಗೆ ಸಾಕ್ಷ್ಯಚಿತ್ರಗಳ ಮೂಲಕ ಚಿತ್ರರಂಗಕ್ಕೆ ಪ್ರವೇಶಿಸಿದರು. 

ಚಿತ್ರರಂಗಕ್ಕೆ ಕಾಲಿಟ್ಟ ಸಂಗೀತ್ ಶಿವನ್ ಆರಂಭದಲ್ಲಿ ಮುಖ್ಯವಾಗಿ ಸಾಕ್ಷ್ಯಚಿತ್ರಗಳತ್ತ ಗಮನ ಹರಿಸಿದರು. ಯುನಿಸೆಫ್ ಮತ್ತು ಫಿಲ್ಮ್ ಡಿವಿಷನ್‌ಗಾಗಿ ಅನೇಕ ಸಾಕ್ಷ್ಯಚಿತ್ರಗಳನ್ನು ನಿರ್ಮಿಸಿದ್ದಾರೆ. ನಂತರ ಸಂಗೀತ್ ಅವರು ತಮ್ಮ ಸಹೋದರ ಸಂತೋಷ್ ಶಿವನ್ ಅವರ ಪ್ರೇರಣೆಯಿಂದ ನಿರ್ದೇಶಕರಾಗಿ ಚಲನಚಿತ್ರ ಕ್ಷೇತ್ರವನ್ನು ಪ್ರವೇಶಿಸಿ, ಪ್ರಸಿದ್ಧ ಛಾಯಾಗ್ರಾಹಕರಾದರು. 

ಇದನ್ನೂ ಓದಿ-Tanisha Kuppanda : ನಾಯಿ ಜೊತೆ ಫೋಟೋ ತೆಗೆಸಿದ ನಟಿ, ಡಾಗ್ ಲವರ್ ಎಂದ ನೆಟ್ಟಿಗರು

ಸಂಗೀತ ಶಿವನ್ ಅವರ ಮೊದಲ ನಿರ್ದೇಶನದ ಮೊದಲ ಸಿನಿಮಾ ವ್ಯೂಹಂ.. ಇದು 1990 ರಲ್ಲಿ ಬಿಡುಗಡೆಯಾಗಿತ್ತು. ಇದು ಪೊಲೀಸ್ ಕ್ರೈಂ ಕಥೆಯಾಗಿದ್ದು, ರಘುವರನ್ ಮತ್ತು ಸುಕುಮಾರನ್ ಕೇಂದ್ರ ಪಾತ್ರಧಾರಿಗಳಾಗಿದ್ದಾರೆ. ಚಿತ್ರವು ಅದರ ವಿಶಿಷ್ಟವಾದ ಮೇಕಿಂಗ್ ಮತ್ತು ಕಥೆಗೆ ಹೆಸರುವಾಸಿಯಾಗಿದೆ. ನಂತರ ಮಲಯಾಳಂನ ಯೋದ್ದ ಚಿತ್ರವನ್ನು ನಿರ್ಮಿಸಿದರು.. ಇದು ಇಂದಿಗೂ ಕ್ಲಾಸಿಕ್‌ ಚಿತ್ರಗಳಲ್ಲಿ ಒಂದಾಗಿದೆ..

ನಂತರ ಸಂಗೀತ ಶಿವನ್ ಮಲಯಾಳಂನಲ್ಲಿ ದಾಡಿ, ಗಂಧರ್ವಂ ಮತ್ತು ನಿರ್ಣಯಂನಂತಹ ಆರು ಚಿತ್ರಗಳನ್ನು ಮಾಡಿದರು. ಸಂಗೀತ್ ಸನ್ನಿ ಡಿಯೋಲ್ ಅಭಿನಯದ ಸೂರ್ ಚಿತ್ರದ ಮೂಲಕ ಬಾಲಿವುಡ್ ಗೆ ಪಾದಾರ್ಪಣೆ ಮಾಡಿದರು. ಸಂಗೀತ ಶಿವನ್ ಬಾಲಿವುಡ್‌ನಲ್ಲಿ ಎಂಟು ಚಿತ್ರಗಳನ್ನು ನಿರ್ಮಿಸಿದ್ದಾರೆ.  

ಇದನ್ನೂ ಓದಿ-ಮಾನ್ಸೂನ್ ವೇಳೆಗೆ "ಭಗೀರಥ"ನ ಆಗಮನ.. ಕುತೂಹಲ ಮೂಡಿಸಿದೆ ವಿಭಿನ್ನ ಕಥಾಹಂದರ ಹೊಂದಿರುವ ಟೀಸರ್!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News